IPL 2025: ಉಮ್ರಾನ್ ಮಲಿಕ್ ಸ್ಥಾನಕ್ಕೆ ಚೇತನ್ ಸಕಾರಿಯ ಬದಲಿ ಆಟಗಾರ
Chetan Sakariya: ಸಕಾರಿಯ ಅವರನ್ನು 75 ಲಕ್ಷ ರೂ. ನೀಡಿಯೇ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. 27 ವರ್ಷದ ಸಕಾರಿಯ ಕಳೆದ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಇದೀಗ ಅವರಿಗೆ ಅದೃಷ್ಟ ಖುಲಾಯಿಸಿದೆ. ಕಳೆದ ಆವೃತ್ತಿಯಲ್ಲಿಯೂ ಸಕಾರಿಯ ಕೆಕೆಆರ್ ತಂಡದ ಭಾಗವಾಗಿದ್ದರು. ಆದರೆ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.


ಕೋಲ್ಕತಾ: ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿ ಆರಂಭಕ್ಕೆ ಇನ್ನು ಕೇವಲ ಐದು ದಿನ ಮಾತ್ರ ಬಾಕಿ ಉಳಿದಿದೆ. ಇದಕ್ಕೂ ಮುನ್ನ ಹಾಲಿ ಚಾಂಪಿಯನ್ ಕೆಕೆಆರ್ ತಂಡದ ವೇಗಿ ಉಮ್ರಾನ್ ಮಲಿಕ್(Umran Malik) ಗಾಯಗೊಂಡು ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಯುವ ವೇಗಿ ಚೇತನ್ ಸಕಾರಿಯ(Chetan Sakariya) ಬದಲಿ ಆಟಗಾರನಾಗಿ ತಂಡ ಸೇರಿದ್ದಾರೆ. ಸಕಾರಿಯ ತಂಡ ಸೇರ್ಪಡೆಯಾದ ವಿಚಾರವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಪ್ರಕಟಿಸಿದೆ. ಕೆಕೆಆರ್ ತಂಡ ಮಾರ್ಚ್ 22 ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ ಸವಾಲು ಎದುರಿಸಲಿದೆ.
ಕಳೆದ ಮೆಗಾ ಹರಾಜಿನಲ್ಲಿ ಉಮ್ರಾನ್ ಮಲಿಕ್ ಅವರನ್ನು ಕೆಕೆಆರ್ ತಂಡ 75 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. ಸನ್ ರೈಸರ್ಸ್ ಹೈದರಾಬಾದ್ ಪರ ಹಲವು ಬಾರಿ 150 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಬೌಲಿಂಗ್ ಮಾಡಿ ಗಮನಸೆಳೆದಿದ್ದರು.
ಸಕಾರಿಯ ಅವರನ್ನು 75 ಲಕ್ಷ ರೂ. ನೀಡಿಯೇ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. 27 ವರ್ಷದ ಸಕಾರಿಯ ಕಳೆದ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಇದೀಗ ಅವರಿಗೆ ಅದೃಷ್ಟ ಖುಲಾಯಿಸಿದೆ. ಕಳೆದ ಆವೃತ್ತಿಯಲ್ಲಿಯೂ ಸಕಾರಿಯ ಕೆಕೆಆರ್ ತಂಡದ ಭಾಗವಾಗಿದ್ದರು. ಆದರೆ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
🚨𝗖𝗵𝗲𝘁𝗮𝗻 𝗦𝗮𝗸𝗮𝗿𝗶𝘆𝗮 𝗷𝗼𝗶𝗻𝘀 𝗼𝘂𝗿 𝘀𝗾𝘂𝗮𝗱 𝗳𝗼𝗿 𝗧𝗔𝗧𝗔 𝗜𝗣𝗟 𝟮𝟬𝟮𝟱
— KolkataKnightRiders (@KKRiders) March 16, 2025
The left-arm fast bowler is all set to don Purple & Gold for another year 💜💛 pic.twitter.com/Zxcl0rlxat
ಸಕರಿಯಾ ಮೂರು ಋತುಗಳಲ್ಲಿ (2021-23) 19 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 8.43 ರ ಎಕಾನಮಿಯಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ರಾಜಸ್ಥಾನ ರಾಯಲ್ಸ್ ಪರ ಆಡುವ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದ್ದರು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
ಇದನ್ನೂ ಓದಿ IPL 2025: ಕೆಜಿಎಫ್ ಹಾಡಿನೊಂದಿಗೆ ಎಂಟ್ರಿ; ಎದುರಾಳಿ ತಂಡಕ್ಕೆ ಎಚ್ಚರಿಕೆ ಕೊಟ್ಟ ಕರುಣ್ ನಾಯರ್
ಕೆಕೆಆರ್ ಪರಿಷ್ಕೃತ ತಂಡ
ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಮಣ್‌ದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ರಹಮಾನುಲ್ಲಾ ಗುರ್ಬಾಜ್, ಅನ್ರಿಚ್ ನೋರ್ಜೆ, ಆಂಗ್‌ಕ್ರಿಶ್ ರಘುವಂಶಿ, ವೈಭವ್ ಅರೋರಾ, ಮಯಾಂಕ್ ಮಾರ್ಕಾಂಡೆ, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಸ್ಪೆನ್ಸರ್ ಜಾನ್ಸನ್, ಲುವ್ನಿತ್ ಸಿಸೋಡಿಯಾ, ಅನುಕೂಲ್ ರಾಯ್, ಮೊಯಿನ್ ಅಲಿ, ಚೇತನ್ ಸಕರಿಯಾ.