Just Married Movie: ಶೈನ್ ಶೆಟ್ಟಿ ಅಭಿನಯದ ʼಜಸ್ಟ್ ಮ್ಯಾರೀಡ್ʼ ಚಿತ್ರದ ʼಕೇಳೋ ಮಚ್ಚಾʼ ಪಾರ್ಟಿ ಸಾಂಗ್ ಔಟ್
Just Married Movie: ಶೈನ್ ಶೆಟ್ಟಿ ಅಭಿನಯದ ʼಜಸ್ಟ್ ಮ್ಯಾರೀಡ್ʼ ಚಿತ್ರದ ಪಾರ್ಟಿ ಸಾಂಗ್ ʼಕೇಳೋ ಮಚ್ಚಾʼ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಡಿಜಿಟಲ್ ಬಿಡುಗಡೆ ಮಾಡಿದ್ದಾರೆ.
ಶೈನ್ ಶೆಟ್ಟಿ ಅಭಿನಯದ ʼಜಸ್ಟ್ ಮ್ಯಾರೀಡ್ʼ ಚಿತ್ರದ ಪಾರ್ಟಿ ಹಾಡು ʼಕೇಳೋ ಮಚ್ಚಾʼ ಎಂಬ ಎರಡನೇ ಗೀತೆ ಬಿಡುಗಡೆಯಾಗಿದೆ. -
ಬೆಂಗಳೂರು, ಜ. 15, 2025: ಸಂಕ್ರಾಂತಿಯ ಶುಭ ದಿನದಂದು ʼಜಸ್ಟ್ ಮ್ಯಾರೀಡ್ʼ (Just Married Movie) ಚಿತ್ರತಂಡ ʼಕೇಳೋ ಮಚ್ಚಾʼ ಎಂಬ ಎರಡನೇ ಗೀತೆಯನ್ನು ಬಿಡುಗಡೆ ಮಾಡಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಹಾಡನ್ನು ಡಿಜಿಟಲ್ ಬಿಡುಗಡೆ ಮಾಡಿರುವುದು ವಿಶೇಷ. ಈ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ರಚಿಸಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಖ್ಯಾತ ಗಾಯಕ ನಕಾಶ್ ಅಜೀಜ್ ಧ್ವನಿ ಆಗಿದ್ದಾರೆ.
ʼಜಸ್ಟ್ ಮ್ಯಾರೀಡ್ʼ ಸಿನಿಮಾದ ʼಅಭಿಮಾನಿಯಾಗಿ ಹೋದೆʼ ಎಂಬ ಮಾಧುರ್ಯ ಪ್ರಧಾನ ಗೀತೆಯ ನಂತರ ಇದೀಗ ಪಾರ್ಟಿ ಹಾಡು ʼಕೇಳೋ ಮಚ್ಚಾʼ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಸಿ.ಆರ್. ಬಾಬಿ ನಿರ್ದೇಶನದ ʼಜಸ್ಟ್ ಮ್ಯಾರೀಡ್ʼ ಕೌಟುಂಬಿಕ ಬಾಂಧವ್ಯಗಳ ಮೌಲ್ಯವನ್ನು ತಿಳಿಸುವ ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದ್ದು, ಇದರಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ಶ್ರುತಿ ಹರಿಹರನ್, ದೇವರಾಜ್, ಶ್ರುತಿ, ಅನೂಪ್ ಭಂಡಾರಿ, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | KUWJ awards: ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಪ್ರಕಟ; ಯಾರಿಗೆ ಯಾವ ಪ್ರಶಸ್ತಿ?
ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿ.ಆರ್. ಬಾಬಿ ಮತ್ತು ಬಿ.ಅಜನೀಶ್ ಲೋಕನಾಥ್ ಆಬ್ಸ್ ಸ್ಟೂಡಿಯೋಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ.