Jyothi Yarraji: ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದ ಜ್ಯೋತಿ ಯರ್ರಾಜಿ
100 ಮೀಟರ್ ಹರ್ಡಲ್ಸ್‌ನಲ್ಲಿ 12.78 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. 2023 ರಲ್ಲಿ ಹ್ಯಾಂಗ್‌ಝೌನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ12.91 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

Jyothi Yarraji

ಪ್ಯಾರಿಸ್: ಭಾರತದ ತಾರಾ ಸ್ಪ್ರಿಂಟ್ ತಾರೆ ಜ್ಯೋತಿ ಯರ್ರಾಜಿ(Jyothi Yarraji) ಅವರು ವರ್ಷದ ಮೊದಲ ಕ್ರೀಡಾಕೂಟದಲ್ಲೇ ರಾಷ್ಟ್ರೀಯ ದಾಖಲೆಯೊಂದಿಗೆ(National Record) ಚಿನ್ನದ ಪದಕದ ಗೆದ್ದ ಸಾಧನೆ ಮಾಡಿದ್ದಾರೆ. ಭಾನುವಾರ ಫ್ರಾನ್ಸ್‌ನಲ್ಲಿ ನಡೆದ ಎಲೈಟ್ ಇಂಡೋರ್ ಟೂರ್ನಿಯ 60 ಮೀ ಹರ್ಡಲ್ಸ್‌ನಲ್ಲಿ 8.04 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಕೊರಳೊಡ್ಡಿದರು. ಇದೇ ವೇಳೆ 8.07 ಸೆಕೆಂಡ್ ಮತ್ತು 8.12 ಸೆಕೆಂಡ್‌ನ ತನ್ನದೇ ಆದ ಎರಡು ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿದರು.
ಇತ್ತೀಚೆಗೆ ಯರ್ರಾಜಿ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗ ಅರ್ಜುನ ಪ್ರಶಸ್ತಿ ಪಡೆದಿದ್ದರು. 100 ಮೀಟರ್ ಹರ್ಡಲ್ಸ್‌ನಲ್ಲಿ 12.78 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. 2023 ರಲ್ಲಿ ಹ್ಯಾಂಗ್‌ಝೌನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ12.91 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕವನ್ನು ಗೆದ್ದಿದ್ದರು.
New National Record..!!!!
— Sports India (@SportsIndia3) January 25, 2025
Jyothi Yarraji improves her own women 60m hurdles National Record to 8.07 in her first race of 2025
Watch and subscribe - https://t.co/Db44XyRbr2 @afiindia pic.twitter.com/grTy6QWAqf
BANWU19 vs INDWU19: ಸೂಪರ್-6ನಲ್ಲೂ ಭಾರತದ ಗೆಲುವಿನ ಸಿಕ್ಸರ್
ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿನ ನಾಗಲೋಟ ಸೂಪರ್-6 ಹಂತಕ್ಕೂ ವಿಸ್ತರಿಸಿದೆ. ಭಾನುವಾರ ನಡೆದ ಬಾಂಗ್ಲಾದೇಶ(BANWU19 vs INDWU19) ವಿರುದ್ಧದ ಸೂಪರ್-6 ಪಂದ್ಯದಲ್ಲಿ 8 ವಿಕೆಟ್‌ಗಳ ಗೆಲುವು ಸಾಧಿಸಿದೆ. ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 64 ರನ್ ಬಾರಿಸಿತು. ಈ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ 7.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 66 ರನ್ ಬಾರಿಸಿ ಗೆಲುವು ದಾಖಲಿಸಿತು. ಮುಂದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಜ.28 ರಂದು ನಡೆಯಲಿದೆ.
ಇದನ್ನೂ ಓದಿ ಸರ್ಕಾರದ ಪ್ರೋತ್ಸಾಹಧನ ತಿರಸ್ಕರಿಸಿದ ರಾಜ್ಯದ ಖೋ ಖೋ ಪಟುಗಳು
ಚೇಸಿಂಗ್ ವೇಳೆ ಗೊಂಗಡಿ ತ್ರಿಷಾ 40 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 8 ಬೌಂಡರಿ ಸಿಡಿಯಿತು. ಅಂತಿಮವಾಗಿ ಸಾನಿಕಾ ಚಲ್ಕೆ(11) ಮತ್ತು ನಾಯಕಿ ನಿಕಿ ಪ್ರಸಾದ್(3) ಅಜೇಯ ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿದರು. ಭಾರತ ಪರ ಬೌಲಿಂಗ್‌ನಲ್ಲಿ ವೈಷ್ಣವಿ ಶರ್ಮಾ 15 ರನ್‌ಗೆ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬಾಂಗ್ಲಾ ತಂಡಕ್ಕೆ ಆಸರೆಯಾದದ್ದು ನಾಯಕಿ ಸುಮಿಯಾ ಅಕ್ತರ್. 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಇವರು ಅಜೇಯ 21 ರನ್ ಗಳಿಸಿದರು.