ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

KSTDC: ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ವಾರಗಟ್ಟಲೇ ಪ್ರವಾಸ

KSTDC: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವಿವಿಧ ರಾಜ್ಯಗಳ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಟೂರ್‌ ಆಯೋಜಿಸಿದೆ. ಆಯಾ ರಾಜ್ಯದ ನೈಸರ್ಗಿಕ ತಾಣಗಳು, ಸಾಂಸ್ಕೃತಿಕ ಪರಂಪರೆ ಸೇರಿದಂತೆ ವೈವಿಧ್ಯಗಳನ್ನು ಪರಿಚಯಿಸಲು ಕಡಿಮೆ ಖರ್ಚಿನ ವಾರದ ಪ್ಯಾಕೇಜ್ ಪ್ರವಾಸವನ್ನು ಆರಂಭಿಸಿದೆ.

ಕೆಎಸ್‌ಟಿಡಿಸಿಯಿಂದ ವಿನೂತನ ಪ್ರವಾಸಿ ಪ್ಯಾಕೇಜ್‌ಗಳು ಲಭ್ಯ; ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ

ಸಾಂದರ್ಭಿಕ ಚಿತ್ರ

Profile Ramesh B Jan 23, 2025 8:05 AM

-ಅಪರ್ಣಾ ಎ.ಎಸ್. ಬೆಂಗಳೂರು

ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆ (KSTDC)ಯು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ವಿವಿಧ ರಾಜ್ಯಗಳ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಟೂರ್‌ (Package Tour) ಗಳನ್ನು ಆಯೋಜಿಸಿದ್ದು, ಆಯಾ ರಾಜ್ಯದ ನೈಸರ್ಗಿಕ ತಾಣಗಳು, ಸಾಂಸ್ಕೃತಿಕ ಪರಂಪರೆ ಸೇರಿದಂತೆ ವೈವಿಧ್ಯಗಳನ್ನು ಪರಿಚಯಿಸಲು ಕಡಿಮೆ ಖರ್ಚಿನ ವಾರದ ಪ್ಯಾಕೇಜ್ ಪ್ರವಾಸವನ್ನು ಆರಂಭಿಸಿದೆ.

ವಿವಿಧ ರಾಜ್ಯಗಳ ಒಂಭತ್ತು ಪ್ರಖ್ಯಾತ ಸ್ಥಳಗಳಿಗೆ ಕೈಗೆಟಕುವ ದರದಲ್ಲಿ ಈ ಪ್ರವಾಸವನ್ನು ಆಯೋಜಿಸಿದ್ದು, ವಿವಿಧ ಪ್ರವಾಸಿ ತಾಣಗಳನ್ನು ನೋಡಬೇಕು ಆದರೆ ಆರ್ಥಿಕ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎನ್ನುವವರಿಗೆ ಈ ಪ್ಯಾಕೇಜ್ ಪ್ರವಾಸವು ಹೇಳಿ ಮಾಡಿಸಿದಂತಿದೆ, ವಾರಪೂರ್ತಿ ಆಯೋಜನೆಯಾಗುವ ಈ ಟೂರ್‌ನಲ್ಲಿ ಒಂದಿಬ್ಬರಿಗಿಂತ ಸಂಪೂರ್ಣ ಕುಟುಂಬವೇ ವಿವಿಧ ಕಡೆಗಳಿಗೆ ಭೇಟಿ ನೀಡಿ ಮನರಂಜನೆ ಹಾಗೂ ನೇಕ ಅನುಭವಗಳನ್ನು ಪಡೆದುಕೊಳ್ಳಬಹುದಾಗಿದೆ. ಜತೆಗೆ ಪ್ರವಾಸದ ಎಲ್ಲಾ ಪ್ಯಾಕೇಜ್‌ಗಳಲ್ಲೂ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಲಾಗಿದೆ. ಒಂದು ಟಿಕೆಟ್ ಗಿಂತ ಮೂರು ಜನ ಬುಕ್ ಮಾಡಿದರೆ ಟೂರ್ ಪ್ಯಾಕೇಜ್ ರೇಟ್‌ನಲ್ಲಿ ಕಡಿಮೆ ದರ ದೊರೆಯಲಿದೆ. ಪ್ರವಾಸಿಗರ ಊಟೋಪಚಾರ, ವಸತಿ, ಹೋಟೆಲ್ ವ್ಯವಸ್ಥೆೆಯನ್ನು ಸ್ವತಃ ಕೆಎಸ್‌ಟಿಡಿಸಿಯೇ ನೋಡಿಕೊಳ್ಳಲಿದೆ. ವಾರಗಳ ನಡೆಯುವ ಈ ಪ್ರವಾಸಕ್ಕೆೆ ಐಷಾರಾಮಿ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಈ ಪ್ರವಾಸಿ ಪ್ಯಾಕೇಜ್‌ನಲ್ಲಿ ಒಂದು ದಿನದ ಟೂರ್ ಪ್ಯಾಕೇಜ್‌ನಿಂದ ಒಂದು ವಾರದವರೆಗಿನ ಪ್ಯಾಕೇಜ್ ಇರಲಿದ್ದು, ಟೂರ್ ಪ್ಯಾಕೇಜ್ ಒಬ್ಬರಿಗೆ ಒಂದು ದಿನಕ್ಕೆೆ 1,480 ರೂ.ಯಿಂದ ಆರಂಭವಾಗಿ 20 ಸಾವಿರ ರೂ.ಯಲ್ಲಿ ಸಂಪೂರ್ಣ ಪ್ರವಾಸವೇ ಮುಕ್ತಾಯವಾಗಲಿದೆ. ಇನ್ನು ಈ ಪ್ಯಾಕೇಜ್‌ನಲ್ಲಿ ಹಿರಿಯರಿಗೆ ರಿಯಾಯಿತಿಯನ್ನು ನೀಡಲಾಗಿದ್ದು, 200 ರೂ.ನಿಂದ 600 ರೂ.ವರೆಗೂ ರಿಯಾಯಿತಿ ಕೊಡಲಾಗಿದೆ.

ಈಗಾಗಲೇ ರಾಜ್ಯದೊಳಗೆ ವಿವಿಧ ಪ್ರವಾಸಿ ಪ್ಯಾಕೇಜ್‌ಗಳನ್ನು ಆರಂಭಿಸಿರುವ ಕೆಎಸ್‌ಟಿಡಿಸಿ ಇದೀಗ, ಅಂತಾರಾಜ್ಯ ಪ್ರಯಾಣದಲ್ಲಿಯೂ ಹೊಸ ಪ್ಯಾಕೇಜ್‌ಗಳನ್ನು ಆರಂಭಿಸಿದೆ. ಈ ಎಲ್ಲ ಪ್ರವಾಸಕ್ಕೂ ಕೆಎಸ್‌ಟಿಡಿಸಿಯ ಐಷಾರಾಮಿ ಬಸ್‌ಗಳನ್ನು ಬಳಸಲಾಗುವುದು ಹಾಗೂ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಹೋಟೆಲ್‌ಗಳಲ್ಲಿ ವಸತಿ, ಊಟದ ವ್ಯವಸ್ಥೆೆ ಕಲ್ಪಿಸಲಾಗುವುದು. ಆದ್ದರಿಂದ ಸುರಕ್ಷಿತವಾಗಿ ಪ್ರವಾಸಕ್ಕೆೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾಾರೆ.

ಗುಂಪಿನಲ್ಲಿ ಹೋದರೆ ರಿಯಾಯಿತಿ

ಈ ಪ್ರವಾಸಿ ಪ್ಯಾಕೇಜ್‌ನಲ್ಲಿ ಒಬ್ಬರು ಪ್ರವಾಸಿದರೆ ಒಂದು ದರವನ್ನು ನಿಗದಿಪಡಿಸಲಾಗಿದೆ. ಆದರೆ ಗುಂಪಿನಲ್ಲಿ ಪ್ರಯಾಣಿಸಲು ಮುಂದಾದರೆ ಭಾರಿ ರಿಯಾಯಿತಿಯನ್ನು ನೀಡಲಾಗಿದೆ. ಉದಾಹರಣೆಗೆ ಪಂಡರಾಪುರ-ಶಿರಡಿ-ನಾಸಿಕ್-ಕೊಲ್ಹಾಪುರದ ಆರು ದಿನದ ಟೂರ್‌ಗೆ ಒಬ್ಬರೇ ನೊಂದಣಿ ಮಾಡಿಕೊಂಡರೆ 18,590 ರೂ. ವ್ಯಯಿಸಬೇಕು. ಆದರೆ 3 ಜನ ಒಟ್ಟಿಗೆ ನೋಂದಣಿ ಮಾಡಿಕೊಂಡರೆ ತಲಾ ಒಬ್ಬರಿಗೆ 13,930 ರೂ. ಪಾವತಿಸಿದರೆ ಸಾಕು. ಇದೇ ರೀತಿ ವಿವಿಧ ಪ್ಯಾಕೇಜ್‌ಗಳಿಗೆ ವಿವಿಧ ರಿಯಾಯಿತಿಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಸ್‌ಟಿಡಿಸಿ ಬಿಡುಗಡೆಗೊಳಿಸಿರುವ ನೂತನ ಪ್ರವಾಸ ಪ್ಯಾಕೇಜ್

* ಕೃಷ್ಣಗಿರಿ ಡ್ಯಾಮ್ ಹೊಗೇನಕಲ್

ಪ್ರವಾಸದ ದಿನ: ಶುಕ್ರವಾರ, ಶನಿವಾರ, ಭಾನುವಾರ

ಪ್ರವಾಸದ ಅವಧಿ: 1 ದಿನ

ದರ (ಒಬ್ಬರಿಗೆ): 1,480 ರೂ.

ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ: 200 ರೂ.

* ಯಗಚಿ-ಚಿಕ್ಕಮಗಳೂರು 2 ದಿನದ ಪ್ಯಾಕೇಜ್

ಪ್ರವಾಸದ ದಿನ: ಪ್ರತಿದಿನ

ಪ್ರವಾಸದ ಅವಧಿ: 2 ದಿನ

ದರ (ಒಬ್ಬರಿಗೆ): 6,460 ರೂ.

ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ: 325 ರೂ.

* ತಿರುವಣ್ಣಮಲೈ-ಗಿರಿವಲಂ 2 ದಿನದ ಪ್ಯಾಕೇಜ್

ಪ್ರವಾಸದ ದಿನ: ಪ್ರವಾಸಿಗರ ಆಧಾರದಲ್ಲಿ

ಪ್ರವಾಸದ ಅವಧಿ: 2 ದಿನ

ದರ (ಒಬ್ಬರಿಗೆ): 5210 ರೂ.

ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ: 300 ರೂ.

* ಕೊಚ್ಚಿ-ಆಲೆಪ್ಪಿ 4 ದಿನದ ಪ್ಯಾಕೇಜ್

ಪ್ರವಾಸದ ದಿನ: ಪ್ರತಿ ಶುಕ್ರವಾರ

ಪ್ರವಾಸದ ಅವಧಿ: 4 ದಿನ

ದರ (ಒಬ್ಬರಿಗೆ): 12,980 ರೂ.

ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ: 675 ರೂ.

* ನಂದ್ಯಾಲ- ಅಹೋಬಿಲ 4 ದಿನದ ಪ್ಯಾಕೇಜ್

ಪ್ರವಾಸದ ದಿನ: ಪ್ರತಿ ಶುಕ್ರವಾರ

ಪ್ರವಾಸದ ಅವಧಿ: 4 ದಿನ

ದರ (ಒಬ್ಬರಿಗೆ): 7,450

ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ: 600 ರೂ.

* ತಮಿಳುನಾಡು-ನವಗ್ರಹ 4 ದಿನದ ಪ್ಯಾಕೇಜ್

ಪ್ರವಾಸದ ದಿನ: ಪ್ರತಿ ಶುಕ್ರವಾರ

ಪ್ರವಾಸದ ಅವಧಿ: 4 ದಿನ

ದರ (ಒಬ್ಬರಿಗೆ): 7,820

ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ: 600 ರೂ.

* ಪಂಡರಾಪುರ-ಶಿರಡಿ-ಎಲ್ಲೋೋರ-ಕೊಲ್ಹಾಪುರ 6 ದಿನದ ಪ್ಯಾಕೇಜ್

ಪ್ರವಾಸದ ದಿನ: ಪ್ರತಿ ಬುಧವಾರ

ಪ್ರವಾಸದ ಅವಧಿ: 6 ದಿನ

ದರ (ಒಬ್ಬರಿಗೆ): 18,590

ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ: 200 ರೂ.

* ತೆಕ್ಕಡಿ-ಆಲೆಪ್ಪಿ ಬೋಟ್ ಹೌಸ್-ಮುನ್ನಾರ್ 6 ದಿನದ ಪ್ಯಾಕೇಜ್

ಪ್ರವಾಸದ ದಿನ: ಪ್ರತಿ ಬುಧವಾರ

ಪ್ರವಾಸದ ಅವಧಿ: 6 ದಿನ

ದರ (ಒಬ್ಬರಿಗೆ): 20,050 ರೂ.

ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ: 900 ರೂ.

* ತೆಕ್ಕಡಿ-ಮುನ್ನಾರ್ 5 ದಿನದ ಪ್ಯಾಕೇಜ್

ಪ್ರವಾಸದ ದಿನ: ಪ್ರತಿ ಗುರುವಾರ

ಪ್ರವಾಸದ ಅವಧಿ: 5 ದಿನ

ದರ (ಒಬ್ಬರಿಗೆ): 13,030 ರೂ.

ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ: 750 ರೂ.

ಈ ಸುದ್ದಿಯನ್ನೂ ಓದಿ: Vidhana Soudha: ಶಕ್ತಿಸೌಧದಲ್ಲಿ ಸಾಹಿತ್ಯ-ಸಂಸ್ಕೃತಿಯ ಅನಾವರಣ

ಕಡಿಮೆ ದರದಲ್ಲಿ ಪ್ರವಾಸಿ ಪ್ಯಾಕೇಜ್‌

ಕರೋನಾ ಬಳಿಕ ಪ್ರತಿಯೊಬ್ಬರಲ್ಲಿಯೂ ಪ್ರವಾಸಕ್ಕೆೆ ಹೋಗಬೇಕೆಂಬ ಬಯಕೆ ಹೆಚ್ಚಿಿದೆ. ಆದರೆ ಮಧ್ಯಮವರ್ಗದವರಿಗೆ ಸುರಕ್ಷಿಿತ ಪ್ರವಾಸಕ್ಕೆೆ ಹಲವು ಸವಾಲುಗಳಿರುತ್ತದೆ. ಆದ್ದರಿಂದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಿ ಮಂಡಳಿವತಿಯಿಂದ ಅಂತಾರಾಜ್ಯ ಪ್ರವಾಸಗಳನ್ನು ಹಮ್ಮಿಿಕೊಳ್ಳಲಾಗಿದೆ. ಖಾಸಗಿ ಸಂಸ್ಥೆೆಗಳಿಗೆ ಹೋಲಿಸಿದರೆ, ಕಡಿಮೆ ದರದಲ್ಲಿ ಎಲ್ಲ ಪ್ರವಾಸಿ ಪ್ಯಾಾಕೇಜ್‌ಗಳನ್ನು ರೂಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸರೋವರ ಶ್ರೀನಿವಾಸ್ ತಿಳಿಸಿದ್ದಾರೆ.