Vidhana Soudha: ಶಕ್ತಿಸೌಧದಲ್ಲಿ ಸಾಹಿತ್ಯ-ಸಂಸ್ಕೃತಿಯ ಅನಾವರಣ

Shaktisoudha: ರಾಜಕೀಯ ಹೋರಾಟಗಳಿಗೆ ಸಾಕ್ಷಿಯಾಗಬೇಕಾದ ವಿಧಾನಸೌಧ ಸುತ್ತ-ಮುತ್ತ ಮುಂದಿನ ತಿಂಗಳು ಪುಸ್ತಕ ಹಾಗೂ ಆಹಾರ ಮೇಳವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಸಾಹಿತ್ಯದ ವೇದಿಕೆಯಲ್ಲಿ ರಾಜಕಾರಣಿ-ಸಾಹಿತಿ ಹಾಗೂ ಸಾರ್ವಜನಿಕರನ್ನು ಸಮ್ಮಿಿಲನಗೊಳಿಸಬೇಕು ಎನ್ನುವ ಕಾರಣಕ್ಕೆೆ ಯು.ಟಿ. ಖಾದರ್ ಈ ವಿನೂತನ ಯೋಜನೆಯನ್ನು ರೂಪಿಸಿದ್ದಾರೆ.

Vidhana Soudha
Profile Ramesh B January 23, 2025

-ರಂಜಿತ್ ಎಚ್.ಅಶ್ವತ್ಥ, ಬೆಂಗಳೂರು

ಬೆಂಗಳೂರು: ರಾಜಕೀಯ ಹೋರಾಟಗಳಿಗೆ ಸಾಕ್ಷಿಯಾಗಬೇಕಾದ ವಿಧಾನಸೌಧ (Vidhana Soudha) ಸುತ್ತ-ಮುತ್ತ ಪುಸ್ತಕ ಮಾರಾಟದ ಭರಾಟೆ... ರಾಜ್ಯದ ಮೂಲೆ ಮೂಲೆಯ ಪ್ರಸಿದ್ಧ ಖಾದ್ಯಗಳ ಮಾರಾಟ... ಈ ಎರಡರ ನಡುವೆ ಗ್ರ್ಯಾಂಡ್‌ ಸ್ಟೆೆಪ್‌ನಲ್ಲಿ ರಾಜ್ಯದ ಕಲಾ-ಸಂಸ್ಕೃತಿಯ ಅನಾವರಣ. ಈ ಎಲ್ಲವನ್ನು ಸವಿದು ವಿಧಾನಸೌಧದ ಒಳಹೊಕ್ಕರೆ, ಬ್ಯಾಕ್ವೆೆಂಟ್ ಹಾಲ್‌ನಲ್ಲಿ ವಿವಿಧ ಸಾಹಿತಿಗಳ ಪುಸ್ತಕ ಬಿಡುಗಡೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆೆ ಸಂಬಂಧಿಸಿದ ವಿವಿಧ ಸಂವಾದ ಕಾರ್ಯಕ್ರಮ!

ಈ ಎಲ್ಲವೂ ಕನಸಿನಲ್ಲಿ ಅಲ್ಲ, ನನಸಾಗಿಸಲು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸದ್ದಿಲ್ಲದೇ ಸಿದ್ಧತೆ ನಡೆಸಿಕೊಂಡಿದ್ದು, ಮುಂದಿನ ತಿಂಗಳು ವಿಧಾನಸೌಧ ರಾಜ್ಯ ಶಕ್ತಿಕೇಂದ್ರ ಮಾತ್ರವಾಗಿರದೇ ಸಾಹಿತ್ಯ-ಸಂಸ್ಕೃತಿಯ ಸಂಗಮವೂ ಆಗಲಿದೆ. ಹೌದು, ದೇಶದಲ್ಲಿಯೇ ಮೊದಲ ಬಾರಿಗೆ ವಿಧಾನಸೌಧದ ಸುತ್ತಮುತ್ತ ಸಚಿವಾಲಯದ ವತಿಯಿಂದಲೇ ಪುಸ್ತಕ ಹಾಗೂ ಆಹಾರ ಮೇಳವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.

ಸಾಹಿತ್ಯದ ವೇದಿಕೆಯಲ್ಲಿ ರಾಜಕಾರಣಿ-ಸಾಹಿತಿ ಹಾಗೂ ಸಾರ್ವಜನಿಕರನ್ನು ಸಮ್ಮಿಿಲನಗೊಳಿಸಬೇಕು ಎನ್ನುವ ಕಾರಣಕ್ಕೆೆ ಯು.ಟಿ. ಖಾದರ್ ಈ ವಿನೂತನ ಯೋಜನೆಯನ್ನು ರೂಪಿಸಿದ್ದು, ಫೆಬ್ರವರಿಯ ಯಾವ ಸಮಯದಲ್ಲಿ ಈ ಮೇಳ ನಡೆಯಲಿದೆ ಎನ್ನುವುದು ಗುರುವಾರದ ಸಭೆಯ ಬಳಿಕ ಸ್ಪಷ್ಟನೆ ಸಿಗಲಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾಾರೆ.

3 ದಿನದ ಮೇಳ

ಮೂಲಗಳ ಪ್ರಕಾರ 3 ದಿನಗಳ ಕಾಲ ಪುಸ್ತಕ ಹಾಗೂ ಆಹಾರ ಮೇಳವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ರಾಜ್ಯ, ರಾಷ್ಟ್ರೀಯ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಪ್ರಕಾಶಕರು ಈ ಮೇಳದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆೆಗಳ ವಿಶಿಷ್ಟ ತಿಂಡಿಗಳ ಮಾರಾಟಕ್ಕೆೆ ಮಳಿಗೆ ನೀಡುವ ರೀತಿಯಲ್ಲಿ ಮೇಳವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.

ಸುಮಾರು 500ಕ್ಕೂ ಹೆಚ್ಚು ಸ್ಟಾಾಲ್‌ಗಳನ್ನು ಹಾಕುವ ಸಾಧ್ಯತೆಯಿದ್ದು, ವಿಧಾನಸೌಧದ ಕಾಂಪೌಂಡ್‌ನೊಳಗೆ ಈ ಮಳಿಗೆಗಳನ್ನು ಹಾಕಲಾಗುವುದು. ಈ ಮೂಲಕ ಸಾರ್ವಜನಿಕರು ಪುಸ್ತಕ ಖರೀದಿ, ಆಹಾರವನ್ನು ಆಸ್ವಾಾದಿಸುವುದರೊಂದಿಗೆ ವಿಧಾನಸೌಧವನ್ನು ಸುತ್ತು ಹಾಕಬಹುದು. ಇದರಿಂದ ವಿಧಾನಸೌಧ ಸಾರ್ವಜನಿಕರಿಗೂ ಹತ್ತಿರವಾಗಲಿದೆ. ಪುಸ್ತಕ ಹಾಗೂ ಆಹಾರ ಮೇಳದೊಂದಿಗೆ ಮೂರು ದಿನಗಳ ಕಾಲ ನಡೆಯುವ ಈ ಮೇಳಕ್ಕೆೆ ಆಗಮಿಸುವ ಸಾರ್ವಜನಿಕರಿಗೆ ಮನೋರಂಜನೆಯ ಉದ್ದೇಶದಿಂದ ವಿಧಾನಸೌಧದ ಗ್ರ್ಯಾಾಂಡ್ ಸ್ಟೆೆಪ್‌ಗಳ ಮೇಲೆ ರಾಜ್ಯದ ವಿವಿಧ ಸಾಂಸ್ಕೃತಿಕ ತಂಡಗಳಿಂದ ಕಲಾಪ್ರದರ್ಶನವನ್ನೂ ಆಯೋಜಿಸಲು ತೀರ್ಮಾನಿಸಲಾಗಿದೆ.

ಪುಸ್ತಕ ಬಿಡುಗಡೆ, ಸಂವಾದಕ್ಕೆ ಅವಕಾಶ

ಪುಸ್ತಕ ಮೇಳಕ್ಕೆೆ ಈ ಕಾರ್ಯಕ್ರಮವನ್ನು ಸೀಮಿತಗೊಳಿಸದೇ, ಮೂರು ದಿನಗಳ ಕಾಲ ರಾಜ್ಯದ ವಿವಿಧ ಸಾಹಿತಿಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ವಿಧಾನಸೌಧದ ಬ್ಯಾಕ್ವೆೆಂಟ್ ಹಾಲ್‌ನಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಇದೇ ರೀತಿ ವಿವಿಧ ಸಾಹಿತಿಗಳೊಂದಿಗೆ ಸಂವಾದವನ್ನು ಆಯೋಜಿಸುವ ಸಾಧ್ಯತೆಯಿದೆ. ಮೂರು ದಿನಗಳ ಕಾಲ ಏನೆಲ್ಲ ಇರಬೇಕು ಎನ್ನುವ ಬಗ್ಗೆೆ ಪ್ರಾಥಮಿಕ ಹಂತದಲ್ಲಿ ತಯಾರಿ ನಡೆಸಿದ್ದು, ಗುರುವಾರ ಮತ್ತೊೊಂದು ಹಂತದ ಸುತ್ತಿನ ಬಳಿಕ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕರಿಗೆ ಪುಸ್ತಕ ಖರೀದಿಸುವಂತೆ ಮನವಿ

ಈ ನಡುವೆ ಪುಸ್ತಕ ಖರೀದಿಗೆ ಹಾಗೂ ಸಾಹಿತಿಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರತಿಯೊಬ್ಬ ಶಾಸಕರಿಗೂ, ಮೂರು ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ, ಖರೀದಿಸಲು ಮನವಿ ಮಾಡಿದ್ದಾರೆ. ಇದೇ ರೀತಿಯ ಪುಸ್ತಕಗಳನ್ನು ಖರೀದಿಸಬೇಕು ಎನ್ನುವ ಷರತ್ತು ವಿಧಿಸದಿದ್ದರೂ, ಆಯಾ ಕ್ಷೇತ್ರದ ಗ್ರಂಥಾಲಯಗಳಿಗೆ, ಶಾಲಾ-ಕಾಲೇಜುಗಳಿಗೆ ಅಗತ್ಯವಿರುವ ಪುಸ್ತಕಗಳನ್ನು ಖರೀದಿಸುವಂತೆ ಮನವಿ ಮಾಡಿದ್ದಾರೆ. ಯಾವ ರೀತಿಯ ಪುಸ್ತಕಗಳು ಶಾಸಕರ ಕ್ಷೇತ್ರಗಳಿಗೆ ಅಗತ್ಯವಿದೆ ಎನ್ನುವುದನ್ನು ಮೊದಲೇ ತಿಳಿಸಿದರೆ, ಪುಸ್ತಕ ಮೇಳದ ಸಮಯದಲ್ಲಿ ಆ ಪುಸ್ತಕಗಳನ್ನು ಪ್ರಕಾಶಕರಿಗೆ ತರುವಂತೆ ಸೂಚನೆ ನೀಡಲಾಗುವುದು. ಇದರಿಂದ ಕ್ಷೇತ್ರದ ಸಾಹಿತ್ಯಾಸಕ್ತರಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆೆಗೆ ತಯಾರಾಗುವ ಅಭ್ಯರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳು ಸಿಗಲಿದೆ ಎನ್ನುವ ಆಲೋಚನೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇಂದು ಸಭೆ, ಅಂತಿಮ ರೂಪುರೇಷೆ ಪ್ರಕಟ

ಪುಸ್ತಕ ಹಾಗೂ ಆಹಾರ ಮೇಳವನ್ನು ಆಯೋಜಿಸಲು ವಿಧಾನಸಭಾ ಸಚಿವಾಲಯ ತೀರ್ಮಾನಿಸಿದ್ದರೂ ಇಡೀ ಕಾರ್ಯಕ್ರಮ ಯಾವ ರೀತಿಯಲ್ಲಿರಬೇಕು ಎನ್ನುವ ಅಂತಿಮ ರೂಪುರೇಷೆ ಗುರುವಾರ (ಜ. 23) ತೀರ್ಮಾನವಾಗಲಿದೆ. ಈ ಮೇಳವನ್ನು ಯಾವುದೇ ರಾಜಕೀಯ ಸಿದ್ಧಾಾಂತಕ್ಕೆೆ ಸೀಮಿತಗೊಳಿಸದೇ, ಸಾಹಿತಿಗಳ ಸೂಚನೆಯಂತೆ ನಡೆಸುವ ಲೆಕ್ಕಾಚಾರದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿದ್ದಾರೆ. ಆದ್ದರಿಂದ ಗುರುವಾರ ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ದಿನಾಂಕ ಹಾಗೂ ಮೇಳದ ನಿರ್ವಹಣೆಗೆ ಸಮಿತಿಯನ್ನು ರಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Aeroindia 2025: ಏರ್‌ ಶೋ ಹಿನ್ನೆಲೆ ಈ ದಿನಗಳಲ್ಲಿ ಬೆಂಗಳೂರು ಏರ್‌ಪೋರ್ಟ್‌ ವಿಮಾನ ಹಾರಾಟದಲ್ಲಿ ವ್ಯತ್ಯಯ

ಮೇಳದ ವಿಶೇಷತೆ ಏನು?

* ರಾಜ್ಯ, ರಾಷ್ಟ್ರ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಪ್ರಕಾಶಕರೂ ಭಾಗವಹಿಸುವ ಸಾಧ್ಯತೆ

* ಇಡೀ ಮೇಳ ಹೇಗಿರಬೇಕು ಎನ್ನುವ ರೂಪುರೇಷೆ ಸಿದ್ಧಪಡಿಸಲು ಹಿರಿಯ ಸಾಹಿತಿಗಳ ಜ್ಯೂರಿ ಸಮಿತಿ

* 3 ದಿನದ ಕಾಲವೂ ಸಾರ್ವಜನಿಕರಿಗೆ ವಿಧಾನಸೌಧಕ್ಕೆೆ ಮುಕ್ತ ಅವಕಾಶ

* ಗ್ರ್ಯಾಂಡ್‌ ಸ್ಟೆೆಪ್‌ನಲ್ಲಿ 3 ದಿನ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ