ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಸಂಡೂರು ಕ್ಷೇತ್ರದ ʼಕುಮಾರಸ್ವಾಮಿʼ

ಪಾರ್ವತಿ ಎಷ್ಟೇ ಹೇಳಿದರೂ ವಿವಾಹವಾಗಲು ನಿರಾಕರಿಸಿದಾಗ, ಸಿಟ್ಟಿನಿಂದ ಮಗನಾದ ‘ನೀನು ತಾಯಿಯ ಮಾತನ್ನೇ ಧಿಕ್ಕರಿಸುವ ನಿನ್ನನ್ನು ಹಾಲು ಕುಡಿಸಿ ಬೆಳೆಸಿದ್ದು ನಿಷ್ಪ್ರಯೋಜಕ ವಾಯಿತು’ ಎಂದು ಪಾರ್ವತಿ ಹೇಳಿದ ಮಾತನ್ನು ಕೇಳಿ ಕುಮಾರ ಸ್ವಾಮಿಯ ಮನಸ್ಸಿಗೆ ನೋವಾಗಿ, ‘ಹಾಗಾದರೆ ನನಗೆ ತಾಯಿಯ ಹಾಲಿನ ಹಂಗೇ ಬೇಡ’ ಎಂದು ತಾಯಿ ಕುಡಿಸಿದ ಹಾಲನ್ನೆಲ್ಲ ಕಕ್ಕಿದ

ಸಂಡೂರು ಕ್ಷೇತ್ರದ ʼಕುಮಾರಸ್ವಾಮಿʼ

ಬಳ್ಳಾರಿ ಜಿಲ್ಲೆ ಸಂಡೂರಿನ ದಕ್ಷಿಣ ಭಾಗದಲ್ಲಿ ಪ್ರಸಿದ್ಧಿಯಾದ ಹಾಗೂ ಸಂಡೂರಿನ ಅಧಿ ದೇವತೆ ಎಂದೇ ಹೆಸರಾದ ಕುಮಾರಸ್ವಾಮಿ (ಸ್ಕಂದ) ಇಲ್ಲಿ “ಕ್ರೌಂಚ" ಪರ್ವತದಲ್ಲಿ ಶತ ಮಾನಗಳಿಂದ ನೆಲೆಸಿದ್ದಾನೆ. ತಾಯಿ ಪಾರ್ವತಿ ದೇವಿ ಪಕ್ಕದಲ್ಲೆ ನೆಲೆಸಿದ್ದು ಈ ದೇವಾ ಲಯವನ್ನು ಬಾದಾಮಿ ಚಾಲುಕ್ಯರು ನಿರ್ಮಿಸಿದ ಇತಿಹಾಸವಿದೆ. ರಾಷ್ಟ್ರಕೂಟರು ಕುಮಾರ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿ ವಿಗ್ರಹ ಪ್ರತಿಷ್ಠಾಪಿಸಿದರು. ಮುಂದೆ ಈ ದೇವಸ್ಥಾನ ವನ್ನು ಕಲ್ಯಾಣ ಚಾಲುಕ್ಯರು ಅಭಿವೃದ್ಧಿ ಪಡಿಸಿದರು ಎಂಬ ಉಲ್ಲೇಖವಿದೆ. ಸ್ಥಳ ಪುರಾಣ ಹೇಳುವಂತೆ, ಕುಮಾರಸ್ವಾಮಿ ಯುವಕನಾದಾಗ ಪಾರ್ವತಿ ವಿವಾಹ ಮಾಡಲು ಕನ್ಯಾನ್ವೇ ಷಣೆ ನಡೆಸಿ ಅವನಿಗೆ ಚಂದದ ಯೋಗ್ಯ ಕನ್ಯೆಯ ಕುರಿತು ತಿಳಿಸಿದಳು. ಸಹಜವಾಗಿಯೇ ಕುಮಾರನು ಅಮ್ಮ ಹುಡುಗಿ ಹೇಗಿದ್ದಾಳೆ? ಎಂದು ಕೇಳಿದ.

ಇದನ್ನೂ ಓದಿ: Roopa Gururaj Column: ಉತ್ತಮ ಸ್ನೇಹಿತರ ಲಕ್ಷಣ

ನನ್ನ ಹಾಗೆ ಸುಂದರಿಯಾಗಿದ್ದಾಳೆ ಎಂದು ಪಾರ್ವತಿ ಹೇಳಿದಳು. ಇದನ್ನು ಕೇಳಿದ ತಕ್ಷಣ ಅಮ್ಮ ಹುಡುಗಿ ‘ನಿನ್ನ ಹಾಗೆ ಇದ್ದಾಳೆ ಎಂದ ಮೇಲೆ ಅವಳು ಮಾತೃ ಸಮಾನ, ನಾನು ವಿವಾಹವಾಗುವುದಿಲ್ಲ’ ಎಂದಾಗ, ಎಲ್ಲಾ ಹೆಣ್ಣು ಮಕ್ಕಳಲ್ಲೂ ನನ್ನ ಅಂಶ ಇದ್ದೇ ಇರು ತ್ತದೆ ಎಂದು ಕೋಪದಿಂದ ಪಾರ್ವತಿ ಹೇಳಿದಳು. ಆದರೆ ಕುಮಾರ ಈ ಮಾತಿಗೆಲ್ಲ ಬಗ್ಗದೆ ವಿವಾಹ ಆಗುವುದೇ ಇಲ್ಲ ಎಂದನು.

ಪಾರ್ವತಿ ಎಷ್ಟೇ ಹೇಳಿದರೂ ವಿವಾಹವಾಗಲು ನಿರಾಕರಿಸಿದಾಗ, ಸಿಟ್ಟಿನಿಂದ ಮಗನಾದ ‘ನೀನು ತಾಯಿಯ ಮಾತನ್ನೇ ಧಿಕ್ಕರಿಸುವ ನಿನ್ನನ್ನು ಹಾಲು ಕುಡಿಸಿ ಬೆಳೆಸಿದ್ದು ನಿಷ್ಪ್ರ ಯೋಜಕವಾಯಿತು’ ಎಂದು ಪಾರ್ವತಿ ಹೇಳಿದ ಮಾತನ್ನು ಕೇಳಿ ಕುಮಾರ ಸ್ವಾಮಿಯ ಮನಸ್ಸಿಗೆ ನೋವಾಗಿ, ‘ಹಾಗಾದರೆ ನನಗೆ ತಾಯಿಯ ಹಾಲಿನ ಹಂಗೇ ಬೇಡ’ ಎಂದು ತಾಯಿ ಕುಡಿಸಿದ ಹಾಲನ್ನೆಲ್ಲ ಕಕ್ಕಿದ.

ಮೊದಲು ಕಕ್ಕಿದ ಹಾಲು ಬೆಳ್ಳಗಿರುವ ವಿಭೂತಿ ಬೆಟ್ಟವಾಯಿತು. ಮಗನ ಉದ್ಧಟತನ ಕಂಡ ತಾಯಿ ಇನ್ನೂ ಕೋಪಗೊಂಡು ಇಷ್ಟೇ ಅಲ್ಲ ಇನ್ನೂ ನನ್ನ ಹಾಲು ಕುಡಿದಿರುವೆ ಎಂದಳು. ಕುಮಾರನು ಮತ್ತೆ ಎರಡನೇ ಬಾರಿ ಹಾಲನ್ನು ಕಕ್ಕುತ್ತಾನೆ. ಅದು ರಕ್ತ ಮಿಶ್ರಿತ ಹಾಲಾಗಿದ್ದು, ಬಿಳಿ ಬೆಟ್ಟದ ಪಕ್ಕದಲ್ಲಿ ಮತ್ತೊಂದು ತಾಮ್ರದ ಬಣ್ಣದ ಬಟ್ಟವಾಯಿತು.

ಹೆದರಿದ ಪಾರ್ವತಿ ಸಾಕು ನಿಲ್ಲಿಸು ಎಂದಳು, ಕೇಳದ ಕುಮಾರನು ‘ಅಮ್ಮ, ನೀನು ಕೊಟ್ಟ ಆಹಾರ, ಹಾಲಿನ ಅಂಶ ನನಗೆ ಯಾವುದೂ ಬೇಡ’ ಎಂದು ಮತ್ತಷ್ಟು ಕಕ್ಕಿದನು. ಅದು ಪೂರ್ತಿ ರಕ್ತವಾಗಿದ್ದು ಮೊದಲ ಎರಡು ಬೆಟ್ಟಗಳ ಸಮೀಪ ಮತ್ತೊಂದು ಕೆಂಪು ವರ್ಣದ ಬೆಟ್ಟವಾಯಿತು. ಸಂಡೂರಿನಲ್ಲಿ ವರ್ಷಕ್ಕೊಮ್ಮೆ ಜಾತ್ರಾ ಮಹೋತ್ಸವ ನಡೆಯುತ್ತದೆ. ಆ ಸಮಯದಲ್ಲಿ ವಿಧಿವತ್ತಾಗಿ ಪೂಜೆ ಹೋಮ ಹವನ ಮಾಡುತ್ತಾರೆ.

ಹಾಲಿನ ಮೊದಲು ಈ ದೇವಾಲಯಕ್ಕೆ ಮಹಿಳೆಯರು ಹೋಗದಂತೆ ನಿರ್ಬಂಧವಿತ್ತು. ಈಗ ಇಲ್ಲ. ಇಲ್ಲಿನ ಇನ್ನೊಂದು ವಿಶೇಷ ಎಂದರೆ ಕುಮಾರಸ್ವಾಮಿ ದೇವರ ದರ್ಶನಕ್ಕೆ ಹೋದ ವರಿಗೆ ಅವರಷ್ಟೇ ಎತ್ತರ ಇದ್ದಂತೆ ಗೋಚರಿಸುತ್ತಾನೆ. ಮಕ್ಕಳಿಗೆ ಮಕ್ಕಳಂತೆ ಯುವಕರಿಗೆ ಯುವಕರಂತೆ ಪ್ರೌಢರಿಗೆ ಪ್ರೌಢರಂತೆ. ಇಲ್ಲಿನ ಕ್ರೌಂಚ ಪರ್ವತದ ಸುತ್ತಮುತ್ತ ಕುಮಾರ ಸ್ವಾಮಿ ವಾಹನವಾದ ನವಿಲುಗಳು ಸಾಕಷ್ಟು ಇದೆ. ಇಲ್ಲಿ ಅಗಸ್ತ್ಯರು ನಿರ್ಮಿಸಿದ ಪುಷ್ಕ ರಣಿಯಲ್ಲಿ ಸ್ನಾನ ಮಾಡಿದರೆ ಚರ್ಮ ವ್ಯಾಧಿ ಗುಣವಾಗುತ್ತದೆ ಎಂಬ ನಂಬಿಕೆ. ಸುತ್ತ ಆವರಿ ಸಿರುವ ಬೆಟ್ಟ ಗುಡ್ಡಗಳ ನಡುವೆ ಹರಿಯುವ ‘ನಾರಿ ಹಳ್ಳ’ ದ ಇನ್ನೊಂದು ಹೆಸರು ‘ಮಾನಸ ಸರೋವರ’. ಇಂತಹ ಪುರಾಣ ಪ್ರಸಿದ್ಧವಾದ ಕ್ಷೇತ್ರಗಳಿಗೆ ಭೇಟಿಕೊಟ್ಟು, ನಮ್ಮ ಮಕ್ಕಳಿಗೂ ಇದರ ಬಗ್ಗೆ ತಿಳಿಸೋಣ.