#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kalaburagi News: ಜಿಲ್ಲೆಯಲ್ಲಿ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ

ರೋಗವು ವಿಶೇಷವಾಗಿ ಸಮಶೀತೋಷ್ಣ ವಲಯದ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇವುಗಳಲ್ಲಿ ಭಾರತ ದೇಶವು ಕೂಡಾ ಒಂದಾಗಿದೆ. 2025ರ ಫೆ.10 ರಿಂದ 28 ವರೆಗೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು/ವಸತಿ ನಿಲಯಗಳು/ಎಲ್ಲಾ ಸರಕಾರಿ ಕಚೇರಿ ಮತ್ತು ಸಂಘ-ಸಂಸ್ಥೆಗಳಿಗೆ, ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ಮನೆ ಮನೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡುತ್ತಾರೆ

ಆನೆಕಾಲು ರೋಗ ಒಂದು ಸಾಂಕ್ರಾಮಿಕ ರೋಗ:  ಡಾ. ಶರಣಬಸಪ್ಪ ಕ್ಯಾತನಾಳ

Profile Ashok Nayak Feb 12, 2025 10:35 PM

ಕಲಬುರಗಿ: ಜಿಲ್ಲೆಯು ಆನೆಕಾಲು ರೋಗ ಮುಕ್ತವನ್ನಾಗಿಸಲು 2024-25ನೇ ಸಾಲಿನಲ್ಲಿ ಫೆ.10 ರಿಂದ 28 ರವರೆಗೆ ಹಮ್ಮಿಕೊಳ್ಳಲಾದ ಕಲಬುರಗಿ ಜಿಲ್ಲೆಯಲ್ಲಿ ಸಾಮೂಹಿಕ ಔಷಧಿ ನುಂಗಿಸುವ (ಎಂಡಿಎ) ಕಾರ್ಯಕ್ರಮಕ್ಕೆ ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಆನೆಕಾಲು ರೋಗವು ಒಂದು ಸಾಂಕ್ರಾಮಿಕ ರೋಗ ವಾಗಿದ್ದು, ಕ್ಯೂಲೆಕ್ಸ್ ಎಂಬ ಹೆಣ್ಣು ಸೊಳ್ಳೆಯು ಆನೆಕಾಲುರೋಗ ಸೊಂಕಿತ ವ್ಯಕ್ತಿಗೆ ಕಚ್ಚಿ ಇನ್ನೊಬ್ಬ ಆರೋ ಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ರೋಗ ಹರಡು ತ್ತದೆ. ಈ ರೋಗದ ಜಂತುಗಳು (ಮೈಕ್ರೋ ಫೈಲೇರಿಯಾ) ಮನುಷ್ಯನ ದೇಹದ ದುಗ್ದರಸ ಗ್ರಂಥಿ ಗಳಲ್ಲಿ ಶೇಖರಣೆ ಗೊಂಡು ತಮ್ಮ ಸಂತಾನೋತ್ಪತ್ತಿಯನ್ನು ಮುಂದುವರೆಸಿಕೊಂಡು ಹೋಗುವು ದರಿಂದ ಮನುಷ್ಯನ ಇಳಿ ಮುಖ ಅಂಗಾಂಗಳಾದ ಕೈ ಕಾಲು, ವೃಷಣ ಹಾಗೂ ಹೆಣ್ಣು ಮಕ್ಕಳಿಗೆ ಸ್ತನಗಳಲ್ಲಿ ಬಾವು ಕಾಣಿಸಿಕೊಳ್ಳುತ್ತದೆ ಎಂದರು.

ಈ ರೋಗವು ವಿಶೇಷವಾಗಿ ಸಮಶೀತೋಷ್ಣ ವಲಯದ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇವುಗಳಲ್ಲಿ ಭಾರತ ದೇಶವು ಕೂಡಾ ಒಂದಾಗಿದೆ. 2025ರ ಫೆಬ್ರವರಿ 10 ರಿಂದ 28 ವರೆಗೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು/ವಸತಿ ನಿಲಯಗಳು/ಎಲ್ಲಾ ಸರಕಾರಿ ಕಚೇರಿ ಮತ್ತು ಸಂಘ-ಸಂಸ್ಥೆಗಳಿಗೆ, ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ಮನೆ ಮನೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡುತ್ತಾರೆ. ಅವರ ಸಮ್ಮುಖದಲ್ಲಿಯೇ ಊಟದ ನಂತರ ಡಿಇಸಿ, ಐವರ್‍ಮೆಕ್ವಿನ್ ನುಂಗಿಸುತ್ತಾರೆ ಮತ್ತು ಅಲ್ಬೋಂಡೊಜೋಲ್ ಮಾತ್ರೆಗಳನ್ನು ಚಿಪುಸುತ್ತಾರೆ ಎಂದರು.

ಇದನ್ನೂ ಓದಿ: Kalaburagi News: ಬ್ರಿಡ್ಜ್ ಮೇಲಿಂದ ಭೀಮಾ ನದಿಗೆ ಲಾರಿ ಬಿದ್ದು ಚಾಲಕ ನಾಪತ್ತೆ

ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ 2 ವರ್ಷ ವಯಸ್ಸಿಗಿಂತ ಕಿರಿಯ ಮಕ್ಕಳು, ಗರ್ಭಿಣಿ ಸ್ರ್ತೀಯರು ಹಾಗೂ ಇನ್ನಿತರ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಜನರನ್ನು ಹೊರತು ಪಡಿಸಿ 10,80,827 ಜನರಿಗೆ ಡಿಇಸಿ 100 Mg ಮಾತ್ರೆ ನುಂಗಿಸುತ್ತಾರೆ. ಐವರ್‍ಮೆಕ್ವಿನ್ ಮಾತ್ರೆಗಳು 5 ವರ್ಷ ವಯಸ್ಸಿಗಿಂತ ಕಿರಿಯ ಮಕ್ಕಳಿಗೆ ನುಂಗಿಸುವುದಿಲ್ಲ. ಐವರ್‍ಮೆಕ್ವಿನ್ 3 Mg ಡೋಜ್ ಪೋಲ್ ಮನುಷ್ಯರ ಮಕ್ಕಳ ಎತ್ತರದ ಆಧಾರದ ಮೇಲೆ ಅಳೆದು ಅರ್ಹ ವ್ಯಕ್ತಿಗಳಿಗೆ ಮಾತ್ರೆಗಳನ್ನು ನುಂಗಿಸುವ ಗುರಿ ಹೊಂದ ಲಾಗಿದೆ.

  • ಕಲಬುರಗಿ ನಗರ ಪ್ರದೇಶ ಮತ್ತು ಚಿತ್ತಾಪುರ ತಾಲ್ಲೂಕು ಹೊರತ್ತುಪಡಿಸಿ ಜಿಲ್ಲೆಯ ಉಳಿದ ಎಲ್ಲಾ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿ 20 ಮನೆಗೆ ಇಬ್ಬರಂತೆ ಒಟ್ಟು 2134 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಜಿಲ್ಲೆಯ ಒಟ್ಟು 226577 ಮನೆ ಮನೆಗೆ ತೆರಳಿ ಭೇಟಿ ಮಾಡಿ ಮನೆಯಲ್ಲಿರುವ ಅರ್ಹಜನರಿಗೆ ಊಟ ಮಾಡಿರುವುದನ್ನು ಖಚಿತಪಡಿಸಿಕೊಂಡು ವಯಸ್ಸಿಗನುಗುಣವಾಗಿ ಡಿಇಸಿ ಐವರ್‍ಮೆಕ್ವಿನ್ ಹಾಗೂ ಅಲ್ಬೆಂಡೆಜೋಲ್ ಮಾತ್ರೆಗಳನ್ನು ಅವರ ಸಮ್ಮುಖದಲ್ಲಿ ನುಂಗಿಸುತ್ತಾರೆ. ಪ್ರತಿ 10 ಜನಕ್ಕೆ ಒಂದು ಟೀಮ್ ಮಾಡಿ ಒಟ್ಟು 124 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮಾತ್ರೆಗಳನ್ನು ನುಂಗಿದ ನಂತರ ಯಾವುದೇ ಅಡ್ಡ ಪರಿಣಾಮಗಳೆನಾದರೂ ಉಂಟಾದ್ದಲ್ಲಿ ಇದನ್ನು ನೋಡಿಕೊಳ್ಳಲು ಅಂತಹ ಸಂದರ್ಭ ದಲ್ಲಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಅವಶ್ಯಕ ಔಷಧ ದಾಸ್ತಾನುಗಳೊಂದಿಗೆ (Rapid Reaction Team) ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆಯಾ ತಾಲೂಕಿಗೊಬ್ಬರಂತೆ ತಾಲೂ ಕಾ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲು ಈಗಾಗಲೇ ಜಿಲ್ಲೆಯ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅವಶ್ಯಕ ತರಬೇತಿಯನ್ನು ನೀಡಲಾಗಿದೆ ಎಂದರು.

ಒಂದು ವೇಳೆ ತಮ್ಮ ಮನೆಗೆ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮನೆಯಿಂದ ಹೊರಗೆ/ ಹೋಗಿರುವ ವ್ಯಕ್ತಿಗಳು ಸಂಜೆ ವೇಳೆಗೆ ಮನೆಗೆ ಬಂದಾಗ ಅಂಥವರಿಗೆ ಔಷಧ ನುಂಗಿಸಲು ರಾತ್ರಿ 9 ಗಂಟೆವರೆಗೆ ಆರೋಗ್ಯ ಸಂಸ್ಥೆಗಳಲ್ಲಿ ಔಷದ ನೀಡುವ ಬೂತ್‍ಗಳ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಈ ಮಾತ್ರೆಗಳು ತಮ್ಮ ಗ್ರಾಮ/ನಗರ ಪ್ರದೇಶದ ಸಮೀಪದ ಆಶಾ, ಅಂಗನವಾಡಿ, ಕಾರ್ಯ ಕರ್ತರನ್ನು ಹಾಗೂ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ. ಯಾವುದೇ ತೆರನಾದ ಸಂಶಯಗಳೇನಾದರೂ ಇದ್ದಲ್ಲಿ 9880782789, 9886522999, 9449096347, 9449843072, ಮೋಬೈಲ್ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳಾದ ಡಾ. ಬಸವರಾಜ ಗುಳಗಿ, ಗೊಬ್ಬೂ zರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಪಣಾ, ಕೀಟಶಾಸ್ತ್ರಜ್ಞ ಚಾಮ ರಾಜ ದೊಡ್ಮನಿ, ಜಿಲ್ಲಾ ವಿಬಿಡಿ ಸಲಹೆಗಾರ ಕಾರ್ಣಿಕ ಕೋರೆ, ಶಶಿಧರ ಬಾಳೆ ಮತ್ತು ಮಲೇರಿಯಾ ಘಟಕಾಧಿಕಾರಿ ಶರಣಬಸಪ್ಪ ಬಿರಾದಾರ, ಇತರೆ ಸಿಬ್ಬಂದಿಗಳು, ಟಿ.ಹೆಚ್.ಓ. ಧುಮಾಲೆ ಚೇತನ, ಗೊಬ್ಬೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಉರ್ಮಿಳಾ ಪ್ರಭುಲಿಂಗ ದೇವತ್ಕಲ್ ಅವರು ಉಪಸ್ಥಿತ ರಿದ್ದರು