Life Threat: ಬಾಲಿವುಡ್ ಸೆಲೆಬ್ರಿಟಿಗಳಿಗೆ ಪಾಕಿಸ್ತಾನದಿಂದ ಜೀವ ಬೆದರಿಕೆ
ಕಪಿಲ್ ಶರ್ಮಾ ಸೇರಿದಂತೆ ಹಾಸ್ಯ ನಟ ರಾಜ್‌ಪಾಲ್ ಯಾದವ್(Rajpal Yadav), ಸುಗಂಧ ಮಿಶ್ರಾ ಮತ್ತು ಕೊರಿಯೋಗ್ರಾಫರ್ ರೆಮೋ ಡಿಸೋಜಾಗೂ ಈ ಬೆದರಿಕೆ ಇ-ಮೇಲ್‌ಗಳು ಇತ್ತೀಚೆಗೆ ಬಂದಿವೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಆಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಇನ್ನು ತನಿಖೆ ವೇಳೆ ಈ ಬೆದರಿಕೆ ಸಂದೇಶ ಪಾಕಿಸ್ತಾನದಿಂದ ಬಂದಿವೆ ಎಂದು ತಿಳಿದುಬಂದಿವೆ.
ಮುಂಬೈ: ನಟ ಸೈಫ್ ಅಲಿಖಾನ್(Saif Ali Khan) ಮೇಲೆ ದುಷ್ಕರ್ಮಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣದ ಬೆನ್ನಲ್ಲೇ ಕೆಲವು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ(Life Threat) ಬಂದಿದೆ. ಹಾಸ್ಯ ಕಲಾವಿದ ಕಪಿಲ್ ಶರ್ಮಾ(Kapil Sharma) ಸೇರಿದಂತೆ ಕೆಲವು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆವೊಡ್ಡಿ ಇ-ಮೇಲ್ ಬಂದಿದೆ. ಕಪಿಲ್ ಶರ್ಮಾ ಜತೆಗೆ ಹಾಸ್ಯ ನಟ ರಾಜ್‌ಪಾಲ್ ಯಾದವ್(Rajpal Yadav), ಸುಗಂಧ ಮಿಶ್ರಾ ಮತ್ತು ಕೊರಿಯೋಗ್ರಾಫರ್ ರೆಮೋ ಡಿಸೋಜಾಗೂ ಈ ಬೆದರಿಕೆ ಇ-ಮೇಲ್‌ಗಳು ಇತ್ತೀಚೆಗೆ ಬಂದಿವೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಆಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಇನ್ನು ತನಿಖೆ ವೇಳೆ ಈ ಬೆದರಿಕೆ ಸಂದೇಶ ಪಾಕಿಸ್ತಾನದಿಂದ ಬಂದಿವೆ ಎಂದು ತಿಳಿದುಬಂದಿವೆ.
ಇ-ಮೇಲ್‌ನಲ್ಲಿ ಏನಿತ್ತು?
ನಿಮ್ಮ ಇತ್ತೀಚಿನ ಚಟುವಟಿಕೆಯನ್ನು ಗಮನಿಸುತ್ತಿದ್ದೇವೆ ಮತ್ತು ಸೂಕ್ಷ್ಮ ವಿಷಯವನ್ನು ನಿಮ್ಮ ಗಮನಕ್ಕೆ ತರುವುದು ಮುಖ್ಯ ಎಂದು ನಾವು ನಂಬುತ್ತೇವೆ. ಇದು ಪಬ್ಲಿಸಿಟಿ ಸ್ಟಂಟ್ ಅಥವಾ ನಿಮಗೆ ಕಿರುಕುಳ ನೀಡುವ ಪ್ರಯತ್ನವಲ್ಲ.ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಂದೇಶ ಕಳಿಸಿದ್ದಾರೆ. ಸಂದೇಶದ ಕೆಳಗೆ 'ಬಿಷ್ಣು' ಎಂದು ಸಹಿ ಮಾಡಿದ್ದಾರೆ. ಪೊಲೀಸರ ಪ್ರಕಾರ, ಸೆಲೆಬ್ರಿಟಿಗಳಿಂದ 8 ಗಂಟೆಗಳ ಒಳಗೆ ಈ ಸಂದೇಶಕ್ಕೆ ಉತ್ತರವನ್ನು ಕೇಳಲಾಗಿತ್ತು, ಇಲ್ಲದಿದ್ದರೆ ಅವರು ವೈಯಕ್ತಿಕ ಮತ್ತು ವೃತ್ತಿಪರ ರಂಗಗಳಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು.
ಹಾಸ್ಯನಟ ಕಪಿಲ್ ಶರ್ಮಾ ಇತ್ತೀಚೆಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಅವರಿಗಿಂತ ಮೊದಲು, ಸುಗಂಧ ಮಿಶ್ರಾ ಮತ್ತು ರೆಮೋ ಡಿಸೋಜಾ ಕೂಡ ಅದೇ ಮೇಲ್ ಸ್ವೀಕರಿಸಿದ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ ವರ್ಷ ಡಿಸೆಂಬರ್ 14 ರಂದು ರಾಜ್‌ಪಾಲ್ ಯಾದವ್ ಈ ಮೇಲ್ ಅನ್ನು ಸ್ವೀಕರಿಸಿದ್ದರು. ಡಿಸೆಂಬರ್ 17 ರಂದು ಅವರು ಪೊಲೀಸರಿಗೆ ದೂರು ದಾಖಲಿಸಿದರು.
ಈ ಸುದ್ದಿಯನ್ನೂ ಓದಿ: Saif Ali Khan: ಜೀವ ಉಳಿಸಿದ ಆಟೋ ಚಾಲಕನನ್ನು ತಬ್ಬಿ ಕೃತಜ್ಞತೆ ಹೇಳಿದ ಸೈಫ್ ಆಲಿ ಖಾನ್!
ನಟ ಸೈಫ್ ಆಲಿ ಖಾನ್ ಮೇಲೆ ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್ ಎಂಬ ವ್ಯಕ್ತಿ ದಾಳಿ ನಡೆಸಿದ್ದನು. ಸೈಫ್ ವಾಸವಿದ್ದ ಬಾಂದ್ರಾ ನಿವಾಸಕ್ಕೆ ಏಕಾಏಕಿ ನುಗ್ಗಿದ್ದ ದುಷ್ಕರ್ಮಿ ಆರು ಬಾರಿ ಚಾಕುವಿನಿಂದ ಇರಿದಿದ್ದನು. ಅವನನ್ನು ಭಾರತದಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶದ ಪ್ರಜೆ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಭಾನುವಾರ(ಜ.19) ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.