ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Saif Ali Khan: ಜೀವ ಉಳಿಸಿದ ಆಟೋ ಚಾಲಕನನ್ನು ತಬ್ಬಿ ಕೃತಜ್ಞತೆ ಹೇಳಿದ ಸೈಫ್‌ ಆಲಿ ಖಾನ್!

ದುಷ್ಕರ್ಮಿಯಿಂದ ಹಲ್ಲೆಗೊಳಗಾಗಿದ್ದ ಬಾಲಿವುಡ್‌ನ ಪ್ರಖ್ಯಾತ ನಟ ಸೈಫ್‌ ಆಲಿ ಖಾನ್‌ ಅವರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ ಆಟೋ ಡ್ರೈವರ್‌ನನ್ನು ನಟ ಇಂದು ಭೇಟಿಯಾಗಿದ್ದಾರೆ. ಆಟೋ ಚಾಲಕನ ಸಹಾಯಕ್ಕೆ ಕೃತಜ್ಞತೆ ತಿಳಿಸಿರುವ ಸೈಫ್‌ ಅವರನ್ನು ತಬ್ಬಿಕೊಂಡು ಫೋಟೊ ತೆಗೆಸಿಕೊಂಡಿದ್ದಾರೆ. ನಟ ಮತ್ತು ಅವರ ಕುಟುಂಬದವರು ನನ್ನನ್ನು ಪ್ರೀತಿಯಿಂದ ನಡೆಸಿಕೊಂಡರು. ನನಗೆ ಖುಷಿಯಾಯಿತು ಎಂದು ಆಟೋ ಡ್ರೈವರ್‌ ಭಜನ್ ಸಿಂಗ್ ಹೇಳಿದ್ದಾರೆ.

ಜೀವ ಉಳಿಸಿದ ಆಟೋ ಡ್ರೈವರ್‌ಗೆ ಬಿಗ್‌ ಗಿಫ್ಟ್‌ ಕೊಟ್ರಾ ಸೈಫ್‌?

Saif Ali Khan

Profile Deekshith Nair Jan 22, 2025 5:36 PM

ಮುಂಬೈ: ಬಾಲಿವುಡ್‌ನ ಪ್ರಖ್ಯಾತ ನಟ ಸೈಫ್‌ ಆಲಿ ಖಾನ್‌(Saif Ali Khan) ಜನವರಿ 16 ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ದುಷ್ಕರ್ಮಿಯಿಂದ ಹಲ್ಲೆಗೊಳಗಾಗಿದ್ದರು. ಕಷ್ಟದ ಸ್ಥಿತಿಯಲ್ಲಿದ್ದ ವೇಳೆ ಆಸ್ಪತ್ರೆಗೆ ದಾಖಲಾಗಲು ಆಟೋ ಚಾಲಕರೊಬ್ಬರು ನೆರವಾಗಿದ್ದರು. ಇಂದು ನಟ ಸೈಫ್ ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ. ಅಪಾಯದಲ್ಲಿದ್ದಾಗ ಸಹಾಯ ಮಾಡಿದ ವ್ಯಕ್ತಿಯನ್ನು ಮರೆಯದೆ ಭೇಟಿಯಾಗಿ ದೊಡ್ಡತನ ಮೆರೆದ ತಮ್ಮ ನಟನನ್ನು ಅಭಿಮಾನಿಗಳು ಬಹುವಾಗಿ ಹೊಗಳಿದ್ದಾರೆ.

ಸೈಫ್‌ ಆಲಿ ಖಾನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ನಟ ಭೇಟಿಯಾಗಿ ತಬ್ಬಿಕೊಂಡಿದ್ದಾರೆ. ಸೈಫ್ ಅವರ ತಾಯಿ ಶರ್ಮಿಳಾ ಟ್ಯಾಗೋರ್ ಕೂಡ ಧನ್ಯವಾದ ಸಲ್ಲಿಸಿ ಆಶೀರ್ವಾದ ಮಾಡಿದ್ದಾರೆ. ಲೀಲಾವತಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಕೂಡಲೇ ಸೈಫ್ ಭಜನ್‌ ಸಿಂಗ್‌ ಅವರನ್ನು ಭೇಟಿಯಾಗಿ ಕೃತಜ್ಞತೆ ತಿಳಿಸಿದ್ದಾರೆ.‌ ಆರ್ಥಿಕವಾಗಿಯೂ ನೆರವು ನೀಡಿದ್ದಾರೆ ಎಂದು ಹೇಳಲಾಗಿದೆ.



ಅಂದಿನ ಘಟನೆಯನ್ನು ನೆನಪಿಸಿಕೊಂಡ ಭಜನ್ ಸಿಂಗ್ "ನಾನು ರಿಕ್ಷಾದಲ್ಲಿ ಹೋಗುತ್ತಿದ್ದೆ, ಇದ್ದಕ್ಕಿದ್ದಂತೆ ನನಗೆ ಗೇಟ್‌ನಿಂದ ಶಬ್ದ ಕೇಳಿಸಿತು. ಒಬ್ಬ ಮಹಿಳೆ ಮುಖ್ಯ ಗೇಟ್ ಬಳಿ ರಿಕ್ಷಾ ನಿಲ್ಲಿಸಿ ಎಂದು ಜೋರಾಗಿ ಕಿರುಚುತ್ತಿದ್ದರು. ಆರಂಭದಲ್ಲಿ, ಹಲ್ಲೆಗೊಳಗಾಗಿದ್ದವರು ಸೈಫ್ ಆಲಿ ಖಾನ್ ಎಂದು ನನಗೆ ತಿಳಿದಿರಲಿಲ್ಲ. ಯೋಚಿಸಿ ರಿಕ್ಷಾ ನಿಲ್ಲಿಸಿದೆ. ಸೈಫ್ ಆಲಿ ಖಾನ್ ಅವರು ಆಟೋರಿಕ್ಷಾವನ್ನು ಹತ್ತಿದ ಕೂಡಲೇ,ಆಸ್ಪತ್ರೆಯನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಮೊದಲ ಕೇಳಿದರು. ಅವರಾಗಿಯೇ ನಡೆದುಕೊಂಡು ರಿಕ್ಷಾ ಹತ್ತುವಷ್ಟು ಅವರು ಶಕ್ತರಾಗಿದ್ದರು. ಗಾಯಗೊಂಡ ಸ್ಥಿತಿಯಲ್ಲಿದ್ದರು. ಅವರೊಂದಿಗೆ ಒಂದು ಚಿಕ್ಕ ಮಗು ಮತ್ತು ಇನ್ನೊಬ್ಬರು ಇದ್ದರು. ಎಂಟರಿಂದ ಹತ್ತು ನಿಮಿಷಗಳಲ್ಲಿ ನಾವು ಆಸ್ಪತ್ರೆ ತಲುಪಿದೆವು" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Saif Ali Khan: ಸೈಫ್‌ ಆಲಿ ಖಾನ್‌ ಪೂರ್ವಜರ 15,000 ಕೋಟಿ ಆಸ್ತಿ ಮುಟ್ಟುಗೋಲು? ಎಲ್ಲವೂ ಸರ್ಕಾರದ ನಿಯಂತ್ರಣಕ್ಕೆ!

ಲೀಲಾವತಿ ಆಸ್ಪತ್ರೆಯಲ್ಲಿ 5 ದಿನ ಚಿಕಿತ್ಸೆ ಪಡೆದ ಸೈಫ್ ಆಲಿ ಖಾನ್ ಎರಡು ಸರ್ಜರಿಯ ನಂತರ ಮಂಗಳವಾರ (ಜ.21ರಂದು) ಮನೆಗೆ ಮರಳಿದ್ದಾರೆ. ಸೈಫ್ ಅವರಿಗೆ ಅವರಿಗೆ ಒಂದು ವಾರದವರೆಗೆ ಸಂಪೂರ್ಣ ಬೆಡ್ ರೆಸ್ಟ್ ಮಾಡಬೇಕೆಂದು ವೈದ್ಯರು ಹೇಳಿದ್ದು, ಈ ಸಂದರ್ಭದಲ್ಲಿ ಹೊರಗಿನವರು ಯಾರು ಕೂಡ ಅವರನ್ನು ಭೇಟಿ ಆಗುವಂತಿಲ್ಲ ಎಂದು ಹೇಳಲಾಗಿದೆ. ನಟನನ್ನು ನೋಡಲು ಮನೆಯ ಬಳಿ ಜನ ಸೇರುವ ಸಾಧ್ಯತೆ ಇದ್ದು, ಭದ್ರತೆಯ ದೃಷ್ಟಿಯಿಂದ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.