Mahakumbh 2025: ಕುಂಭಮೇಳದ ಪ್ರಮುಖ ಆಕರ್ಷಣೆ ʻಐಐಟಿಯನ್ ಬಾಬಾʼ ಅಖಾಡದಿಂದ ಕಿಕ್‌ಔಟ್?
Mahakumbh 2025: ʻಐಐಟಿಯನ್ ಬಾಬಾ' ಎಂದೇ ಜನಪ್ರಿಯರಾಗಿದ್ದ ಅವರನ್ನು ತಮ್ಮ ಗುರು ಮಹಾಂತ ಸೋಮೇಶ್ವರ ಪುರಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಜುನಾ ಅಖಾಡ ಶಿಬಿರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಹೊರ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನವದೆಹಲಿ: ಪ್ರಯಾಗರಾಜ್‌ನ ಮಹಾ ಕುಂಭಮೇಳ(Mahakumbh 2025)ದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಐಐಟಿ ಮಾಜಿ ಏರೋಸ್ಪೇಸ್ ಎಂಜಿನಿಯರ್ ಅಭಯ್ ಸಿಂಗ್ ಅವರನ್ನು ಅವರನ್ನು ಅಖಾಡದಿಂದ ಹೊರಹಾಕಲಾಗಿದೆ. 'ಐಐಟಿಯನ್ ಬಾಬಾ'(IIT Baba) ಎಂದೇ ಜನಪ್ರಿಯರಾಗಿದ್ದ ಅವರನ್ನು ತಮ್ಮ ಗುರು ಮಹಾಂತ ಸೋಮೇಶ್ವರ ಪುರಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಜುನಾ ಅಖಾಡ ಶಿಬಿರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಹೊರ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜುನಾ ಅಖಾರದ ಸದಸ್ಯರೊಬ್ಬರು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಅಭಯ್ ಸಿಂಗ್ ಮತ್ತು ನಮ್ಮ ಅಖಾಡಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಅವರು ನಮ್ಮನ್ನು ದೂಷಿಸುತ್ತಿದ್ದರು. ಅವರು ಅಲೆಮಾರಿ, ಸಾಧು ಅಲ್ಲ. ಅವರು ಟಿವಿಯಲ್ಲಿ ಏನನ್ನೂ ಹೇಳುತ್ತಿದ್ದರು. ಅವರನ್ನು ಹೊರಹಾಕಲಾಯಿತು. ಅವರು ಯಾರ ಶಿಷ್ಯರೂ ಅಲ್ಲ ಎಂದರು.
💬 अभय सिंह उर्फ़ IITian Baba का बड़ा बयान 💬
— भारत समाचार | Bharat Samachar (@bstvlive) January 18, 2025
अभय सिंह ने कहा, "मैं किसी के पास दीक्षा लेने नहीं गया था। मैं खुद से चीजें सीखता हूं। मेरा गुरु खुद मैं हूं।"
उन्होंने यह भी कहा, "जनता मुझे राजा बनाएगी, और मैं जनता के लिए काम करूंगा।"
अभय सिंह ने अपने खिलाफ चल रही आलोचनाओं पर… pic.twitter.com/mGUZbTzqqd
ಐಐಟಿಯನ್ ಬಾಬಾ ಪ್ರತಿಕ್ರಿಯೆ ಹೇಗಿತ್ತು?
'ಐಐಟಿಯನ್ ಬಾಬಾ' ತಮ್ಮನ್ನು ಅಖಾಡದಿಂದ ಹೊರಹಾಕಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ. ಶುಕ್ರವಾರ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಅವರು, ಅಖಾಡದಲ್ಲಿರುವ ಮಠಾಧೀಶರು ತಮ್ಮ ಬಗ್ಗೆ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು. ನಾನು ಈಗ ಜನಪ್ರಿಯನಾಗಿದ್ದೇನೆ ಮತ್ತು ಅವರ ಬಗ್ಗೆ ಏನನ್ನಾದರೂ ಬಹಿರಂಗಪಡಿಸಬಹುದು ಎಂದು ಅವರಿಗೆ ಭಯ. ಆದ್ದರಿಂದ ನಾನು ರಹಸ್ಯ ಧ್ಯಾನಕ್ಕೆ ಹೋಗಿದ್ದೇನೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಆ ಜನರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ" ಎಂದು ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Mahakumbh : ರಷ್ಯಾದಿಂದ ಮಹಾಕುಂಭಮೇಳಕ್ಕೆ ಬಂದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬಾ; ಆಧುನಿಕ ಪರಶುರಾಮ ಎಂದೇ ಫೇಮಸ್!
ಯಾರು ಈ ಐಐಟಿಯನ್ ಬಾಬಾ?
ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಎಂಜಿನಿಯರಿಂಗ್ ಬಾಬಾ, ಹರಿಯಾಣದ ನಿವಾಸಿ. ಅವರು ತಮ್ಮ ಯಶಸ್ವಿ ವೃತ್ತಿ ಜೀವನವನ್ನು ತೊರೆದು ಆಧ್ಯಾತ್ಮಿಕತೆ ಮುಖ ಮಾಡಿದ್ದರು. 36 ವರ್ಷದ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಿಂದ ತಮ್ಮ ಏರೋಸ್ಪೇಸ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಬಾಲ್ಯದಲ್ಲಿ ತಾವು ಎದುರಿಸಿದಂತಹ ಕೆಲವು ಸಮಸ್ಯೆಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂಬ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದರು.