Mahakumbh : ರಷ್ಯಾದಿಂದ ಮಹಾಕುಂಭಮೇಳಕ್ಕೆ ಬಂದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬಾ; ಆಧುನಿಕ ಪರಶುರಾಮ ಎಂದೇ ಫೇಮಸ್!
ಮಹಾಕುಂಭ ಮೇಳವು ಪ್ರಯಾಗರಾಜ್‌ನಲ್ಲಿ ನಡೆಯುತ್ತಿದ್ದು, ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಷ್ಯಾದ ಬಾಬ ಒಬ್ಬರು ವೈರಲ್ ಆಗುತ್ತಿದ್ದು, ನೆಟ್ಟಿಗರು ಇವರ ಭಕ್ತಿ ಹಾಗೂ ಆದ್ಯಾತ್ಮಿಕತೆಗೆ ಮನಸೋತಿದ್ದಾರೆ.

Mahakumbh 2025

ಲಖನೌ ಜ 17, 2025 : ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ( Mahakumbh) ನಡೆಯುತ್ತಿದ್ದು, ದೇಶ ವಿದೇಶದಿಂದ ಕೋಟ್ಯಾಂತರ ಭಕ್ತರು ಆಗಮಿಸುತ್ತಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಕುಂಭ ಮೇಳ ನಡೆಯುತ್ತದೆ. ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮವಾದ ತ್ರೀವೇಣಿಯಲ್ಲಿ ಭಕ್ತರು ಪುಣ್ಯ ಸ್ನಾನವನ್ನು ಮಾಡುತ್ತಿದ್ದಾರೆ. ಸದ್ಯ ಮಹಾಕುಂಭ ಮೇಳದಲ್ಲಿ ರಷ್ಯಾದ 'ಮಸ್ಕುಲರ್ ಬಾಬಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ಹಿಂದೂ ಧರ್ಮವನ್ನು ಸ್ವೀಕರಿಸಿದ ಇವರು ಸರಳವಾದ ಕೇಸರಿ ಬಣ್ಣದ ವಸ್ತ್ರವನ್ನುಟ್ಟು ಉದ್ದನೇಯ ಗಡ್ಡ, ಹಿಂದೆ ಜೋತು ಬಿಟ್ಟ ಕೂದಲು.. ರಟ್ಟೆ ಮತ್ತು ಮುಂಗೈ ಬಳಿ ರುದ್ರಾಕ್ಷಿ ಸರ ಧರಿಸಿದ್ದಾರೆ. ದ್ಯ ಈ ವ್ಯಕ್ತಿಯ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಇವರನ್ನು ಆಧುನಿಕ ಜಗದ ಪರುಶರಾಮ ಎಂತಲೇ ಕರೆಯಲಾಗುತ್ತಿದೆ.
ಇವರನ್ನು ಪ್ರೇಮ ಗಿರಿ ಮಹಾರಾಜ ಸಾಧು ಎಂದು ಕರೆಯಲಾಗಿದ್ದು, ಇವರು ಬರೋಬ್ಬರಿ 7 ಅಡಿ ಎತ್ತರವಿದ್ದಾರೆ. ರಷ್ಯಾದಲ್ಲಿ ಉಪನ್ಯಾಸಕ ವೃತ್ತಿ ಮಾಡಿಕೊಂಡಿದ್ದ ಈ ಬಾಬಾ ಹಿಂದೂ ಧರ್ಮದಿಂದ ಪ್ರಭಾವಿತರಾಗಿ ಕಳೆದ ಮೂವತ್ತು ವರ್ಷಗಳಿಂದ ಆಧಾತ್ಮ ಲೋಕದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ನೇಪಾಳದಲ್ಲಿ ನೆಲೆಸಿರುವ ಬಾಬಾ ಈಗ ಮಹಾಕುಂಭಮೇಳಕ್ಕೆ ಆಗಮಿಸಿದ್ದು. ಕುಂಭಮೇಳದಲ್ಲಿ ಪ್ರಮುಖ ಆಕರ್ಷಣಿಯವಾಗಿ ಗುರುತಿಸಿಕೊಂಡಿದ್ದಾರೆ.ಆತ್ಮ ಪ್ರೇಮ್ ಗಿರಿಯ ಹೊರತಾಗಿ, ಅಭೇ ಸಿಂಗ್, ಮಾಜಿ ಏರೋಸ್ಪೇಸ್ ಇಂಜಿನಿಯರ್, ಈಗ "IIT ಬಾಬಾ" ಎಂದು ಜನಪ್ರಿಯರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ : Google : ಮಹಾಕುಂಭ ಮೇಳಕ್ಕೆ ಗೂಗಲ್‌ನಲ್ಲಿ ಗುಲಾಬಿ ದಳಗಳ ಸುರಿಮಳೆ: ನೆಟ್ಟಿಗರಿಂದ ಮೆಚ್ಚುಗೆ
ಕಬೂತರ್ ವಾಲೆ ಬಾಬಾ" (ಪಾರಿವಾಳ ಸಂತ) ಎಂದು ಕರೆಯಲ್ಪಡುವ ಮಹಂತ್ ರಾಜಪುರಿ ಜಿ ಮಹಾರಾಜ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದಾರೆ.