ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವಿಮಾನ ಟೇಕ್‌-ಆಫ್ ಮುಂಚೆಯೇ ಎಮರ್ಜೆನ್ಸಿ ಎಕ್ಸಿಟ್‌ ಡೋರ್‌ ತೆಗೆದ ವ್ಯಕ್ತಿ ಅರೆಸ್ಟ್!

ಇಂದು(ಜ.28) ಬೆಳಗ್ಗೆ ರಾಜಸ್ಥಾನದ ಜೋಧ್‌ಪುರದಿಂದ ಇಂಡಿಗೋ ವಿಮಾನವೊಂದು ಬೆಂಗಳೂರಿಗೆ ತೆರಳಲು ಸಿದ್ಧವಾಗಿತ್ತು. ಎಲ್ಲಾ ಪ್ರಯಾಣಿಕರು ವಿಮಾನದೊಳಗಿದ್ದರು. ಕ್ಯಾಬಿನ್ ಸಿಬ್ಬಂದಿ ವಿಮಾನ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸಿದ್ದರು. ವಿಮಾನದ ಟೇಕ್-ಆಫ್ ಅನ್ನು ಬೆಳಗ್ಗೆ 10:10 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ, ಪ್ರಯಾಣಿಕರೊಬ್ಬರು ಫ್ಲಾಪ್ ಅನ್ನು ಎಳೆದು ಎಮರ್ಜೆನ್ಸಿ ಎಕ್ಸಿಟ್‌ ಬಾಗಿಲನ್ನು ತೆರೆದಿದ್ದಾರೆ. ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು,ಸುದ್ದಿ ಭಾರೀ ವೈರಲ್‌ ಆಗಿದೆ.

Viral News

ಜೈಪುರ: ಇಂದು ಬೆಳಗ್ಗೆ(ಜ.28) ರಾಜಸ್ಥಾನದ(Rajasthan) ಜೋಧ್‌ಪುರದಿಂದ( Jodhpur ) ಇಂಡಿಗೋ ವಿಮಾನವೊಂದು(IndiGo Flight) ಬೆಂಗಳೂರಿಗೆ ತೆರಳಲು ಸಿದ್ಧವಾಗಿತ್ತು. ಎಲ್ಲಾ ಪ್ರಯಾಣಿಕರು ವಿಮಾನದೊಳಗಿದ್ದರು. ಕ್ಯಾಬಿನ್ ಸಿಬ್ಬಂದಿ ವಿಮಾನ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸಿದ್ದರು. ವಿಮಾನದ ಟೇಕ್-ಆಫ್ ಅನ್ನು ಬೆಳಗ್ಗೆ 10:10 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಪ್ರಯಾಣಿಕರೊಬ್ಬರು ಫ್ಲಾಪ್ ಅನ್ನು ಎಳೆದು ತುರ್ತು ನಿರ್ಗಮನದ ಬಾಗಿಲನ್ನು(Emergency Exit Door) ತೆರಿದಿದ್ದಾರೆ. ವ್ಯಕ್ತಿಯನ್ನು ಭದ್ರತಾ ಅಧಿಕಾರಿಗಳು ಬಂಧಿಸಿದ್ದು,ಸುದ್ದಿ(Viral News) ಎಲ್ಲೆಡೆ ಭಾರೀ ವೈರಲ್‌ ಆಗಿದೆ.

ಈ ಅನುಚಿತ ಘಟನೆಯಿಂದಾಗಿ ಕೋಲಾಹಲ ಉಂಟಾಗಿದೆ. ಕ್ಯಾಬಿನ್ ಸಿಬ್ಬಂದಿ ಕೂಡಲೇ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಟೋಕಾಲ್‌ಗಳನ್ನು ಪ್ರಾರಂಭಿಸಿದ್ದಾರೆ. ಪ್ರಯಾಣಿಕನನ್ನು ಬಂಧಿಸಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.



ಆಕ್ಸಿಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸಿರಾಜ್ ಕಿದ್ವಾಯಿ, ತಾನು ಆಕಸ್ಮಿಕವಾಗಿ ಫ್ಲಾಪ್ ಅನ್ನು ತೆರೆದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಎಕ್ಸಿಟ್‌ ಡೋರ್ ತೆರೆದ ನಂತರ ಪೈಲಟ್‌ಗೆ ನೇರ ಸಂದೇಶವನ್ನು ಕಳುಹಿಸಲಾಗಿದೆ. ಭದ್ರತಾ ಅಧಿಕಾರಿಗಳು ತಕ್ಷಣವೇ ಪ್ರಯಾಣಿಕರನನ್ನು ವಿಮಾನದಿಂದ ಹೊರಗೆ ಎಳೆದು ತಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Narendra Modi: ಐತಿಹಾಸಿಕ ಕುಂಭಮೇಳದಲ್ಲಿ ಫೆ.5 ರಂದು ಪ್ರಧಾನಿ ಮೋದಿ ಭಾಗಿ; ಪುಣ್ಯ ಸ್ನಾನ!

ವಿಮಾನದಲ್ಲಿ ಇತರ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ನಮ್ಮ ಎಲ್ಲಾ ಕಾರ್ಯಾಚರಣೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದೇವೆ ಎಂದು ವಿಮಾನ ಅಧಿಕಾರಿಗಳು ಹೇಳಿದ್ದಾರೆ.



ಇದೀಗ ಜೋಧ್‌ಪುರದ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಪ್ರಯಾಣಿಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಟೇಕ್-ಆಫ್‌ನಲ್ಲಿ 20 ನಿಮಿಷಗಳ ವಿಳಂಬವಾಗಿದೆ.