ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ ಲೋಕಾರ್ಪಣೆ
ತರಬೇತಿ ಪಡೆದ ವೈದ್ಯರು, ನರ್ಸ್, ಮನಶಾಸ್ತ್ರಜ್ಞರು, ಸಮಾಜ ಕಾರ್ಯಕರ್ತರು ಮತ್ತು ಅನೇಕ ಎನ್ ಜಿ ಓ ಗಳು ಸಹ ಇದಕ್ಕೆ ನೆರವು ನೀಡುತ್ತಿವೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಕೇವಲ 4.5 ಕಿ.ಮೀ. ಮತ್ತು NH-66 ನಿಂದ 4 ಕಿ.ಮೀ. ದೂರದಲ್ಲಿ ಸ್ವರ್ಣಾನದಿಯ ಶಾಂತವಾದ ದಡದಲ್ಲಿ, 12 ಎಕರೆ ವಿಸ್ತಾರದ ಹಸಿರು ಕ್ಯಾಂಪಸ್ಸಿನಲ್ಲಿ ಈ ಮಣಿಪಾಲ್ ಹಾಸ್ಪೈಸ್ ಮತ್ತು ರಿಸ್ಪ್ಟ್ ಸೆಂಟರ್ (MHRC) ಕೇಂದ್ರ ಇದೆ.


ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE- ಮಾಹೆ), ಮಣಿಪಾಲ ದಲ್ಲಿ ಭಾರತದಲ್ಲಿಯೇ ವಿಶಿಷ್ಟವೆನಿಸುವ ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ (MHRC) ಅನ್ನು ಇದೇ ಏಪ್ರಿಲ್ 30, 2025ರಂದು ಆಂಧ್ರ ಪ್ರದೇಶ ರಾಜ್ಯಪಾಲ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಉದ್ಘಾಟಿಸಲಿದ್ದಾರೆ. ಈ ಕೇಂದ್ರ ವು ಜುಲೈ 2025ರಿಂದ ಸೇವೆಗೆ ತೆರೆದುಕೊಳ್ಳಲಿದೆ. ಮಾಹೆಯ ಅತ್ಯುನ್ನತ ಸಮಾಜಮುಖಿ ಯೋಜನೆಯಾದ ಇದು, ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಗಂಭೀರವಾದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಮತ್ತು ಅವರ ಕುಟುಂಬದವರು ಈ ಕೇಂದ್ರದಲ್ಲಿ ಉಳಿದುಕೊಳ್ಳ ಬಹುದಾಗಿದೆ.
ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ), ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಪ್ಯಾಲಿಯೇಟಿವ್ ಕೇರ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.
ತರಬೇತಿ ಪಡೆದ ವೈದ್ಯರು, ನರ್ಸ್, ಮನಶಾಸ್ತ್ರಜ್ಞರು, ಸಮಾಜ ಕಾರ್ಯಕರ್ತರು ಮತ್ತು ಅನೇಕ ಎನ್ ಜಿ ಓ ಗಳು ಸಹ ಇದಕ್ಕೆ ನೆರವು ನೀಡುತ್ತಿವೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಕೇವಲ 4.5 ಕಿ.ಮೀ. ಮತ್ತು NH-66 ನಿಂದ 4 ಕಿ.ಮೀ. ದೂರದಲ್ಲಿ ಸ್ವರ್ಣಾನದಿಯ ಶಾಂತವಾದ ದಡದಲ್ಲಿ, 12 ಎಕರೆ ವಿಸ್ತಾರದ ಹಸಿರು ಕ್ಯಾಂಪಸ್ಸಿನಲ್ಲಿ ಈ ಮಣಿಪಾಲ್ ಹಾಸ್ಪೈಸ್ ಮತ್ತು ರಿಸ್ಪ್ಟ್ ಸೆಂಟರ್ (MHRC) ಕೇಂದ್ರ ಇದೆ.
ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ
ಕೇಂದ್ರದ ಉದ್ಘಾಟನೆಯ ಕುರಿತಾಗಿ ಮಾತನಾಡಿದ ಮಾಹೆಯ ಪ್ರೊ-ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಅವರು, "ನಮ್ಮ ಬದ್ಧತೆಯು ಯಾವಾಗಲೂ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆ ಯನ್ನು ಒದಗಿಸುವ ಜೊತೆ ಜೊತೆಗೆ ಸಮಾಜಕ್ಕೆ ನೆರವಾಗುವ ಮತ್ತು ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವುದನ್ನು ಒಳಗೊಂಡಿದೆ. ಇದರ ಹಿಂದಿನ ಕಲ್ಪನೆಯು ವೈದ್ಯಕೀಯ ಉತ್ಕೃಷ್ಟತೆ ಯೊಂದಿಗೆ ಜೀವನ ಸೀಮಿತ ಪರಿಸ್ಥಿತಿ ಎದುರಿಸುತ್ತಿರುವವರಿಗೆ ಸಹಾನುಭೂತಿಯ ಆರೈಕೆ ಮತ್ತು ರೋಗಿ ಕೇಂದ್ರಿತ ಆರೈಕೆಯನ್ನು ಒದಿಗುಸುವುದಾಗಿದೆ. ದೈಹಿಕ ಆರೈಕೆಯ ಜೊತೆಗೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಪೋಷಿಸುವಂತೆ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ, ಇದು ರೋಗದ ಗುಣಪಡಿಸುವಿಕೆಯಲ್ಲದೆ, ಇಡೀ ವ್ಯಕ್ತಿಯನ್ನು ಒಳಗೊಂಡಿರಬೇಕು ಎಂಬ ನಂಬಿಕೆ ಯನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.
ಕೇಂದ್ರದ ಉದ್ಘಾಟನೆಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿರುವ, ಮಾಹೆಯ ಉಪಕುಲಪತಿ ಲೆಫ್ಟಿ ನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್, ವಿಎಸ್‌ಎಂ (ನಿವೃತ್ತ) ಅವರು"ಎಮ್‌ಎಚ್‌ಆರ್ ಸಿ ವಿಶೇಷವಾಗಿ, ಜನರಿಗೆ ನೆರವು ನೀಡುವ ಮತ್ತು ಶೈಕ್ಷಣಿಕವಾಗಿಯೂ ಮುಖ್ಯವಾಗಿರುವ ಆರೋಗ್ಯ ಸೇವೆ ನೀಡುವ ನಮ್ಮ ಧ್ಯೇಯವನ್ನು ಮುನ್ನಡೆಸುವ ಒಂದು ಮಾರ್ಗವಾಗಿದೆ. ವೈದ್ಯಕೀಯ ಕಾಲೇಜು ಮತ್ತು ತೃತೀಯ ಆಸ್ಪತ್ರೆ ಎರಡಕ್ಕೂ ಸಂಯೋಜಿತವಾಗಿರುವ ಭಾರತದ ಏಕೈಕ ವಿಶ್ರಾಂತಿ ಧಾಮವಾಗಿದೆ, ಭವಿಷ್ಯದ ಆರೈಕೆದಾರರ ತರಬೇತಿಗೆ ಪೂರಕವಾಗಿರುವುದರೊಂದಿಗೆ ಸುಧಾರಿತ ಉಪಶಾಮಕ ಆರೈಕೆಯನ್ನು ಒದಗಿಸಲು ಸಿದ್ಧವಾಗಿದೆ. ಈ ಉಪಕ್ರಮದ ಮೂಲಕ ನೀಡಲಾಗುವ ಸೇವೆಗಳನ್ನು ಗಂಭೀರ ಮತ್ತು ಜೀವನ-ಸೀಮಿತ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ರೋಗಿಗಳು ಮತ್ತು ಕುಟುಂಬಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಒದಗಿಸಲಾಗುತ್ತದೆ" ಎಂದರು.
ಮಾಹೆಯ ಆರೋಗ್ಯ ವಿಜ್ಞಾನಗಳ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ಕೆ ರಾವ್, ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರೊ ವೈಸ್ ಚಾನ್ಸಲರ್ ಡಾ.ನಾರಾಯಣ ಸಭಾಹಿತ್, ಮುಖ್ಯ ಕಾರ್‍ಯನಿರ್ವಣಾಧಿ ಕಾರಿ ಡಾ. ರವಿರಾಜ ಎನ್ಎಸ್, ಮಾಹೆಯ ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಮತ್ತು ಉಪಶಾಮಕ ಔಷಧ ಮತ್ತು ಸಪೋರ್ಟಿವ್ ಕೇರ್ ವಿಭಾಗದ ಮುಖ್ಯಸ್ಥ ಡಾ.ನವೀನ್ ಸಾಲಿನ್ಸ್ ಮತ್ತು ಮಣಿಪಾಲ ಹಾಸ್ಪೈಸ್ ಮತ್ತು ರಿಸ್ಪ್ಟ್ ಸೆಂಟರ್ (ಎಂಎಚ್‌ಆರ್‌ಸಿ) ನಿರ್ದೇಶಕಿ ಡಾ.ಸೀಮಾ ರಾಜೇಶ್ ರಾವ್ ಮಾತನಾಡಿದರು.
ಸಂಶೋಧನೆ ಮತ್ತು ಶಿಕ್ಷಣದೊಂದಿಗೆ ಸುಧಾರಿತ ಉಪಶಾಮಕ ಆರೈಕೆಯ ವಿಶಿಷ್ಟತೆಯೊಂದಿಗೆ ಎಮ್ಎಚ್ ಆರ್ ಸಿ ಇತರ ವಿಶ್ರಾಂತಿ ಧಾಮಗಳಿಗಿಂತ ಭಿನ್ನವಾಗಿದೆ. ಈ ಸೌಲಭ್ಯವನ್ನು ವೈದ್ಯ ಕೀಯ ಕಾಲೇಜು ಮತ್ತು ತೃತೀಯ ಆರೈಕೆ ಆಸ್ಪತ್ರೆಯೊಂದಿಗೆ ಜೋಡಿಸಲಾಗಿದ್ದು, ಭಾರತ ಏಕೈಕ ವಿಶ್ರಾಂತಿ ಧಾಮವಾಗಿರಲಿದೆ. ಇದು ಕ್ಯಾನ್ಸರ್ ಮತ್ತು ಕ್ಯಾನ್ಸರೇತರ ಪರಿಸ್ಥಿತಿಗಳಲ್ಲೂ ರೋಗಿಗಳ ಆರೈಕೆಗೆ ಪೂರಕವಾಗಿದೆ. ಮುಂದಿನ ಪೀಳಿಗೆಯ ಉಪಶಾಮಕ ಆರೈಕೆ ತಜ್ಞರಿಗೆ ತರಬೇತಿ ನೀಡುವಾಗ ಎಮ್‌ಎಚ್ ಆರ್ ಸಿ ನವೀನ ಆರೈಕೆ ಮಾದರಿಗಳನ್ನು ಒದಗಿಸಲಿದೆ.