ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಹ್ಯಾರಿಸ್‌ ರೌಫ್‌ಗೆ ಎರಡು ಪಂದ್ಯಗಳಿಂದ ನಿಷೇಧ, ಸೂರ್ಯಕುಮಾರ್‌ ಯಾದವ್‌ಗೆ ದಂಡ!

ಕಳೆದ ಏಷ್ಯಾ ಕಪ್‌ ಟೂರ್ನಿಯ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಪಂದ್ಯಗಳ ವೇಳೆ ನಡೆದಿದ್ದ ವಿವಾದಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಮತ್ತು ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್‌ ರೌಫ್‌ಗೆ ಐಸಿಸಿ ಶಿಕ್ಷೆಯನ್ನು ವಿಧಿಸಿದೆ.

ಹ್ಯಾರಿಸ್‌ ರೌಫ್‌ಗೆ 2 ಪಂದ್ಯಗಳಿಂದ ನಿಷೇಧ, ಸೂರ್ಯಕುಮಾರ್‌ಗೆ ದಂಡ!

ಏಷ್ಯಾ ಕಪ್‌ ವಿವಾದ ಸಂಬಂಧಿಸಿದಂತೆ ಹ್ಯಾರಿಸ್‌ ರೌಫ್‌ಗೆ ಎರಡು ಪಂದ್ಯಗಳಿಂದ ನಿಷೇಧ. -

Profile Ramesh Kote Nov 4, 2025 10:06 PM

ನವದೆಹಲಿ: 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭುಗಿಲೆದಿದ್ದ ಹಲವಾರು ವಿವಾದಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ನವೆಂಬರ್‌ 4 ರಂದು ಶಿಕ್ಷೆಯನ್ನು ಪ್ರಕಟಿಸಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಪಂದ್ಯಗಳ ವೇಳೆ ಅನುಚಿತ ವರ್ತನೆ ತೋರುವ ಮೂಲಕ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಹ್ಯಾರಿಸ್ ರೌಫ್ (Haris Rauf) ಅವರನ್ನು ಐಸಿಸಿ ಎರಡು ಪಂದ್ಯಗಳಿಂದ ನಿಷೇಧ ಹೇರಿದೆ. ಇದರ ಜೊತೆಗೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar yadav) ಅವರಿಗೂ ಕೂಡ ಐಸಿಸಿ ದಂಡವನ್ನು ವಿಧಿಸಿದೆ. ಮಂಗಳವಾರ ನಡೆದಿದ್ದ ಐಸಿಸಿ ಮೀಟಿಂಗ್‌ನಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

ಸೆಪ್ಟೆಂಬರ್ 14, 21 ಮತ್ತು 28 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿದ್ದ ಪಂದ್ಯಗಳಲ್ಲಿ ನಡೆದಿದ್ದ ಘಟನೆಗಳ ಬಗ್ಗೆ ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರಿಗಳ ಸದಸ್ಯರು ಕೇಳಿದರು. ಎಲ್ಲಾ ಮೂರು ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹ್ಯಾಂಡ್‌ಶೇಕ್‌ ಮಾಡಿರಲಿಲ್ಲ ಮತ್ತು ಪಾಕಿಸ್ತಾನ ತಂಡದ ಆಟಗಾರರು ಹಲವಾರು ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು.

ಸೆಪ್ಟೆಂಬರ್ 14 ರಂದು ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮೊದಲ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಹ್ಯಾರಿಸ್‌ ರೌಫ್ ಭಾರತೀಯ ಆಟಗಾರರನ್ನು ನಿಂದಿಸಿ ಆಪರೇಷನ್ ಸಿಂಧೂರ್ ಬಗ್ಗೆ ವ್ಯಂಗ್ಯವಾಡಿದ್ದರು. ಜೆಟ್ ವಿಮಾನವನ್ನು ಹೊಡೆದುರುಳಿಸಿ 6-0 ರಂತೆ ಸನ್ನೆ ಮಾಡಿದ್ದರು. ಇದಕ್ಕೂ ಮುನ್ನ ಪಂದ್ಯದ ಆರಂಭಕ್ಕೂ ಮುನ್ನ ಭಾರತದ ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್, ನಾಯಕ ಸಲ್ಮಾನ್‌ ಆಘಾ ಅವರಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದರು.

Asia Cup 2025: ʻಭಾರತ ತಂಡದ ಎದುರು ಹ್ಯಾರಿಸ್‌ ರೌಫ್‌ ರನ್‌ ಮಷೀನ್‌ʼ-ವಸೀಮ್‌ ಅಕ್ರಮ್‌ ಟೀಕೆ!

ಅಲ್ಲದೆ ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್ ಅವರು ಅರ್ಧಶತಕ ಬಾಡಿ ಗನ್‌ಶೂಟ್‌ ಸನ್ನೆ ಮಾಡಿದ್ದರು. ವೇಗಿ ಹ್ಯಾರಿಸ್ ರೌಫ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.21 ಅನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಸೂರ್ಯಕುಮಾರ್ ಯಾದವ್ ಅವರಿಗೆ ಐಸಿಸಿ ಪಂದ್ಯ ಶುಲ್ಕದ ಶೇ 30 ರಷ್ಟು ದಂಡ ಮತ್ತು ಎರಡು ಡಿಮೆರಿಟ್ ಅಂಕಗಳನ್ನು ನೀಡಿತು.

ಸಾಹಿಬ್‌ಜಾದಾ ಫರ್ಹಾನ್ ಕೂಡ ತಪ್ಪಿತಸ್ಥರೆಂದು ಕಂಡುಬಂದಿದೆ ಆದರೆ ಎಚ್ಚರಿಕೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಪಂದ್ಯದಲ್ಲಿ ಅರ್ಧಶತಕ ತಲುಪಿದ ನಂತರ ಫರ್ಹಾನ್ ಬಂದೂಕಿನ ಸನ್ನೆ ಮಾಡಿದ್ದರು. ರೌಫ್ ಕೂಡ ಅದೇ ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ್ದು, ಅವರ ಪಂದ್ಯ ಶುಲ್ಕದ 30 ಪ್ರತಿಶತ ದಂಡ ಮತ್ತು ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.

IND v PAK: ಭಾರತದ ವಿರುದ್ಧ ಪ್ರಚೋದನಕಾರಿ ಸನ್ನೆ ಮಾಡಿದ ಹ್ಯಾರಿಸ್‌ ರೌಫ್‌ಗೆ ದಂಡ!

"ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಉಲ್ಲಂಘನೆಗಾಗಿ ಸೂರ್ಯಕುಮಾರ್ ಯಾದವ್ (ಭಾರತ) ತಪ್ಪಿತಸ್ಥರೆಂದು ಕಂಡುಬಂದಿದೆ, ಇದು ಪಂದ್ಯಕ್ಕೆ ಅಪಖ್ಯಾತಿ ತರುವ ನಡವಳಿಕೆಗೆ ಸಂಬಂಧಿಸಿದೆ. ಅವರಿಗೆ ಪಂದ್ಯ ಶುಲ್ಕದ ಶೇಕಡಾ 30 ರಷ್ಟು ದಂಡ ವಿಧಿಸಲಾಯಿತು ಮತ್ತು ಎರಡು ಡಿಮೆರಿಟ್ ಅಂಕಗಳನ್ನು ಪಡೆಯಲಾಯಿತು," ಎಂದು ಐಸಿಸಿ ಸೆಪ್ಟೆಂಬರ್ 14ರ ಪಂದ್ಯದ ವಿಚಾರಣೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

"ಎಸ್ ಫರ್ಹಾನ್ (ಪಾಕಿಸ್ತಾನ) ಅದೇ ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ್ದು, ಅವರಿಗೆ ಅಧಿಕೃತ ಎಚ್ಚರಿಕೆ ನೀಡಲಾಯಿತು, ಒಂದು ಡಿಮೆರಿಟ್ ಪಾಯಿಂಟ್ ಪಡೆಯಲಾಯಿತು. ಹ್ಯಾರಿಸ್ ರೌಫ್ (ಪಾಕಿಸ್ತಾನ) ಕೂಡ ಅದೇ ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ್ದು, ಅವರ ಪಂದ್ಯ ಶುಲ್ಕದ ಶೇಕಡಾ 30 ರಷ್ಟು ದಂಡ ವಿಧಿಸಲಾಗಿದೆ, ಇದರ ಪರಿಣಾಮವಾಗಿ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ," ಎಂದು ಐಸಿಸಿ ತಿಳಿಸಿದೆ.