Market News: ಬರೋಬ್ಬರಿ 875.50 ಕೋಟಿ ರೂ. ಹೂಡಿಕೆ ಪಡೆದ ಡಾ. ಅಗರ್ವಾಲ್ಸ್ ಹೆಲ್ತ್ ಕೇರ್
ನೇತ್ರ ಪಾಲನಾ ಕ್ಷೇತ್ರದಲ್ಲಿ ದೇಶದಲ್ಲೇ ಬಹುದೊಡ್ಡ ಜಾಲವನ್ನು ಹೊಂದಿರುವ ಡಾ. ಅಗರ್ವಾಲ್ಸ್ ಹೆಲ್ತ್ ಕೇರ್ ಲಿಮಿಟೆಡ್ ಇದೀಗ ಶೇರು ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದ್ದು, ಇದರ ಆಂಕರ್ ಬುಕ್ ರೈಸಿಂಗ್‌ನಲ್ಲಿ ಹಲವಾರು ವಿದೇಶಿ ಹೂಡಿಕೆದಾರರು ಆಸಕ್ತಿ ತೋರಿಸಿದ್ದಾರೆ...

ಡಾ. ಅಗರ್ವಾಲ್ಸ್ ಐಪಿಒ

ಮುಂಬೈ: ಡಾ. ಅಗರ್ವಾಲ್ಸ್ ಹೆಲ್ತ್ ಕೇರ್ ಲಿಮಿಟೆಡ್ ನ (Dr. Agarwal’s Health Care Ltd) ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPO) ಗೆ ಹೂಡಿಕೆದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಸಿಂಗಾಪುರ ಸರಕಾರ (Government of Singapore), ಗೋಲ್ಡ್ ಮ್ಯಾನ್ ಸಾಚ್ಸ್ (Goldman Sachs), ಫಿಡೆಲಿಟಿ (Fidelity) ಮತ್ತು ಇನ್ನಿತರ ಹೂಡಿಕೆದಾರರು ಇದರ ಆಂಕರ್ ಬುಕ್ (anchor book) ರೈಸಿಂಗ್ ನಲ್ಲಿ ಭಾಗವಹಿಸಿದ್ದು, ಆಂಕರ್ ಇನ್ವೆಸ್ಟರ್ ಗಳ ಮೂಲಕ 875.50 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ.
ಆಂಕರ್ ಬುಕ್ ನಲ್ಲಿ ಭಾಗವಹಿಸಿದ್ದ ಇತರೇ ವಿದೇಶಿ ಹೂಡಿಕೆದಾರರೆಂದರೆ ಮೋರ್ಗನ್ ಸ್ಟ್ಯಾನ್ಲಿ (Morgan Stanley), ಟೋಕು ಯುರೋಪ್ (Tocu Europe), ಮಾನಿಟರಿ ಅಥಾರಿಟಿ ಆಫ್ ಸಿಂಗಾಪುರ (Monetary Authority of Singapore), ಗವರ್ನಮೆಂಟ್ ಪೆನ್ಷನ್ ಫಂಡ್ ಗ್ಲೋಬಲ್ (Government Pension Fund Global), ನೋಮುರಾ (Nomura), ಪೋಲಾರ್ ಕ್ಯಾಪಿಟಲ್ ಫಂಡ್ಸ್ (Polar Capital Funds), ದಿ ಪ್ರುಡೆನ್ಷಿಯಲ್ ಅಶ್ಯೂರೆನ್ಸ್ ಕಂಪೆನಿ (The Prudential Assurance Company) ಹಾಗೂ ಹೆಚ್.ಎಸ್.ಬಿ.ಸಿ. ಗ್ಲೋಬಲ್ ಗಳು (HSBC Global) ಸೇರಿವೆ.
ಆನಂದ್ ರಾಠಿ (Anand Rathi), ಎಸ್.ಬಿ.ಐ. ಸೆಕ್ಯುರಿಟೀಸ್ (SBI Securities), ಮೆಹ್ತಾ ಈಕ್ವಿಟೀಸ್ (Mehta Equities), ಆಡ್ರಿಯೋಟ್ ಪೈನಾನ್ಷಿಯಲ್ ಸರ್ವಿಸಸ್ (Adriot Financial Services), ಮಾಸ್ಟರ್ ಟ್ರಸ್ಟ್ ಕ್ಯಾಪಿಟಲ್ (Master Trust Capital) ಮತ್ತು ಜಿಯೋಜಿತ್ ಫೈನಾನ್ಷಿಯಲ್ (Geojit Financial) ನಂತಹ ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಸಹ ಡಾ. ಅಗರ್ವಾಲ್ಸ್ ಹೆಲ್ತ್ ಕೇರ್ ಲಿಮಿಟೆಡ್ ಗೆ ‘ಸಬ್ ಸ್ಕ್ರೈಬ್' (Subscribe) ರೇಟಿಂಗ್ ನೀಡಿವೆ. ಸಂಸ್ಥೆಯ ಮಾರ್ಕೆಟ್ ಲೀಡರ್ ಶಿಪ್, ಸಶಕ್ತ ಆರ್ಥಿಕ ಬೆಳವಣಿಗೆ ಮತ್ತು ವಿಸ್ತರಣಾ ಯೋಜನೆಗಳನ್ನು ಪರಿಗಣಿಸಿ ಈ ಶಿಫಾರಸ್ಸನ್ನು ನೀಡಲಾಗಿದೆ.
ಇದನ್ನೂ ಓದಿ: Jayalalitha : ದಿ.ಜಯಲಲಿತಾ ಆಸ್ತಿ, ಒಡವೆ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಡೇಟ್ ಫಿಕ್ಸ್!
ಈ ಸಂಸ್ಥೆಯು ದೇಶದ ಬೃಹತ್ ನೇತ್ರ ಪಾಲನಾ ಜಾಲವನ್ನು ಹೊಂದ್ದಿದ್ದು, ಇದು ತನ್ನ ಸಮೀಪ ಪ್ರತಿಸ್ಪರ್ಧಿಗಿಂತ 1.7 ಪಟ್ಟು ಮುಂದಿಎ ಹಾಗೂ 25% ಮಾರುಕಟ್ಟೆ ಪಾಲುಬಂಡವಾಳವನ್ನು ಹೊಂದಿದೆ. ಇದು 1,332 ಕೋಟಿ ರೂಪಾಯಿಗಳ ಆದಾಯವನ್ನು ಹೊಂದಿದ್ದು, ಇ.ಬಿ.ಐ.ಟಿ.ಡಿ.ಎ.ಯಲ್ಲಿ 362 ಕೋಟಿ, ಪಿ.ಎ.ಟಿ ಯಲ್ಲಿ 95 ಕೋಟಿ ರೂಪಾಯಿಗಳನ್ನು 2024ರ ಹಣಕಾಸು ವರ್ಷದಲ್ಲಿ ಹೊಂದಿದ ಕಂಪೆನಿಯಾಗಿದೆ. ಎರಡು ವರ್ಷಗಳ ಸಿ.ಎ.ಜಿ.ಆರ್. ಕ್ರಮವಾಗಿ 38%, 41% ಮತ್ತು 48%ಗಳಾಗಿವೆ. ಶೇರು ಮಾರುಕಟ್ಟೆಗೆ ಪ್ರವೇಶಿಸುವುದಕ್ಕೂ ಮುನ್ನ ಈ ಕಂಪೆನಿಯು 33.9** (ಹಣಕಾಸು ವರ್ಷ 24) ಇವಿ/ಇಬಿಐಟಿಡಿಎಯೊಂದಿಗೆ 1,26,983.7 ಮಿಲಿಯನ್ ರೂಪಾಯಿಗಳ ಮೌಲ್ಯವನ್ನು ಹೊಂದಿದೆ.
ಭಾರತದ ಅತೀದೊಡ್ಡ ನೇತ್ರ ಪಾಲನಾ ಜಾಲವಾಗಿದ್ದುಕೊಂಡು, ಡಾ. ಅಗರ್ವಾಲ್ಸ್ ಉತ್ತಮ ಬ್ರ್ಯಾಂಡ್ ನಿರ್ಮಿಸುವಲ್ಲಿ ಸಫಲವಾಗಿದೆ. ಇದಕ್ಕೆ ಆದಾಯದಲ್ಲಿ ಸ್ಥಿರವಾದ ಹೆಚ್ಚಳ ಮತ್ತು ಈ ವಿಭಾಗದಲ್ಲಿ 25% ಮಾರುಕಟ್ಟೆ ಪಾಲನ್ನು ಹೊಂದಿರುವುದು ಪ್ರಮುಖ ಕಾರಣವಾಗಿದೆ.
ನೇತ್ರ ಪಾಲನಾ ಸೇವಾ ಕ್ಷೇತ್ರದಲ್ಲಿ 35 ವರ್ಷಗಳಿಗಿಂತಲೂ ಅಧಿಕ ಅನುಭವವನ್ನು ಹೊಂದಿರುವ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಅಮರ್ ಅಗರ್ವಾಲ್ ಅವರ ಸದೃಢ ನಾಯಕತ್ವದಲ್ಲಿ ಸಂಸ್ಥೆ ಪ್ರಗತಿಯತ್ತ ಸಾಗುತ್ತಿದ್ದು, ಕಣ್ಣಿನ ಆರೋಗ್ಯ ಪಾಲನೆಗೆ ನೀಡುತ್ತಿರುವ ಸೇವೆಗಳಿಗಾಗಿ ಹಲವಾರು ಪ್ರಶಸ್ತಿಗಳಿಗೆ ಪಾತ್ರವಾಗಿದೆ.
2024ರ ಸೆಪ್ಟೆಂಬರ್ 30ರವರೆಗಿನ ಮಾಹಿತಿಗಳ ಪ್ರಕಾರ ಈ ಸಂಸ್ಥೆಯು ಭಾರತದ 193 ಕಡೆಗಳಲ್ಲಿ ಕಾರ್ಯಾಚರಿಸುತ್ತಿದ್ದು, 14 ರಾಜ್ಯಗಳ ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 117 ಮೆಟ್ರೋ ಮತ್ತು ಇತರೇ ಪಟ್ಟಣಗಳಲ್ಲಿ, ಹಾಗೂ ಆಫ್ರಿಕಾದ ಒಂಭತ್ತು ದೇಶಗಳಲ್ಲಿ 16 ಸೇವೆಗಳೊಂದಿಗೆ ಕಾರ್ಯಾಚರಿಸುತ್ತಿದೆ.