#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Champions Trophy 2025: ಲೀಗ್‌ ಪಂದ್ಯಕ್ಕೆ ಅಂಪೈರ್‌, ಮ್ಯಾಚ್‌ ರೆಫ‌ರಿ ಪಟ್ಟಿ ಪ್ರಕಟ

ಫೆಬ್ರವರಿ 23 ರಂದು ನಡೆಯಲಿರುವ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯಕ್ಕೆ ಮೈಕೆಲ್ ಗೌಫ್ ಟಿವಿ ಅಂಪೈರ್, ಆಡ್ರಿಯನ್ ಹೋಲ್ಡ್‌ಸ್ಟಾಕ್ ನಾಲ್ಕನೇ ಅಂಪೈರ್, ಡೇವಿಡ್ ಬೂನ್ ಮ್ಯಾಚ್ ರೆಫರಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಭಾರತ vs ಪಾಕ್‌ ಪಂದ್ಯಕ್ಕೆ ಫೀಲ್ಡ್ ಅಂಪೈರ್ ಘೋಷಣೆ

Profile Abhilash BC Feb 11, 2025 9:40 AM

ದುಬೈ: ಫೆ.19 ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ(Champions Trophy 2025) ಕ್ರಿಕೆಟ್‌ ಕೂಟದ ಲೀಗ್‌ ಹಂತದ ಪಂದ್ಯಗಳಿಗೆ ಅಂಪೈರ್‌ಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿದೆ. ಲೀಗ್‌ ಹಂತದಲ್ಲಿ 12 ಪಂದ್ಯಗಳು ನಡೆಯಲಿದೆ. ಫೆ. 19 ರಂದು ಕರಾಚಿಯಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ರಿಚರ್ಡ್ ಕೆಟಲ್‌ಬರೋ ಮತ್ತು ಶರ್ಫುದ್ದೌಲಾ ಇಬ್ನೆ ಶಾಹಿದ್ ಆನ್-ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಜೋಯಲ್ ವಿಲ್ಸನ್ ಟಿವಿ ಅಂಪೈರ್, ಅಲೆಕ್ಸ್ ವಾರ್ಫ್ ನಾಲ್ಕನೇ ಅಂಪೈರ್ ಮತ್ತು ಆಂಡ್ರ್ಯೂ ಪೈಕ್ರಾಫ್ಟ್ ಮ್ಯಾಚ್ ರೆಫರಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಫೆಬ್ರವರಿ 20 ರಂದು ದುಬೈನಲ್ಲಿ ನಡೆಯಲಿರುವ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಪಂದ್ಯಕ್ಕೆ ಫೀಲ್ಡ್ ಅಂಪೈರ್‌ಗಳಾಗಿ ಆಡ್ರಿಯನ್ ಹೋಲ್ಡ್‌ಸ್ಟಾಕ್ ಮತ್ತು ಪಾಲ್ ರೀಫೆಲ್ಟಿವಿ ಅವರನ್ನು ನೇಮಿಸಲಾಗಿದೆ. ಟಿವಿ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್, ನಾಲ್ಕನೇ ಅಂಪೈರ್ ಮೈಕೆಲ್ ಗೌಫ್ ಮತ್ತು ಮ್ಯಾಚ್ ರೆಫರಿ ಡೇವಿಡ್ ಬೂನ್ ಆಗಿದ್ದಾರೆ

ಫೆ. 23 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯಕ್ಕೆ ಮೈಕೆಲ್ ಗೌಫ್ ಟಿವಿ ಅಂಪೈರ್, ಆಡ್ರಿಯನ್ ಹೋಲ್ಡ್‌ಸ್ಟಾಕ್ ನಾಲ್ಕನೇ ಅಂಪೈರ್, ಡೇವಿಡ್ ಬೂನ್ ಮ್ಯಾಚ್ ರೆಫರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಐಸಿಸಿ ಎಲೈಟ್‌ ಅಂಪೈರ್‌ಗಳ ಸಮಿತಿಯಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿರುವ ನಿತಿನ್‌ ಮೆನನ್‌ ಅವರು ವೈಯಕ್ತಿಕ ಕಾರಣಗಳಿಂದ ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್‌ ಮಾಜಿ ವೇಗಿ

ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯುವ ಹೈಬ್ರೀಡ್‌ ಮಾದರಿಯ ಈ ಮೆಗಾ ಟೂರ್ನಿಯಲ್ಲಿ ಅಗ್ರ ಎಂಟು ತಂಡಗಳು 19 ದಿನಗಳಲ್ಲಿ 15 ಪಂದ್ಯಗಳನ್ನು ಆಡಲಿವೆ. ಗ್ರೂಪ್ 'ಎ' ನಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸ್ಥಾನ ಪಡೆದಿದ್ದರೆ, ಗ್ರೂಪ್ 'ಬಿ' ನಲ್ಲಿ ಅಫಘಾನಿಸ್ತಾನ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.

ವೇಳಾಪಟ್ಟಿ

ಫೆ.19 ಪಾಕಿಸ್ತಾನ-ನ್ಯೂಜಿಲ್ಯಾಂಡ್‌, ಸ್ಥಳ: ಕರಾಚಿ

ಫೆ. 20 ಬಾಂಗ್ಲಾದೇಶ-ಭಾರತ, ಸ್ಥಳ: ದುಬೈ

ಫೆ. 21 ಅಫ್ಘಾನಿಸ್ತಾನ-ದ. ಆಫ್ರಿಕಾ, ಸ್ಥಳ: ಕರಾಚಿ

ಫೆ. 22 ಆಸ್ಟ್ರೆಲಿಯಾ-ಇಂಗ್ಲೆಂಡ್, ಸ್ಥಳ:​ ಲಾಹೋರ್

ಫೆ. 23 ಭಾರತ-ಪಾಕಿಸ್ತಾನ,ಸ್ಥಳ: ದುಬೈ

ಫೆ. 24 ಬಾಂಗ್ಲಾದೇಶ-ನ್ಯೂಜಿಲ್ಯಾಂಡ್‌, ಸ್ಥಳ:​ ರಾವಲ್ಪಿಂಡಿ

ಫೆ. 25 ಅಸ್ಟ್ರೆಲಿಯಾ-ದ. ಆಫ್ರಿಕಾ,ಸ್ಥಳ: ರಾವಲ್ಪಿಂಡಿ

ಫೆ. 26 ಅಫ್ಘಾನಿಸ್ತಾನ-ಇಂಗ್ಲೆಂಡ್,ಸ್ಥಳ:​ ಲಾಹೋರ್

ಫೆ. 27 ಪಾಕಿಸ್ತಾನ-ಬಾಂಗ್ಲಾದೇಶ,ಸ್ಥಳ: ರಾವಲ್ಪಿಂಡಿ

ಫೆ. 28 ಅಫ್ಘಾನಿಸ್ತಾನ-ಆಸ್ಟ್ರೆಲಿಯಾ,ಸ್ಥಳ: ಲಾಹೋರ್​

ಮಾ. 1 ದಕ್ಷಿಣ ಆಫ್ರಿಕಾ-ಇಂಗ್ಲೆಂಡ್,ಸ್ಥಳ:​ ಕರಾಚಿ

ಮಾ. 2 ಭಾರತ-ನ್ಯೂಜಿಲ್ಯಾಂಡ್‌, ಸ್ಥಳ:​ ದುಬೈ

ಮಾ. 4 ಸೆಮಿಫೈನಲ್-1, ಸ್ಥಳ: ದುಬೈ

ಮಾ. 5 ಸೆಮಿಫೈನಲ್​-2, ಸ್ಥಳ: ಲಾಹೋರ್​

ಮಾ. 9 ಫೈನಲ್​ -ಸ್ಥಳ: ದುಬೈ/ಲಾಹೋರ್