ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mid Day Meal: ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ: ಸರ್ಕಾರ ಆದೇಶ

ಏಪ್ರಿಲ್- ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8 ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಒದಗಿಸಲಾಗುತ್ತದೆ. 7393.78 ಲಕ್ಷಗಳನ್ನು ಇದಕ್ಕಾಗಿ ನೀಡಲಾಗಿದೆ.

ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ: ಸರ್ಕಾರ ಆದೇಶ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 10, 2025 9:04 AM

ಬೆಂಗಳೂರು: 2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ (Summer vacation) ಅವಧಿಯಲ್ಲಿ ಬರಪೀಡಿತ (Drought hit) ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1ರಿಂದ 8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ (Mid Day Meal) ನೀಡಬೇಕು ಎಂದು ಸರ್ಕಾರ (Karnataka Government) ಆದೇಶ ಹೊರಡಿಸಿದೆ. ಈ ಕುರಿತು ಅನುಷ್ಠಾನಕ್ಕಾಗಿ ಅನುದಾನ ಬಿಡುಗಡೆ ಮಾಡಿದೆ. ಒಟ್ಟು ರೂ.7393.78 ಲಕ್ಷಗಳನ್ನು ಇದಕ್ಕಾಗಿ ನೀಡಲಾಗಿದೆ.

2024-25ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಪಿ.ಎಂ.ಪೋಷಣ್-ಮಧ್ಯಾಹ್ನ ಉಪಹಾರ ಯೋಜನೆಯಡಿ PAB ಅನುಮೋದನೆಯಂತೆ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8 ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಸಂಬಂಧಿಸಿದಂತೆ ಕೇಂದ್ರದ ಪಾಲಿನ ಅನುದಾನ ರೂ.2958.87 ಲಕ್ಷಗಳು ಸಂವಾದಿ ರಾಜ್ಯದ ಪಾಲಿನ ಅನುದಾನ ರೂ 1742.74 ಲಕ್ಷಗಳು ಹಾಗೂ ರಾಜ್ಯದ ಹೆಚ್ಚುವರಿ ಅನುದಾನ (Top-up) ರೂ.2692.17 ಲಕ್ಷಗಳು ಸೇರಿ ಒಟ್ಟಾರೆಯಾಗಿ ರೂ.7393.78 ಲಕ್ಷಗಳ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿರುತ್ತದೆ.

ಉಲ್ಲೇಖಿತ (3) ರ ಆದೇಶದಂತೆ ಜಿಲ್ಲಾ ಮತ್ತು ತಾಲ್ಲೂಕುವಾರು ಈಗಾಗಲೇ ಸಲ್ಲಿಸಿರುವ ಅನುದಾನ ಬೇಡಿಕೆ ಮತ್ತು ಹಂಚಿಕೆ ಪಟ್ಟಿಯಂತೆ ಲೆಕ್ಕ ಶೀರ್ಷಿಕವಾರು ಈ ಕಳಂಕಂಡಂತೆ ಅನುದಾನ ನಿಗದಿಪಡಿಸಿದ್ದು ಬಿಡುಗಡೆಗೊಳಿಸಿ ಬಳಸುವಂತೆ ಸೂಚಿಸಿದೆ.

  1. ಕ್ರಮ ಸಂಖ್ಯೆ:01ರ (ಅ) (ಆ) (ಇ) ರಲ್ಲಿ ಬಿಡುಗಡೆ ಮಾಡಿರುವ ಅನುದಾನವನ್ನು ಯೋಜನೆಯ SNA ಖಾತೆಯಡಿಯಲ್ಲಿ PFMS ಮೂಲಕ ನಿರ್ವಹಿಸುವಂತೆ ಉಲ್ಲೇಖಿತ ಆದೇಶದಲ್ಲಿ ಸೂಚನೆ ಇರುವುದರಿಂದ ಕೆಳಕಂಡ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿರುತ್ತದೆ.

(ಅ) ಪಿಎಂ ಪೋಷಣ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಹಂತದ ಅನುಷ್ಠಾನಾಧಿಕಾರಿಗಳ DDO ಕೋಡ್’ ಗೆ ಬೇಡಿಕೆಯನ್ನು ಆಧರಿಸಿ Drawing Limits ನ್ನು SNA PEMS ಖಾತೆಯಲ್ಲಿ ನಿಗದಿಪಡಿಸುವ ಪ್ರಕ್ರಿಯೆಯನ್ನು ರಾಜ್ಯ ಹಂತದಲ್ಲಿ ಕೈಗೊಂಡಿರುತ್ತದೆ.

(ಆ) ಸದರಿ ಅನುದಾನದಡಿ ಪ್ರಸ್ತುತ ಸಾಲಿನಲ್ಲಿ ಬಿಡುಗಡೆಗೊಳಿಸಿರುವ ಮೊದಲನೇ ಎರಡನೇ ತ್ರೈಮಾಸಿಕ ಅವಧಿಗೆ ಮತ್ತು ಬಿಡುಗಡೆಗೊಳಿಸುವ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಅನುದಾನದಲ್ಲಿ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬಿಸಿಯೂಟ ವಿತರಣೆ ಮಾಡಿರುವ ಕೇಂದ್ರ ಶಾಲೆಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಮಾನದಂಡಗಳಂತೆ ವೆಚ್ಚ ಭರಿಸಲು ಸೂಚಿಸಿದೆ.

1) 1 ರಿಂದ 8ನೇ ತರಗತಿ ಮಕ್ಕಳ ಆಹಾರ ಧಾನ್ಯಗಳ ವೆಚ್ಚ.

2) 1 ರಿಂದ 8ನೇ ತರಗತಿ ಮಕ್ಕಳ ಆಹಾರ ಧಾನ್ಯಗಳ ಸಾಗಾಣಿಕಾ ವೆಚ್ಚ.

3) 1 ರಿಂದ 8ನೇ ತರಗತಿ ಮಕ್ಕಳ ಪರಿವರ್ತನಾ ವೆಚ್ಚ. (ಹಿಂದೆ ಚಾಲ್ತಿಯಲ್ಲಿದ್ದ ಏಪ್ರಿಲ್ – ಮೇ 2024 ರಲ್ಲಿನ ಅಡುಗೆ ತಯಾರಿಕಾ ವೆಚ್ಚದ ದರಗಳಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನಕ್ಕೆ 1 ರಿಂದ 5 ನೇ ತರಗತಿವರೆಗೆ ರೂ 5.45 ಮತ್ತು 6 ರಿಂದ 8 ನೇ ತರಗತಿವರೆಗೆ ರೂ.8.17 ರಂತೆ)

4) ಅಡುಗೆ ಸಿಬ್ಬಂದಿ ಸಂಭಾವನೆ ಪಾವತಿ – ಅಡುಗೆ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದ ಅಡುಗೆ ಸಿಬ್ಬಂದಿ ಅವರ ದೃಢೀಕೃತ ಹಾಜರಾತಿ ವಹಿಯನ್ನು ಆಧರಿಸಿ, ಏಪ್ರಿಲ್ 2024 ಮತ್ತು ಮೇ 2024 ತಿಂಗಳ ಅವಧಿಗೆ ಪರಿಶೀಲಿಸಿ ನಿಯಮಾನುಸಾರ ಗೌರವಧನವನ್ನು ತಾಲ್ಲೂಕು ಪಂಚಾಯಿತಿಗಳಿಂದ ಬಿಡುಗಡೆಗೊಳಿಸಿ ಅವರ ಖಾತೆಗೆ ಜಮಾಗೊಳಿಸುವುದು ಮತ್ತು ಲೆಕ್ಕ ವಿವರಗಳನ್ನು ನಿರ್ವಹಿಸುವುದು. ಅಡುಗೆ ಸಿಬ್ಬಂದಿಗಳ ಹಾಜರಾತಿ ವಹಿಯನ್ನು ಬಿಸಿಯೂಟ ವಿತರಿಸಿದ ಕೇಂದ್ರ ಶಾಲೆಯ ಮುಖ್ಯ ಶಿಕ್ಷಕರು / ನೋಡಲ್ ಶಿಕ್ಷಕರು ಹಾಗೂ ಸಂಬಂಧಿಸಿದ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು ಪರೀಶಿಲಿಸಿ ದೃಢೀಕರಣ ಸಹಿ ಮಾಡಿರಬೇಕು. ಈ ಧೃಢೀಕೃತ ದಾಖಲೆಯನ್ನು ಆಧರಿಸಿ ಗೌರವಧನವನ್ನು ಅರ್ಹರಾದ ಅಡುಗೆ ಸಿಬ್ಬಂದಿಗಳಿಗೆ ಯಾವುದೇ ವಿಳಂಬ ಮಾಡದೇ ಪಾವತಿಸುವುದು.

5) ಸ್ವಯಂ ಸೇವಾ ಸಂಸ್ಥೆಗಳು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಬಿಸಿಯೂಟ ವಿತರಣೆಯ ಶಾಲಾ ಕೇಂದ್ರಗಳಿಗೆ ಬಿಸಿಯೂಟ ವಿತರಿಸಿದ ದಿನಗಳಿಗೆ ಮತ್ತು ಬಿಸಿಯೂಟ ಸ್ವೀಕರಿಸಿದ ಫಲಾನುಭವಿ ಮಕ್ಕಳ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ದೃಢೀಕೃತ ದಾಖಲೆಗಳಂತೆ ಸರಬರಾಜುಗೊಳಿಸಿದ ಬಿಸಿಯೂಟಗಳಿಗೆ ಅನುಗುಣವಾಗಿ ಸಿದ್ಧಪಡಿಸಿ ಸಲ್ಲಿಸಿದ ಅಡುಗೆ ತಯಾರಿಕಾ ವೆಚ್ಚದ ಬಿಲ್ಲುಗಳನ್ನು ಆಯಾ ಶಾಲಾ ಕೇಂದ್ರಗಳ ಮುಖ್ಯಸ್ಥರಿಂದ/ನೋಡಲ್ ಶಿಕ್ಷಕರಿಂದ ದೃಢೀಕರಿಸಿಕೊಂಡು ತಾಲ್ಲೂಕು ಪಂಚಾಯಿತಿಗಳಿಗೆ ಸಲ್ಲಿಸಿ ಸದರಿ ವೆಚ್ಚಕ್ಕೆ ಹಣ ಪಾವತಿ ಪಡೆದುಕೊಳ್ಳುವುದು. ಸ್ವಯಂ ಸೇವಾ ಸಂಸ್ಥೆಯವರು ಸಲ್ಲಿಸುವ ಬಿಲ್ಲುಗಳು ಆಯಾ ಶಾಲಾ ಅಡುಗೆ ಕೇಂದ್ರಗಳ ಮುಖ್ಯ ಶಿಕ್ಷಕರು/ನೋಡಲ್ ಶಿಕ್ಷಕರು ಅಲ್ಲದೆ ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯತ್ ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಹಾಗೂ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರ ದೃಢೀಕರಣದೊಂದಿಗೆ ಬಿಲ್ಲು ಪಾವತಿಗಾಗಿ ಸಲ್ಲಿಸಬೇಕು. ಈ ಬಿಲ್ಲುಗಳಲ್ಲಿ ಹಿಂದೆ ಚಾಲ್ತಿಯಲ್ಲಿದ್ದ (ಏಪ್ರಿಲ್ – ಮೇ 2024 ರ ಅವಧಿಯಲ್ಲಿ) ಅಡುಗೆ ತಯಾರಿಕಾ ವೆಚ್ಚದ ದರಗಳಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನಕ್ಕೆ 1 ರಿಂದ 5 ನೇ ತರಗತಿವರೆಗೆ ರೂ 5.45 ಮತ್ತು 6 ರಿಂದ 8 ನೇ ತರಗತಿವರೆಗೆ ರೂ. 8.17 ರಂತೆ)

6) 2024 ರ ಏಪ್ರಿಲ್ – ಮೇ ತಿಂಗಳ ಬೇಸಿಗೆ ಅವಧಿಯ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶಾಲಾ ಕೇಂದ್ರಗಳಲ್ಲಿ 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿತರಿಸಿದ ಬಿಸಿಯೂಟಕ್ಕಾಗಿ ಬಳಸಲಾದ 1 ರಿಂದ 8 ನೇ ತರಗತಿವರೆಗಿನ ಆಹಾರ ಧಾನ್ಯಗಳನ್ನು ಭಾರತ ಆಹಾರ ನಿಗಮದಿಂದ ಸ್ವೀಕರಿಸಿದ್ದಲ್ಲಿ ಮೊದಲ ತ್ರೈಮಾಸಿಕ ಅವಧಿಯ FCI ಬಿಲ್ಲುಗಳು ಬಾಕಿ ಇದ್ದಲ್ಲಿ (Outstanding Bills) ಬಿಡುಗಡೆಗೊಳಿಸಲಾದ ಈ ಅನುದಾನದಲ್ಲಿ ವೆಚ್ಚ ಭರಿಸುವಂತೆ ಸೂಚಿಸಿರುತ್ತದೆ.

ಇದನ್ನೂ ಓದಿ: Midday Meal: ಶಾಲಾ ಮಕ್ಕಳಿಗೆ ಬೇಸಿಗೆಯಲ್ಲೂ ಬಿಸಿಯೂಟ; ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ

7) ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಏಪ್ರಿಲ್ ಮತ್ತು ಮೇ 2024 ರಲ್ಲಿ ತೆರೆಯಲಾಗಿದ್ದ ಬಿಸಿಯೂಟ ವಿತರಣಾ ಶಾಲಾ ಕೇಂದ್ರಗಳು ಎಷ್ಟು ದಿನ ನಡೆದಿರುತ್ತವೆ ಹಾಗೂ ಎಷ್ಟು ಫಲಾನುಭವಿ ಮಕ್ಕಳು 1 ರಿಂದ 8 ನೇ ತರಗತಿ ಬಿಸಿಯೂಟವನ್ನು ಸ್ವೀಕರಿಸಿರುತ್ತಾರೆ ಹಾಗೂ ಹಾಜರಾದ ಶಾಲಾ ಮುಖ್ಯ ಶಿಕ್ಷಕರು / ನೋಡಲ್ ಶಿಕ್ಷಕರು ಹಾಗೂ ಹಾಜರಾಗಿ ಕೆಲಸ ನಿರ್ವಹಿಸಿದ ಅಡುಗೆ ಸಿಬ್ಬಂದಿಗಳ ಸಂಖ್ಯೆ ಮತ್ತು ವಿವರಗಳ ಸಂಖ್ಯೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಜಂಟಿಯಾಗಿ ಪರಿಶೀಲಿಸಿ ಸಂಬಂಧಿಸಿದ ಕ್ಲಸ್ಟರ್ ಹಂತದಲ್ಲಿ CRP/ECO ರವರಿಂದ ದೃಢೀಕೃತ ಮಾಹಿತಿ ಪಡೆದು ದಾಖಲೆಗಳನ್ನು ಹೊಂದಿರಬೇಕು ಹಾಗೂ ಈ ದಾಖಲೆಗಳನ್ನು ಆಧರಿಸಿ, ಖಾತ್ರಿಪಡಿಸಿಕೊಂಡು ಬಿಡುಗಡೆ ಮಾಡಿರುವ ಅನುದಾನದ ವೆಚ್ಚ ಭರಿಸತಕ್ಕದ್ದು ಹಾಗೂ ತಾಲ್ಲೂಕು ಪಂಚಾಯಿತಿ ಹಂತದಲ್ಲಿ ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಸೂಕ್ತ ದಾಖಲೆಗಳೊಂದಿಗೆ ಅನುದಾನದ ವೆಚ್ಚ ವಿವರಗಳನ್ನು ನಿರ್ವಹಿಸುವುದು.

8) ಬರಗಾಲ ಪೀಡಿತ 223 ತಾಲ್ಲೂಕುಗಳ ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಇವರು ಖುದ್ದಾಗಿ ಬರಗಾಲ ಪೀಡಿತ ತಾಲ್ಲೂಕುಗಳಲ್ಲಿ ಅನುದಾನ ಬಿಡುಗಡೆ, ಬಳಕೆ ಮತ್ತು ಸಂಬಂಧಿಸಿದ ಲೆಕ್ಕ ವಿವರಗಳ ಬಗ್ಗೆ ಸೂಕ್ತ ಮೇಲ್ಪಚಾರಣೆ ಕೈಗೊಂಡು ಯಾವುದೇ ತಕರಾರು ಬರದಂತೆ ಅಗತ್ಯ ಕ್ರಮವಹಿಸಿ ಅನುದಾನ ಪೂರ್ಣ ಬಳಕೆಯ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸುವಂತೆ ಈ ಮೂಲಕ ಸೂಚಿಸಿದೆ.