ಚಿಕ್ಕಬಳ್ಳಾಪುರ : ಸುಮಾರು 50 ವರ್ಷಗಳಿಂದ ಈ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿಯಿಲ್ಲದೆ ಪರಿತಪಿಸುವಂತೆ ಆಗಿತ್ತು. ಯಾರಾದರೂ ಸತ್ತರೆ ಗೌರವಯುತವಾಗಿ ಸಂಸ್ಕಾರ ಮಾಡಲು ಪರಿತಪಿ ಸುತ್ತಿದ್ದರು.ಇಂತಹ ಜಟಿಲ ಸಮಸ್ಯೆಯನ್ನು ಮಂಗಳವಾರ ಒಂದೇ ದಿನದಲ್ಲಿ ಪರಿಹರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾದವರು ಬೇರಾರೂ ಅಲ್ಲ ಅವರೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್.
ಹೌದು. ತಾಲೂಕಿನ ಕಮ್ಮಗುಟ್ಟಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಿರೇನಾಗವಲ್ಲಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಜನತೆ ಸ್ಮಶಾನದ ಸಮಸ್ಯೆ ಪ್ರಸ್ತಾಪಿಸಿದರು.
ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಆಲಿಸಿದ ಶಾಸಕರು ಗ್ರಾಮಸ್ಥರ ಜತೆ ಸಂಧಾನ ನಡೆಸಿದಷ್ಟೇ ಅಲ್ಲ ಅವರ ಸಹಕಾರದಲ್ಲಿ ಸ್ಥಳಕ್ಕೆ ಜೆಸಿಬಿ ತರಿಸಿ ರಸ್ತೆಯನ್ನು ಮಾಡಿಸುವ ಮೂಲಕ ಅರ್ಧ ಶತಮಾನದ ಸಮಸ್ಯೆಗೆ ಒಂದೇ ದಿನದಲ್ಲಿ ಪರಿಹಾರ ಕಾಣಿಸಿ ಟೀಕಾಕಾರರ ಬಾಯಿ ಮುಚ್ಚಿಸಿದರು. ಈ ಮೂಲಕ ನಾನು ಮಾತುಗಾರ ಮಾತ್ರ ವಲ್ಲ ಕೆಲಸಗಾರನೂ ಹೌದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದರು.
ಇದನ್ನೂ ಓದಿ: Chikkaballapur News: ದಾಖಲಾತಿ ಅರ್ಜಿಗೆ ಸಹಿ ಮಾಡುವ ಮೂಲಕ ಶಾಲಾ ಪ್ರಾರಂಭೊತ್ಸವಕ್ಕೆ ಚಾಲನೆ ನೀಡಿದ ಶಾಸಕ ಸುಬ್ಬಾರೆಡ್ಡಿ
ಗ್ರಾಮದಲ್ಲಿ ಸುಮಾರು 100 ಮಂದಿಗೆ ವಸತಿ ವಸತಿ ನೀಡಲು ಮತ್ತು ಸೂರಿಲ್ಲದವರಿಗೆ ಸುರು ನೀಡಲು ಮುಂದಾಗಿರುವುದಾಗಿ ತಿಳಿಸಿದರು. ಈ ಸಂಬಂಧ ೬ ಎಕರೆ ಜಮೀನು ಗುರ್ತಿಸಿದ್ದು ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರಸ್ತೆ, ಚರಂಡಿ, ಹೊಲ-ಗದ್ದೆ ತೋಟಗಳಿಗೆ ತೆರಳಲು ದಾರಿ ಸಮಸ್ಯೆ, ಬೀದಿ ದೀಪ,ನಳ ಸಂಕರ್ಪ, ಸಮುದಾಯ ಭವನಗಳಿಗೆ ಜಾಗ ಮತ್ತು ಅನುದಾದಾನದ ಬೇಡಿಕೆಗಳೇ ಪ್ರಧಾನವಾಗಿವೆ.ಇವುಗಳ ಪರಿಹಾರಕ್ಕೆ ಶಾಸಕರ ಅನುದಾನವನ್ನು ಬಳಸಿ ಹಂತಹAತವಾಗಿ ಪರಿಹಾರ ಕಾಣಿಸುವೆ ಎಂದರು.
ಕ್ರಷರ್‌ಗಳ ಮೇಲೆ ನನಗೆ ಪ್ರೀತಿಯಿಲ್ಲ
ನಾನು ಸದಾ ಕಾಲ ರೈತರಪರವಾಗಿ ನಿಲ್ಲುತ್ತೇನೆಯೇ ವಿನಃ ಕ್ರರ‍್ಸ್÷ಪರವಾಗಿ ನಿಲ್ಲುವುದಿಲ್ಲ.ಎಲ್ಲೆಲ್ಲಿ ಸಮಸ್ಯೆಯಿದೆಯೋ ಆಬಗ್ಗೆ ಸಂತ್ರಸ್ಥರು ಲಿಖಿತವಾಗಿ ದೂರು ನೀಡಿದರೆ ಮಂಚೇನಹಳ್ಳಿ ತಾಲೂಕಿ ನಲ್ಲಿ ಕ್ಯಾನ್ಸಲ್ ಮಾಡಿಸಿದಂತೆ ಇಲ್ಲಿಯೂ ಮಾಡಿಸುತ್ತೇನೆ.ಬಾಯಿ ಮಾತಿನಲ್ಲಿ ಹೇಳಿದರೆ ಯಾರ ಮೇಲೆ ಕ್ರಮ ತೆಗೆದುಕೊಳ್ಳಲಿ ಹೇಳಿ ಎಂದ ಅವರು ಹಿರೆನಾಗವೇಲಿ ಗ್ರಾಮದಲ್ಲಿರುವ ೧೭೦ ಮನೆಗಳು ಒಮ್ಮತವಾಗಿ ನಿಂತುಕೊAಡು ಕ್ರಷರ್ ನಿಲ್ಲಿಸಿ ಎಂದು ಮನವಿ ಕೊಡಿ ಸರಕಾರದಲ್ಲಿಟ್ಟು ಕ್ಯಾನ್ಸಲ್ ಮಾಡಿಸುತ್ತೇನೆ.ನನಗೆ ಆಗಬೇಕಾಗಿರುವುದು ಏನೂ ಇಲ್ಲ. ನಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರ ಬೇಕು. ಆದರೆ ಇಲ್ಲಿ ಏನಾಗುತ್ತಿದೆ? ೧೦ ಜನ ಹೋರಾಟಕ್ಕೆ ಬರುತ್ತಾರೆ, ಉಳಿದವರು ಸುಮ್ಮನಿರುತ್ತಾರೆ. ನಾನು ಏಕಾಏಕಿ ಲೈಸೆನ್ಸ್ ಕ್ಯಾನ್ಸಲ್ ಮಾಡಿಸಿದರೆ ಕ್ರರ‍್ಸ್ ಮಾಲಿಕರು ಕೋರ್ಟಿಗೆ ಹೋಗುತ್ತಾರೆ. ಜನತೆಗೆ ಮನವಿ ಮಾಡುತ್ತೇನೆ.ಮಂಚೇನಹಳ್ಳಿ ಜನ ಒಗ್ಗಟ್ಟು ಪ್ರದರ್ಶನ ಮಾಡಿದಂತೆ ನೀವೂ ಮಾಡಿ ಟಾಸ್ಕ್ ಪೋರ್ಸ್ ಸಭೆಯಲ್ಲಿ ಇಟ್ಟು ಕ್ಯಾನ್ಸ್÷ಲ್ ಮಾಡಿಸುತ್ತೇನೆ. ಇವತ್ತೇ ನಿಲ್ಲಿಸಲು ಕ್ರಮವಹಿಸುತ್ತೇನೆ. ಹಾವಳಿಗೆ ಸಿಕ್ಕಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಡೈಮಮೈಟ್‌ಗಳ ಸ್ಪೋಟವು ವಸತಿ ಪ್ರದೇಶಗಳ ಮೇಲೆ ಮಾಡಿರುವ ಅಪಾಯ ಗೊತ್ತಿದೆ ಎಂದರು
ಡಿಪೋ ಲೈಸೆನ್ಸ್ ಕ್ಯಾನ್ಸಲ್
ತಾಲೂಕಿನಲ್ಲಿ ಸರಕಾರದಿಂದ ಉಚಿತವಾಗಿ ನೀಡುತ್ತಿರುವ ಅನ್ನಭಾಗ್ಯ ಯೋಜನೆ ಅಕ್ಕಿ ನೀಡಲು ರೇಷನ್ ಡಿಪೋ ಮಾಲಿಕರು ಫಲಾನುಭವಿಗಳಿಂದ ಅಕ್ರಮವಾಗಿ ೨೦ ರೂಪಾಯಿ ಪಡೆಯುತ್ತಿರುವ ಬಗ್ಗೆ ದುರುಗಳು ಬರುತ್ತಿವೆ.ಯಾರೂ ಕೂಡ ನಾಗರೀಕರಿಂದ ಹಣವಸೂಲಿ ಮಾಡಬಾರದು. ನಿಮಗೆ ಕೊಡಬೇಕಾದ ಹಣವನ್ನು ಸರಕಾರವೇ ನೀಡುತ್ತಿರುವಾಗ ಹೀಗೆ ಮಾಡುವುದು ತಪ್ಪು. ಹಿರೇ ನಾಗವಲ್ಲಿ ಗ್ರಾಮದಲ್ಲಿ ಹಣ ಪಡೆಯುತ್ತಿರುವ ಬಗ್ಗೆ ನಾಗರೀಕರಿಂದ ದೂರುಗಳು ಬಂದಿದ್ದವು.ಈ ಡಿಪೋ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗಿದೆ.ಇದು ಎಚ್ಚರಿಕೆ ಎಂದು ತಿಳಿದರೂ ಪರವಾಗಿಲ್ಲ.
ಈ ವೇಳೆ ತಾಲೂಕು ತಹಶೀಲ್ದಾರ್ ಅನಿಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳಾ,ಎಡಿಎಲ್‌ಆರ್ ವಿವೇಕ್ ಮಹದೇವ್,ತಾಲೂಕು ಕೃಷಿ ಅಧಿಕಾರಿ ಮುನಿರಾಜು ಪಿಡಿಓ ಮದ್ದಿರೆಡ್ಡಿ, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ರಮೇಶ್ ಬಾಬು,ಜಿ.ಉಮೇಶ್, ವಿನಯ್ ಬಂಗಾರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು,ಗ್ರಾಮಸ್ಥರು ಇದ್ದರು.