Mohammed Siraj: ಆಶಾ ಭೋಂಸ್ಲೆ ಮೊಮ್ಮಗಳ ಜತೆ ಡೇಟಿಂಗ್ ನಡೆಸುತ್ತಿದ್ದಾರಾ ಸಿರಾಜ್?
ಇತ್ತೀಚೆಗೆ ಜನೈ ಭೋಸ್ಲೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ನಟ-ನಟಿಯರು ಪಾಲ್ಗೊಂಡಿದ್ದರು. ಕ್ರಿಕೆಟಿಗ ಸಿರಾಜ್ ಕೂಡ ಭಾಗವಹಿಸಿದ್ದರು.

Mohammed Siraj

ಹೈದರಾಬಾದ್: ಭಾರತ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಪ್ರೀತಿಯಲ್ಲಿ ಬಿದ್ದಿದ್ದಾರೆಯೇ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ಇದಕ್ಕೆ ಕಾರಣ ಖ್ಯಾತ ಹಿರಿಯ ಗಾಯಕಿ, ಆಶಾ ಭೋಂಸ್ಲೆ(Asha Bhosle) ಅವರ ಮೊಮ್ಮಗಳು ಜನೈ ಭೋಸ್ಲೆ(Zanai Bhosle) ಜತೆ ಸಿರಾಜ್ ಬಹಳ ಆತ್ಮೀಯವಾಗಿ ಕಾಣಿಸಿಕೊಂಡದ್ದು.
ಇತ್ತೀಚೆಗೆ ಜನೈ ಭೋಸ್ಲೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ನಟ-ನಟಿಯರು ಪಾಲ್ಗೊಂಡಿದ್ದರು. ಕ್ರಿಕೆಟಿಗ ಸಿರಾಜ್ ಕೂಡ ಭಾಗವಹಿಸಿದ್ದರು. ಜನೈ ಅವರು ಸಿರಾಜ್ ಜತೆಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಸುದ್ದಿ ಹರಡಿತ್ತು.
Mohammed Siraj clears dating rumors with Zanai Bhosle in the most epic way 👌#MohammedSiraj #ZanaiBhosle #CricketTwitter pic.twitter.com/RtCylnvoyh
— InsideSport (@InsideSportIND) January 26, 2025
ಈ ಸುದ್ದಿ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಸಿರಾಜ್ ಹಾಗೂ ಜನೈ ಇಬ್ಬರು ಗಾಸಿಪ್ಗಳಿಗೆ ಬ್ರೇಕ್ ಹಾಕಿದ್ದಾರೆ. ನಾವಿಬ್ಬರು ಅಣ್ಣ-ತಂಗಿ ಇದ್ದಂತೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸದ್ಯ, ಚಾಂಪಿಯನ್ ಟ್ರೋಫಿಯಿಂದ ಹೊರಗುಳಿದಿರುವ ಸಿರಾಜ್, ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
ಸಿರಾಜ್ ಪಂಜಾಬಿ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಮಾಹಿರಾ ಶರ್ಮಾ(Mahira Sharma) ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಮಾಹಿರಾ ಶರ್ಮಾ ಅವರ ಎಲ್ಲ ಪೋಸ್ಟ್‌ಗಳಿಗೆ ಸಿರಾಜ್ ಲೈಕ್ಸ್ ಮಾಡುತ್ತಿದ್ದಾರೆ ಹೀಗಾಗಿ ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎ<ಬ ಮಾತುಗಳು ಇವೆ. ಮಹಿರಾ ಶರ್ಮಾ ಬಿಗ್ ಬಾಸ್ 13 ರ ಸ್ಪರ್ಧಿಯಾಗಿದ್ದರು. ಸದ್ಯ ಅವರು ಪಂಜಾಬಿ ಚಿತ್ರಗಳಲ್ಲಿ ಮತ್ತು ಮ್ಯೂಸಿಕ್ ವೀಡಿಯೊಗಳಲ್ಲಿ ಬ್ಯುಸಿಯಾಗಿದ್ದಾರೆ.
ಕಳೆದ ವರ್ಷ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಸಿರಾಜ್ ಅವರನ್ನು 12.75 ಕೋಟಿ ರೂ.ಗಳಿಗೆ ಗುಜರಾತ್ ಟೈಟಾನ್ಸ್ ತಂಡ ಸೇರಿದ್ದರು.