Champions Trophy: ಜಡೇಜಾ ಬದಲು ಈ ವೇಗಿಗೆ ಅವಕಾಶ ನೀಡಬೇಕಿತ್ತೆಂದ ಚೋಪ್ರಾ!
ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ವೇಗಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಬೇಕಿತ್ತೆಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂವರು ಸ್ಪಿನ್ನರ್‌ಗಳ ಪೈಕಿ ರವೀಂದ್ರ ಜಡೇಜಾ ಅವರನ್ನು ಕೈ ಬಿಟ್ಟು ಅವರ ಸ್ಥಾನಕ್ಕೆ ಸಿರಾಜ್‌ರನ್ನು ಆರಿಸಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ವೇಗಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡದ ಬಗ್ಗೆ ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬದಲು ಸಿರಾಜ್‌ಗೆ ತಂಡದಲ್ಲಿ ಅವಕಾಶ ನೀಡಬೇಕಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪಾಕಿಸ್ತಾನದ ಆತಿಥ್ಯದಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಎಂದಿನಂತೆ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಆದರೆ, ಸಂಪೂರ್ಣ ಫಿಟ್ ಇಲ್ಲದ ಕಾರಣ ಜಸ್‌ಪ್ರೀತ್ ಬುಮ್ರಾ ಅವರ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಬುಮ್ರಾ ಜೊತೆಗೆ ಮೊಹಮ್ಮದ್ ಶಮಿ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಆರಿಸಲಾಗಿದ್ದು, ಸೀಮ್ ಬೌಲಿಂಗ್ ಆಲ್‌ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಕಳೆದ ಹಲವು ವರ್ಷಗಳಿಂದ ಭಾರತ ಏಕದಿನ ತಂಡದಲ್ಲಿ ಆಡುತ್ತಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಡಲಾಗಿದೆ.
IND vs ENG: ಫಾರ್ಮ್ ಕಂಡುಕೊಳ್ಳಲು ರಿಷಭ್ ಪಂತ್‌ಗೆ ಸುರೇಶ್ ರೈನಾ ಮಹತ್ವದ ಸಲಹೆ!
ಮೊಹಮ್ಮದ್ ಸಿರಾಜ್‌ಗೆ ಬೆಂಬಲ ವ್ಯಕ್ತಪಡಿಸಿದ ಚೋಪ್ರಾ
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, "ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್ ಇರಬೇಕು ಹಾಗೂ ಇವರು ಯಾರ ಸ್ಥಾನದಲ್ಲಿ ಆಡಬೇಕೆಂದು ತಡವಾಗಿ ಹೇಳುತ್ತೇನೆ. ಭಾರತ ತಂಡದಲ್ಲಿ ಇಬ್ಬರು ಎಡಗೈ ಸ್ಪಿನ್ನರ್‌ಗಳು ಹಾಗೂ ಒಬ್ಬರು ಆಫ್ ಸ್ಪಿನ್ನರ್ ಅನ್ನು ಆರಿಸಲಾಗಿದೆ. ಈ ಮೂವರ ಪೈಕಿ ಒಬ್ಬರನ್ನು ಕೈ ಬಿಟ್ಟು ಸಿರಾಜ್‌ಗೆ ಅವಕಾಶ ನೀಡಬಹುದಿತ್ತು. ನೀವು ಬಯಸಿದರೆ, ನಾನು ರವೀಂದ್ರ ಜಡೇಜಾ ಅವರನ್ನು ಕೈ ಬಿಟ್ಟು ಮೊಹಮ್ಮದ್ ಸಿರಾಜ್‌ಗೆ ಸ್ಥಾನವನ್ನು ನೀಡಲು ಬಯಸುತ್ತೇನೆ," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ನಾನು ಹೇಳಿದಂತೆ ನೀವು ಈ ಕೆಲಸವನ್ನು ಮಾಡಬಹುದಿತ್ತು, ಏಕೆಂದರೆ ಮೊಹಮ್ಮದ್ ಸಿರಾಜ್ ಅವರು ಉತ್ತಮ ಮೌಲ್ಯವನ್ನು ಹೊಂದಿದ್ದಾರೆ. ಅವರನ್ನು ನೀವು ಹಚ್ಚಿನದಾಗಿ ಬಳಸಿಕೊಳ್ಳಬಹುದು. ತಂಡಕ್ಕೆ ಸಿರಾಜ್ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಹಾಗೂ ಜಡೇಜಾಗೆ ಈ ಟೂರ್ನಿಯಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ ಎಂಬುದು ನನಗೆ ತಿಳಿದಿಲ್ಲ. ಈ ಕಾರಣ ಜಡೇಜಾ ಅವರ ಬದಲು ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಬೇಕಿತ್ತು," ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
Champions Trophy Squad: ತಂಡದ ಆಯ್ಕೆ ಬಗ್ಗೆ ಕೋಚ್ ಗಂಭೀರ್ ಅಸಮಾಧಾನ
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ (ಫಿಟ್‌ನೆಸ್ ಮೇಲೆ ಅವಲಂಬನೆ), ಅರ್ಷ್‌ದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್.