ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪ್ರಿಯಕರನಿಗೆ ಸುಪಾರಿ ಕೊಟ್ಟು ಪತಿಯನ್ನು ಕೊಲ್ಲಿಸಿ ಹೆಣದ ಮುಂದೆ ಗೋಳಾಡಿದ ಪತ್ನಿ!

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವೆಂಕಟೇಶನ ಪತ್ನಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು. ಮುಂದೆ ನನ್ನ ಗತಿ ಏನು ಎಂದು ಪತಿಯ ಶವದ ಮುಂದೆ ಗೋಳಾಡಿ ಅತ್ತಿದ್ದಳು. ಆದರೆ, ಪೊಲೀಸರು ಚುರುಕು ಕಣ್ಣುಗಳು ಆಕೆಯ ನಾಟಕವನ್ನು ಬಟಾಬಯಲಾಗಿಸಿದೆ.

ಕೊಲೆಯಾದ ವೆಂಕಟೇಶ, ಆರೋಪಿ ಆನಂದ್‌, ನೀಲವೇಣಿ

ಬಳ್ಳಾರಿ: ಏಪ್ರಿಲ್​ 4ರಂದು ಬಳ್ಳಾರಿ (Bellary news) ನಗರದ ಕಣೇಕಲ್ ರಸ್ತೆಯ ರಾಣಿತೋಟದಲ್ಲಿ ನಡೆದ ವೆಂಕಟೇಶ ಎನ್ನುವಾತನ ಕೊಲೆ ಪ್ರಕರಣಕ್ಕೆ (Murder Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ವೆಂಕಟೇಶನನ್ನು ಕೊಲೆ ಮಾಡಿಸಿದ್ದು ಸ್ವತಃ ಆತನ ಹೆಂಡತಿಯೇ (Wife) ಎಂದು ಗೊತ್ತಾಗಿದ್ದು, ಪ್ರಿಯಕರನೊಂದಿಗೆ (lover) ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ. ಗಂಡನ ಸಾವಿನ ಬಳಿಕ ಹೆಣದ ಮುಂದೆ ಗೋಳಾಡಿ ಕಣ್ಣೀರಿಟ್ಟಿದ್ದ ಖತರ್‌ನಾಕ್ ಹೆಂಡತಿ ಇದೀಗ ಕಂಬಿ ಎಣಿಸುತ್ತಿದ್ದಾಳೆ. ಕೇಸ್ ದಾಖಲಿಸಿದ್ದ ಮೃತ ವೆಂಕಟೇಶನ ಪತ್ನಿಯೇ ಇಡೀ ಕೊಲೆ ಪ್ರಕರಣದ ಸೂತ್ರಧಾರಿ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.

ಇದೇ ಶುಕ್ರವಾರ ಬೆಳಗಿನ ಜಾವ ಬಳ್ಳಾರಿ ನಗರದ ಕಣೇಕಲ್ ರಸ್ತೆಯ ರಾಣಿತೋಟ ಏರಿಯಾದಲ್ಲಿ ವೆಂಕಟೇಶ ಎನ್ನುವ ವ್ಯಕ್ತಿಯ ಭೀಕರ ಕೊಲೆಯಾಗಿತ್ತು. ವೆಂಕಟೇಶನ ಮೈಮೇಲಿದ್ದ ಎಲ್ಲಾ ಬಟ್ಟೆಗಳನ್ನ ಬಿಚ್ಚಿದ್ದ ಕಿರಾತಕರು, ತಲೆಗೆ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವೆಂಕಟೇಶನ ಪತ್ನಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು. ಮುಂದೆ ನನ್ನ ಗತಿ ಏನು ಎಂದು ಪತಿಯ ಶವದ ಮುಂದೆ ಗೋಳಾಡಿ ಅತ್ತಿದ್ದಳು. ಆದರೆ, ಪೊಲೀಸರು ಚುರುಕು ಕಣ್ಣುಗಳು ಆಕೆಯ ನಾಟಕವನ್ನು ಬಟಾಬಯಲಾಗಿಸಿದೆ. ಅಕ್ರಮ ಸಂಬಂಧಕ್ಕೆ ಪತಿಯೇ ಅಡ್ಡಿಯಾಗುತ್ತಾನೆ ಎಂದು ಪ್ರಿಯಕರನ ಮೂಲಕವೇ ಪತಿಗೆ ಸ್ಕೆಚ್​ ಹಾಕಿ, ಪತಿ ಕಥೆಯನ್ನೇ ಪತ್ನಿ ನೀಲವೇಣಿ ಮುಗಿಸಿದ್ದಾಳೆ.

ವೆಂಕಟೇಶ್ ಮತ್ತು ನೀಲವೇಣಿ ಮದುವೆಯಾಗಿ 16 ವರ್ಷ ಆಗಿದೆ. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದಾನೆ. ನೀಲವೇಣಿಗೆ ಶಾಮಿಯಾನ ವ್ಯವಹಾರ ಮಾಡುತ್ತಿದ್ದ ಆನಂದ್ ಜೊತೆ ಅಕ್ರಮ ಸಂಬಂಧ ಇತ್ತು. ನೀಲವೇಣಿ ಮತ್ತು ಆನಂದ್ ಇಬ್ಬರೂ ಸೇರಿ ಶಾಮಿಯಾನ ವ್ಯವಹಾರ ಮಾಡುತ್ತಿದ್ದರು. ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ವೆಂಕಟೇಶ್​ಗೆ ಅನುಮಾನ ಬಂದಿತ್ತು. ಈ ವಿಚಾರವಾಗಿ ಪತಿ ಪತ್ನಿಯ ಜೊತೆಗೆ ಜಗಳ ತೆಗೆದಿದ್ದ. ಶುಕ್ರವಾರ ರಾತ್ರಿಯೇ ಆನಂದ್​ಗೆ ಪತಿ ವೆಂಕಟೇಶ್​ನನ್ನು ಕೊಂದುಬಿಡುವಂತೆ ನೀಲವೇಣಿ ಸುಪಾರಿ ಕೊಟ್ಟಿದ್ದಳು. ಆನಂದ್ ತನ್ನ ಸ್ನೇಹಿತರ ಜೊತೆ ಸೇರಿ ಕೊಲೆ ಪ್ಲಾನ್ ಮಾಡಿದ್ದ.

ಘಟನೆ ನಡೆದ ದಿನ ಕುಡಿಯೋದಕ್ಕೆ ಎಂದು ಮನೆಯಲ್ಲಿದ್ದ ವೆಂಕಟೇಶ್‌ನನ್ನು ಆನಂದ್, ನಾಲ್ಕನೇ ಆರೋಪಿ ಚಿರು ಬೈಕ್​ನಲ್ಲಿ ರಾಣಿಪೇಟೆ ಏರಿಯಾದಿಂದ ನೂರು ಮೀಟರ್ ಅಂತರದಲ್ಲಿನ ಸ್ಮಶಾನಕ್ಕೆ ಕರೆಸಿಕೊಂಡಿದ್ದ. ಆ ಮೇಲೆ ಒಬ್ಬೊಬ್ಬರಾಗಿ ಆರೋಪಿಗಳು ಸ್ಥಳಕ್ಕೆ ಬಂದಿದ್ದರು. ಅಲ್ಲಿ 11 ಆರೋಪಿಗಳು ಆತನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ನೀಲವೇಣಿ ಮತ್ತು ಆನಂದ್ ಸೇರಿದಂತೆ ಒಟ್ಟು 11 ಜನ ಅರೆಸ್ಟ್ ಆಗಿದ್ದಾರೆ. A1 ಆರೋಪಿ ನೀಲವೇಣಿ, A2 ಆರೋಪಿ ಆನಂದ, ಮೊಮ್ಮದಗೌಸ್, ಶಿವಶಂಕರ ಅಲಿಯಾರ ಚಿರು, ಮಮ್ಮದ್ ಶಾಯಿದ್ ಅಲಿಯಾಸ್ ಜಂಗ್ಲಿ, ಪಾಷಾವಲಿ ಅಲಿಯಾಸ ದುದ್ದು, ಮಮ್ಮದ ಷರೀಪ್, ಮೊಮ್ಮದ್ ಆಸೀಪ್, ಮೊಮ್ಮದ ಸೋಯಲ್ ಬಂಧಿತ ಆರೋಪಿಗಳು. ಘಟನೆ ನಡೆದ 24 ಗಂಟೆಗಳಲ್ಲಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Vinay Somaiah death: ಆತ್ಮಹತ್ಯೆಗೆ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್, ಲೆಟರ್​ನಲ್ಲಿ ಏನಿದೆ?

ಹರೀಶ್‌ ಕೇರ

View all posts by this author