ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinay Somaiah death: ಆತ್ಮಹತ್ಯೆಗೆ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್, ಲೆಟರ್​ನಲ್ಲಿ ಏನಿದೆ?

ಪತ್ನಿಗೆ ಬರೆದ ಪತ್ರದಲ್ಲೂ, ನನ್ನ ಸಾವಿಗೆ ಪೊಲೀಸರ ಕಿರುಕುಳ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ. ಕೋರ್ಟ್ ಸ್ಟೇ ಇದ್ದರೂ ಪೊಲೀಸರು ಪದೇ ಪದೇ ಕರೆ ಮಾಡಿ ಬರಲು ಹೇಳ್ತಿದ್ರು. ಇದು ಕ್ಷಮಿಸುವ ತಪ್ಪಲ್ಲ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಇತ್ತು ಎಂದು ಬರೆದಿದ್ದರು.

ಆತ್ಮಹತ್ಯೆಗೆ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್, ಲೆಟರ್​ನಲ್ಲಿ ಏನಿದೆ?

ವಿನಯ್‌ ಸೋಮಯ್ಯ

ಹರೀಶ್‌ ಕೇರ ಹರೀಶ್‌ ಕೇರ Apr 7, 2025 7:06 AM

ಕೊಡಗು: ಬಿಜೆಪಿ ಕಾರ್ಯಕರ್ತ (BJP worker) ವಿನಯ್ ಸೋಮಯ್ಯ (Vinay Somaiah death) ಆತ್ಮಹತ್ಯೆ ಪ್ರಕರಣ ರಾಜಕೀಯವಾಗಿ ಸಾಕಷ್ಟು ಕೋಲಾಹಲ ಎಬ್ಬಿಸಿದೆ. ವಿನಯ್​ ಸಾವಿಗೆ ನ್ಯಾಯ ಬೇಕು ಎಂದು ಬಿಜೆಪಿಗರು ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ (AS Ponnanna) ಅವರ ಬಗ್ಗೆ ಟೀಕೆ ಮಾಡಿದ್ದ ವಿಚಾರಕ್ಕೆ ವಿನಯ್ ಮೇಲೆ ಎಫ್ ಐಆರ್ ದಾಖಲಾಗಿತ್ತು. ಹೀಗಾಗಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಮನನೊಂದು ಆತ್ಮಹತ್ಯೆ (Self harming) ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದುಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ವಿನಯ್ ಪತ್ನಿಗೆ ಕೂಡ ಪತ್ರ ಕೂಡ ಬರೆದಿದ್ದರು ಎಂದು ಗೊತ್ತಾಗಿದೆ.

ಪತ್ನಿಗೆ ಬರೆದ ಪತ್ರದಲ್ಲೂ, ನನ್ನ ಸಾವಿಗೆ ಪೊಲೀಸರ ಕಿರುಕುಳ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ. ಕೋರ್ಟ್ ಸ್ಟೇ ಇದ್ದರೂ ಪೊಲೀಸರು ಪದೇ ಪದೇ ಕರೆ ಮಾಡಿ ಬರಲು ಹೇಳ್ತಿದ್ರು. ಇದು ಕ್ಷಮಿಸುವ ತಪ್ಪಲ್ಲ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಇತ್ತು. ಬೇರೆ ಕೆಲಸಕ್ಕೆ ಸೇರಿ ಸೈಟ್ ತಗೊಂಡು ಜೀವನ ನಡೆಸುವ ಗುರಿ ಇತ್ತು. ಆದ್ರೆ ಯಾವುದೂ ಆಗಲಿಲ್ಲ. ಮಗಳು ಸಾದ್ವಿ ಒಂದು ವಾರ ಕೇಳಬಹುದು. ನಂತರ ಸರಿಯಾಗ್ತಾಳೆ. ಅಪ್ಪ ದೂರ ಹೋಗಿದ್ದಾರೆ ಅಂತ ಹೇಳು. ಅವಳು ದೊಡ್ಡವಳಾದ ಮೇಲೆ ಅಪ್ಪ ನಿನ್ನನ್ನು ತುಂಬಾ ಇಷ್ಟಪಡುತ್ತಿದ್ದರು ಎಂದು ನೀನೇ ಹೇಳ್ಬೇಕು ಎಂದು ವಿನಯ್ ಬರೆದಿದ್ದಾರೆ.

ನನ್ನನ್ನು ಕ್ಷಮಿಸಿಬಿಡು

ಎರಡು ತಿಂಗಳಿಂದ ಮುಖದಲ್ಲಿ‌ ನಗುವಿಲ್ಲ. ಇನ್ನೂ ಕೂಡ ಕಿಡಿಗೇಡಿಗಳು ಅಂತ ಗ್ರೂಪಲ್ಲಿ ಮೆಸೇಜ್ ಮಾಡಲಾಗುತ್ತಿದೆ. ನಾನು ಮರೆಯಲು ಪ್ರಯತ್ನಿಸಿದ್ರೂ ಅದು ಮರುಕಳಿಸುತ್ತಿದೆ. ನಾನು, ನಿನ್ನನ್ನು ಪಡೆಯಲು ಪುಣ್ಯ ಮಾಡಿದ್ದೆ. ಕಷ್ಟದ ಸಮಯದಲ್ಲಿ ನೀನು ನನಗೆ ಬೆಂಬಲ ನೀಡಿದ್ದೀಯಾ. ನನ್ನಿಂದ ನನ್ನ ಮತ್ತು ನಿಮ್ಮ ಕುಟುಂಬದ ಮರ್ಯಾದೆ ಹೋಯಿತು, ಕ್ಷಮಿಸಿಬಿಡು ಎಂದು ವಿನಯ್​ ತನ್ನ ಪತ್ನಿಗೆ ಪತ್ರ ಬರೆದಿದ್ದರು.

ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್​ನೋಟ್ ಪೋಸ್ಟ್ ಮಾಡಿದ್ದ ವಿನಯ್, ರಾಜಕೀಯ ಪ್ರೇರಿತ FIRನಿಂದ ಮನನೊಂದಿದ್ದೇನೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು. ವಿನಯ್ ಸೋಮಯ್ಯ ಆತ್ಮಹತ್ಯೆ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಬೆಂಗಳೂರಿನ ನಾಗವಾರದ ಬಿಜೆಪಿ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: Vinay Somaiah death: ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣ: ಕಾಂಗ್ರೆಸ್‌ ಶಾಸಕ ಸೇರಿ ಮೂವರ ಮೇಲೆ ಎಫ್‌ಐಆರ್