ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Murder Case: ಆಸ್ತಿಗಾಗಿ ನಾಲ್ಕು ಜನರ ಕೊಲೆ ಮಾಡಿದ ಮಗನಿಗೆ ಗಲ್ಲು, ಅಪ್ಪನಿಗೆ ಜೀವಾವಧಿ ಶಿಕ್ಷೆ

2023 ರ ಫೆಬ್ರುವರಿ 23ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಈ ಘೋರ ಕೊಲೆಗಳು (Murder Case) ನಡೆದಿದ್ದವು. ಆಸ್ತಿಗಾಗಿ ಮನೆಯ ಸೊಸೆ ಮಾಡಿದ ಪುಸಲಾವಣೆಯ ಪರಿಣಾಮ, ಆಕೆಯ ತಮ್ಮ ಹಾಗೂ ತಂದೆ ಇದೀಗ ಕಂಬಿಗಳ ಹಿಂದೆ ತಮ್ಮ ಕೊನೆಯ ಕ್ಷಣ ಎಣಿಸುವಂತಾಗಿದೆ.

ಆರೋಪಿಗಳಾದ ಶ್ರೀಧರ ಭಟ್‌, ವಿನಯ ಭಟ್

ಉತ್ತರ ಕನ್ನಡ: ಆಸ್ತಿಗಾಗಿ ನಾಲ್ವರನ್ನು ಕೊಲೆ (Murder Case) ಮಾಡಿದ್ದ ಅಪ್ಪ ಮತ್ತು ಮಗನಿಗೆ ಉತ್ತರ ಕನ್ನಡ (Uttar Kannada) ಜಿಲ್ಲಾ ನ್ಯಾಯಾಲಯ ಶಿಕ್ಷೆ (Court sentence) ವಿಧಿಸಿದೆ. ಮಗ ವಿನಯ್ ಭಟ್​ಗೆ ಗಲ್ಲು ಶಿಕ್ಷೆ (Capital punishment) ಮತ್ತು ಅಪ್ಪ ಶ್ರೀಧರ್​ ಭಟ್​ಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 2023 ರ ಫೆಬ್ರುವರಿ 23ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಈ ಘೋರ ಘಟನೆ ನಡೆದಿತ್ತು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ನಿವಾಸಿಯಾಗಿದ್ದ ಶಂಭು ಭಟ್ ಎಂಬವರು ಸುಮಾರು 6 ಏಕರೆ ಅಡಿಕೆ ತೋಟ ಹೊಂದಿದ್ದರು. ಶಂಭು ಭಟ್​ ಅವರ ಹಿರಿಯ ಮಗ ಶ್ರೀಧರ್ ಭಟ್ ಅನಾರೋಗ್ಯದಿಂದ 2022ರ ಸೆಪ್ಟೆಂಬರ್ 8ರಂದು ಮೃತಪಟ್ಟಿದ್ದರು. ಮೃತ ಶ್ರೀಧರ ಭಟ್​ ಅವರ ಪತ್ನಿ ವಿದ್ಯಾ ಭಟ್​ ಆಸ್ತಿಯಲ್ಲಿ ಪಾಲು ಕೊಡುವಂತೆ ಮನೆಯಲ್ಲಿ ನಿತ್ಯ ಜಗಳವಾಡಲು ಪ್ರಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾ ಭಟ್​ ಮಾವ ಶಂಭು ಭಟ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಎಲ್ಲರಿಗೂ ಸಮಾನವಾಗಿ ಆಸ್ತಿ ಹಂಚಿದ್ದರು.

ಇದಕ್ಕೆ, “ನಾದಿನಿಯರಿಗೆ ಯಾಕೆ ಆಸ್ತಿಯಲ್ಲಿ ಪಾಲು ಕೊಡುತ್ತೀರಾ?” ಅಂತ ವಿದ್ಯಾ ಭಟ್​ ನಿತ್ಯ ಕಿರುಕುಳ ಕೊಡುತ್ತಿದ್ದರು. ವಿದ್ಯಾ ಭಟ್‌ ಅವರ ತಂದೆ ಶ್ರೀಧರ ಭಟ್‌ ಹಾಗೂ ತಮ್ಮ ವಿನಯ್‌ ಭಟ್‌ ಕೂಡ ಈ ಗಲಾಟೆಯಲ್ಲಿ ವಿದ್ಯಾ ಪರ ವಹಿಸಿ ಕಿರುಕುಳ ನೀಡುತ್ತಿದ್ದರು. ಇದೇ ಆಸ್ತಿ ವಿಚಾರವಾಗಿ ವಿದ್ಯಾ ಭಟ್​ ಪೋಷಕರು ಮತ್ತು ಶಂಭು ಭಟ್​ ಅವರ ಕುಟುಂಬದವರ ನಡುವೆ 2023ರ ಫೆಬ್ರುವರಿ 23ರಂದು ಗಲಾಟೆಯಾಗಿತ್ತು. ಗಲಾಟೆ ತಾರಕಕ್ಕೇರಿದಾಗ, ಅಪರಾಧಿ ವಿನಯ್ ಭಟ್ ತನ್ನ ಕತ್ತಿಯಿಂದ ಶಂಭು ಭಟ್, ಅವರ ಪತ್ನಿ ಮಹಾದೇವಿ ಭಟ್ ಹಾಗೂ ಕಿರಿಯ ಮಗ ರಾಘವೇಂದ್ರ ಭಟ್​ ಅವರನ್ನು ಕೊಚ್ಚಿ ಕೊಲೆ ಮಾಡಿದ್ದ. ರಾಘವೇಂದ್ರನ ಹೆಂಡತಿ ಕುಸುಮಾ ಭಟ್ ಅವರನ್ನು ಅಪರಾಧಿ ಶ್ರೀಧರ್ ಭಟ್ ಕತ್ತಿಯಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿರುವುದು ಕೂಡ ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಇದನ್ನೂ ಓದಿ: Janardhana Reddy: ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ; ಸಿಬಿಐ ಕೋರ್ಟ್‌ ಮಹತ್ವದ ತೀರ್ಪು

ಹರೀಶ್‌ ಕೇರ

View all posts by this author