IPL 2025: ಪಂಜಾಬ್ ಕಿಂಗ್ಸ್‌ಗೆ ಕಪ್ ಗೆದ್ದುಕೊಡುವುದು ನನ್ನ ಗುರಿ ಎಂದ ಶ್ರೇಯಸ್ ಅಯ್ಯರ್!
Shreyas Iyer Aims To End Punjab Kings' Title: ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್, 2025 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪಂಜಾಬ್ ಕಿಂಗ್ಸ್‌ಗೆ ಚೊಚ್ಚಲ ಕಪ್ ಗೆದ್ದುಕೊಡುವ ಗುರಿಯನ್ನು ಹೊಂದಿರುವುದಾಗಿ ಶ್ರೇಯಸ್ ಅಯ್ಯರ್ ಹೇಳಿಕೊಂಡಿದ್ದಾರೆ.

ಬ್ಯಾಟಿಂಗ್ ಅಭ್ಯಾಸ ನಡೆಸಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್.

ನವದೆಹಲಿ: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ (PBKS) ಚೊಚ್ಚಲ ಪ್ರಶಸ್ತಿ ಗೆದ್ದುಕೊಡುವುದು ತನ್ನ ಗುರಿಯಾಗಿದೆ ಎಂದು ನಾಯಕ ಶೇಯಸ್ ಅಯ್ಯರ್ (Shreyas Iyer) ಶಪಥ ಮಾಡಿದ್ದಾರೆ. ಕಳೆದ 2024ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೂರನೇ ಬಾರಿ ಪ್ರಶಸ್ತಿಯನ್ನು ಗೆದ್ದಿತ್ತು. ಇದರ ಹೊರತಾಗಿಯೂ ಅಯ್ಯರ್ ಅವರನ್ನು ಕೋಲ್ಕತಾ ಫ್ರಾಂಚೈಸಿ ಉಳಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 26.75 ಕೋಟಿ ರೂ ಗಳಿಗೆ ಖರೀದಿಸಿ ನಾಯಕತ್ವವನ್ನು ನೀಡಿದೆ.
ಜಿಯೊ ಹಾಟ್‌ಸ್ಟಾರ್‌ನ ಸೂಪರ್ ಸ್ಟಾರ್ಸ್ ಜೊತೆ ಮಾತನಾಡಿದ ಶ್ರೇಯಸ್ ಅಯ್ಯರ್, "ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ ಕ್ಷಣದಲ್ಲಿಯೇ ನಾನು ಪಂಜಾಬ್ ಕಿಂಗ್ಸ್ ತಂಡಕ್ಕೆ ಚೊಚ್ಚಲ ಪ್ರಶಸ್ತಿಯನ್ನು ಗೆದ್ದು ಕೊಡಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೆ. ಇದು ಐತಿಹಾಸಿಕ ಸಾಧನೆಯಾಗಲಿದೆ ಹಾಗೂ ಪಂಜಾಬ್‌ಗೆ ಪ್ರಶಸ್ತಿ ತಂದುಕೊಟ್ಟು ಅಭಿಮಾನಿಗಳನ್ನು ಸಂತಸ ಪಡಿಸಬೇಕೆಂಬ ಗುರಯನ್ನು ಹೊಂದಿದ್ದೇನೆ. ಟೂರ್ನಿಯ ಕೊನೆಯಲ್ಲಿ ಪಂಜಾಬ್ ಶೈಲಿಯ ಸಂಭ್ರಮಾಚರಣೆ ತುಂಬಾ ವಿಶೇಷವಾಗಿರುತ್ತದೆ," ಎಂದು ಹೇಳಿದ್ದಾರೆ.
IPL 2025: ʻಸ್ಟ್ರೈಕ್ ರೇಟ್ ಕಡೆಗೆ ಗಮನ ಕೊಡಬೇಡಿʼ-ಕುಚುಕು ಗೆಳೆಯ ವಿರಾಟ್ ಕೊಹ್ಲಿಗೆ ಎಬಿಡಿ ಮಹತ್ವದ ಸಲಹೆ!
ತಮ್ಮ ತವರು ಅಂಗಣ ಮುಂಬೈನ ವಾಂಖೆಡೆಯಲ್ಲಿ ಬಾಲ್ ಬಾಯ್ ಆಗಿದ್ದ ಘಟನೆಯನ್ನು ಇದೇ ವೇಳೆ ಶ್ರೇಯಸ್ ಅಯ್ಯರ್ ಸ್ಮರಿಸಿಕೊಂಡಿದ್ದಾರೆ. 2008ರ ಐಪಿಎಲ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದ ವೇಳೆ 14 ವರ್ಷದ ಬಾಲಕನಾಗಿದ್ದ ಶ್ರೇಯಸ್ ಅಯ್ಯರ್ ಬಾಲ್ ಬಾಯ್ ಆಗಿದ್ದ.
"ನಾನು ನಮ್ಮ ಏರಿಯಾದಲ್ಲಿ ಗಲ್ಲಿ ಕ್ರಿಕೆಟ್ ಆಡಿ ಬೆಳೆದವನು, ನಂತರ ಮುಂಬೈ ಅಂಡರ್ 14 ತಂಡದ ಪರ ಆಡಿದ್ದೆ. ಅಂದು ಮುಂಬೈ ತಂಡದ ಎಲ್ಲಾ ಹುಡುಗರನ್ನು ಬಾಲ್‌ಬಾಯ್ ಮಾಡಲಾಗಿತ್ತು. ಅದರಲ್ಲಿ ನಾನು ಒಬ್ಬನಾಗಿದ್ದು ನನ್ನ ಪಾಲಿಗೆ ಅದೃಷ್ಟ. ಐಪಿಎಲ್ ಪಂದ್ಯವನ್ನು ಅಷ್ಟೊಂದು ಹತ್ತಿರದಿಂದ ನೋಡಿದ್ದು ಇದೇ ಮೊದಲು," ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
"ನಾನು ಅಂದು ನಾಚಿಕೆ ಮತ್ತು ಸಂಯಮದಿಂದ ಇದ್ದದ್ದನ್ನು ನೆನಪಿಸಿಕೊಳ್ಳುತ್ತೇನೆ, ಆದರೆ ನನ್ನ ಸ್ನೇಹಿತರು ಆಟಗಾರರ ಬಳಿಗೆ ಬರುವುದನ್ನು ನೋಡಿದಾಗ, ನಾನು ಕಡೆಗಣಿಸಲ್ಪಟ್ಟಂತೆ ಭಾಸವಾಯಿತು ಮತ್ತು ನಾನು ಸಹ ಪ್ರಯತ್ನಿಸಲು ನಿರ್ಧರಿಸಿದೆ. ಆಗ ರಾಸ್ ಟೇಲರ್ ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದರು, ಆದ್ದರಿಂದ ನಾನು ಅವರ ಬಳಿಗೆ ಹೋಗಿ, 'ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ' ಎಂದು ಹೇಳಿದೆ. ಅವರು ತುಂಬಾ ಸಿಹಿಯಾಗಿದ್ದರು ಮತ್ತು ನನಗೆ ಧನ್ಯವಾದ ಹೇಳಿದರು. ಆಗ, ಬ್ಯಾಟ್ ಅಥವಾ ಗ್ಲೌಸ್‌ಗಳನ್ನು ಕೇಳುವುದು ಸಾಮಾನ್ಯವಾಗಿತ್ತು, ಆದರೆ ನಾನು ನಿಜವಾಗಿಯೂ ಕೇಳಲು ಬಯಸಿದ್ದರೂ ಸಹ, ಕೇಳಲು ತುಂಬಾ ನಾಚಿಕೆಪಡುತ್ತಿದ್ದೆ."
IPL 2025: ಐಪಿಎಲ್ ಪಂದ್ಯಾವಳಿ ಆರಂಭಕ್ಕೂ ಮುನ್ನ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು
"ಇರ್ಫಾನ್ ಪಠಾಣ್ ಲಾಂಗ್-ಆನ್‌ನಲ್ಲಿ ನಿಂತಿದ್ದನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಅವರು ನಮ್ಮ ಪಕ್ಕದಲ್ಲಿ ಕುಳಿತುಕೊಂಡು, ನೀವು ಪಂದ್ಯವನ್ನು ಆನಂದಿಸುತ್ತಿದ್ದೀರಾ ಎಂದು ನಮ್ಮನ್ನು ಕೇಳಿದ್ದರು. ಹೌದು ನಾವು ತುಂಬಾ ಆನಂದಿಸುತ್ತಿದ್ದೇವೆ ಎಂದು ಅವರಿಗೆ ಹೇಳಿದ್ದೆವು ಮತ್ತು ಅವರನ್ನು ನೋಡಿ ನಾವು ರೋಮಾಂಚನಗೊಂಡಿದ್ದೆವು. ಆ ಸಮಯದಲ್ಲಿ, ಇರ್ಫಾನ್ ಭಾಯ್ ತುಂಬಾ ಜನಪ್ರಿಯರಾಗಿದ್ದರು ಮತ್ತು ಪಂಜಾಬ್ ತಂಡದಲ್ಲಿ ಯುವಿ ಪಾ (ಯುವರಾಜ್ ಸಿಂಗ್) ಸೇರಿದಂತೆ ಕೆಲವು ಅತ್ಯುತ್ತಮ ಆಟಗಾರರು ಇದ್ದರು. ಅದು ಹಲವು ವರ್ಷಗಳ ನಂತರವೂ ನನ್ನೊಂದಿಗೆ ಉಳಿದಿರುವ ನೆನಪು," ಎಂದು ಪಂಜಾಬ್ ಕಿಂಗ್ಸ್ ನಾಯಕ ತಿಳಿಸಿದ್ದಾರೆ.