ಸೆಂಟರ್‌ಫ್ರೂಟ್ ಪ್ರಿಯರಿಗಾಗಿ ಹೊಸ ಅಭಿಯಾನ ಆರಂಭ
“ಕೈಸಿ ಅಜೀಬ್ ಲಪ್‌ಲಪಾಯೀ” ಎಂಬ ಈ ಹೊಚ್ಚ ಹೊಸ ಅಭಿಯಾನದ ಅಡಿಯಲ್ಲಿ, ಸೆಂಟರ್ ಫ್ರೂಟ್‌ನ ರುಚಿಗೆ ಹೆಚ್ಚು ಒತ್ತು ನೀಡಲಾಗಿದೆ. ಟ್ರಾಫಿಕ್ ಜಾಮ್‌ನಲ್ಲಿ ಇಡೀ ನಗರವೇ ಸ್ಥಗಿತ ಗೊಂಡಿದ್ದು, ಮಹಿಳೆ ವೇಗವಾಗಿ ಏರ್‌ಪೋರ್ಟ್‌ಗೆ ತಲುಪಬೇಕಿರುತ್ತದೆ


ಪರ್ಫೆಟ್ಟಿ ವ್ಯಾನ್ ಮೆಲ್ಲೆ ಸಂಸ್ಥೆಯ ಸೆಂಟರ್‌ಫ್ರೂಟ್ ತನ್ನ ವಿಶಿಷ್ಟ ಅಭಿಯಾನದ ಮೂಲಕ ಹೊಸ ಅಲೆಯನ್ನು ಎಬ್ಬಿಸಿದ್ದು, ರುಚಿಗೆ ಒತ್ತು ನೀಡುವುದರ ಜೊತೆಗೆ, “ಕೈಸಿ ಅಜೀಬ್ ಲಪ್‌ಲಪಾಯೀ” ಎಂಬ ಟ್ಯಾಗ್‌ಲೈನ್ ಅನ್ನು ಇದು ಹೊಂದಿದೆ.
ಅಭಿಯಾನದ ಅಡಿಯಲ್ಲಿ ಹೊಸ ಟಿವಿಸಿ ಅನ್ನು ಪರಿಚಯಿಸಲಾಗಿದ್ದು, ನಿರ್ದೇಶಕರಾದ ಪ್ರಸೂನ್ ಪಾಂಡೆ ಇದನ್ನು ನಿರ್ದೇಶಿಸಿದ್ದಾರೆ. ತನ್ನ ವಿಶಿಷ್ಟ ರುಚಿಯಿಂದ ಗ್ರಾಹಕರನ್ನು ಮೆಚ್ಚಿ ಸುವ ಸೆಂಟರ್‌ಫ್ರೂಟ್‌ನ ವಿಶಿಷ್ಟ ಸಾಮರ್ಥ್ಯವನ್ನು ಇದು ಪ್ರತಿಬಿಂಬಿಸುತ್ತದೆ. “ಕೈಸಿ ಅಜೀಬ್ ಲಪ್ ಲಪಾಯೀ” ಎಂಬ ಟ್ಯಾಗ್‌ಲೈನ್ ಕೂಡಾ ಮತ್ತೆ ಮತ್ತೆ ಬೇಕೆನ್ನಿಸುವ ಮತ್ತು ಮೋಜಿನ ಅನುಭವ ವನ್ನು ನೀಡುವುದನ್ನು ಪ್ರತಿಬಿಂಬಿಸುತ್ತದೆ.
ಸೆಂಟರ್‌ಫ್ರೂಟ್ ಹಿಂದಿನಿಂದಲೂ ತನ್ನ ವಿಶಿಷ್ಟ ಸ್ವಾದ ಮತ್ತು ತೊಡಗಿಸಿಕೊಳ್ಳುವ ಸಂವಹನಕ್ಕೆ ಹೆಸರಾಗಿದೆ ಹಾಗೂ ಈ ಹೊಸ ಅಭಿಯಾನವು ಬ್ರ್ಯಾಂಡ್‌ನ ಮೂಲ ಅಂಶವಾದ ಸಮಕಾಲೀನ ಮತ್ತು ತಾಜಾತನವನ್ನು ಒದಗಿಸುವುದಕ್ಕೆ ಪೂರಕವಾಗಿದೆ. ಇದು ಇಂದಿನ ಗ್ರಾಹಕರ ಆದ್ಯತೆಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ.
“ಕೈಸಿ ಅಜೀಬ್ ಲಪ್‌ಲಪಾಯೀ” ಎಂಬ ಈ ಹೊಚ್ಚ ಹೊಸ ಅಭಿಯಾನದ ಅಡಿಯಲ್ಲಿ, ಸೆಂಟರ್ ಫ್ರೂಟ್‌ನ ರುಚಿಗೆ ಹೆಚ್ಚು ಒತ್ತು ನೀಡಲಾಗಿದೆ. ಟ್ರಾಫಿಕ್ ಜಾಮ್‌ನಲ್ಲಿ ಇಡೀ ನಗರವೇ ಸ್ಥಗಿತ ಗೊಂಡಿದ್ದು, ಮಹಿಳೆ ವೇಗವಾಗಿ ಏರ್‌ಪೋರ್ಟ್‌ಗೆ ತಲುಪಬೇಕಿರುತ್ತದೆ. ಆದರೆ, ಆಕೆ ಎತ್ತಿನಗಾಡಿ ಯಲ್ಲಿ ಕೂತಿರುತ್ತಾಳೆ! ಆಗ ಎತ್ತಿನ ಗಾಡಿಯ ಮಾಲೀಕ ಕ್ರಿಯಾಶೀಲವಾಗಿ ಯೋಚಿಸುತ್ತಾನೆ. ಸೆಂಟರ್‌ಫ್ರೂಟ್ ಅನ್ನು ತಿಂದ ನಂತರ ಆತ ಸಮಸ್ಯೆಗೆ ಅದ್ಭುತ ಪರಿಹಾರವನ್ನು ಹುಡುಕುತ್ತಾನೆ.
ಈ ಬಿಡುಗಡೆಯ ಬಗ್ಗೆ ಮಾತನಾಡಿದ ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದ ಮುಖ್ಯ ಮಾರ್ಕೆ ಟಿಂಗ್ ಅಧಿಕಾರಿ ಗುಂಜನ್ ಖೇತನ್ “ಕೈಸಿ ಅಜೀಬ್ ಲಪ್‌ಲಪಾಯೀ” ಕೇವಲ ಒಂದು ಟ್ಯಾಗ್‌ಲೈನ್ ಅಲ್ಲ. ಇದೊಂದು ಅಭಿವ್ಯಕ್ತಿ. ನಿರಾಕರಿಸಲಾಗದ ರುಚಿಯನ್ನು ಒದಗಿಸುವ ಸೆಂಟರ್‌ಫ್ರೂಟ್‌ನ ಸ್ವಾದವನ್ನು ಇದು ಸೆರೆಹಿಡಿಯುತ್ತದೆ. ಈ ಅಭಿಯಾನದ ಮೂಲಕ, ನಮ್ಮ ಸಿಗ್ನೇಚರ್ ಪ್ರಾಡಕ್ಟ್ ಕಾರ್ಯಸಾಧ್ಯತೆ ಮತ್ತು ರುಚಿಯ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ಮೋಜಿನ ಮತ್ತು ನಿರಾ ಕರಿಸಲಾಗದ ಅನುಭವದಿಂದಾಗಿ ಗ್ರಾಹಕರು ಇನ್ನಷ್ಟು ಬಯಸುವಂತೆ ಮಾಡುತ್ತದೆ. ಪ್ರತಿ ಬೈಟ್ ಅನ್ನೂ ಖುಷಿಯ ಕ್ಷಣವನ್ನಾಗಿಸುವ ನಮ್ಮ ಬದ್ಧತೆಗೆ ಇದು ನಿಜವಾದ ಪ್ರತಿಫಲನವಾಗಿದೆ.”
ಅಭಿಯಾನದ ಪರಿಕಲ್ಪನೆಯ ಬಗ್ಗೆ ಮಾತನಾಡಿದ ಒಗಿಲ್ವಿ ವೆಸ್ಟ್‌ನ ಮುಖ್ಯ ಕ್ರಿಯೇಟಿವ್ ಅಧಿಕಾರಿ ಅನುರಾಗ್ ಅಗ್ನಿಹೋತ್ರಿ, “ಭಾರತದಲ್ಲಿ ಸೆಂಟರ್‌ಫ್ರೂಟ್ ಅತ್ಯಂತ ಪ್ರೀತಿಯನ್ನು ಗಳಿಸಿದ ಬ್ರ್ಯಾಂಡ್ ಆಗಿದೆ. ಇದರ ಟ್ಯಾಗ್ ಲೈನ್ ಕೈಸಿ ಅಜೀಬ್ ಲಪ್‌ಲಪಾಯೀ ಕೂಡ ಜನಪ್ರಿಯವಾಗಿದೆ. ಕಳೆದ ಹಲವು ವರ್ಷಗಳಿಂದಲೂ, ರುಚಿಯ ಸರಳ ಭರವಸೆಯ ಕುರಿತಂತೆ ವಿಶಿಷ್ಟ ಕಥೆಗಳನ್ನು ನಾವು ರಚಿಸಿದ್ದೇವೆ. ಈ ಬಾರಿ, ಇನ್ನೊಂದು ಅಚ್ಚರಿಯು ಮತ್ತು ಸ್ಮರಣಾರ್ಹ ಕಥೆಯನ್ನು ನಾವು ಹೊಂದಿ ದ್ದೇವೆ ಎಂದರು.