ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೇ.25,26ರಂದು ಖಾಯಮೇತರ ನೌಕರರ ಪ್ರತಿಭಟನೆ : ವರಲಕ್ಷ್ಮೀ ಘೋಷಣೆ

ಸಿ ಮತ್ತು ಡಿ' ಗುಂಪಿನ ಹುದ್ದೆಗಳ ಕೆಲಸಗಳನ್ನು ಸಂಪೂರ್ಣವಾಗಿ ಮಧ್ಯವರ್ತಿಗಳ ಮುಖಾಂತರ ದುಡಿಸಿ ಕೊಳ್ಳುತ್ತಿದೆ. ಈ ನೌಕರರಿಗೆ ಪ್ರತಿ ತಿಂಗಳು ನಿರಂತರವಾಗಿ ವೇತನ ಪಾವತಿಯಾಗುವುದಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಗುತ್ತಿಗೆದಾರರ ಮೇಲೆ ಹೇಳುವುದು. ಗುತ್ತಿಗೆದಾರ ರನ್ನು ಕೇಳಿದರೆ ಅಧಿಕಾರಿಗಳ ಮೇಲೆ ಹೇಳುವುದು ನಿರಂತರವಾಗಿ ನಡೆದಿದೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೇ.೨೫,೨೬ರಂದು ಖಾಯಮೇತರ ನೌಕರರ ಪ್ರತಿಭಟನೆ ನಡೆಸಲಾಗುವುದು ಎಂದು ಖಾಯಮೇತರ ನೌಕರರ ಒಕ್ಕೂಟದ ಅಧ್ಯಕ್ಷೆ ವರಲಕ್ಷ್ಮೀ ಘೋಷಣೆ ಮಾಡಿದರು.

ಚಿಕ್ಕಬಳ್ಳಾಪುರ: ಅರ್ಹತೆಯುಳ್ಳ ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗ ನಾಶ ಮಾಡುವ ಉದ್ದೇಶದಿಂದಲೇ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಸಿಕೊಂಡು ತಮ್ಮ ಕೆಲಸವಾದ ನಂತರ ಅವರನ್ನು ಉಂಡ ಮೇಲೆ ಎಲೆ ಬಿಸಾಡುವಂತೆ ಉದ್ಯೋಗದಿಂದ ಕೈ ಬಿಡುವ ಕೆಲಸ ಮಾಡುತ್ತಿರುವ ಸರಕಾರ ಧೋರಣೆ ಖಂಡಿಸಿ ಮೇ 25, 26ರಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲಾ ಗುವುದು ಎಂದು  ಕರ್ನಾಟಕ ರಾಜ್ಯ ಸರ್ಕಾರಿ ಖಾಯಮೇತರರ ನೌಕರರ ಒಕ್ಕೂಟ (ಸಿಐಟಿಯು) ಮತ್ತು  ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಆರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸಿ ಮತ್ತು ಡಿ' ಗುಂಪಿನ ಹುದ್ದೆಗಳ ಕೆಲಸಗಳನ್ನು ಸಂಪೂರ್ಣವಾಗಿ ಮಧ್ಯವರ್ತಿಗಳ ಮುಖಾಂತರ ದುಡಿಸಿಕೊಳ್ಳುತ್ತಿದೆ. ಈ ನೌಕರರಿಗೆ ಪ್ರತಿ ತಿಂಗಳು ನಿರಂತರವಾಗಿ ವೇತನ ಪಾವತಿ ಯಾಗುವುದಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಗುತ್ತಿಗೆದಾರರ ಮೇಲೆ ಹೇಳುವುದು. ಗುತ್ತಿಗೆದಾರರನ್ನು ಕೇಳಿದರೆ ಅಧಿಕಾರಿಗಳ ಮೇಲೆ ಹೇಳುವುದು ನಿರಂತರವಾಗಿ ನಡೆದಿದೆ ಎಂದರು.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿಗಳಲ್ಲಿ, ವಿವಿಧ ಯೋಜನೆಗಳಲ್ಲಿ ಲಕ್ಷಾಂತರ ವಿದ್ಯಾವಂತ ಯುವಕ-ಯುವತಿಯರನ್ನು ದೀರ್ಘಕಾಲಿಕವಾಗಿ ದುಡಿಸಲಾಗುತ್ತಿದೆ. ಮಾದರಿ ವ್ಯವಸ್ಥಾಪಕನಾಗಬೇಕಾದ ರಾಜ್ಯ ಸರ್ಕಾರ ಅಗತ್ಯವಿದ್ದಾಗ ಬಳಸಿ ಬಿಸಾಡುವ ನೀತಿ ಯನ್ನು ಅನುಸರಿಸುತ್ತಿದೆ ಎಂದರು.

ಇದನ್ನೂ ಓದಿ: Chikkaballapur News: ಕೋಡಿಹಳ್ಳಿ ಚಂದ್ರಶೇಖರ್ ಬಣದ ಕೆಐಎಡಿಬಿ ರೈತಪರ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಮಠದ ಅಭಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಚೈಲ್ಡ್ ಲೈನ್, ಪೋಷಣ್ ಟ್ರ‍್ಯಾಕರ್ ಸಿಬ್ಬಂದಿ ಗಳ ಕಡಿತ ಮಾಡುತ್ತಿರುವುದು, ಹಂಪಿ ಅಭಿವೃದ್ಧಿ ಪ್ರಾಧಿಕಾರ, ವಿಶ್ವವಿದ್ಯಾನಿಲಯಗಳು. ಬಿ.ಬಿ.ಎಂ.ಪಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತ ಮಾಡಲಾಗುತ್ತಿದೆ. ಹಾಸ್ಟೆಲ್‌ಗಳಲ್ಲಿ ಹಲವು ವರ್ಷಗಳ ಕಾಲ ದುಡಿಯುತ್ತಿರುವ ನೌಕರರಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡದೇ ಶೋಷಿಸುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ 'ಸಿ ಮತ್ತು ಡಿ' ಗುಂಪಿನ ಎಲ್ಲಾ ಹುದ್ದೆಗಳ ಕರ್ತವ್ಯಗಳನ್ನು ಇವರು ನಿರ್ವಹಿಸುತ್ತಿದ್ದಾರೆ. ಆದರೆ ಪ್ರತಿ ವರ್ಷ ಗುತ್ತಿಗೆದಾರರ ಟೆಂಡರ್ ಬದಲಾದಾಗಲೂ ಈ ನೌಕರರೂ ಕೆಲಸ ಕಳೆದು ಕೊಳ್ಳುವ ಭೀತಿಯನ್ನು ಎದುರಿಸಬೇಕು ಇಲ್ಲದಿದ್ದರೆ ಗುತ್ತಿಗೆದಾರರಿಗೆ ಲಂಚಕೊಟ್ಟು ಕೆಲಸದಲ್ಲಿ ಮುಂದುವರೆಯಬೇಕು. ಕೆಲವೆಡೆ ಸ್ಥಳೀಯ ಜನಪ್ರತಿನಿಧಿಗಳನ್ನು ಒಲೈಸಬೇಕು ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳುವ ಭೀತಿ ಇದೆ.

"ಸಮಾನ ಕೆಲಸಕ್ಕಾಗಿ ನೇಮಕಗೊಂಡಿರುವ ಒಬ್ಬ ನೌಕರನಿಗೆ ಅದಕ್ಕೆ ಸಮಾನವಾದ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸುತ್ತಿರುವ ಮೊತ್ತೊಬ್ಬನಿಗಿಂತ ಕಡಿಮೆ ವೇತನ ನೀಡುವುದು, ಕಲ್ಯಾಣ ರಾಜ್ಯದಲ್ಲಿ ಸರಿಯಲ್ಲ ಎಂದು" ಅಭಿಪ್ರಾಯ ಪಟ್ಟಿದೆ. ಅಂತಹ ಕ್ರಮ ಹೀನಾಯವಾಗಿರುವಂತ ಹುದು ಮಾತ್ರವಲ್ಲ, ಅದು ಮನುಷ್ಯನ ಘನತೆಯ ತಳ ಹದಿಯ ಮೇಲೆ ದಾಳಿ ಮಾಡುವಂತಹದ್ದಾ ಗಿದೆ. ಎಂಬುದಾಗಿ ಹಲವು ಬಾರಿ ಸರ್ವೋಚ್ಚ ನ್ಯಾಯಲಯ ತೀರ್ಪು ಗಳನ್ನು ನೀಡಿದೆ. ಆದರೆ ರಾಜ್ಯ ಸರ್ಕಾರ ಕೋರ್ಟ್ಗಳ ತೀರ್ಪನ್ನು ಸಂಪೂರ್ಣವಾಗಿ ಜಾರಿ ಮಾಡದಿದ್ದರೂ ಈ ನೌಕರರ ಬಗ್ಗೆ ಕನಿಷ್ಠ ಬದ್ಧತೆಯನ್ನು ವ್ಯಕ್ತಪಡಿಸುತ್ತಿಲ್ಲ ಎಂದರು.

2025 ಏಪ್ರಿಲ್‌ನಲ್ಲಿ ಸಿಐಟಿಯು ಮತ್ತು ಮತ್ತಿತರ ಸಂಘಟನೆಗಳ ನಿರಂತರ ಒತ್ತಡ ಮತ್ತು ಒತ್ತಾಯ ದ ಮೇರೆಗೆ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಆದರೆ ಇದುವರೆಗೂ ಅದನ್ನು ಜಾರಿ ಮಾಡದೇ ರಾಜ್ಯದಲ್ಲಿ 1 ಕೋಟಿ 77 ಲಕ್ಷ ಕಾರ್ಮಿಕರು ಕಷ್ಟ ಪಡುವಂತಾಗಿದೆ.

2022-23ರಿಂದಲೇ ಕನಿಷ್ಠ ವೇತನ ಅನ್ವಯಿಸಿ ಜಾರಿ ಮಾಡಬೇಕು. ಕರ್ನಾಟಕ ರಾಜ್ಯ ಸಿವಿಲ್ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು.  ಹುದ್ದೆಗಳನ್ನು ತುಂಬುವಾಗ ಗುತ್ತಿಗೆ ಕಾರ್ಮಿಕರಿಗೆ ಶೇ.50 ಮೀಸಲಾತಿ ನೀಡಬೇಕು. ಖಾಯಂ ಮಾಡುವ ತನಕ ನೇರ ವೇತನ ಪಾವತಿಯಡಿ ತರಬೇಕು. ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ. ಮೇ 25ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಬೇಡಿಕೆಗಳು!!!!    
ನಾನ್ ಪರ್ಮನೆಂಟ್ ನೌಕರರನ್ನು ಕಾಯಂ ಮಾಡಲು ಕೆಸಿಎಸ್‌ಆರ್ ನಿಯಮಾವಳಿಗೆ ತಿದ್ದುಪಡಿ ತರಬೇಕು.ಅನುಭವದ ಆಧಾರದಲ್ಲಿ ನೇಮಕಾತಿ ನಡೆಯಬೇಕು.ಉದ್ಯೋಗ ತುಂಬುವಾಗ ಶೇ.50 ರಷ್ಟು ಉದ್ಯೋಗಗಳನ್ನು ನಾನ್ ಪರ್ಮನೆಂಟ್ ಉದ್ಯೋಗಿಗಳಿಗೆ ಮೀಸಲಾಗಿಡಬೇಕು. ಕನಿಷ್ಠ ವೇತನ ಕಾಯ್ದೆ 2023ಕ್ಕೆ ಮುಗಿದು ಹೋಗಿದೆ. ಲೇಬರ್ ಇಲಾಖೆ ಹೊಸ ಅಧಿನಿಯಮದಂತೆ ಈಗಿರುವ ವೇತನದ ಜತೆಗೆ 5 ಸಾವಿರ ವೇತನ ಹೆಚ್ಚಳವಾಗಲಿದೆ. ಇದನ್ನು ಸರಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸುತ್ತೇವೆ. ಕೇಂದ್ರದ ಕಾರ್ಮಿಕ ಇಲಾಕೆ ನಿಯಮಾವಳಿ ತೋರಿಸಿ ಕನಿಷ್ಟವೇತನ ಕಾಯ್ದೆ ಮುಂದುವರೆಸಲಾಗದು ಎಂದು ಹೇಳುವುದು ತಪ್ಪು.

ಎಲ್ಲಾ ಗುತ್ತಿಗೆ ನೌಕರರಿಗೆ ಪ್ರತಿ ತಿಂಗಳಿಗೆ ಸರಿಯಾಗಿ ವೇತನ.12 ತಿಂಗಳು ವೇತನ ಖಾತ್ರಿ ಪಡಿಸಬೇಕು. ಎಲ್ಲಾ ಗುತ್ತಿಗೆ, ಆರೋಗ್ಯ. ಸಂಜೀವಿನಿ ಮತ್ತು ಮಹಿಳಾ ನೌಕರರಿಗೆ ಮುಟ್ಟಿನ ರಜೆಯನ್ನು ಇಲಾಖಾ ವಾರು ಪ್ರತ್ಯೇಕ ಆದೇಶ ನೀಡಬೇಕು. ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 184 ಎಎಂಸಿ 2024 ಬೆಂಗಳೂರು ದಿನಾಂಕ 20/12/2024. ಆದೇಶವನ್ನು ಎಲ್ಲಾ ಖಾಯಂಮೇತರರ ನೌಕರರಿಗೂ ವಿಸ್ತರಿಸಬೇಕು.

ಖಾಯಂ ಮಾಡುವ ತನಕ ಎಲ್ಲರಿಗೂ ಕೆಲಸದ ಭದ್ರತೆಯನ್ನು ಖಾತ್ರಿ ಪಡಿಸಬೇಕು. ಖಾಯಂ ಮೇತರರ ನೌಕರರನ್ನು ವೇತನ ಆಯೋಗದಡಿ ಪ್ರತ್ಯೇಕ ಕ್ಯಾಟಗಿರಿಯನ್ನು ನಿಗದಿ ಮಾಡಬೇಕು. ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡುವ ಬದಲಿಗೆ ಸರ್ಕಾರ ಸೊಸೈಟಿ ಪರಿಕಲ್ಪನೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಡಲಾಗುತ್ತಿದೆ. ಇದನ್ನು ಕೈಬಿಡಬೇಕು.

ಕೆಲಸದ ಭದ್ರತೆ ಇಲ್ಲದಿರುವ ಒಬ್ಬ ನೌಕರ ಜಿಲ್ಲಾಧಿಕಾರಿಯನ್ನು ಪ್ರಶ್ನೆ ಮಾಡಲು ಸಾಧ್ಯವೇ? ಪ್ರಾಯೋಗಿಕವಾಗಿ ಸಾಧ್ಯತೆ ಇಲ್ಲದಿರುವುದರಿಂದ ಸೊಸೈಟಿಯ ಪರಿಕಲ್ಪನೆಯನ್ನು ಈ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ಇದ್ದರು.