Student Self Harming: ನರ್ಸಿಂಗ್ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ನೇಣು: ಆಡಳಿತ ಮಂಡಳಿ ಕಿರುಕುಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ಕೇರಳದ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ, ಗ್ರೀಷ್ಮಾ ಕೇಸ್ ಅನ್ನು ಹಿಡಿದುಕೊಂಡು ನಿಂದಿಸಲಾಗುತ್ತಿದೆ ಎಂದು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಇದಕ್ಕೆ ಕಾರಣ ಕಾಲೇಜಿನಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ.
![nursing student self harming](https://cdn-vishwavani-prod.hindverse.com/media/images/nursing_student_self_harming.max-1280x720.jpg)
![ಹರೀಶ್ ಕೇರ](https://cdn-vishwavani-prod.hindverse.com/media/images/Harish_Kerargylr_YyRvY8Q.2e16d0ba.fill-100x100.jpg)
ರಾಮನಗರ: ರಾಮನಗರದ (Ramangara news) ದಯಾನಂದ್ ಸಾಗರ್ ಮೆಡಿಕಲ್ ಕಾಲೇಜಿನಲ್ಲಿ (Medical College) 19 ವರ್ಷದ ಕೇರಳದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು (Nursing Student) ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಕಾಲೇಜು ಆಡಳಿತ ಮಂಡಳಿಯ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪಿಸಲಾಗಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದು, (Protest) ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ದೂರದ ಊರು ಕೇರಳದ ಕಣ್ಣೂರಿನಿಂದ ರಾಮನಗರಕ್ಕೆ ನರ್ಸಿಂಗ್ ಕಲಿಯುವುದಕ್ಕಾಗಿ ಬಂದಿದ್ದ ಅನಾಮಿಕ (19) ಹಾಸ್ಟೆಲ್‌ನಲ್ಲಿ ಎಲ್ಲರೊಂದಿಗೂ ಸ್ನೇಹ ಸ್ವಭಾವದಿಂದ ಇದ್ದಳು. ನಿನ್ನೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದಾಳೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಕನಕಪುರ ಬೆಂಗಳೂರು ರಸ್ತೆಯಲ್ಲಿರುವ ದಯಾನಂದ್ ಸಾಗರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆ ಈಗ ಎರಡು ರಾಜ್ಯಗಳ ವಿದ್ಯಾರ್ಥಿಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
ಅನಾಮಿಕ ನಿನ್ನೆ ಕಾಲೇಜಿಗೆ ಬಂದಿರಲಿಲ್ಲ. ಊಟಕ್ಕೂ ಬಂದಿರಲಿಲ್ಲ, ಎಷ್ಟೇ ಕರೆ ಮಾಡಿದರೂ ರೆಸ್ಪಾನ್ಸ್ ಮಾಡಿರಲಿಲ್ಲ. ಇದನ್ನು ಗಮನಿಸಿ ಸಹಪಾಠಿಗಳು ಹಾಸ್ಟೆಲ್ ಕಿಟಕಿಯಲ್ಲಿ ಇಣುಕಿ ನೋಡಿದಾಗ ಅನಾಮಿಕ ನೇಣಿಗೆ ಶರಣಾಗಿದ್ದು ಕಂಡು ಬಂದಿದೆ. ದಯಾನಂದ್ ಸಾಗರ್ ಮೆಡಿಕಲ್ ಕಾಲೇಜಿನ ಮ್ಯಾನೆಜ್‌ಮೆಂಟ್ ಕಿರುಕುಳದಿಂದಲೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಲೇಜಿನ ಪ್ರಿನ್ಸಿಪಾಲ್ ಮಾಡುತ್ತಿದ್ದ ಹಲವು ಹೇಳಿಕೆಗಳಿಂದ ಮಾನಸಿಕವಾಗಿ ಜರ್ಜರಿತಳಾಗಿದ್ದಳು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಕೇರಳದ ಕಣ್ಣೂರಿನಿಂದ ಬಂದಿದ್ದ ಅನಾಮಿಕ ಬಹಳ ಪಾಸಿಟಿವ್ ಆಗಿದ್ದವಳು. ಆದರೆ ಕಾಲೇಜಿನ ಮಂಡಳಿ ಕೇರಳದವರನ್ನು ಕೆಳ ದರ್ಜೆಯ ವ್ಯಕ್ತಿಗಳಂತೆ ನೋಡುತ್ತಾರೆ. ಲಕ್ಷಾಂತರ ಹಣದ ಬೇಡಿಕೆ ಇಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಮೊನ್ನೆಯಷ್ಟೇ ಇಡೀ ದೇಶದಲ್ಲಿ ಸುದ್ದಿ ಮಾಡಿದ ಗ್ರೀಷ್ಮಾ ಕೇಸನ್ನು ಉಲ್ಲೇಖಿಸಿ, ನೀವೆಲ್ಲಾ ಗ್ರೀಷ್ಮಾಳ ರೀತಿ ವಿಷ ಹಾಕುವವರು ಎಂದೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಶಾಂತಂ ಸ್ವೀಟ ರೋಸ್ ಹಾಗೂ ಕ್ಲಾಸ್ ಕೋ ಅರ್ಡಿನೇಟರ್ ಸುಜಿತಾ ಕೂಡ ಕೇರಳ ವಿದ್ಯಾರ್ಥಿಗಳನ್ನು ಎರಡನೇ ದರ್ಜೆ ವ್ಯಕ್ತಿಗಳಂತೆ ನೋಡುತ್ತಾರೆ. ಹೀಗಾಗಿಯೇ ಮಾನಸಿಕವಾಗಿ ನೊಂದಿದ್ದ ಅನಾಮಿಕ ತನ್ನ ಜೀವವನ್ನೇ ಬಲಿ ಕೊಟ್ಟಿದ್ದಾಳೆ ಅಂತ ವಿದ್ಯಾರ್ಥಿಗಳು ಆಕ್ರೋಶಗೊಂಡು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಇದನ್ನೂ ಓದಿ: Physical Abuse: ರಾಯಚೂರಿನಲ್ಲಿ ಹೇಯ ಕೃತ್ಯ, 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ