ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಪಾಕಿಸ್ತಾನದ ಸ್ಟೇಡಿಯಂನಲ್ಲಿ ಲೈಟ್ಸ್‌ ಸರಿಯಿಲ್ಲʼ: ಪಿಸಿಬಿ ವಿರುದ್ಧ ಫ್ಯಾನ್ಸ್‌ ಕಿಡಿ!

ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈ ಮಹತ್ವದ ಟೂರ್ನಿಗೂ ಮುನ್ನ ದೀರ್ಘಾವಧಿ ಬಳಿಕ ಪಾಕಿಸ್ತಾನದಲ್ಲಿ ತ್ರಿಕೋನ ಏಕದಿನ ಸರಣಿ ನಡೆಯುತ್ತಿದೆ. ಶನಿವಾರ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಪಂದ್ಯದಲ್ಲಿ ರಚಿನ್‌ ರವೀಂದ್ರ ಕ್ಯಾಚ್‌ ಪಡೆಯುವ ವೇಳೆ ಚೆಂಡನ್ನು ತಮ್ಮ ಮುಖಕ್ಕೆ ತಗುಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳಪೆ ಲೈಟ್ಸ್‌ ಹಾಕಿದ್ದಾರೆಂದು ಪಿಸಿಬಿಯನ್ನು ಅಭಿಮಾನಿಗಳು ಟೀಕಿಸಿದ್ದಾರೆ.

ರಚಿನ್‌ ರವೀಂದ್ರ ಗಂಭೀರ ಗಾಯ: ಪಿಸಿಬಿ ವಿರುದ್ದ ಫ್ಯಾನ್ಸ್‌ ಆಕ್ರೋಶ!

Rachin Ravindra injury

Profile Ramesh Kote Feb 9, 2025 12:37 PM

ನವದೆಹಲಿ: ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ನಡುವಣ ಏಕದಿನ ತ್ರಿಕೋನ ಸರಣಿಯ ಮೊದಲನೇ ಪಂದ್ಯದಲ್ಲಿ ಪ್ರವಾಸಿ ಆಲ್‌ರೌಂಡರ್‌ ರಚಿನ್‌ ರವೀಂದ್ರ (Rachin Ravindra)ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ಯಾಚ್‌ ಪಡೆಯುವ ಪ್ರಯತ್ನದಲ್ಲಿ ರಚಿನ್‌ ತಮ್ಮ ಮುಖಕ್ಕೆ ಚೆಂಡನ್ನು ಬಲವಾಗಿ ತಗುಲಿಸಿಕೊಂಡಿದ್ದಾರೆ. ಚೆಂಡನ್ನು ಸರಿಯಾಗಿ ಗುರುತಿಸದ ಕಾರಣ ಅವರು ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಇದಕ್ಕೆ ಕಾರಣ ಕಳಪೆ ಲೈಟ್ಸ್‌ ಎಂದು ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸುದೀರ್ಘ ಅವಧಿಯ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದೆ. ಇದಕ್ಕೂ ಮುನ್ನ ಪಾಕಿಸ್ತಾನದಲ್ಲಿ ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ನಡುವೆ ತ್ರಿಕೋನ ಏಕದಿನ ಸರಣಿ ನಡೆಯುತ್ತಿದೆ. ಇದರ ನಡುವೆ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಪಾಕಿಸ್ತಾನ ಕ್ರೀಡಾಂಗಣಗಳು ಸಂಪೂರ್ಣವಾಗಿ ಸಿದ್ದವಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಉತ್ತಮ ಉದಾಹರಣೆ ರಚಿನ್‌ ರವೀಂದ್ರ ಗಾಯಕ್ಕೆ ತುತ್ತಾದ ದುರ್ಘಟನೆ.

Rachin Ravindra injury: ಚೆಂಡು ತಗುಲಿ ಗಂಭೀರ ಗಾಯಕ್ಕೆ ತುತ್ತಾದ ರಚಿನ್‌ ರವೀಂದ್ರ! ವಿಡಿಯೊ

ಏಕದಿನ ತ್ರಿಕೋನ ಸರಣಿಯ ಮೊದಲನೇ ಪಂದ್ಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಶನಿವಾರ ಗಡಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ನೀಡಿದ್ದ 331 ರನ್‌ಗಳ ಗುರಿ ಹಿಂಬಾಲಿಸಿದ್ದ ಪಾಕಿಸ್ತಾನ ತಂಡದ 38ನೇ ಓವರ್‌ನಲ್ಲಿಲ್ಲಿ ಫೀಲ್ಡಿಂಗ್‌ ವೇಳೆ ರಚಿನ್‌ ರವೀಂದ್ರ ಗಾಯಕ್ಕೆ ತುತ್ತಾಗಿದ್ದರು. ಖುಷ್ದಿಲ್‌ ಶಾ ಅವರ ಸ್ಲಾಗ್‌ ಸ್ವೀಪ್‌ ಮಾಡಿದ್ದರು ಹಾಗೂ ಡೀಪ್‌ ಸ್ಕೈರ್‌ ಲೆಗ್‌ನಲ್ಲಿ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿದ್ದ ರಚಿನ್‌ ರವೀಂದ್ರ ಕ್ಯಾಚ್‌ ಪಡೆಯಲು ಪ್ರಯತ್ನ ನಡೆಸಿದ್ದರು. ಆದರೆ, ಚೆಂಡನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗದ ಕಾರಣ ರಚಿನ್‌ ಕ್ಯಾಚ್‌ ಪಡೆಯಲು ಸಾಧ್ಯವಾಗಲಿಲ್ಲ. ಚೆಂಡು ನೇರವಾಗಿ ಮುಖಕ್ಕೆ ಬಡಿಯಿತು.



ಚೆಂಡು ಮುಖಕ್ಕೆ ಬಡಿದ ಬೆನ್ನಲ್ಲೆ ರಚಿನ್‌ ಮುಖದಿಂದ ರಕ್ತ ಸುರಿಯಿತು. ಈ ವೇಳೆ ಕಿವೀಸ್‌ ಆಲ್‌ರೌಂಡರ್‌ ಆಘಾತಕ್ಕೀಡಾದರು. ತಕ್ಷಣ ಮೈದಾನಕ್ಕೆ ಓಡಿ ಬಂದ ಪ್ರವಾಸಿ ತಂಡದ ಫಿಸಿಯೊ, ರಚಿನ್‌ ರವೀಂದ್ರ ಅವರ ಮುಖಕ್ಕೆ ಬಟ್ಟೆ ಹಾಕಿ ಡ್ರೆಸ್ಸಿಂಗ್‌ ರೂಂಗೆ ಕರೆದುಕೊಂಡು ಹೋದರು ಹಾಗೂ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆ ನಡೆದ ಬೆನ್ನಲ್ಲೆ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.



ಪಿಸಿಬಿ ವಿರುದ್ದ ಫ್ಯಾನ್ಸ್‌ ಆಕ್ರೋಶ

"ಕ್ರೀಡಾಂಗಣದಲ್ಲಿನ ಲೈಟ್‌ಗಳನ್ನು ಪಿಸಿಬಿ ಸುಧಾರಣೆ ಮಾಡಬೇಕಾದ ಅಗತ್ಯವಿದೆ. ಲೈಟ್‌ಗಳು ಕಣ್ಣಿಗೆ ಹೊಡೆಯುತ್ತಿದ್ದ ಕಾರಣ ರಚಿನ್‌ ರವೀಂದ್ರ ಚೆಂಡನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಲೇ ಚೆಂಡು ಅವರ ಮುಖಕ್ಕೆ ಬಡಿದಿದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ...." ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.



"ಪಾಕಿಸ್ತಾನ ತಂಡದ ಎಲ್ಲಾ ಆಟಗಾರರಿಗಿಂತ ರಚಿನ್‌ ರವೀಂದ್ರ ಅತ್ಯುತ್ತಮ ಫೀಲ್ಡರ್‌ ಆಗಿದ್ದಾರೆ. ಅವರು ಕ್ಯಾಚ್‌ ಅನ್ನು ಪಡೆಯುತ್ತಿದ್ದ ವೇಳೆ ಚೆಂಡನ್ನು ಸಹ ನನ್ನಿಂದ ನೋಡಲು ಸಾಧ್ಯವಾಗಿರಲಿಲ್ಲ. ಗಡಾಫಿ ಸ್ಟೇಡಿಯಂನ ಲೈಟ್‌ಗಳು ಕಳಪೆಯಾಗಿವೆ," ಎಂದು ಮತ್ತೊಬ್ಬ ಅಭಿಮಾನಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೊದಲನೇ ಪಂದ್ಯ ಗೆದ್ದ ಕಿವೀಸ್‌

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು 330 ರನ್‌ಗಳನ್ನು ಗಳಿಸಿತ್ತು. ಆ ಮೂಲಕ ಎದುರಾಳಿ ಪಾಕಿಸ್ತಾನ ತಂಡಕ್ಕೆ 331 ರನ್‌ಗಳ ಗುರಿಯನ್ನು ನೀಡಿತು. ಬಳಿಕ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ 47.5 ಓವರ್‌ಗಳಿಗೆ 252 ರನ್‌ಗಳಿಗೆ ಆಲ್‌ಔಟ್‌ ಆಗಿ ಸೋಲು ಒಪ್ಪಿಕೊಂಡಿತು.