PAK vs WI: ಹ್ಯಾಟ್ರಿಕ್ ವಿಕೆಟ್ ಪಡೆದು ವಿಶೇಷ ದಾಖಲೆ ಬರೆದ ನೊಮಾನ್ ಅಲಿ!
Noman Ali took Hat-trick against west Indies: ಪಾಕಿಸ್ತಾನ ತಂಡದ ಸ್ಪಿನ್ನರ್ ನೊಮಾನ್ ಅಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಪಾಕಿಸ್ತಾನದ ಮೊದಲ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

Noman Ali Hat-trick Wicket

ಮುಲ್ತಾನ್: ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ (PAK vs WI) ಪಾಕಿಸ್ತಾನ ತಂಡದ ಸ್ಪಿನ್ನರ್ ನೊಮಾನ್ ಅಲಿ ಅವರು ಹ್ಯಾಟ್ರಿಕ್ ವಿಕೆಟ್ (Noman Ali Hat-trick Wicket) ಕಬಳಿಸುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. ಇಲ್ಲಿನ ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲನೇ ದಿನ ಸ್ಪಿನ್ ಮೋಡಿ ಮಾಡಿದ ನೊಮಾನ್ ಅಲಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಮೊದಲ ಪಾಕಿಸ್ತಾನದ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ನೊಮಾನ್ ಅಲಿ ಅವರ ಹ್ಯಾಟ್ರಿಕ್ ವಿಕೆಟ್ ಕಾರಣ ವೆಸ್ಟ್ ಇಂಡೀಸ್ ತಂಡ ಬೆಳಗಿನ ಸೆಷನ್‌ನಲ್ಲಿ 44 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಪಾಕಿಸ್ತಾನ ತಂಡದ ಮೊದಲ ಫಾಸ್ಟ್ ಬೌಲರ್ ಎಂಬ ದಾಖಲೆಯನ್ನು ವಸೀಮ್ ಅಕ್ರಮ್ ಬರೆದಿದ್ದರು. ಇದೀಗ ವಸೀಮ್ ಅಕ್ರಮ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ನೊಮಾನ್ ಅಲಿ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಪಾಕಿಸ್ತಾನದ ಐದನೇ ಬೌಲರ್ ಎನಿಸಿಕೊಂಡಿದ್ದಾರೆ. ನೊಮಾನ್ ಅಲಿಗೂ ಮುನ್ನ ನಸೀಮ್ ಶಾ ಅವರು 2020ರಲ್ಲಿ ಬಾಂಗ್ಲಾದೇಶ ವಿರುದ್ಧ ರಾವಲ್ಪಿಂಡಿಯಲ್ಲಿ ಹ್ಯಾಟ್ರಿಕ್ ವಿಕೆಟ್‌ಗಳನ್ನು ಕಿತ್ತಿದ್ದರು.
IND vs ENG: ಪಾಕಿಸ್ತಾನದ ಗೆಲುವಿನ ದಾಖಲೆ ಸರಿಗಟ್ಟಿದ ಭಾರತ
ಎರಡನೇ ಟೆಸ್ಟ್ ಪಂದ್ಯದ ಮೊದಲನೇ ದಿ ಎರಡನೇ ಓವರ್‌ನಲ್ಲಿ ನಮನ್ ಅಲಿ ಅವರು ವೆಸ್ಟ್ ಇಂಡೀಸ್ ತಂಡದ ನಾಯಕ ಕ್ರೈಗ್ ಬ್ರಾಥ್‌ವೇಟ್ ಅವರ ವಿಕೆಟ್ ಅನ್ನು ಕಿತ್ತರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಮಿಕ್ಲೀ ಲೂಯಿಸ್ ಅವರ ವಿಕೆಟ್ ಅನ್ನು ಕಳೆದುಕೊಂಡಿತ್ತು. ನಂತರ ಪಾಕಿಸ್ತಾನ ತಂಡದ ಪರ ಅಗ್ರ ದರ್ಜೆಯ ಸ್ಪಿನ್ನರ್‌ಗಳಾದ ಸಾಜಿದ್ ಖಾನ್ ಮತ್ತು ನೊಮಾನ್ ಅಲಿ ವಿಂಡೀಸ್ ತಂಡದ ಮೇಲೆ ಪ್ರಾಬಲ್ಯ ಸಾಧಿಸಿದರು.
ಪ್ರಥಮ ಇನಿಂಗ್ಸ್‌ನ 12ನೇ ಓವರ್‌ನ ಮೊದಲನೇ ಎಸೆತದಲ್ಲಿ ಜಸ್ಟಿನ್ ಗ್ರೇವ್ಸ್, ಎರಡನೇ ಎಸೆತದಲ್ಲಿ ಟೆವಿನ್ ಇಮ್ಲಾಚ್ ಹಾಗೂ ಮೂರನೇ ಎಸೆತದಲ್ಲಿ ಕೆವ್ನಿ ಸಿನ್ಲೈರ್ ಅವರನ್ನು ಔಟ್ ಮಾಡುವ ಮೂಲಕ ನೊಮಾನ್ ಅಲಿ ಅವರು ಹ್ಯಾಟ್ರಿಕ್ ವಿಕೆಟ್ ಅನ್ನು ಪೂರ್ಣಗೊಳಿಸಿದರು. ಜಸ್ಟಿನ್ ಗ್ರೇವ್ಸ್ ಅವರು ಎರಡನೇ ಸ್ಲಿಪ್‌ನಲ್ಲಿ ಕ್ಯಾಚ್ ಕೊಟ್ಟರೆ, ನಂತರ ಟೆವಿನ್ ಇಮ್ಲಾಚ್ ಅವರನ್ನು ಅಲಿ ಎಲ್‌ಬಿಡಬ್ಲ್ಯುಗೆ ಬಲೆಗೆ ಬೀಳಿಸಿದರು. ನಂತರ ಕೆವ್ನಿ ಸಿನ್ಲೈರ್ ಅವರು ಗಲ್ಲಿಯಲ್ಲಿ ಬಾಬರ್ ಆಝಮ್‌ಗೆ ಕ್ಯಾಚ್ ಕೊಟ್ಟರು.
𝐎𝐧𝐞 𝐢𝐧𝐜𝐫𝐞𝐝𝐢𝐛𝐥𝐞 𝐟𝐞𝐚𝐭! 😍
— Pakistan Cricket (@TheRealPCB) January 25, 2025
Hat-trick hero Noman Ali makes history in Multan 🙌#PAKvWI | #RedBallRumble pic.twitter.com/2xRLeYpVXl
ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಪಾಕಿಸ್ತಾನಿ ಬೌಲರ್‌ಗಳು
ವಸೀಮ್ ಅಕ್ರಮ್ - (1999 ರಲ್ಲಿ ಲಾಹೋರ್‌ನಲ್ಲಿ) ಪಾಕಿಸ್ತಾನ vs ಶ್ರೀಲಂಕಾ
ವಾಸಿಂ ಅಕ್ರಮ್ - (1999 ರಲ್ಲಿ ಢಾಕಾದಲ್ಲಿ) ಪಾಕಿಸ್ತಾನ vs ಶ್ರೀಲಂಕಾ
ಅಬ್ದುಲ್ ರಜಾಕ್ - (2000 ರಲ್ಲಿ ಗಾಲೆಯಲ್ಲಿ) ಪಾಕಿಸ್ತಾನ vs ಶ್ರೀಲಂಕಾ
ಮೊಹಮ್ಮದ್ ಸಮಿ - (2002 ರಲ್ಲಿ ಲಾಹೋರ್‌ನಲ್ಲಿ) ಪಾಕಿಸ್ತಾನ vs ಶ್ರೀಲಂಕಾ
ನಸೀಮ್ ಶಾ- (2020 ರಲ್ಲಿ ರಾವಲ್ಪಿಂಡಿಯಲ್ಲಿ) ಪಾಕಿಸ್ತಾನ vs ಬಾಂಗ್ಲಾದೇಶ
ನೋಮನ್ ಅಲಿ - (2025ರಲ್ಲಿ ಮುಲ್ತಾನ್‌ನಲ್ಲಿ) ಪಾಕಿಸ್ತಾನ vs ವೆಸ್ಟ್ ಇಂಡೀಸ್
6 ವಿಕೆಟ್ ಸಾಧನೆ ಮಾಡಿದ ನೊಮಾನ್ ಅಲಿ
ಇನ್ನು ಪ್ರಥಮ ಇನಿಂಗ್ಸ್‌ನಲ್ಲಿ ಬೌಲ್ ಮಾಡಿದ 15.1 ಓವರ್‌ಗಳಲ್ಲಿ 41 ರನ್ ನೀಡಿ 6 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಇದರ ಪರಿಣಾಮವಾಗಿ ವೆಸ್ಟ್ ಇಂಡೀಸ್ ತಂಡ 41.1 ಓವರ್‌ಗಳಿಗೆ 163 ರನ್‌ಗಳಿಗೆ ಆಲ್‌ಔಟ್ ಆಯಿತು. ಇವರಿಗೆ ಸಾಥ್ ನೀಡಿದ್ದ ಸಾಜಿದ್ ಖಾನ್ ಎರಡು ವಿಕೆಟ್ ಕಿತ್ತರೆ, ಖಾಸಿಫ್ ಅಲಿ ಮತ್ತು ಅಬ್ರಾದ್ ಅಹ್ಮದ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ.