IND vs ENG: ಪಾಕಿಸ್ತಾನದ ಗೆಲುವಿನ ದಾಖಲೆ ಸರಿಗಟ್ಟಿದ ಭಾರತ
IND vs ENG: ಭಾರತ ತಂಡ ಈಡನ್ ಗಾರ್ಡನ್ಸ್‌ನಲ್ಲಿ 7ನೇ ಟಿ20 ಗೆಲುವು ದಾಖಲಿಸುವ ಮೂಲಕ ಒಂದೇ ತಾಣದಲ್ಲಿ ಸತತ ಗೆಲುವು ಸಾಧಿಸಿದ ವಿಶ್ವದ ಜಂಟಿ ಎರಡನೇ ತಂಡ ಎನಿಸಿಕೊಂಡಿತು
ಕೋಲ್ಕತ್ತಾ: ಬುಧವಾರ ರಾತ್ರಿ ನಡೆದಿದ್ದ ಇಂಗ್ಲೆಂಡ್(IND vs ENG) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಅಂತರದ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡದ ದಾಖಲೆಯೊಂದನ್ನು ಭಾರತ ಸರಿಗಟ್ಟಿದೆ.
ಭಾರತ ತಂಡ ಈಡನ್ ಗಾರ್ಡನ್ಸ್‌ನಲ್ಲಿ 7ನೇ ಟಿ20 ಗೆಲುವು ದಾಖಲಿಸುವ ಮೂಲಕ ಒಂದೇ ತಾಣದಲ್ಲಿ ಸತತ ಗೆಲುವು ಸಾಧಿಸಿದ ವಿಶ್ವದ ಜಂಟಿ ಎರಡನೇ ತಂಡ ಎನಿಸಿಕೊಂಡಿತು. ಪಾಕಿಸ್ತಾನ ಕರಾಚಿಯಲ್ಲಿ ಸತತ 7 ಟಿ20 ಗೆಲುವು ಸಾಧಿಸಿತ್ತು. ಅಗ್ರಸ್ಥಾನದಲ್ಲಿ ಇಂಗ್ಲೆಂಡ್ ತಂಡವಿದೆ. ಕಾರ್ಡಿಫ್‌ನಲ್ಲಿ ಸತತ 8 ಗೆಲುವು ದಾಖಲಿಸಿತ್ತು.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಿನ್ನೆ(ಬುಧವಾರ) ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಜಾಸ್ ಬಟ್ಲರ್ ಅವರ ಏಕಾಂಗಿ ಹೋರಾಟ ನೆರವಿನಿಂದ 133 ರನ್‌ಗಳ ಸಾಧಾರಣ ಮೊತ್ತ ಬಾರಿಸಿ ಸವಾಲೊಡ್ಡಿತ್ತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ ಅಭಿಷೇಕ್ ಶರ್ಮಾ (79 ರನ್) ಸ್ಪೋಟಕ ಅರ್ಧಶತಕದ ಬಲದಿಂದ 12.5 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವಿನ ದಡ ಸೇರಿತು.
𝗔 𝗱𝗼𝗺𝗶𝗻𝗮𝘁𝗶𝗻𝗴 𝘀𝗵𝗼𝘄 𝗮𝘁 𝘁𝗵𝗲 𝗘𝗱𝗲𝗻 𝗚𝗮𝗿𝗱𝗲𝗻𝘀! 💪 💪#TeamIndia off to a flying start in the T20I series, sealing a 7⃣-wicket win! 👏 👏
— BCCI (@BCCI) January 22, 2025
Follow The Match ▶️ https://t.co/4jwTIC5zzs#INDvENG | @IDFCFIRSTBank pic.twitter.com/hoUcLWCEIP
ಭಾರತ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.
ಇದನ್ನೂ ಓದಿ IND vs ENG: ರಾಹುಲ್ ದಾಖಲೆ ಮುರಿದ ಅಭಿಷೇಕ್
ಸ್ಕೋರ್ ವಿವರ
ಇಂಗ್ಲೆಂಡ್: 20 ಓವರ್‌ಗಳಿಗೆ 132-10 (ಜೋಸ್ ಬಟ್ಲರ್ 68, ಹ್ಯಾರಿ ಬ್ರೂಕ್ 17; ವರುಣ್ ಚಕ್ರವರ್ತಿ 23ಕ್ಕೆ 3, ಅರ್ಷದೀಪ್ ಸಿಂಗ್ 17ಕ್ಕೆ 2, ಅಕ್ಷರ್ ಪಟೇಲ್ 22ಕ್ಕೆ 2, ಹಾರ್ದಿಕ್ ಪಾಂಡ್ಯ 42ಕ್ಕೆ 2)
ಭಾರತ: 12.5 ಓವರ್‌ಗಳಿಗೆ 133-3 (ಅಭಿಷೇಕ್ ಶರ್ಮಾ 79, ಸಂಜು ಸ್ಯಾಮ್ಸನ್ 26; ಜೋಫ್ರಾ ಆರ್ಚರ್ 22ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ವರುಣ್ ಚಕ್ರವರ್ತಿ