Pavithra Gowda: ಸೋಶಿಯಲ್ ಮೀಡಿಯಾಗೆ ಪವಿತ್ರಾ ಗೌಡ ಕಮ್ ಬ್ಯಾಕ್, ಜೈಲಿನಿಂದ ಬಂದ ನಂತರ ಮೊದಲ ಪೋಸ್ಟ್
ಜೈಲಿನಿಂದ ಬಂದ ಬಳಿಕ ಇದೇ ಮೊದಲ ಬಾರಿಗೆ ಮಾಡಿರುವ ಇನ್‌ಸ್ಟಾ ಪೋಸ್ಟ್‌ನಲ್ಲಿ, ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಬಗ್ಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು: ಬರೋಬ್ಬರಿ ಏಳು ತಿಂಗಳ ಕಾಲ ಜೈಲಿನಲ್ಲಿದ್ದ ಪವಿತ್ರಾ ಗೌಡ (Pavithra Gowda), ಜಾಮೀನು (Bail) ದೊರೆತು ಹೊರಬಂದ ಬಳಿಕ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ (Instagram) ಅಕೌಂಟ್‌ನಲ್ಲಿ ತಮ್ಮ ಮೊದಲ ಪೋಸ್ಟ್ ಮಾಡಿದ್ದಾರೆ.
ರೇಣುಕಾ ಸ್ವಾಮಿ ಮರ್ಡರ್ ಕೇಸ್‌ನಲ್ಲಿ ಜೈಲಿನಲ್ಲಿದ್ದ ನಟ ದರ್ಶನ್ (Darshan), ಜಾಮೀನು ದೊರೆತು ಹೊರಬಂದ ಬಳಿಕ ನಿನ್ನೆ ರಾಯಲ್ ಸಿನಿಮಾ ನೋಡಿದ್ದರು. ತಮ್ಮ ಶೂಟಿಂಗ್ ಕೆಲಸಗಳಿಗೆ ಮರಳುವ ಸೂಚನೆ ತೋರಿಸಿದ್ದಾರೆ. ಇದೀಗ ಪವಿತ್ರಾ ಗೌಡ ಕೂಡ ತಮ್ಮ ಕೆಲಸಕ್ಕೆ ಮರಳುವ ಮನ್ಸೂಚನೆ ನೀಡಿದ್ದಾರೆ. 2024ರ ಮೇ 22ರಂದು ಪವಿತ್ರಾ ಕೊನೆಯದಾಗಿ ಇನ್‌ಸ್ಟಾ ಪೋಸ್ಟ್ ಮಾಡಿದ್ದರು. ಬರೋಬ್ಬರಿ 7 ತಿಂಗಳ ಬಳಿಕ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಾರೆ.
ಜೈಲಿನಿಂದ ಬಂದ ಬಳಿಕ ಇದೇ ಮೊದಲ ಬಾರಿಗೆ ಮಾಡಿರುವ ಇನ್‌ಸ್ಟಾ ಪೋಸ್ಟ್‌ನಲ್ಲಿ, ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಬಗ್ಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಪವಿತ್ರಾ ಗೌಡ ಒಡೆತನದ ರೆಡ್ ಕಾರ್ಪೆಟ್ ಸ್ಟುಡಿಯೋದ ಹೊಸ ವೆಂಚರ್ ಬಗ್ಗೆ ಸುಳಿವು ನೀಡಿದ್ದಾರೆ. ಇದು ಕಾಸ್ಟ್ಯೂಮ್ ಡಿಸೈನಿಂಗ್ ಸ್ಟುಡಿಯೋ ಆಗಿದೆ.
ʼಸ್ಟೇ ಟ್ಯೂನ್ಡ್ʼ ಅಂತ ಪೋಸ್ಟ್ ಮಾಡಿರೋ ಪವಿತ್ರಾ ಗೌಡ, ತಮ್ಮ ಕೆಲಸವನ್ನು ಮುಂದುವರಿಸುವ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ಒಂದು ಕಡೆ ದರ್ಶನ್ ಆಸ್ಪತ್ರೆ, ಫ್ಯಾಮಿಲಿ, ಫಾರ್ಮ್ ಹೌಸ್, ಡೆವಿಲ್ ಚಿತ್ರ, ರಾಯಲ್ ಚಿತ್ರ ಹೀಗೆ ಬ್ಯುಸಿಯಾಗಿದ್ದರೆ, ಇನ್ನೊಂದು ಕಡೆ ಪವಿತ್ರಾ ಗೌಡ ಕೂಡ ಬ್ಯುಸಿನೆಸ್ ಕಡೆ ಗಮನ ಹರಿಸಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.