ರಾಯಚೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Pavithra Gowda) ಬಂಧನವಾಗಿ ಜೈಲಿನಿಂದ ಬಿಡುಗಡೆಯಾದ ಬಳಿಕ ಪವಿತ್ರಾ ಗೌಡ ಟೆಂಪಲ್ ರನ್ ಮುಂದುವರಿಸಿದ್ದಾರೆ. ಇತ್ತೀಚೆಗ ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬೆನ್ನಲ್ಲೇ ಇದೀಗ ಮಗಳೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಮಗಳು ಖುಷಿ ಜತೆ ನಟಿ ಪವಿತ್ರ ಗೌಡ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ರಾಘವೇಂದ್ರಸ್ವಾಮಿ ದರ್ಶನ ಪಡೆದ ಬಳಿಕ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ಹಂಚಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಪವಿತ್ರಾ ಗೌಡ ಆರು ತಿಂಗಳು ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದರು. ಡಿ.17ರಂದು ಜಾಮೀನಿನ ಮೇಲೆ ಹೊರ ಬಂದಾಗಿನಿಂದಲೂ ಹಲವು ದೇವಾಲಯಗಳಿಗೆ ಪವಿತ್ರಾ ಗೌಡ ಭೇಟಿ ನೀಡುತ್ತಲೇ ಇದ್ದಾರೆ. ಕುಂಭಮೇಳಕ್ಕೆ ಭೇಟಿ ನೀಡಿದ ಬಳಿಕ ಪವಿತ್ರಾ ಗೌಡ ಅವರ ಟೆಂಪಲ್ ರನ್ ಮುಂದುವರಿದಿದೆ.
ವಿವಿಧ ದೇಗುಲಗಳಿಗೆ ಪವಿತ್ರಾ ಗೌಡ ಭೇಟಿ ನೀಡಿ ತಮಗೆ ಬಂದಿರುವ ಸಂಕಷ್ಟಗಳನ್ನು ದೂರ ಮಾಡುವಂತೆ ಪ್ರಾರ್ಥಿಸುತ್ತಿದ್ದಾರೆ. ಈ ಮೊದಲು ನಿಮಿಷಾಂಭ ದೇವಾಲಯಕ್ಕೆ ಪವಿತ್ರಾ ಗೌಡ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದರು. ನಂತರ ಬನಶಂಕರಿ ದೇಗುಲಕ್ಕೆ ಭೇಟಿ ನೀಡಿದ್ದರು. ಅದರಂತೆ ಇದೀಗ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Junior Movie: ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ; ʼಜೂನಿಯರ್ʼ ರಿಲೀಸ್ ಡೇಟ್ ಅನೌನ್ಸ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಆರೋಪಿಗಳಿಗೆ ರಾಜ್ಯ ಬಿಟ್ಟು ಹೋಗಬೇಕಾದರೆ ಅನುಮತಿ ಬೇಕೇ ಬೇಕು. ಈ ಹಿಂದೆ ಪವಿತ್ರಾ ಗೌಡ ಕೋರ್ಟ್ ಅನುಮತಿ ಪಡೆದು ಅನ್ಯ ರಾಜ್ಯಕ್ಕೆ ಹೋಗಿ ಬ್ಯುಸಿನೆಸ್ ಕೆಲಸಗಳನ್ನು ಮುಗಿಸಿಕೊಂಡು ಬಂದಿದ್ದರು. ಇತ್ತೀಚೆಗೆ ಮತ್ತೊಮ್ಮೆ ಹೊರರಾಜ್ಯಕ್ಕೆ ತೆರಳಲು ಆರೋಪಿ ಪವಿತ್ರಗೌಡ ಅರ್ಜಿ ಸಲ್ಲಿಸಿದ್ದರು. ಬ್ಯುಸಿನೆಸ್ ಸಂಬಂಧ ನಾಲ್ಕು ರಾಜ್ಯಗಳಿಗೆ ತೆರಳಲು ಅನುಮತಿ ಕೋರಿ ಪವಿತ್ರಾ ಗೌಡ ಅವರು ಅರ್ಜಿ ಸಲ್ಲಿಸಿದ್ದರು. ಕೋಲ್ಕತಾ, ಸೂರತ್, ಮುಂಬೈ, ಗುಜರಾತ್, ಮಂತ್ರಾಲಯಕ್ಕೆ ತೆರಳಲು ಅರ್ಜಿ ಸಲ್ಲಿಸಿದ್ದರು. ಹೀಗಾಗಿ 57ನೇ ಸಿಸಿಹೆಚ್ ಕೋರ್ಟ್ ಅರ್ಜಿ ಪುರಸ್ಕರಿಸಿ ಪವಿತ್ರಾ ಗೌಡ ಪ್ರಯಾಣಕ್ಕೆ ಅನುಮತಿ ನೀಡಿತ್ತು. ಮೇ 5 ರಿಂದ 19 ರವರೆಗೆ ಪವಿತ್ರಾ ಗೌಡ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ.