ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Junior Movie: ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್‌ ಎಂಟ್ರಿ; ʼಜೂನಿಯರ್‌ʼ ರಿಲೀಸ್‌ ಡೇಟ್‌ ಅನೌನ್ಸ್‌

Kireeti: ವರ್ಷದ ಹಿಂದೆಯೇ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಎಸ್.ಎಸ್.ರಾಜಮೌಳಿ ಕ್ಲ್ಯಾಪ್ ಮಾಡಿ ಕಿರೀಟಿ ಹೊಸ ಪಯಣಕ್ಕೆ ಶುಭ ಹಾರೈಸಿದ್ದರು. ಆ ಮೂಲಕ ಸ್ಯಾಂಡಲ್‌ವುಡ್‌ಗೆ ಹೊಸ ನಾಯಕನ ಆಗಮನವಾಗಿತ್ತು. ಚಿತ್ರಕ್ಕೆ 'ಜೂನಿಯರ್' ಎಂಬ ಟೈಟಲ್‌ ಕೂಡ ಫಿಕ್ಸ್‌ ಆಗಿದ್ದು, ಇದೀಗ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಜು. 18ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್‌ ಎಂಟ್ರಿ

Profile Ramesh B May 15, 2025 2:23 PM

ಬೆಂಗಳೂರು: ವರ್ಷದ ಹಿಂದೆಯೇ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ (Kireeti) ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಎಸ್.ಎಸ್.ರಾಜಮೌಳಿ ಕ್ಲ್ಯಾಪ್ ಮಾಡಿ ಕಿರೀಟಿ ಹೊಸ ಪಯಣಕ್ಕೆ ಶುಭ ಹಾರೈಸಿದ್ದರು. ಆ ಮೂಲಕ ಸ್ಯಾಂಡಲ್‌ವುಡ್‌ಗೆ ಹೊಸ ನಾಯಕನ ಆಗಮನವಾಗಿತ್ತು. ಚಿತ್ರಕ್ಕೆ 'ಜೂನಿಯರ್' (Junior Movie) ಎಂಬ ಟೈಟಲ್‌ ಕೂಡ ಫಿಕ್ಸ್‌ ಆಗಿತ್ತು. ಆದರೆ ಅದಾದ ಬಳಿಕ ಸಿನಿಮಾ ಕುರಿತಾಗಿ ಯಾವುದೇ ಸುದ್ದಿಯೇ ಇರಲಿಲ್ಲ. ಇದೀಗ ಚಿತ್ರತಂಡ ಸದ್ದಿಲ್ಲದೆ ಶೂಟಿಂಗ್‌ ಮುಗಿಸಿ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ.

ಕಿರೀಟಿ ನಾಯಕನಾಗಿ ಚಿತ್ರರಂಗಕ್ಕೆ ಚೊಚ್ಚಲ ಹೆಜ್ಜೆ ಇಟ್ಟಿರುವ ʼಜೂನಿಯರ್ʼ ಸಿನಿಮಾ ತೆರೆಗೆ ಬರುವ ದಿನಾಂಕ‌ ನಿಗದಿಯಾಗಿದೆ. ಜು. 18ಕ್ಕೆ ʼಜೂನಿಯರ್ʼ ಚಿತ್ರ ಬಿಡುಗಡೆಯಾಗಲಿದೆ.

ಕಿರೀಟಿ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌:

ಈ ಸುದ್ದಿಯನ್ನೂ ಓದಿ: Kannada actor Upendra: ರಿಯಲ್ ಸ್ಟಾರ್ ಉಪೇಂದ್ರ ಜೊತೆ ಕೈ ಜೋಡಿಸಿದ ʻಪುಷ್ಪಾʼ ನಿರ್ಮಾಪಕರು

ಪಂಚ ಭಾಷೆಯಲ್ಲಿ ರಿಲೀಸ್

ಕಿರೀಟಿ ನಟಿಸುತ್ತಿರುವ ಮೊದಲ ಸಿನಿಮಾ ಜೂನಿಯರ್‌ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ʼಜೂನಿಯರ್ʼ ಸಿನಿಮಾ ರಿಲೀಸ್ ಆಗಲಿದೆ.

ಈ ಹಿಂದೆ 'ಮಾಯಾ ಬಜಾರ್' ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ʼಜೂನಿಯರ್ʼ ಸಿನಿಮಾ ತಯಾರಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿಗ್ ಬಜೆಟ್‌ನಲ್ಲಿ ಮೂಡಿ ಬಂದಿದೆ. ಬಹುದೊಡ್ಡ ಹಾಗೂ ಸ್ಟಾರ್ ತಾರಾಗಣ ಈ ಸಿನಿಮಾದ ಮತ್ತೊಂದು ಹೈಲೈಟ್.

'ಕ್ರೇಜಿಸ್ಟಾರ್' ರವಿಚಂದ್ರನ್, ಬಹು ಭಾಷಾ ತಾರೆ ಜೆನಿಲಿಯಾ ರಿತೇಶ್ ದೇಶ್‌ಮುಖ್ ಜೂನಿಯರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಕಿರೀಟಿಗೆ ಜೋಡಿಯಾಗಿ ನಟಿ ಶ್ರೀಲೀಲಾ ಸಾಥ್ ಕೊಟ್ಟಿದ್ದಾರೆ. ಜೂನಿಯರ್ ಸಿನಿಮಾದ ತಾಂತ್ರಿಕ ಬಳಗ ಶ್ರೀಮಂತಿಕೆಯಿಂದ ಕೂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, 'ಬಾಹುಬಲಿ' ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.

ಸೌಂಡ್ ಮಾಡಿದ್ದ ಇಂಟ್ರೂಡಕ್ಷನ್ ಟೀಸರ್

'ಕಿರೀಟಿ' ಅವರನ್ನು ಇಂಟ್ರಡ್ಯೂಸ್ ಮಾಡಲು ಟೀಸರ್ ಒಂದನ್ನು ರಿಲೀಸ್ ಮಾಡಲಾಗಿತ್ತು. ಈ ಟೀಸರ್‌ನಲ್ಲಿ ಗಮನ ಸೆಳೆದಿತ್ತು.

ಮೇ 19ಕ್ಕೆ ಮೊದಲ ಹಾಡು ರಿಲೀಸ್

ʼಜೂನಿಯರ್ʼ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ಚಿತ್ರತಂಡ ಪ್ರಚಾರದ ಕಾರ್ಯಕ್ಕೂ ಪ್ಲ್ಯಾನ್ ಹಾಕಿಕೊಂಡಿದೆ. ಮೇ 19ಕ್ಕೆ ಮೊದಲ ಹಾಡು ರಿಲೀಸ್ ಮಾಡಿ ಚಿತ್ರತಂಡ ಪ್ರಮೋಷನ್‌ಗೆ ಕಿಕ್ ಸ್ಟಾರ್ಟ್ ಕೊಡಲಿದೆ.

ಸ್ಯಾಂಡಲ್‌ವುಡ್‌ಗೆ ಶ್ರೀಲೀಲಾ ಕಂಬ್ಯಾಕ್‌

ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಕನ್ನಡ, ತೆಲುಗು ಭಾಷೆಗಳಲ್ಲಿ ತಯಾರಾಗಿರುವ ʼಜೂನಿಯರ್‌ʼ ಸಿನಿಮಾ ಮೂಲಕ ಅವರು ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಬಹು ವರ್ಷಗಳ ಬಳಿಕ ಜೆನಿಲಿಯಾ ಕೂಡ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.