Police Firing: ಬೆಂಗಳೂರಿನಲ್ಲಿ ಪೊಲೀಸ್ ಶೂಟೌಟ್, ಕೊಲೆ ಆರೋಪಿಯ ಕಾಲಿಗೆ ಗುಂಡು
ಕೊಲೆ ಆರೋಪಿ, ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಮೇಲೆ ಸರ್ಜಾಪುರ ಪೊಲೀಸರು ಶೂಟ್ ಮಾಡಿ ದೊಮ್ಮಸಂದ್ರದ ಬಳಿ ಬಂಧಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗುಂಡಿನ (Police Firing) ಮೊರೆತ ಕೇಳಿಸಿದೆ. ಕೊಲೆ ಆರೋಪಿ (Murder Culprit) ಹಾಗೂ ರೌಡಿಶೀಟರ್ (Rowdy Sheeter)ಮೇಲೆ ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣೆಯ ಪೊಲೀಸರು ಫೈರಿಂಗ್ ಮಾಡಿ ಆರೆಸ್ಟ್ ಮಾಡಿರುವ ಘಟನೆ ಬೆಂಗಳೂರು (Bengaluru Crime news) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.
ಕೊಲೆ ಆರೋಪಿ, ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಮೇಲೆ ಸರ್ಜಾಪುರ ಪೊಲೀಸರು ಶೂಟ್ ಮಾಡಿ ದೊಮ್ಮಸಂದ್ರದ ಬಳಿ ಬಂಧಿಸಿದ್ದಾರೆ. ಬೇರೊಬ್ಬ ರೌಡಿಶೀಟರ್ ವೆಂಕಟೇಶ್ ಎಂಬಾತನ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಜನವರಿ 28ರ ರಾತ್ರಿ ಮಾಜಿ ರೌಡಿಶೀಟರ್ ವೆಂಕಟೇಶ್ ಅಲಿಯಾಸ್ ವೆಂಕಿ ಎಂಬಾತನನ್ನು ಶ್ರೀನಿವಾಸ್ ಮತ್ತು ಗ್ಯಾಂಗ್ ಕೊಲೆ ಮಾಡಿತ್ತು. ಬರ್ಬರವಾಗಿ ಹತ್ಯೆ ಮಾಡಿ ಶ್ರೀನಿವಾಸ್ ಮತ್ತು ಗ್ಯಾಂಗ್ ಪರಾರಿಯಾಗಿತ್ತು. ದೊಮ್ಮಸಂದ್ರದಲ್ಲಿ ರೌಡಿಶೀಟರ್ ಶ್ರೀನಿವಾಸ್ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಲು ತೆರಳಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಶ್ರೀನಿವಾಸ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಕಾನ್ಸ್ಟೇಬಲ್ ಇರ್ಫಾನ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಕಾಲಿಗೆ ಇನ್ಸ್ಪೆಕ್ಟರ್ ನವೀನ್ ಗುಂಡು ಹಾರಿಸಿದ್ದಾರೆ. ರೌಡಿಶೀಟರ್ ಶ್ರೀನಿವಾಸ್ ಗೆ ಗುಂಡು ಹಾರಿಸಿ ಸರ್ಜಾಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Self Harming: ಗೆಳೆಯ ಮೋಸ ಮಾಡಿದನೆಂದು ಬರೆದಿಟ್ಟು ಯುವತಿ ಆತ್ಮಹತ್ಯೆ