Daali Dhananjay: ಡಾಲಿ ಮದುವೆ ಆಮಂತ್ರಣ ಪತ್ರಕ್ಕೆ ಫಿದಾ ಆದ ಅಂಚೆ ಇಲಾಖೆ, ಸ್ಪೆಶಲ್ ಗಿಫ್ಟ್ ನೀಡಿ ಹಾರೈಕೆ
ಡಾಲಿ ಧನಂಜಯ ಸ್ವತಃ ತಮ್ಮ ಕೈ ಬರವಣಿಗೆಯಲ್ಲಿ ಇನ್‌ಲ್ಯಾಂಡ್ ಲೆಟರ್‌ನಲ್ಲಿ ಆಹ್ವಾನ ಪತ್ರಿಕೆ ಬರೆದು ಅದನ್ನು ಮುದ್ರಿಸಿ ಹಂಚಿದ್ದರು. ಇದೀಗ ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ಮೆಚ್ಚಿ ಧನಂಜಯ್-ಧನ್ಯತಾಗೆ ಅಂಚೆ ಇಲಾಖೆ ಸ್ಪೆಷಲ್ ಉಡುಗೊರೆ ನೀಡಿದೆ.

ಡಾಲಿ ಧನಂಜಯ್‌ಗೆ ವಿಶೇಷ ಅಂಚೆ ಸ್ಟಾಂಪ್ ಉಡುಗೊರೆ

ಬೆಂಗಳೂರು: ಸ್ಯಾಂಡಲ್‌ವುಡ್ (Sandalwood) ನಟ ಡಾಲಿ ಧನಂಜಯ್ (Daali Dhananjay) ದಾಂಪತ್ಯ (Marriage) ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್‌ಲ್ಯಾಂಡ್ ಲೆಟರ್ (inland letter) ಮಾದರಿಯ ಧನಂಜಯ್ ಮದುವೆ ಆಮಂತ್ರಣ ಪತ್ರಿಕೆಯನ್ನು ಅಂಚೆ ಇಲಾಖೆ (postal department) ಮೆಚ್ಚಿಕೊಂಡಿದೆಯಲ್ಲದೆ ಧನಂಜಯ್- ಧನ್ಯತಾ ದಂಪತಿಗೆ ವಿಶೇಷ ಉಡುಗೊರೆ ನೀಡಿದೆ.
ಡಾಲಿ ಧನಂಜಯ ಅವರ ಅಂಚೆ ಪತ್ರದ ಮಾದರಿಯ ಆಹ್ವಾನ ಪತ್ರಿಕೆ ವ್ಯಾಪಕ ವೈರಲ್ ಆಗಿತ್ತು. ಎಲ್ಲೆಡೆ ಪ್ರಶಂಸೆ ಗಳಿಸಿತ್ತು. ಡಾಲಿ ಧನಂಜಯ ಸ್ವತಃ ತಮ್ಮ ಕೈ ಬರವಣಿಗೆಯಲ್ಲಿ ಆಹ್ವಾನ ಪತ್ರಿಕೆ ಬರೆದು ಅದನ್ನು ಮುದ್ರಿಸಿ ಹಂಚಿದ್ದರು. ಇದೀಗ ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ಮೆಚ್ಚಿ ಧನಂಜಯ್-ಧನ್ಯತಾಗೆ ಅಂಚೆ ಇಲಾಖೆ ಸ್ಪೆಷಲ್ ಉಡುಗೊರೆ ನೀಡಿದೆ.
ಧನಂಜಯ್- ಧನ್ಯತಾ ಮದುವೆಗೆ ಇಲಾಖೆ ವಿಶೇಷ ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದೆ. ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷವಾಗಿರುವ 12 ಸ್ಟ್ಯಾಂಪ್ ಗಳನ್ನ ಉಡುಗೊರೆಯಾಗಿ ನೀಡಿದೆ. ಮೈಸೂರು ಅಂಚೆ ವಿಭಾಗದ ಅಧಿಕಾರಿಗಳು ಧನಂಜಯ್ ಅವರನ್ನು ಭೇಟಿಯಾಗಿ ಗಿಫ್ಟ್ ನೀಡಿದ್ದಾರೆ.
ವಿಶೇಷ ಸ್ಟ್ಯಾಂಪ್‌ನಲ್ಲಿ ಧನಂಜಯ್ ಹಾಗೂ ಧನ್ಯತಾ ಅವರ ಫೋಟೋಗಳನ್ನು ಬಳಸಲಾಗಿದೆ. ಇನ್ ಲ್ಯಾಂಡ್ ಲೆಟರ್ ಮಾದರಿಯ ಆಮಂತ್ರಣದ ಪತ್ರಿಕೆ ಹಲವರಿಗೆ ಮಾದರಿಯಾಗಿದೆ. ನಿಮ್ಮ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೆಟರ್‌ಗಳಿಗೆ ಬೇಡಿಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಮ್ಮ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೇಟರ್‌ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್ ಲ್ಯಾಂಡ್ ಲೇಟರ್ ಕೇಳಿ ಪಡೆಯುತ್ತಿದ್ದಾರೆ. ಮದುವೆಯ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು ಎಂದು ಅಂಚೆ ಇಲಾಖೆ ಅಧಿಕಾರಿಗಳು ಡಾಲಿ ಧನಂಜಯ ಅವರಿಗೆ ಶುಭಕೋರಿದ್ದಾರೆ.
ನಟ ಡಾಲಿ ಧನಂಜಯ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಅಂಚೆ ಇಲಾಖೆಗೆ ಧನ್ಯವಾದ ಹೇಳಿದ್ದಾರೆ. ನಿಮ್ಮ ಪ್ರೀತಿಗೆ ಶರಣು, ಧನ್ಯವಾದಗಳು. ನನ್ನ ಮದುವೆಗೆ ಅದ್ಭುತ ಉಡುಗೊರೆ ಮತ್ತು ಹೃತ್ಪೂರ್ವಕ ಶುಭಾಶಯಗಳಿಗಾಗಿ ತುಂಬಾ ಧನ್ಯವಾದಗಳು! ಇನ್ಲ್ಯಾಂಡ್ ಲೆಟರ್ ಫಾರ್ಮ್ಯಾಟ್ ಅನ್ನು ಬಳಸಿಕೊಂಡ ನನ್ನ ವಿವಾಹ ಆಮಂತ್ರಣ ಕಲ್ಪನೆಯು ನಿಮ್ಮೊಂದಿಗೆ ಪ್ರತಿಧ್ವನಿಸಲ್ಪಟ್ಟಿದೆ ಎಂದು ನನಗೆ ತುಂಬಾ ಸಂತೋಷವಾಗಿದೆ ಎಂದು ಧನಂಜಯ್ ಬರೆದಿದ್ದಾರೆ.
ಫೆಬ್ರವರಿ 15 ಮತ್ತು 16 ರಂದು ಮೈಸೂರಿನಲ್ಲಿ ಧನಂಜಯ್ - ಧನ್ಯತಾ ಕಲ್ಯಾಣ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಡಾಲಿ ಹಾಗೂ ಧನ್ಯತಾ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಧನಂಜಯ್ ಹಾಗೂ ಧನ್ಯತಾ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿದೆ.
ತಮ್ಮ ಕುಟುಂಬದ ಸಂಪ್ರದಾಯದಂತೆ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೆಂಡ ತುಳಿದ ಡಾಲಿ ಆನಂತರ ಮನೆ ದೇವರಿಗೆ ಪೂಜೆ ನೆರವೇರಿಸಿ ಮದುವೆ ಶಾಸ್ತ್ರಗಳಲ್ಲಿ ಭಾಗಿಯಾದರು. ಡಾಕ್ಟರ್ ಧನ್ಯತಾ ಮನೆಯಲ್ಲಿ ಮೆಹಂದಿ ಶಾಸ್ತ್ರ ಕೂಡ ನಡೆದಿದೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Dolly Dhananjay: ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಾಲಿ-ಧನ್ಯತಾ!