ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಂಚಮಸಾಲಿ 2ಎ ಮೀಸಲಾತಿ ಹೋರಾಟ; ಏ.26ರಂದು ಪ್ರತಿಜ್ಞಾ ಕ್ರಾಂತಿ ಅಭಿಯಾನಕ್ಕೆ ಚಾಲನೆ

Panchamasali 2A reservation: ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಹಾಗೂ ಸಮಾಜದದವರ ಮೇಲೆ ಸರಕಾರದಿಂದ ನಡೆದ ಹಲ್ಲೆ (ಲಾಠಿ ಚಾರ್ಜ್) ಖಂಡಿಸಿ 8ನೇ ಹಂತದ ಹೋರಾಟ ನಡೆಸಲಾಗುತ್ತದೆ ಎಂದು ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಏ.26ರಿಂದ ಪ್ರತಿಜ್ಞಾ ಕ್ರಾಂತಿ ಅಭಿಯಾನಕ್ಕೆ ಚಾಲನೆ

Profile Prabhakara R Mar 12, 2025 8:34 PM

ಕಲಬುರಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಹಕ್ಕೊತ್ತಾಯಿಸಿ (Panchamasali 2A reservation) ಹಾಗೂ ಬೆಳಗಾವಿಯಲ್ಲಿ ಪೋಲಿಸರ ಮೂಲಕ ಲಿಂಗಾಯತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿದ ಸರಕಾರದ ನೀತಿ ಖಂಡಿಸಿ ಏಪ್ರಿಲ್ 26ರಿಂದ ಶರಣರ ನಾಡು ಬಸವಕಲ್ಯಾದಿಂದ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ನಡೆಸಲಾಗುವುದು ಎಂದು ಕೂಡಲಸಂಗಮದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ತಿಳಿಸಿದರು. ನಗರದ (Kalaburagi News) ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ಮಾತನಾಡಿದ್ದಾರೆ.

ಕಲ್ಯಾಣ ಕರ್ನಾಟಕವು ಶರಣರ ನಾಡಾಗಿದ್ದು, ಬಸವಣ್ಣನವರ ಕರ್ಮಭೂಮಿಯಾಗಿದೆ. ಅದರಿಂದ ಇಲ್ಲಿಂದಲೇ ಪ್ರತಿಜ್ಞಾ ಕ್ರಾಂತಿ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಪಂಚಮಸಾಲಿ 2ಎ ಮೀಸಲಾತಿ ಹಾಗೂ ಸಮಾಜದ ಮೇಲೆ ಸರಕಾರದಿಂದ ನಡೆದ ಹಲ್ಲೆ (ಲಾಠಿ ಚಾರ್ಜ್) ಖಂಡಿಸಿ 8ನೇ ಹಂತದ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.

ಪಂಚಮಸಾಲಿ ದಿಕ್ಷ, ಮಲೆಗೌಡ, ಗೌಡ ಲಿಂಗಾಯತರಿಗೆ 2ಎ ಮೀಸಲಾತಿ, ಲಿಂಗಾಯತ ಒಬಿಸಿ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಹಾಗೂ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಲಿಂಗಾಯತರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಅಭಿಯಾನ ನಡೆಸಲಾಗುತ್ತಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಲ್ಲಣಗೌಡ ಪಾಟೀಲ್, ಸೋಮಶೇಖರ್ ಪಾಟೀಲ್, ಆನಂದರಾವ್ ಪಾಟೀಲ್, ಆನಂದ ಮೂಲಗೆ, ಅಲ್ಲಂಪ್ರಭು ಪಾಟೀಲ್ ಇದ್ದರು.

ಈ ಸುದ್ದಿಯನ್ನೂ ಓದಿ | HD Deve Gowda: ಕರ್ನಾಟಕದ ರೈಲ್ವೇ ಯೋಜನೆಗಳಿಗೆ ವೇಗ ನೀಡಲು ಎಚ್.ಡಿ.ದೇವೇಗೌಡ ಒತ್ತಾಯ



ಜನರ ತೀರ್ಪಿನಂತೆ ಹೋರಾಟದ ಹೆಜ್ಜೆ

2ಎ ಮೀಸಲಾತಿ ಹಕ್ಕೊತ್ತಾಯಿಸಿ ಹಾಗೂ ಸಮಾಜದ ಮೇಲೆ ನಡೆದ ಹಲ್ಲೆ ಖಂಡಿಸಿ, ಪ್ರತಿಜ್ಞಾ ಕ್ರಾಂತಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ಇದಕ್ಕೂ ಮುನ್ನ ಏಪ್ರಿಲ್ 16ರಿಂದ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನದ ಕುರಿತು ಸಮಾಜದ ಜನರಿಗೆ ಮನವರಿಕೆ ಮಾಡಲಾಗುವುದು. ನಮ್ಮ ಋಣದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸ್ವಾಭಿಮಾನಿ ಹಾಗೂ ಆತ್ಮಗೌರವಕ್ಕಾಗಿ ನಾವು ಇನ್ನುಮುಂದೆ ಅವರ ಬಳಿ ಹೋಗುವುದಿಲ್ಲ. ರಾಜ್ಯದ ಜನರ ಬಳಿ ಹೋಗಿ, ಜನರ ತೀರ್ಪಿನಂತೆ ಮುಂದೆ ಹೆಜ್ಜೆ ಇಡುತ್ತೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

image

ಲಿಂಗಾಯತರ ಮೇಲೆ ಪೋಲಿಸರಿಂದ ಹಲ್ಲೆ ನಡೆಸಿದರೆ, ಮುಂದೆ ಹೋರಾಟ ಮಾಡುವುದಿಲ್ಲ ಎಂದು ಸರಕಾರ ತಿಳಿದಿರಬೇಕು. ನಾವು ಸ್ವಾಭಿಮಾನಿಗಳು. ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಹಲ್ಲೆ ಮಾಡಿ ಹೋರಾಟಕ್ಕೆ ಅಪಮಾನ ಮಾಡಲಾಗಿದೆ. ರಾಷ್ಟ್ರೀಯ ಮಾನವ ಆಯೋಗಕ್ಕೆ ದೂರ ನೀಡಲಾಗಿದೆ. ರಾಜ್ಯಾದ್ಯಂತ ಜನರ ಅಭಿಪ್ರಾಯ ಸಂಗ್ರಹಿಸಿ ಹಿಂದಿನ ಹೋರಾಟಗಳಿಗಿಂತ ಎರಡು ಪಟ್ಟು ಬಿರುಸು 8ನೇ ಹಂತದ ಹೋರಾಟ ನಡೆಯಲಿದೆ.

- ಬಸವ ಜಯಮೃತ್ಯುಂಜಯ ಸ್ವಾಮೀಜಿ, ಜಗದ್ಗುರು, ಪಂಚಮಸಾಲಿ ಪೀಠ, ಕೂಡಲಸಂಗಮ