ಹಾಲಿವುಡ್ ಶೈಲಿಯಲ್ಲಿ ನಡೀತು ಚಿನ್ನದಂಗಡಿಯಲ್ಲಿ ದರೋಡೆ; ಕಣ್ಮುಚ್ಚಿ ಬಿಡುವಷ್ಟರಲ್ಲಿ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು!
Robbers Steal Gold Jewellery: ಮುಸುಕುಧಾರಿ ದರೋಡೆಕೋರರ ಗುಂಪೊಂದು ಅಮೆರಿಕದಲ್ಲಿ ಭಾರಿ ದರೋಡೆ ನಡೆಸಿದೆ. ಭಾರತೀಯ-ಅಮೆರಿಕನ್ ಕುಟುಂಬದ ಒಡೆತನದ ಅಂಗಡಿಗೆ ನುಗ್ಗಿದ ದರೋಡೆಕೋರರು ಕೇವಲ ಒಂದು ನಿಮಿಷದಲ್ಲಿ 15.7 ಕೋಟಿ ರೂ. (ಡಾಲರ್ 1.7 ಮಿಲಿಯನ್) ಮೌಲ್ಯದ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.
ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ ಅಬೇಸ್ -
ಕ್ಯಾಲಿಫೋರ್ನಿಯಾ, ಮಾ.14: ಹಾಲಿವುಡ್ ಚಲನಚಿತ್ರ ಶೈಲಿಯಂತೆ ಅಮೆರಿಕದಲ್ಲಿ ಕಳ್ಳತನ ನಡೆದಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಕುಮಾರ್ ಜ್ಯುವೆಲ್ಲರ್ಸ್‌ನಲ್ಲಿ ಮುಸುಕುಧಾರಿ ದರೋಡೆಕೋರರ ಗುಂಪೊಂದು ದರೋಡೆ (robbery) ನಡೆಸಿದೆ. ಭಾರತೀಯ-ಅಮೆರಿಕನ್ ಕುಟುಂಬದ ಒಡೆತನದ ಅಂಗಡಿಗೆ ನುಗ್ಗಿದ ದರೋಡೆಕೋರರು ಕೇವಲ ಒಂದು ನಿಮಿಷದಲ್ಲಿ 15.7 ಕೋಟಿ ರೂ. (ಡಾಲರ್ 1.7 ಮಿಲಿಯನ್) ಮೌಲ್ಯದ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ.
ಕಳೆದ ವರ್ಷ ಜೂನ್ 18 ರಂದು ಈ ಘಟನೆ ನಡೆದಿದ್ದು, ದರೋಡೆಯ ಸಮಯದಲ್ಲಿ ಅಂಗಡಿಯು ತನ್ನ ಸ್ಟಾಕ್‌ನ ಸುಮಾರು 75 ರಿಂದ 80 ಪ್ರತಿಶತದಷ್ಟು ಕಳೆದುಕೊಂಡಿದೆ. ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗುಂಪಿನ ಬಹುಪಾಲು ಮಂದಿ ತಲೆಮರೆಸಿಕೊಂಡಿದ್ದಾರೆ.
ಸುತ್ತಿಗೆ ಇತ್ಯಾದಿ ಆಯುಧಗಳನ್ನು ಹೊತ್ತೊಯ್ದಿದ್ದ ದರೋಡೆಕೋರರು, ಕ್ಷಣಾರ್ಧದಲ್ಲಿ ಗಾಜಿನ ಪೆಟ್ಟಿಗೆಗಳನ್ನು ಒಡೆದು ಚೀಲಗಳೊಳಗಿನ ಚಿನ್ನ ಮತ್ತು ವಜ್ರಗಳನ್ನು ಕದ್ದಿದ್ದಾರೆ. ಕಳ್ಳರು ಕದ್ದ ಕಾರುಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರು ವಿವಿಧ ದಿಕ್ಕಿನಿಂದ ಪರಾರಿಯಾದರು. ಇದರಿಂದಾಗಿ ಪೊಲೀಸರಿಗೆ ಅವರನ್ನು ಬಂಧಿಸುವುದು ಕಷ್ಟವಾಯಿತು. ಒಂದು ಕಾರನ್ನಷ್ಟೇ ಪೊಲೀಸರಿಗೆ ಚೇಸ್ ಮಾಡಲು ಸಾಧ್ಯವಾಯಿತು.
ವಿಡಿಯೊ ಇಲ್ಲಿದೆ:
The Department of Justice has released footage of thugs stealing $1.7 million of jewelry in about one minute in Fremont, California.
— Collin Rugg (@CollinRugg) March 13, 2026
The incident happened on June 18, 2025, at Kumar Jewelers.
The thugs were able to steal about 75% of the store's merchandise.
According to… pic.twitter.com/tTkcLek0w5
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಅಮೆರಿಕದಲ್ಲಿ ಇಂತಹ ದರೋಡೆಗಳು ಹೆಚ್ಚುತ್ತಿವೆ ಎಂದು ಹೇಳಿದರು. ಅಮೆರಿಕದಂತಹ ಶ್ರೀಮಂತ ದೇಶದಲ್ಲಿ ಇಂತಹ ಕಳ್ಳತನ ಸಂಭವಿಸಬಹುದಾದರೆ, ಅವು ಎಲ್ಲಿ ಬೇಕಾದರೂ ಸಂಭವಿಸಬಹುದು. ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ. ಸರ್ಕಾರಗಳು ತೆರಿಗೆಗಳನ್ನು ಮಾತ್ರ ತೆಗೆದುಕೊಳ್ಳುತ್ತವೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ನೋಡ ನೋಡುತ್ತಿದ್ದಂತೆ ಬಾಂಬ್‌ನಂತೆ ಸಿಡಿಯಿತು ಚಾರ್ಜ್‌ಗೆ ಇಟ್ಟ ಮೊಬೈಲ್: ಕೂದಲೆಳೆ ಅಂತರದಲ್ಲಿ ಬಾಲಕಿ ಪಾರು
ಅಪರಾಧಕ್ಕೆ ಸಂಬಂಧಿಸಿದಂತೆ ಪೊಲೀಸರು 19 ರಿಂದ 20 ವರ್ಷ ವಯಸ್ಸಿನ ಅಫತುಪೆಟೈಕಿ ಫಾಸಿಸಿಲಾ, ಜೋಸ್ ಹೆರಾಡಾ-ಅರಾಗೊನ್, ಆಂಡ್ರೆಸ್ ಪ್ಯಾಲೆಸ್ಟಿನೊ ಮತ್ತು ಟಾಮ್ ಪಾರ್ಕರ್ ಡೊನೆಗನ್ ಅವರನ್ನು ಬಂಧಿಸಿದ್ದಾರೆ. ಫಾಸಿಸಿಲಾ ಮತ್ತು ಪ್ಯಾಲೆಸ್ಟಿನೊ ಅವರನ್ನು ನಂತರ ಬಿಡುಗಡೆ ಮಾಡಲಾಗಿದ್ದರೂ, ಹೆಚ್ಚಿನ ಶಂಕಿತರನ್ನು ಬಂಧಿಸಲಾಗಿಲ್ಲ.
ಬೆಂಗಳೂರಿನಲ್ಲಿ ಕುಖ್ಯಾತ ಕಳ್ಳನ ಬಂಧನ
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. 4 ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ, ಈ ಕುಖ್ಯಾತ ಕಳ್ಳ ಸುಮಾರು 1.75 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ. ರಾತ್ರಿ ಕಳ್ಳತನ ಘಟನೆಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕದ್ದಿದ್ದ 1 ಕೆಜಿ 232 ಗ್ರಾಂ ಚಿನ್ನಾಭರಣವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಕಳ್ಳನನ್ನು ರಾಜ ಎಂದು ಗುರುತಿಸಲಾಗಿದೆ. ಪೊಲೀಸರು ಬಹಳ ದಿನಗಳಿಂದ ಈ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿಯನ್ನು ಜನವರಿ 4 ರಂದು ಅಬ್ಬಿಗೆರೆಯಲ್ಲಿ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಅವನು ಅಪರಾಧವನ್ನು ಒಪ್ಪಿಕೊಂಡನು.