Ramanagara News: ನಾಯಿಯನ್ನೂ ಬಿಡದ ಕಾಮುಕ; ಅಸಹಜ ಲೈಂಗಿಕ ಕ್ರಿಯೆ ನಡೆಸಿದವನಿಗೆ ಬಿತ್ತು ಧರ್ಮದೇಟು!
Ramanagara News: ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಇಂತಹದೊಂದು ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ರಾಮನಗರದ ಚನ್ನಪಟ್ಟಣದಲ್ಲಿ ನಾಯಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಕಾಮುಕನೊಬ್ಬ ಸಿಕ್ಕಿಬಿದ್ದಿದ್ದಾನೆ.
Prabhakara R
Dec 14, 2024 8:14 PM
ರಾಮನಗರ: ಅಸಹಜ ಲೈಂಗಿಕ ಕ್ರಿಯೆ ಪ್ರಕರಣಗಳು (Ramanagara News) ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಕೆಲ ಕಾಮುಕರು ನಾಯಿ, ಹಸುಗಳನ್ನೂ ಬಿಡದೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಕಂಡುಬರುತ್ತಿದೆ. ಈ ಮಧ್ಯೆ ನಾಯಿಯೊಂದಿಗೆ ಅಸಹಜ ಲೈಂಗಿಕಕ್ರಿಯೆ ಮಾಡುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ ನಡೆದಿದೆ.
ಬಳ್ಳಾರಿ ಮೂಲದ ಬಸವ ಎಂಬ ವ್ಯಕ್ತಿ ವಿಕೃತಿ ಮೆರೆದಿದ್ದಾರೆ. ಸದ್ಯ ಈತನನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿರ್ಜನ ಪ್ರದೇಶದಲ್ಲಿ ನಾಯಿ ಕಟ್ಟಿ ಹಾಕಿದ್ದ ಆರೋಪಿ, ಬಳಿಕ ಅದರ ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆ ಮಾಡುತ್ತಿದ್ದ. ಈ ವೇಳೆ ಸಿಕ್ಕಬಿದ್ದ ಆರೋಪಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಿದ್ದು, ಆರೋಪಿ ಬಸವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿಯನ್ನೂ ಓದಿ | Viral News: ಬೀದಿ ನಾಯಿಯ ಮೇಲೇ ಅತ್ಯಾಚಾರ ಎಸಗಲು ಯತ್ನಿಸಿದ ವಿಕೃತ!
ಇತ್ತೀಚೆಗೆ ವ್ಯಕ್ತಿಯೊಬ್ಬ ಬೀದಿ ನಾಯಿ ಜತೆ ಅಸಭ್ಯ ವರ್ತನೆ ತೋರಿದ ಪ್ರಕರಣ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿತ್ತು. ಕಳೆದ ಅ.18ರಂದು ಜಯಪುರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಅಸಭ್ಯ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದರಿಂದ ಶಿವರಾಜ್ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ದೇವಾಲಯದ ಆವರಣದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೊ ರೆಕಾರ್ಡ್-ಕಿಡಿಗೇಡಿಗಳು ಖಾಕಿ ಬಲೆಗೆ
ದಿಸ್ಪುರ: ಅಸ್ಸಾಂನ (Assam) ಗುವಹಟಿಯ ದೇವಸ್ಥಾನದ ಆವರಣದಲ್ಲೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ(Assam Horror) ನಡೆಸಿದ ಘಟನೆ ವರದಿಯಾಗಿದೆ. ಇನ್ನು ಈ ಹೀನ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಮಾಹಿತಿ ಪಡೆದ ಅಸ್ಸಾಂ ಪೊಲೀಸರು 24 ಗಂಟೆಗಳಲ್ಲಿ ಒಂಬತ್ತು ಆರೋಪಿಗಳಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದಾರೆ(Physical Abuse)
ನವೆಂಬರ್ 17 ರಂದು ಗಾರ್ಚುಕ್ ಪೊಲೀಸ್ ಠಾಣೆಯ ವ್ಯಾಪ್ತಿಯ ಏಕಾಂತ ಸ್ಥಳದಲ್ಲಿ ರಾಸ್ ಹಬ್ಬದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಸಿಪಿ (ಪಶ್ಚಿಮ) ಪದ್ಮನಾಭ್ ಬರುವಾ ತಿಳಿಸಿದ್ದಾರೆ.
ಒಬ್ಬ ಆರೋಪಿ ಮಹಿಳೆಯನ್ನು ಬೋರಗಾಂವ್‌ನಲ್ಲಿರುವ ಘಟನಾ ಸ್ಥಳಕ್ಕೆ ಕರೆದೊಯ್ಯುವ ಮೊದಲು ತನ್ನ ವಾಸಸ್ಥಳಕ್ಕೆ ಕರೆದೊಯ್ದದಿದ್ದ ಎಂದು ತಿಳಿದು ಬಂದಿದೆ. ನಂತರ ಘಟನಾ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಘಟನೆಯಲ್ಲಿ ಒಟ್ಟು 9 ಜನರಿದ್ದು, ಒಬ್ಬ ಅತ್ಯಾಚಾರ ನಡೆಸಿದ ವಿಡಿಯೋ ಚಿತ್ರೀಕರಣ ಮಾಡಿದ್ದ ಎಂಬುದು ತಿಳಿದು ಬಂದಿದೆ.
ಬಂಧಿತರನನ್ನು ಕುಲದೀಪ್ ನಾಥ್ (23), ಬಿಜೋಯ್ ರಾಭಾ (22), ಪಿಂಕು ದಾಸ್ (18), ಗಗನ್ ದಾಸ್ (21), ಸೌರವ್ ಬೋರೊ (20), ಮೃಣಾಲ್ ರಭಾ (19), ರಬಿನ್ ದಾಸ್ (23) ಮತ್ತು ದೀಪಂಕರ್ ಮುಖಿಯಾ (21) ಎಂದು ತಿಳಿದು ಬಂದಿದೆ. ಬಂಧಿತರನ್ನು ವಿಚಾರಣೆ ನಡೆಸಿದಾಗ ಅವರು ಮದ್ಯ ಮತ್ತು ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತರು ಸೇರಿದಂತೆ ಇನ್ನೂ ಕೆಲ ಯುವಕರು ಘಟನೆ ನಡೆದ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಲು ಆಗಾಗ ಅಲ್ಲಿ ಸೇರುತ್ತಿದ್ದರು ಎನ್ನಲಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ಡಿಸಿಪಿ ಪದ್ಮನಾಭ್ ಬರುವಾ ಸಂತ್ರಸ್ತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ನಮ್ಮ ತನಿಖೆ ನಡೆಯುತ್ತಿದೆ. ಶಂಕಿತರ ವಿರುದ್ಧ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ. ಅವರ ಮುಖಗಳು ಸ್ಪಷ್ಟವಾಗಿ ಗೋಚರಿಸುವುದರಿಂದ ಅದೇ ದೊಡ್ಡ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.
ಗರ್ಚುಕ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮಯೂರ್ಜಿತ್ ಗೊಗೊಯ್ ಅವರು ಶುಕ್ರವಾರ ಬೆಳಗಿನ ಜಾವ 2:30 ರ ಸುಮಾರಿಗೆ ಸ್ಥಳೀಯ ಮಾಧ್ಯಮವೊಂದರಲ್ಲಿ ವರದಿಯಾದ ನಂತರ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಮಾಹಿತಿ ಮತ್ತು ವೀಡಿಯೋ ವಿಶ್ಲೇಷಣೆಯನ್ನು ಅನುಸರಿಸಿ ಪೊಲೀಸ್ ತಂಡವು ತಕ್ಷಣವೇ ಗಾರ್ಚುಕ್ ಮತ್ತು ಜಲುಕ್ಬರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿತು. ಆರಂಭದಲ್ಲಿ, ಇಬ್ಬರು ಶಂಕಿತರನ್ನು ಬಂಧಿಸಲಾಗಿತ್ತು. ನಂತರ ಬಂಧಿತರು ನೀಡಿದ ಮಾಹಿತಿ ಪ್ರಕಾರ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿ ಇತರ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಕೆಲವರು ರಸ್ತೆ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Police Suspended: ಅಪರಾಧಗಳಿಗೆ ಕುಮ್ಮಕ್ಕು; ಪಾವಗಡದ ಮೂವರು ಪೊಲೀಸ್ ಪೇದೆಗಳು ಸಸ್ಪೆಂಡ್