#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಹರಿಯಾಣ ವಿರುದ್ದ ರಣಜಿ ಪಂದ್ಯವಾಡಲು ಕರ್ನಾಟಕ ತಂಡಕ್ಕೆ ಮರಳಿದ ಕೆಎಲ್‌ ರಾಹುಲ್‌!

KL Rahul to play for Karnataka: ಜನವರಿ 30 ರಿಂದ ಫೆಬ್ರವರಿ 2ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಹರಿಯಾಣ ವಿರುದ್ದದ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಹಲವು ವರ್ಷಗಳ ಬಳಿಕ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ರಾಜ್ಯ ತಂಡಕ್ಕೆ ಮರಳಿದ್ದಾರೆ.

Ranji Trophy: ದೇಶಿ ಕ್ರಿಕೆಟ್‌ಗೆ ಕೆಎಲ್‌ ರಾಹುಲ್‌ ಕಮ್‌ಬ್ಯಾಕ್‌, ಹರಿಯಾಣ ಪಂದ್ಯಕ್ಕೆ ಕರ್ನಾಟಕ ತಂಡ ಇಂತಿದೆ!

Karnataka Ranji Team

Profile Ramesh Kote Jan 27, 2025 6:47 PM

ಬೆಂಗಳೂರು: ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ (KL Rahul) ಹಲವು ವರ್ಷಗಳ ಬಳಿಕ ದೇಶಿ ಕ್ರಿಕೆಟ್‌ಗೆ ಮರಳಲು ಸಜ್ಜಾಗುತ್ತಿದ್ದಾರೆ. ಹರಿಯಾಣ ವಿರುದ್ದದ 2024-25ರ ಸಾಲನ ರಣಜಿ ಟ್ರೋಫಿ (Ranji Trophy 2024-25) ಪಂದ್ಯಕ್ಕೆ 17 ಸದಸ್ಯರ ಕರ್ನಾಟಕ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ (ಕೆಎಸ್‌ಸಿಎ) ಸೋಮವಾರ ಪ್ರಕಟಿಸಿದೆ. ನಿರೀಕ್ಷೆಯಂತೆ ಕೆಎಲ್‌ ರಾಹುಲ್‌ ಕರ್ನಾಟಕ ತಂಡಕ್ಕೆ ಮರಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಜನವರಿ ಆರಂಭದಲ್ಲಿ ಅಂತ್ಯಗೊಂಡಿದ್ದ 5 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಕೆಎಲ್‌ ರಾಹುಲ್‌ ಆಡಿದ್ದರು. ಈ ಸರಣಿಯಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲವಾದರೂ ಇತರೆ ಆಟಗಾರರಿಗಿಂತ ಹೆಚ್ಚಿನ ರನ್‌ಗಳನ್ನು ಕಲೆ ಹಾಕಿದ್ದರು. ಇಂಗ್ಲೆಂಡ್‌ ವಿರುದ್ದದ ಏಕದಿನ ಸರಣಿಗೂ ಮುನ್ನ ಅವರು ಹರಿಯಾಣ ವಿರುದ್ದದ ರಣಜಿ ಟ್ರೋಫಿ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Ranji Trophy: ಶುಭಮನ್‌ ಗಿಲ್‌ ಶತಕ ವ್ಯರ್ಥ, ಕರ್ನಾಟಕ ತಂಡಕ್ಕೆ ಇನಿಂಗ್ಸ್‌ ಜಯ!

ಪಂಜಾಬ್‌ ವಿರುದ್ಧ ಕೊನೆಯ ರಣಜಿ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದಿದ್ದ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ ತಂಡ ಜನವರಿ 30 ರಿಂದ ಫೆಬ್ರವರಿ 2 ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಹರಿಯಾಣ ತಂಡದ ಸವಾಲಬ್ಬು ಎದುರಿಸಲಿದೆ. ಬಿಡುವಿನ ವೇಳೆಯಲ್ಲಿ ಟೀಮ್‌ ಇಂಡಿಯಾ ಆಟಗಾರರು ಕೂಡ ದೇಶಿ ಕ್ರಿಕೆಟ್‌ ಆಡಬೇಕೆಂಬ ನಿಯಮವನ್ನು ಬಿಸಿಸಿಐ ಇತ್ತೀಚೆಗೆ ಜಾರಿಗೊಳಿಸಿತ್ತು.

ಈ ನಿಯಮದ ಅನ್ವಯ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ರಿಷಭ್‌ ಪಂತ್‌ ಸೇರಿದಂತೆ ಟೀಮ್‌ ಇಂಡಿಯಾ ಸ್ಟಾರ್‌ ಆಟಗಾರರು ವಿಭಿನ್ನ ತಂಡಗಳ ಪರ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ಇದೀಗ ಕರ್ಣಾಟಕ ತಂಡದ ಪರ ಕೆಎಲ್‌ ರಾಹುಲ್‌ ಆಡಿದರೆ, ದೆಹಲಿ ತಂಡದ ಪರ ವಿರಾಟ್‌ ಕೊಹ್ಲಿ ಆಡಲಿದ್ದಾರೆ. ವಿರಾಟ್‌ ಕೊಹ್ಲಿ 2012ರಲ್ಲಿ ಕೊನೆಯ ಬಾರಿ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು.

Ranji Trophy: ಜಡೇಜಾ ಸ್ಪಿನ್‌ ಕಮಾಲ್‌; ಡೆಲ್ಲಿಗೆ 10 ವಿಕೆಟ್‌ ಸೋಲು

ಮತ್ತೊಂದು ರಣಜಿ ಪಂದ್ಯ ಆಡಲಿರುವ ರವೀಂದ್ರ ಜಡೇಜಾ

ಟೀಮ್‌ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು ಕೊನೆಯ ರಣಜಿ ಪಂದ್ಯದಲ್ಲಿ 12 ವಿಕೆಟ್‌ಗಳನ್ನು ಕಬಳಿಸಿ ಸೌರಾಷ್ಟ್ರ ತಂಡದ ಗೆಲುವಿಗೆ ನೆರವು ನೀಡಿದ್ದರು. ಇದೀಗ ಮತ್ತೊಂದು ಪಂದ್ಯವನ್ನು ಆಡಲು ಸಜ್ಜಾಗುತ್ತಿದ್ದಾರೆ. ಅಸ್ಸಾಂ ವಿರುದ್ಧ ಮಾಡು ಇಲ್ಲದೆ ಮಡಿ ಪಂದ್ಯದಲ್ಲಿಯೂ ರವೀಂದ್ರ ಜಡೇಜಾ ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ.

ಹರಿಯಾಣ ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ

ಮಯಾಂಕ್‌ ಅಗರ್ವಾಲ್‌ (ನಾಯಕ), ಕೆಎಲ್‌ ರಾಹುಲ್‌, ಶ್ರೇಯಸ್‌ ಗೋಪಾಲ್‌ (ಉಪ ನಾಯಕ), ದೇವದತ್‌ ಪಡಿಕ್ಕಲ್‌, ಅನೀಷ್‌ ಕೆವಿ, ಸ್ಮರಣ್‌ ಆರ್‌, ಶ್ರೀಜಿತ್‌ ಕೆಎಲ್‌ (ವಿ.ಕೀ), ಅಭಿನವ್‌ ಮನೋಹರ್‌, ಹಾರ್ದಿಕ್‌ ರಾಜ್‌, ಪ್ರಸಿಧ್‌ ಕೃಷ್ಣ, ವಿದ್ವತ್‌ ಕಾವೇರಪ್ಪ, ವಿ ಕೌಶಿಕ್‌, ಅಭಿಲಾಷ್‌ ಶೆಟ್ಟಿ, ಯಶೋವರ್ಧನ್‌ ಪರಾಂತಪ್‌, ನಿಕಿನ್‌ ಜೋಸ್‌, ಸುಜಯ್‌ ಸತೇರಿ (ವಿ.ಕೀ), ಮೊಹ್ಸಿನ್‌ ಖಾನ್‌.

ಕರ್ನಾಟಕ ತಂಡದ ಪ್ರದರ್ಶನ

ಪ್ರಸಕ್ತ ಸಾಲಿನ ರಣಜಿ ಋತುವಿನಲ್ಲಿ ಕರ್ನಾಟಕ ತಂಡ ಎಲೈಟ್‌ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇಲ್ಲಿಯ ತನಕ ಆಡಿದ ಆರು ಪಂದ್ಯಗಳಿಂದ ಕರ್ನಾಟಕ ತಂಡ ಎರಡರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ನಾಲ್ಕರಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿದೆ. ಒಟ್ಟು 19 ಅಂಕಗಳನ್ನು ಕಲೆ ಹಾಕಿರುವ ಮಯಾಂಕ್‌ ಅಗರ್ವಾಲ್‌ ಪರ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. 20 ಅಂಕಗಳನ್ನು ಹೊಂದಿರುವ ಹರಿಯಾಣ ತಂಡ ಅಗ್ರ ಸ್ಥಾನದಲ್ಲಿದೆ.