Ranji Trophy: ಜಡೇಜಾ ಸ್ಪಿನ್ ಕಮಾಲ್; ಡೆಲ್ಲಿಗೆ 10 ವಿಕೆಟ್ ಸೋಲು
ಡೆಲ್ಲಿ ಪರ ಎರಡೂ ಇನಿಂಗ್ಸ್‌ನಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿದ್ದು ನಾಯಕ ಆಯುಷ್ ಬದೋನಿ(Ayush Badoni). ಮೊದಲ ಇನಿಂಗ್ಸ್‌ನಲ್ಲಿ 60 ರನ್ ಬಾರಿಸಿದ್ದ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ 44 ರನ್ ಬಾರಿಸಿದರು.


ರಾಜ್‌ಕೋಟ್: ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರ 10 ವಿಕೆಟ್ ಗೊಂಚಲು ಸಾಹಸದಿಂದ ದೆಹಲಿ ವಿರುದ್ದದ ರಣಜಿ(Ranji Trophy) ಪಂದ್ಯದಲ್ಲಿ ಸೌರಾಷ್ಟ್ರ(Saurashtra) ತಂಡ ಹತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಗುರುವಾರ ಆರಂಭಗೊಂಡ ಈ ಪಂದ್ಯ ಕೇವಲ ಒಂದುವರೆ ದಿನದಲ್ಲಿಯೇ ಮುಕ್ತಾಯ ಕಂಡಿತು. ಬ್ಯಾಟಿಂಗ್ ಪುನರಾಗಮನ ನಿರೀಕ್ಷೆಯಲ್ಲಿದ್ದ ರಿಷಭ್ ಪಂತ್ ಎರಡೂ ಇನಿಂಗ್ಸ್‌ನಲ್ಲಿ ವಿಫಲರಾದರು.
ಮೊದಲ ಇನಿಂಗ್ಸ್‌ನಲ್ಲಿ ಡೆಲ್ಲಿ 188 ರನ್‌ಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಸೌರಾಷ್ಟ್ರ 271 ರನ್ ಬಾರಿಸಿ 83 ರನ್ ಇನಿಂಗ್ಸ್ ಮುನ್ನಡೆ ಗಳಿಸಿತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕೇವಲ 94 ರನ್‌ಗೆ ಆಲೌಟ್ ಆಯಿತು. ಗೆಲುವಿಗೆ 11 ರನ್ ಗುರಿ ಪಡೆದ ಸೌರಾಷ್ಟ್ರ ವಿಕೆಟ್ ನಷ್ಟವಿಲ್ಲದೆ 15 ರನ್ ಬಾರಿಸಿ 10 ವಿಕೆಟ್ ಗೆಲುವು ಸಾಧಿಸಿತು.
Ravindra Jadeja picked up his 36th first-class five-wicket haul and tenth career ten-for during the ongoing Ranji Trophy for Saurashtra.
— Wisden India (@WisdenIndia) January 24, 2025
Read more: https://t.co/3TltNpQf3d pic.twitter.com/xxmxfPAIac
ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಿತ್ತಿದ್ದ ರವೀಂದ್ರ ಜಡೇಜಾ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಶ್ರೇಷ್ಠ ಬೌಲಿಂಗ್ ಮೂಲಕ ಮೂಲಕ 7 ವಿಕೆಟ್ ಉರುಳಿಸಿದರು. ಒಟ್ಟಾರೆ 12 ವಿಕೆಟ್ ಕಿತ್ತರು. ಇದೇ ವೇಳೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಡೇಜಾ 10ನೇ ಬಾರಿಗೆ 10 ವಿಕೆಟ್ ಕಿತ್ತ ಸಾಧನೆಗೈದರು. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಜಡೇಜಾ ಈ ಪ್ರದರ್ಶದಿಂದ ಬಿಸಿಸಿಐ ಕೊಂಚ ನಿಟ್ಟುಸಿರು ಬಿಟ್ಟಿದೆ. ಆದರೆ ರೋಹಿತ್ ಶರ್ಮ ಮತ್ತು ರಿಷಭ್ ಪಂತ್ ಸತತ ವೈಫಲ್ಯ ಚಿಂತಿಸುವಂತೆ ಮಾಡಿದೆ.
ಇದನ್ನೂ ಓದಿ Ranji Trophy: ದ್ವಿತೀಯ ಇನಿಂಗ್ಸ್‌ನಲ್ಲಿಯೂ ರೋಹಿತ್ ಶರ್ಮಾ ವೈಫಲ್ಯ!
ರಿಷಭ್ ಪಂತ್ ಮೊದಲ ಇನಿಂಗ್ಸ್‌ನಲ್ಲಿ 1, ದ್ವಿತೀಯ ಇನಿಂಗ್ಸ್‌ನಲ್ಲಿ 17 ರನ್ ಬಾರಿಸಿದರು. ಡೆಲ್ಲಿ ಪರ ಎರಡೂ ಇನಿಂಗ್ಸ್‌ನಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿದ್ದು ನಾಯಕ ಆಯುಷ್ ಬದೋನಿ. ಮೊದಲ ಇನಿಂಗ್ಸ್‌ನಲ್ಲಿ 60 ರನ್ ಬಾರಿಸಿದ್ದ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ 44 ರನ್ ಬಾರಿಸಿದರು.