ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ranji Trophy: ಶುಭಮನ್‌ ಗಿಲ್‌ ಶತಕ ವ್ಯರ್ಥ, ಕರ್ನಾಟಕ ತಂಡಕ್ಕೆ ಇನಿಂಗ್ಸ್‌ ಜಯ!

Karnataka vs Punjab Match Highlights: ಭಾರತ ತಂಡದ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಶತಕದ ಹೊರತಾಗಿಯೂ ಪಂಜಾಬ್‌ ತಂಡ ಕರ್ನಾಟಕ ಎದುರು ಹೀನಾಯ ಸೋಲು ಅನುಭವಿಸಿದೆ. ಸ್ಮರಣ್‌ ರವಿಚಂದ್ರನ್‌ ಅವರ ದ್ವಿಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡ ಇನಿಂಗ್ಸ್‌ ಹಾಗೂ 207 ರನ್‌ಗಳಿಂದ ಗೆಲುವು ಪಡೆದಿದೆ.

Ranji Trophy: ಪಂಜಾಬ್‌ ವಿರುದ್ಧ ಕರ್ನಾಟಕ ತಂಡಕ್ಕೆ ಇನಿಂಗ್ಸ್‌ ಜಯ!

Karnataka won by innings and 207 Runs against Punjab

Profile Ramesh Kote Jan 25, 2025 3:52 PM

ಬೆಂಗಳೂರು: ಟೀಮ್‌ ಇಂಡಿಯಾ ಸ್ಟಾರ್‌ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಶತಕದ ಹೊರತಾಗಿಯೂ ಸ್ಮರಣ್‌ ರವಿಚಂದ್ರನ್‌ ದ್ವಿಶತಕ ಹಾಗೂ ಬೌಲರ್‌ಗಳ ಶಿಸ್ತು ಬದ್ದ ಬೌಲಿಂಗ್‌ ದಾಳಿಯ ನೆರವಿನಿಂದ ಕರ್ನಾಟಕ ತಂಡ ಇನಿಂಗ್ಸ್‌ ಹಾಗೂ 207 ರನ್‌ಗಳಿಂದ ಪಂಜಾಬ್‌ ವಿರುದ್ಧ ಗೆಲುವು ಪಡೆದಿದೆ. ಆ ಮೂಲಕ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಎಲೈಟ್‌ ಸಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 55 ರನ್‌ಗಳಿಂದ ಆಲ್‌ಔಟ್‌ ಆಗಿತ್ತು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿಯೂ ಪಂಜಾಬ್‌ ತಂಡ, 84 ರನ್‌ಗಳಿಂದ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಏಕಾಂಗಿ ಹೋರಾಟ ನಡೆಸಿದ್ದ ಶುಭಮನ್‌ ಗಿಲ್‌, ಕರ್ನಾಟಕ ಬೌಲರ್‌ಗಳನ್ನು ಕೆಲ ಕಾಲ ಸಮರ್ಥವಾಗಿ ಎದುರಿಸಿದರು.

ಒಂದು ತುದಿಯಲ್ಲಿ ಶುಭಮನ್‌ ಗಿಲ್‌ ಅವರು ಅತ್ಯುತ್ತಮ ಬ್ಯಾಟ್‌ ಮಾಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಅವರಿಗೆ ಯಾರೂ ಸಾಥ್‌ ನೀಡಲಿಲ್ಲ. ಅಂದ ಹಾಗೆ ಅತ್ಯುತ್ತಮ ಬ್ಯಾಟ್‌ ಮಾಡಿದ ಶುಭಮನ್‌ ಗಿಲ್‌, 171 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 102 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಪಂಜಾಬ್‌ ತಂಡವನ್ನು ಮೇಲೆತ್ತಲು ಪ್ರಯತ್ನ ನಡೆಸಿದ್ದರು. ಆದರೆ, 62ನೇ ಓವರ್‌ನಲ್ಲಿ ಶ್ರೇಯಸ್‌ ಗೋಪಾಲ್‌ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಚೆಂಡನ್ನು ಪ್ಯಾಡ್‌ ಮೇಲೆ ಹಾಕಿಕೊಂಡರು.

Ranji Trophy: ಪಂಜಾಬ್‌ ವಿರುದ್ಧ ದ್ವಿಶತಕ ಸಿಡಿಸಿದ ಕನ್ನಡಿಗ ಸ್ಮರಣ್‌ ರವಿಚಂದ್ರನ್‌!

ಕೊನೆಯಲ್ಲಿ ಮಯಾಂಕ್‌ ಮಾರ್ಕೆಂಡ್‌ (27 ರನ್‌) ಹಾಗೂ ಸುಖದೀಪ್‌ ಸಿಂಗ್‌ (25 ರನ್)‌ ಅವರು ಶುಭಮನ್‌ ಗಿಲ್‌ಗೆ ಸ್ವಲ್ಪ ಸಮಯ ಸಾಥ್‌ ನೀಡಿದ್ದರು. ಅಂದ ಹಾಗೆ ಅಂತಿಮವಾಗಿ ಪಂಜಾಬ್‌ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 213 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಪಂಜಾಬ್‌ ತಂಡ ಇನಿಂಗ್ಸ್‌ ಹಾಗೂ 207 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು.

ಮಿಂಚಿದ ಶ್ರೇಯಸ್‌ ಗೋಪಾಲ್‌

ಕರ್ನಾಟಕ ತಂಡದ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಮಿಂಚಿದ ಶ್ರೇಯಸ್‌ ಗೋಪಾಲ್‌ 3.4 ಓವರ್‌ಗಳಿಗೆ ಕೇವಲ 19 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಇದಕ್ಕೂ ಮುನ್ನ ಯಶೋವರ್ಧನ್‌ ಪರಂತಾಪ್‌ 37 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಆ ಮೂಲಕ ಪಂಜಾಬ್‌ ತಂಡವನ್ನು ಕಡಿನೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದ್ದರು.

Ranji Trophy: ಕರ್ನಾಟಕದ ಬೌಲಿಂಗ್‌ ದಾಳಿಗೆ ತತ್ತರಿಸಿದ ಪಂಜಾಬ್‌; 55 ರನ್‌ಗೆ ಆಲೌಟ್‌

ಸ್ಮರಣ್‌ ರವಿಚಂದ್ರನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಕರ್ನಾಟಕ ತಂಡದ ಪರ ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಸ್ಮರಣ್‌ ರವಿಚಂದ್ರನ್‌ ಅವರು ದ್ವಿಶತಕ ಸಿಡಿಸಿದ್ದರು. ಇವರು ಆಡಿದ್ದ 277 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 25 ಬೌಂಡರಿಗಳೊಂದಿಗೆ 203 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 475 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಆತಿಥೇಯರು ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆಯನ್ನು ಪಡೆದಿದ್ದರು.

ಸ್ಕೋರ್‌ ವಿವರ

ಪಂಜಾಬ್‌

ಪ್ರಥಮ ಇನಿಂಗ್ಸ್‌: 55-10 (ರಮಣ್‌ದೀಪ್‌ ಸಿಂಗ್‌ 16, ಮಯಾಂಕ್‌ ಮಾರ್ಕಂಡೆ 12; ವಿ ಕೌಶಿಕ್‌ 16ಕ್ಕೆ 4, ಅಭಿಲಾಷ್‌ ಶೆಟ್ಟಿ 19ಕ್ಕೆ 3)

ದ್ವಿತೀಯ ಇನಿಂಗ್ಸ್‌: 213-10 (ಶುಭಮನ್‌ ಗಿಲ್‌ 102, ಮಯಾಂಕ್‌ ಮಾರ್ಕೆಂಡ್‌ 27; ಶ್ರೇಯಸ್‌ ಗೋಪಾಲ್‌ 19ಕ್ಕೆ 3, ಯಶೋವರ್ಧನ್‌ ಪರಂತಾಪ್‌ 37 ಕ್ಕೆ 3)

ಕರ್ನಾಟಕ

ಪ್ರಥಮ ಇನಿಂಗ್ಸ್‌: 475-10 (ಶುಭಮನ್‌ ಗಿಲ್‌ 203, ಅಭಿನವ್‌ ಮನೋಹರ್‌ 34; ಜಸೀಂದರ್‌ ಸಿಂಗ್‌ 66ಕ್ಕೆ 3, ಮಯಾಂಕ್‌ ಮಾರ್ಕಂಡೆ 53ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಸ್ಮರಣ್‌ ರವಿಚಂಣದ್ರನ್‌