Ranji Trophy: ಸೌರಾಷ್ಟ್ರ ಸೋಲಿನ ಬೆನ್ನಲ್ಲೆ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ ಶೆಲ್ಡನ್ ಜಾಕ್ಸನ್!
Sheldon Jackson retires from professional cricket: ರಾಜ್ ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಮಂಗಳವಾರ (ಫೆ.11) ಅಂತ್ಯವಾಗಿದ್ದ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೌರಾಷ್ಟ್ರ ಇನಿಂಗ್ಸ್ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಬೇಸತ್ತಾ ಹಿರಿಯ ಆಟಗಾರ ಶೆಲ್ಡನ್ ಜಾಕ್ಸನ್ ತಮ್ಮ 14 ವರ್ಷಗಳ ತಮ್ಮ ವೃತ್ತಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ರಾಜ್ ಕೋಟ್: ಪ್ರಸಕ್ತ ಸಾಲಿನ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಸೌರಾಷ್ಟ್ರ ತಂಡ ವಿಫಲವಾಗಿದೆ. ಮಂಗಳವಾರ (ಫೆ.11) ಮುಕ್ತಾಯಗೊಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೌರಾಷ್ಟ್ರ ಇನಿಂಗ್ಸ್ ಹಾಗೂ 98 ರನ್‌ಗಳಿಂದ ಸೋತು ಮುಖಭಂಗ ಅನುಭವಿಸಿದೆ. ಈ ಸೋಲಿನೊಂದಿಗೆ ಸೌರಾಷ್ಟ್ರದ ಅನುಭವಿ ಬ್ಯಾಟರ್ ಶೆಲ್ಡನ್ ಜಾಕ್ಸನ್ ತಮ್ಮ 14 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
38ರ ವಯಸ್ಸಿನ ಅನುಭವಿ ಬ್ಯಾಟರ್ ಕ್ವಾರ್ಟರ್ ಫೈನಲ್‌ನ ಎರಡೂ ಇನಿಂಗ್ಸ್‌ಗಳಲ್ಲಿ (14 ಮತ್ತು 27) ವೈಫಲ್ಯ ಅನುಭವಿಸಿದರು. 2011ರಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶೆಲ್ಡನ್ ಜಾಕ್ಸನ್, ಇಲ್ಲಿಯವರೆಗೂ ಆಡಿದ 106 ಪಂದ್ಯಗಳಿಂದ 21 ಶತಕ ಹಾಗೂ 39 ಅರ್ಧ ಶತಕಗಳ ನೆರವಿನಿಂದ 45.80ರ ಸರಾಸರಿಯಲ್ಲಿ 7283 ರನ್‌ಗಳನ್ನು ದಾಖಲಿಸಿದ್ದಾರೆ.
Ranji Trophy: ತಮ್ಮ 200ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಶತಕ ಸಿಡಿಸಿದ ಅಜಿಂಕ್ಯ ರಹಾನೆ!
2012-13ರ ರಣಜಿ ಟೂರ್ನಿಯಲ್ಲಿ ಮಿಂಚಿದ್ದ ಶೆಲ್ಡನ್ ಜಾಕ್ಸನ್
ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ದಾಖಲೆ ಹೊಂದಿರುವ ಶೆಲ್ಡನ್ ಜಾಕ್ಸನ್, 2012-13ರ ಆವೃತ್ತಿಯಲ್ಲಿ ಸೌರಾಷ್ಟ್ರ ಮೊದಲ ಬಾರಿ ಫೈನಲ್ ತಲುಪುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳಲ್ಲಿ ಕರ್ನಾಟಕ ಹಾಗೂ ಪಂಜಾಬ್ ವಿರುದ್ಧ ಶತಕ ಸಿಡಿಸಿದ್ದ ಜಾಕ್ಸನ್, ಟೂರ್ನಿಯಲ್ಲಿ ಒಟ್ಟಾರೆ 4 ಅರ್ಧಶತಕ ಹಾಗೂ ಮೂರು ಶತಕಗಳನ್ನು ಗಳಿಸಿದ್ದರು.
ನಿವೃತ್ತಿ ಬಗ್ಗೆ ಮೊದಲೇ ಚಿಂತಿಸಿದ್ದರು
ಈ ವರ್ಷದ ಆರಂಭದಿಂದಲೂ ಬ್ಯಾಟಿಂಗ್ ವೈಫಲ್ಯ ಕಂಡಿರುವ ಶೆಲ್ಡನ್ ಜಾಕ್ಸನ್, ಕಳೆದ ವರ್ಷ ನಡೆದಿದ್ದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ಪರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಅಲ್ಲದೆ ಸೈಯದ್ ಮುಷ್ತಾಕ್ ಆಲಿ ಟ್ರೋಫಿ ಟೂರ್ನಿಯಲ್ಲೂ ಆಡಲು ಅವಕಾಶ ಸಿಗದಿದ್ದಾಗ ನಿವೃತ್ತಿ ಘೋಷಿಸುವುದಾಗಿ ಶೆಲ್ಡನ್ ಜಾಕ್ಸನ್ ಹೇಳಿಕೊಂಡಿದ್ದರು. ಅದರಂತೆ ಇದೀಗ ಅವರು ನಿವೃತ್ತಿಯನ್ನು ಘೋಷಿಸಿದ್ದಾರೆ.
Farewell Sheldon Jackson. A domestic cricket stalwart who has called time on his professional career. A great servant of Saurashtra cricket, Jackson's first-class career spanned 14 years. He scored more than 7,000 runs in 106 matches.
— RevSportz Global (@RevSportzGlobal) February 11, 2025
Photo: Saurashtra Cricket Association (X) pic.twitter.com/8EPjFIVDpt
"ರಣಜಿ ಟ್ರೋಫಿ ಟೂರ್ನಿಯ ಆರಂಭಕ್ಕೂ ಮುನ್ನವೇ ನಾನು ನಿವೃತ್ತಿ ಹೊಂದುವುದಾಗಿ ಯೋಚಿಸಿದ್ದೆ. ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಡದೆ ಇರಲು ನಾನು ನಿರ್ಧರಿಸಿದ್ದೆ. ಆದರೆ ಆಯ್ಕೆ ಮಂಡಳಿಯು ನನ್ನನ್ನು ಮೈದಾನದಲ್ಲಿ ಆಡುವುದನ್ನು ನೋಡಲು ಬಯಸಿತ್ತು. ಅದು ಅವರ ಸೌಹಾರ್ದಯುತ ನಡೆಯಾಗಿತ್ತು. ಆದರೆ ಅವರು ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ಧನ್ಯವಾದ ತಿಳಿಸುತ್ತೇನೆ," ಎಂದು ಶೆಲ್ಡನ್ ಜಾಕ್ಸನ್ ಹೇಳಿದ್ದಾರೆ.
86 ಲಿಸ್ಟ್ ಎ ಹಾಗೂ 84 ದೇಶಿ ಟಿ20 ಪಂದ್ಯಗಳನ್ನು ಆಡಿರುವ ಜಾಕ್ಸನ್ ಕ್ರಮವಾಗಿ 2792 ಹಾಗೂ 1812 ರನ್ ಗಳಿಸಿದ್ದು, 10 ಶತಕ ಹಾಗೂ 25 ಅರ್ಧಶತಕಗಳನ್ನು ಬಾರಿಸಿದ್ದಾರೆ. 2017ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿರುವ ಶೆಲ್ಡನ್ ಜಾಕ್ಸನ್ 9 ಪಂದ್ಯಗಳಿಂದ 61 ರನ್ ಗಳಿಸಿದ್ದಾರೆ.