#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ranji Trophy: ತಮ್ಮ 200ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಶತಕ ಸಿಡಿಸಿದ ಅಜಿಂಕ್ಯ ರಹಾನೆ!

Ajinkya Rahane hits 29th hundred: ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಹರಿಯಾಣ ವಿರುದ್ಧ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದಾರೆ. ರಹಾನೆ ಅವರ 200ನೇ ಪ್ರಥಮ ದರ್ಜೆ ಪಂದ್ಯವಾಗಿದ್ದು, ಈ ಶತಕ ಬಲಗೈ ಬ್ಯಾಟ್ಸ್‌ಮನ್‌ಗೆ ಅತ್ಯಂತ ವಿಶೇಷವಾಗಿದೆ.

ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಶತಕ ಸಿಡಿಸಿದ ಅಜಿಂಕ್ಯ ರಹಾನೆ!

Ajinkya Rahane

Profile Ramesh Kote Feb 11, 2025 4:06 PM

ಕೋಲ್ಕತಾ: ಪ್ರಸ್ತುತ ನಡೆಯುತ್ತಿರುವ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ತಮ್ಮ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಹರಿಯಾಣ ವಿರುದ್ಧ ನಡೆಯುತ್ತಿರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಅಜಿಂಕ್ಯ ರಹಾನೆ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 29ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ತಂಡದ ಮುನ್ನಡೆಗೆ ನೆರವಾದರು. ಅಲ್ಲದೆ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ ವೃತ್ತಿ ಜೀವನದ 200ನೇ ಪಂದ್ಯದಲ್ಲಿಯೇ ಶತಕ ಸಿಡಿಸಿದ್ದು ಅಜಿಂಕ್ಯ ರಹಾನೆ ಅವರ ಪಾಲಿಗೆ ಅತ್ಯಂತ ವಿಶೇಷವಾಗಿದೆ.

ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಅಜೇಯ 88 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ ಅಜಿಂಕ್ಯ ರಹಾನೆ, ಮೊದಲನೇ ಸೆಷನ್‌ನಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಒಟ್ಟು 180 ಎಸೆತಗಳನ್ನು ಎದುರಿಸಿದ ಅವರು 13 ಮನಮೋಹಕ ಬೌಂಡರಿಗಳೊಂದಿಗೆ 108 ರನ್‌ಗಳನ್ನು ಕಲೆ ಹಾಕಿದರು. ಅಂತಿಮವಾಗಿ ಅವರು ಅನುಜ್‌ ಠಾಕ್ರಾಲ್‌ಗೆ ವಿಕೆಟ್‌ ಒಪ್ಪಿಸಿದರು. ಅಜಿಂಕ್ಯಾ ರಹಾನೆ ಶತಕದ ಬಲದಿಂದ ಮುಂಬೈ ತಂಡ, ಎದುರಾಳಿ ಹರಿಯಾಣ ತಂಡಕ್ಕೆ 354 ರನ್‌ಗಳ ಗುರಿಯನ್ನು ನೀಡಿತು. ಒಂದು ವೇಳೆ ಈ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡರೂ ಪ್ರಥಮ ಇನಿಂಗ್ಸ್‌ನಲ್ಲಿನ ಅಲ್ಪ ಮುನ್ನಡೆಯೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ.

Ranji Trophy quarterfinal: ಮುಂಬೈ ತಂಡ ಸೇರಿದ ಸೂರ್ಯಕುಮಾರ್‌, ದುಬೆ

ಅಜಿಂಕ್ಯ ರಹಾನೆ ಅವರು 12 ಟೆಸ್ಟ್‌ ಶತಕಗಳು ಸೇರಿದಂತೆ ಪ್ರಥಮ ದರ್ಜೆ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 41 ಶತಕಗಳನ್ನು ಪೂರ್ಣಗೊಳಿಸಿದ್ದಾರೆ. ಇದೀಗ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಬಲಗೈ ಬ್ಯಾಟ್ಸ್‌ಮನ್‌ 14000 ರನ್‌ಗಳ ಸನಿಹದಲ್ಲಿದ್ದಾರೆ. ಈ ಇನಿಂಗ್ಸ್‌ನಲ್ಲಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಕೂಡ 70 ರನ್‌ಗಳನ್ನು ಕಲೆ ಹಾಕಿದರು. ಅಲ್ಲದೆ ನಾಯಕ ಅಜಿಂಕ್ಯ ರಹಾನೆ ಜೊತೆ 129 ರನ್‌ಗಳ ಜೊತೆಯಾಟವನ್ನು ಆಡಿದ್ದಾರೆ. ಇದಾದ ಬಳಿಕ ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ 48 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಮುಂಬೈ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 339 ರನ್‌ಗಳನ್ನು ಕಲೆ ಹಾಕಿತು.



ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ಮುಂಬೈ ತಂಡದ ಪರ ಶ್ಯಾಮ್ಸ್‌ ಮುಲಾನಿ 91 ರನ್‌ ಹಾಗೂ ತನುಷ್‌ ಕೋಟಿಯನ್‌ 97 ರನ್‌ಗಳನ್ನು ಕಲೆ ಹಾಕಿದ್ದರು. ಇದರೊಂದಿಗೆ ಮುಂಬೈ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 315 ರನ್‌ಗಳನ್ನು ಕಲೆ ಹಾಕಿತ್ತು. ಹರಿಯಾಣ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 301 ರನನ್‌ಗಳನ್ನು ಕಲೆ ಹಾಕಿತ್ತು. ಅಂದ ಹಾಗೆ ಅಂತಿಮ ಇನಿಂಗ್ಸ್‌ನಲ್ಲಿ 354 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಹರಿಯಾಣ ತಂಡ, 44 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 154 ರನ್‌ಗಳನ್ನುಕಲೆ ಹಾಕಿತು. ಹರಿಯಾಣ ತಂಡಕ್ಕೆ ಗೆಲ್ಲಲು ಇನ್ನೂ 200 ರನ್‌ಗಳ ಅಗತ್ಯವಿದೆ. ಮುಂಬೈ ತಂಡಕ್ಕೆ ಗೆಲ್ಲಲು ಇನ್ನೂ ಕೇವಲ 4 ವಿಕೆಟ್‌ಗಳ ಅಗತ್ಯವಿದೆ.

ಅಜಿಂಕ್ಯಾ ರಹಾನೆಯ ಫಾರ್ಮ್‌

ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಆಡಿದ 12 ಇನಿಂಗ್ಸ್‌ಗಳಿಂದ 437 ರನ್‌ಗಳನ್ನು ಕಲೆ ಹಾಕಿದೆ. ಇದರಲ್ಲಿ ಅವರು ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. 2023ರ ಜುಲೈ ತಿಂಗಳಲ್ಲಿ ಭಾರತ ತಂಡದ ಪರ ರಹಾನೆ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ದೇಶಿ ಕ್ರಿಕೆಟ್‌ನಲ್ಲಿ ನಿರತರಾಗಿದ್ದಾರೆ. ಇದಕ್ಕೂ ಮುನ್ನ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಅವರು 469 ರನ್‌ಗಳನ್ನು ಸಿಡಿಸಿದ್ದರು.