Ranji Trophy: ಕರ್ನಾಟಕ ತಂಡದಲ್ಲಿ ಕೆಎಲ್ ರಾಹುಲ್‌ರ ಬ್ಯಾಟಿಂಗ್ ಕ್ರಮಾಂಕ ಹೆಸರಿಸಿದ ಕೋಚ್!
KL Rahul's Batting Order: ಕರ್ನಾಟಕ ಹಾಗೂ ಹರಿಯಾಣ ತಂಡಗಳ ನಡುವಣ 2024-25ರ ಸಾಲಿನ ರಣಜಿ ಟ್ರೋಫಿ ಪಂದ್ಯ ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯದ ನಿಮಿತ್ತ ಕರ್ನಾಟಕ ತಂಡದ ಹೆಡ್ ಕೋಚ್ ಯರೇಗೌಡ ಅವರು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಸುದೀರ್ಘಾ ಅವಧಿಯ ಬಳಿಕ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರು ಕರ್ನಾಟಕ ತಂಡದ ಪರ ರಣಜಿ ಟ್ರೋಫಿ ಪಂದ್ಯಕ್ಕೆ ಮರಳಲಿದ್ದಾರೆ. ಗುರುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ 2024-25ರ ಸಾಲಿನ ರಣಜಿ ಟ್ರೋಫಿ ಪಂದ್ಯದಲ್ಲಿ ಹರಿಯಾಣ ವಿರುದ್ದ ಕರ್ನಾಟಕ ತಂಡ ಸೆಣಸಲಿದೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡಲಿದ್ದಾರೆ. ಈ ಪಂದ್ಯದ ನಿಮಿತ್ತ ಮಾತನಾಡಿದ ಕರ್ನಾಟಕ ತಂಡದ ಕೋಚ್ ಯರೇಗೌಡ, ಕೆಎಲ್ ರಾಹುಲ್ ತಂಡದ ಪ್ಲೇಯಿಂಗ್ XIನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆಂದು ಖಚಿತಪಡಿಸಿದ್ದಾರೆ.
ಕೆಎಲ್ ರಾಹುಲ್ ಅವರು 2019-20ರ ಸಾಲಿನ ಬಳಿಕ ಇದೇ ಮೊದಲ ಬಾರಿ ರಣಜಿ ಟ್ರೋಫಿ ಪಂದ್ಯವನ್ನು ಆಡಲು ಎದುರು ನೋಡುತ್ತಿದ್ದಾರೆ. ಅದ ಹಾಗೆ ಪಂಜಾಬ್ ವಿರುದ್ಧ ಕಳೆದ ಪಂದ್ಯದಲ್ಲಿಯೇ ಕೆಎಲ್ ರಾಹುಲ್ ಆಡಬೇಕಾಗಿತ್ತು. ಆದರೆ, ಗಾಯದ ಕಾರಣ ಅವರು ಈ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಿಷಭ್ ಪಂತ್ ಸೇರಿ ಕೆಎಲ್ ರಾಹುಲ್ ಅವರ ಟೆಸ್ಟ್ ತಂಡದ ಸಹ ಆಟಗಾರರು ತಮ್ಮ-ತಮ್ಮ ಸ್ಥಳೀಯ ತಂಡಗಳ ಪರ ಆಡಿದ್ದರು.
Ranji Trophy ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಎಷ್ಟು ಶತಕಗಳನ್ನು ಸಿಡಿಸಿದ್ದಾರೆ?
ಇದೀಗ ಕೆಎಲ್ ರಾಹುಲ್ ಸೇರ್ಪಡೆಯಾಗಿದ್ದರಿಂದ ಕರ್ನಾಟಕ ತಂಡ ಅತ್ಯಂತ ಬಲಿಷ್ಠವಾಗಿದೆ. ಕೆಎಲ್ ರಾಹುಲ್ ಜೊತೆಗೆ ವೇಗದ ಬೌಲರ್ ವಿದ್ವತ್ ಕಾವೇರಪ್ಪ ಕೂಡ ಗಾಯದಿಂದ ಗುಣಮುಖರಾಗಿ ತಂಡಕ್ಕೆ ಮರಳಿದ್ದಾರೆ. ಇದರೊಂದಿಗೆ ಕರ್ನಾಟಕ ತಂಡ ಹರಿಯಾಣ ವಿರುದ್ದ ಗೆದ್ದು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ. ಹರಿಯಾಣ ವಿರುದ್ಧದ ಪಂದ್ಯದ ನಿಮಿತ್ತ ಕೆಎಲ್ ರಾಹುಲ್ ಅವರು 40 ನಿಮಿಷಗಳ ಕಾಲ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರು.
ಹರಿಯಾಣ ವಿರುದ್ಧದ ಪಂದ್ಯದ ನಿಮಿತ್ತ ಮಾಧ್ಯಮದ ಜೊತೆ ಮಾತನಾಡಿದ ಯರೇಗೌಡ, "ಕೆಎಲ್ ರಾಹುಲ್ ಅವರು ಸಾಕಷ್ಟು ಅನುಭವವನ್ನು ತರುತ್ತಾರೆ ಮತ್ತು ಆಟದ ಎಲ್ಲಾ ಅಂಶಗಳಲ್ಲಿ ತಂಡಕ್ಕೆ ಅಪಾರ ಮೌಲ್ಯವನ್ನು ತಂದು ಕೊಡುತ್ತಾರೆ. ನಾವು ಪರಿಸ್ಥಿತಿಗಳನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸುತ್ತೇವೆ, " ಎಂದು ಪಿಟಿಐಗೆ ಹೇಳಿದ ಕರ್ನಾಟಕ ಕೋಚ್ ಯರೇಗೌಡ್, "ಕೆ.ಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
PRIDE OF KARNATAKA..!!!
— DEEP SINGH (@CrazyCricDeep) January 29, 2025
" Kl Rahul , Mayank Agarwal, Devdutt Padikkal "#ranjitrophy2025 #KLRahul pic.twitter.com/lpsRW0FstD
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅಂದ ಹಾಗೆ ಅವರು ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿಯೂ ಸ್ಥಾನ ಪಡೆದಿರುವ ಅವರು, ರಣಜಿ ಪಂದ್ಯದ ಮೂಲಕ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.
ಹರಿಯಾಣ ಪಂದ್ಯಕ್ಕೆ ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ (ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಗೋಪಾಲ್ (ಉಪ ನಾಯಕ), ದೇವದತ್ ಪಡಿಕ್ಕಲ್, ಅನೀಷ್ ಕೆವಿ, ಸ್ಮರಣ್ ಆರ್, ಶ್ರೀಜಿತ್ ಕೆಎಲ್ (ವಿ.ಕೀ), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿಧ್ ಕೃಷ್ಣ, ವಿದ್ವತ್ ಕಾವೇರಪ್ಪ, ವಿ ಕೌಶಿಕ್, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರಾಂತಪ್, ನಿಕಿನ್ ಜೋಸ್, ಸುಜಯ್ ಸತೇರಿ (ವಿ.ಕೀ), ಮೊಹ್ಸಿನ್ ಖಾನ್.