#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ranji Trophy ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಎಷ್ಟು ಶತಕಗಳನ್ನು ಸಿಡಿಸಿದ್ದಾರೆ?

Virat Kohli's Ranji Comeback: ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ದೀರ್ಘಾವಧಿ ಬಳಿಕ ರಣಜಿ ಟ್ರೋಫಿ ಕ್ರಿಕೆಟ್‌ಗೆ ಮರಳಲು ಸಜ್ಜಾಗುತ್ತಿದ್ದಾರೆ. ಗುರುವಾರದಿಂದ ಆರಂಭವಾಗುವ ದಿಲ್ಲಿ ಹಾಗೂ ರೈಲ್ವೇಸ್‌ ನಡುವಣ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ದೇಶಿ ಕ್ರಿಕೆಟ್‌ಗೆ ಮರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ರಣಜಿ ಟ್ರೋಫಿ ಟೂರ್ನಿಯ ಅಂಕಿಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ವಿರಾಟ್‌ ಕೊಹ್ಲಿಯ ರಣಜಿ ಟ್ರೋಫಿ ಟೂರ್ನಿಯ ಅಂಕಿಅಂಶಗಳ ವಿವರ!

Virat Kohli

Profile Ramesh Kote Jan 29, 2025 5:38 PM

ನವದೆಹಲಿ: ಬರೋಬ್ಬರಿ 13 ವರ್ಷಗಳ ಬಳಿಕ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ರಣಜಿ ಟ್ರೋಫಿ ಟೂರ್ನಿಗೆ ಮರಳಲು ಸಜ್ಜಾಗಿದ್ದಾರೆ. ಜನವರಿ 30 ರಿಂದ ಫೆಬ್ರವರಿ 2 ರವರೆಗೆ ದಿಲ್ಲಿಯ ಅರುಣ್‌ ಜೆಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ ದಿಲ್ಲಿ ಹಾಗೂ ರೈಲ್ವೇಸ್‌ ನಡುವಣ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಡಲಿದ್ದಾರೆ.

ಇದಕ್ಕೂ ಮುನ್ನ ರಣಜಿ ಟ್ರೋಫಿ ಟೂರ್ನಿಯ ಎರಡನೇ ಅವಧಿಯ ಮೊದಲನೇ ಸುತ್ತಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಶುಭಮನ್‌ ಗಿಲ್‌ ಆಯಾ ಸ್ಥಳೀಯ ತಂಡಗಳ ಪರ ಆಡಿದ್ದರು. ಕುತ್ತಿಗೆಯಲ್ಲಿ ಗಾಯವಾಗಿದ್ದ ಕಾರಣ ವಿರಾಟ್‌ ಕೊಹ್ಲಿ ಸೌರಾಷ್ಟ್ರ ವಿರುದ್ಧದ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ.

ದಿಲ್ಲಿ ತಂಡಕ್ಕೂ ಸೇರ್ಪಡೆಯಾಗುವುದಕ್ಕೂ ಮುನ್ನ ವಿರಾಟ್‌ ಕೊಹ್ಲಿ ಅವರು ಮುಂಬೈನಲ್ಲಿ ಆರ್‌ಸಿಬಿ ಮಾಜಿ ಕೋಚ್‌ ಸಂಜಯ್‌ ಬಾಂಗರ್‌ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ್ದರು. ಅದರಂತೆ ಮಂಗಳವಾರ ಆಯುಷ್‌ ಬದೋನಿ ನಾಯಕತ್ವದ ದಿಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದ ವಿರಾಟ್‌ ಕೊಹ್ಲಿ ಅಭ್ಯಾಸ ನಡೆಸಿದ್ದರು. ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದ ವಿರಾಟ್‌ ಕೊಹ್ಲಿ ಯುವ ಆಟಗಾರರ ಬಳಿ ತಮ್ಮ ಅನುಭವನ್ನು ಹಂಚಿಕೊಂಡಿದ್ದರು ಹಾಗೂ ಬ್ಯಾಟಿಂಗ್‌ ಸಂಬಂಧಿಸಿದಂತೆ ಹಲವು ಸಲಹೆಗಳನ್ನುನೀಡಿದ್ದರು.

Virat Kohli: 12 ವರ್ಷದ ಬಳಿಕ ರಣಜಿಯಲ್ಲಿ ವಿರಾಟ್‌ ಕೊಹ್ಲಿ ಆಟ

ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಮೊದಲನೇ ದಿನ ಅಭ್ಯಾಸ ಮುಗಿಸಿದ ಬಳಿಕ ವಿರಾಟ್‌ ಕೊಹ್ಲಿ ಅವರು ತಮ್ಮ ನೆಚ್ಚಿನ ಖಾದ್ಯವಾದ ಕಾಧಿ ಚಹಾಲ್‌ ಅನ್ನು ಸವಿದಿದ್ದರು. ಬುಧವಾರ ಕೂಡ ವಿರಾಟ್‌ ಕೊಹ್ಲಿ ರೈಲ್ವೇಸ್‌ ವಿರುದ್ದದ ಪಂದ್ಯಕ್ಕೆ ಅಭ್ಯಾಸವನ್ನು ನಡೆಸಿದ್ದರು. ವಿರಾಟ್‌ ಕೊಹ್ಲಿ ಆಡುತ್ತಿರುವ ಹಿನ್ನೆಲೆಯಲ್ಲಿ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.

2006ರಲ್ಲಿ ರಣಜಿ ಟ್ರೋಫಿಗೆ ಕೊಹ್ಲಿ ಪದಾರ್ಪಣೆ

2006ರಲ್ಲಿ ವಿರಾಟ್‌ ಕೊಹ್ಲಿ ಅವರು ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ರಣಜಿ ಟ್ರೋಫಿ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. 2012ರ ನವೆಂಬರ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ವಿರಾಟ್‌ ಕೊಹ್ಲಿ ಕೊನೆಯ ರಣಜಿ ಪಂದ್ಯವನ್ನು ಆಡಿದ್ದರು. ಒಟ್ಟಾರೆ ವಿರಾಟ್‌ ಕೊಹ್ಲಿ 23 ರಣಜಿ ಟ್ರೋಫಿ ಪಂದ್ಯಗಳನ್ನು ಆಡುವ ಮೂಲಕ 1547 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಐದು ಶತಕಗಳನ್ನು ಸಿಡಿಸಿದ್ದಾರೆ. 2011ರ ಜೂನ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಒಂದೇ ಒಂದು ರಣಜಿ ಪಂದ್ಯವನ್ನು ಮಾತ್ರ ಆಡಿದ್ದರು.



ವಿರಾಟ್‌ ಕೊಹ್ಲಿಯ ರಣಜಿ ಟ್ರೋಫಿ ಅಂಕಿಅಂಶಗಳು

ಪಂದ್ಯಗಳು: 23

ರನ್‌ಗಳು: 1547 ರನ್‌ಗಳು

ಶತಕಗಳು: 05

ರಣಜಿ ಟ್ರೋಫಿ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ವರ್ಷಗಳಲ್ಲಿ ಪ್ರದರ್ಶನ

2006-07 - 6 ಪಂದ್ಯಗಳು, 257 ರನ್, ಒಂದು ಅರ್ಧಶತಕ, ಗರಿಷ್ಠ ಸ್ಕೋರ್ 90

2007-08 - 5 ಪಂದ್ಯಗಳು, 373 ರನ್, 2 ಶತಕ, ಗರಿಷ್ಠ ಸ್ಕೋರ್ 169

2008-09 - 4 ಪಂದ್ಯಗಳು, 174 ರನ್, 2 ಅರ್ಧಶತಕ, ಗರಿಷ್ಠ ಸ್ಕೋರ್ 83

2009-10 - 3 ಪಂದ್ಯಗಳು, 374 ರನ್, ಒಂದು ಶತಕ, ಎರಡು ಅರ್ಧಶತಕ, ಗರಿಷ್ಠ ಸ್ಕೋರ್ 145

2010-11 - 4 ಪಂದ್ಯಗಳು, 339 ರನ್, 2 ಶತಕ, ಗರಿಷ್ಠ ಸ್ಕೋರ್ 173

2012-13 - 1 ಪಂದ್ಯ, 57 ರನ್, ಗರಿಷ್ಠ ಸ್ಕೋರ್ 43