Rapper Naezy: ಬಿಗ್ ಬಾಸ್ OTT ಖ್ಯಾತಿಯ ರ್‍ಯಾಪರ್ ನೇಜಿ ಸಂಗೀತ ಉದ್ಯಮದಲ್ಲಿನ ಅನುಭವ ಬಗ್ಗೆ ಹೇಳಿದ್ದೇನು?
ತನ್ನ ಶಾಲಾ ದಿನದ ನೆನಪು ಮಾಡಿಕೊಂಡ ರ್‍ಯಾಪರ್ ನೇಜಿ ಶೌಚಾಲಯದ ಬಾಗಿಲು ಒಡೆದಿದ್ದಕ್ಕೆ ಪ್ರಾಂಶುಪಾಲರು ಥಳಿಸಿದ ಘಟನೆಯನ್ನು ಹಂಚಿಕೊಂಡಿದ್ದಾರೆ. ಇಂಗ್ಲಿಷ್-ಮಾಧ್ಯಮ ಶಾಲೆಯಲ್ಲಿ ಓದಿರುವುದರಿಂದ ಹಿಪ್ ಹಾಪ್ ಹಾಡುಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.

rapper Naezy

ನವದೆಹಲಿ: ಬಿಗ್ ಬಾಸ್ OTT 3 ಖ್ಯಾತಿಯ ರ್‍ಯಾಪರ್ ನೇಜಿ (Rapper Naezy) ಎಂದೇ ಜನಪ್ರಿಯರಾಗಿರುವ ನಾವೇದ್ ಶೇಖ್ ಅವರು ಮುಂಬೈ ಮೂಲದ ರ್‍ಯಾಪರ್ ಆಗಿದ್ದು, ಸ್ಟ್ರೀಟ್ ಹಿಪ್ ಹಾಪ್ ಶೈಲಿಯಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ಸಂದರ್ಶನ ವೊಂದರಲ್ಲಿ ರ್‍ಯಾಪರ್ ನೇಜಿ ತಮ್ಮ ಶಾಲಾ ದಿನದ ನೆನಪನ್ನು ಮತ್ತು ಸಂಗೀತ ಉದ್ಯಮದಲ್ಲಿನ ಅನುಭವದ ಬಗ್ಗೆ ಮೆಲುಕು ಹಾಕಿದ್ದಾರೆ.
ತನ್ನ ಶಾಲಾ ದಿನದ ನೆನಪು ಮಾಡಿಕೊಂಡ ರ್‍ಯಾಪರ್ ನೇಜಿ ಶೌಚಾಲಯದ ಬಾಗಿಲು ಒಡೆದಿದ್ದಕ್ಕೆ ಪ್ರಾಂಶುಪಾಲರು ಥಳಿಸಿದ ಘಟನೆಯನ್ನು ಹಂಚಿಕೊಂಡಿದ್ದಾರೆ. ಇಂಗ್ಲಿಷ್-ಮಾಧ್ಯಮ ಶಾಲೆಯಲ್ಲಿ ಓದಿರುವುದರಿಂದ ಹಿಪ್ ಹಾಪ್ ಹಾಡುಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.
ಕಾಲೇಜು ಅವಧಿಯಲ್ಲೇ ಸಂಗೀತ ಕುರಿತಾಗಿ ಆಸಕ್ತಿ ಹೆಚ್ಚಿತ್ತು. ಸೈಬರ್ ಸೆಂಟರ್ ಮೂಲಕ ಬ್ಲ್ಯಾಕ್ ಐಡ್ ಪೀಸ್ ಮತ್ತು ಟೇಲರ್ ಸ್ವಿಫ್ಟ್ ಅವರ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಂಡು ಆ ದಿನದಲ್ಲೇ ಅಭ್ಯಾಸ ಮಾಡುತ್ತಿದೆ. ತನಗೆ ಇಷ್ಟ ವಾದ ಹುಡುಗಿಯನ್ನು ಮೆಚ್ಚಿ ಸಲು ಸಾಹಿತ್ಯ ರಚಿಸಲು ಕಲಿತೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇವರ ಸಾಹಿತ್ಯವನ್ನು ಯಾರೋ ಕದ್ದ ನಂತರ ವೃತ್ತಿ ಜೀವನವು ಪ್ರಾರಂಭವಾಯಿತು. ಸಂಗೀತದ ಬಗ್ಗೆ ಉತ್ಸಾಹ ಮತ್ತಷ್ಟು ಹೆಚ್ಚಿಸಿತು ಅಂದಿದ್ದಾರೆ.
ಡಿವೈನ್ ಮತ್ತು ನೇಜಿ ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಮಾತನಾಡಿದ ನೇಜಿ, ಡಿವೈನ್ ಅವರು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ನಾನು ಇನ್ನೂ ಆ ಮಟ್ಟವನ್ನು ತಲುಪಿಲ್ಲ. ಆದರೆ ನಾವು ಇಬ್ಬರು ಸಹೋದರರು ಇದ್ದಂತೆ. ನಮ್ಮಲ್ಲಿ ಪರಸ್ಪರ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.
ರ್‍ಯಾಪರ್ ನೇಜಿ ಅವರು ಡಿವೈನ್ ಜತೆ ʼಮೇರೆ ಗಲ್ಲಿ ಮೇʼ ಹಾಡಿನೊಂದಿಗೆ ರ್‍ಯಾಪ್ ಸಾಂಗ್ ಲೋಕಕ್ಕೆ ಪ್ರವೇಶಿಸಿದರು. ಜೋಯಾ ಅಖ್ತರ್ ನಿರ್ದೇಶನದ ʼಗಲ್ಲಿ ಬಾಯ್ʼ ಚಿತ್ರದ ಹಾಡು ಇದಾಗಿದ್ದು, ರಣವೀರ್ ಸಿಂಗ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ ನೇಜಿ ಈ ಸಿನಿಮಾ ಕಾಲ್ಪನಿಕವಾಗಿದೆ. ಈ ಸಿನಿಮಾ ನಿಜ ಜೀವನವನ್ನು ಪ್ರತಿಬಿಂಬಿಸಿಲ್ಲ. ಹಾಗಾಗಿ ವಾಸ್ತವದಿಂದ ಈ ಸಿನಿಮಾ ದೂರ ಇದೆ ಎಂದು ನೇಜಿ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: Ayodhya: ಅಯೋಧ್ಯೆಯ ರಾಮಲಲ್ಲಾನಿಗೆ ಒಂದು ವರ್ಷದ ಸಂಭ್ರಮ; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು ಭಾರತ!
ನಾನು ನನ್ನ ಕಷ್ಟದ ಸಮಯದಲ್ಲಿ ಹಾಡುಗಳನ್ನು ಬರೆಯುತ್ತೇನೆ ಮತ್ತು ಒಳ್ಳೆಯ ಸಮಯದಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತೇನೆ. ಹೀಗಾಗಿ ರ್‍ಯಾಪ್ ಹಾಡುಗಳ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದೇನೆ ಎಂದಿದ್ದಾರೆ. ಹಿಪ್ ಹಾಪ್ ಹಾಡನ್ನು ಬಿಡುಗಡೆ ಮಾಡಿದವರಲ್ಲಿ ನೇಜಿ ಮೊದಲಿಗರಾಗಿದ್ದು, ಕೆಲಸ ಇಲ್ಲದ ಸಂದರ್ಭ ಉದ್ಯಮದಿಂದ ದೂರವಿದ್ದಾಗ ನನ್ನ ಆಸಕ್ತಿಯ ರ್‍ಯಾಪ್ ಹಾಡು ನನ್ನನ್ನು ಕೈ ಹಿಡಿದಿದೆ. ಆ ಬಳಿಕ ನೇಜಿ ಅವರು ಕ್ಲಬ್‌ಗಳಲ್ಲಿ, ಪಾರ್ಟಿ ಆಯೋಜನೆ ಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರಂತೆ.