Sensex Today : ಬ್ಯಾಂಕಿಂಗ್‌ಗೆ ಆರ್‌ಬಿಐ 1.5 ಲಕ್ಷ ಕೋಟಿ ರೂ. ನೆರವು ಘೋಷಣೆ, ಸೆನ್ಸೆಕ್ಸ್ 800 ಅಂಕ ಜಿಗಿತ
ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 800 ಅಂಕ ಏರಿಕೆ ದಾಖಲಿಸಿತು. ಬ್ಯಾಂಕಿಂಗ್ ವ್ಯವಸ್ಥೆಗೆ ಒಟ್ಟು 1.5 ಲಕ್ಷ ಕೋಟಿ ರೂ.ಗಳ ನಗದು ಹರಿವಿಗೆ ಆರ್‌ಬಿಐ ಪೂರಕ ಕ್ರಮಗಳನ್ನು ಘೋಷಿಸಿದ ಬೆನ್ನಲ್ಲೇ ಸ್ಟಾಕ್ ಮಾರ್ಕೆಟ್‌ನಲ್ಲಿ ಏರಿಕೆ ಕಂಡಿದೆ.

Stack Market

ಮುಂಬೈ: (Sensex Today) ಬ್ಯಾಂಕಿಂಗ್ ವ್ಯವಸ್ಥೆಗೆ ಒಟ್ಟು 1.5 ಲಕ್ಷ ಕೋಟಿ ರೂ.ಗಳ ನಗದು ಹರಿವಿಗೆ ಆರ್‌ಬಿಐ ಪೂರಕ ಕ್ರಮಗಳನ್ನು ಘೋಷಿಸಿದ ಬೆನ್ನಲ್ಲೇ ಸ್ಟಾಕ್ ಮಾರ್ಕೆಟ್‌ನಲ್ಲಿ ಮಂಗಳವಾರ ಬೆಳಗ್ಗೆ ಸೂಚ್ಯಂಕಗಳು ಜಿಗಿಯಿತು. ಜತೆಗೆ ಫೆಬ್ರವರಿ 7ರಂದು ಬಡ್ಡಿ ದರ ಇಳಿಕೆಯನ್ನೂ ನಿರೀಕ್ಷಿಸಲಾಗಿದೆ. ಕೋವಿಡ್ ಬಿಕ್ಕಟ್ಟಿನ ಬಳಿಕ ಆರ್‌ಬಿಐ (RBI) ಘೋಷಿಸಿದ ಅತಿ ದೊಡ್ಡ ಬ್ಯಾಂಕಿಂಗ್ ನೆರವು ಇದಾಗಿದೆ. ಡಾಲರ್ ಎದುರು ರೂಪಾಯಿಯ ಸ್ಥಿರತೆಗೂ ಇದು ನೆರವಾಗಲಿದೆ.
ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 800 ಅಂಕ ಏರಿಕೆ ದಾಖಲಿಸಿತು. 76,095 ಕ್ಕೆ ವೃದ್ಧಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 176 ಅಂಕ ಏರಿಕೊಂಡು 23,006ಕ್ಕೆ ಜಿಗಿಯಿತು. ಖಾಸಗಿ ವಲಯದ ಬ್ಯಾಂಕ್‌ಗಳ ಷೇರುಗಳು ಭಾರಿ ಲಾಭ ಗಳಿಸಿತು. ಬ್ಯಾಂಕಿಂಗ್ ವ್ಯವಸ್ಥೆಗೆ ನಗದು ಪೂರೈಕೆ ಮಾಡುವ ಸಂಬಂಧ ಆರ್‌ಬಿಐ ಹಲವು ಕ್ರಮಗಳನ್ನು ಘೋಷಿಸಿದ ಬೆನ್ನಲ್ಲೇ ಷೇರು ಸೂಚ್ಯಂಕ ಜಿಗಿಯಿತು. ಆರ್‌ಬಿಐ 56 ದಿನಗಳ ವೇರಿಯೆಬಲ್ ರೇಟ್ ರೊಪೊ ಹರಾಜನ್ನೂ ನಡೆಸಲಿದ್ದು, ಇದರ ಮೌಲ್ಯ 50,000 ಕೋಟಿ ರೂ.ಗಳಾಗಿದೆ. ಕೊನೆಗೆ ಡಾಲರ್-ರೂಪಾಯಿ ಕೊಡು ಕೊಳ್ಳುವಿಕೆಯ ಪ್ರಕ್ರಿಯೆಯನ್ನೂ ಕೈಗೊಳ್ಳಲಿದೆ.
ಬ್ಯಾಂಕಿಂಗ್ ಷೇರುಗಳು ಲಅಭ ಗಳಿಸಿತು. ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಇಂಡಸ್ ಇಂಡ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಷೇರು ದರ ಏರಿತು. ನಿಫ್ಟಿ ರಿಯಾಲ್ಟಿ ಇಂಡೆಕ್ಸ್ 2% ಏರಿತು.
ಆರ್‌ಬಿಐ ಘೋಷಣೆ ಏನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 60,000 ಕೋಟಿ ರೂಪಾಯಿಗಳ ಒಎಂಒ ಅಥವಾ ಓಪನ್ ಮಾರ್ಕೆಟ್ ಆಪರೇಷನ್ ಕಾರ್ಯಕ್ರಮವನ್ನು ಘೋಷಿಸಿದೆ. ಹಾಗಾದರೆ ಏನಿದು ಒಎಂಒ? ಇದು ಹೇಗೆ ಕೆಲಸ ಮಾಡುತ್ತೆ? ಇಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರಿ ಸಾಲಪತ್ರಗಳು ಅಥವಾ ಬಾಂಡ್‌ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುತ್ತದೆ. ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಗೆ ಹಣ ಹರಿದು ಬರುತ್ತದೆ. ಬಡ್ಡಿ ದರ ಇಳಿಸಲು ವಾತಾವರಣ ಸೃಷ್ಟಿಯಾಗುತ್ತದೆ. ಬಾಂಡ್‌ಗಳನ್ನು ಆರ್‌ಬಿಐ ಮಾರಿದರೆ ಹಣದ ಪೂರೈಕೆ ಕಡಿಮೆಯಾಗುತ್ತದೆ. ಹಣದುಬ್ಬರವನ್ನು ನಿಯಂತ್ರಿಸಲು ಹಾಗೂ ಆರ್ಥಿಕ ಪ್ರಗತಿಯನ್ನು ಉತ್ತೇಜಿಸಲು ಆರ್‌ಬಿಐ ಒಎಂಒ ಪದ್ಧತಿ ಅನುಸರಿಸುತ್ತದೆ. ಇದೀಗ ಆರ್‌ಬಿಐ 20,000 ರೂ.ಗಳ ಮೂರು ಕಂತುಗಳಲ್ಲಿ ಬಾಂಡ್‌ಗಳನ್ನು ಖರೀದಿಸಲಿದ್ದು, ಬ್ಯಾಂಕಿಂಗ್ ವ್ಯವಸ್ಥೆಗೆ 60,000 ಕೋಟಿ ರೂ. ಸಿಗಲಿದೆ. ಜನವರಿ 30, ಫೆಬ್ರವರಿ 13 ಮತ್ತು ಫೆಬ್ರವರಿ 20ರಂದು ಒಎಂಒ ನಡೆಯಲಿದೆ