Mohan Vishwa Column: ಧರ್ಮಾಧಾರಿತ ಮೀಸಲಾತಿ ಸಲ್ಲದು
ಮುಸಲ್ಮಾನರ ಋಣ ಸಂದಾಯದ ಮುಂದುವರಿದ ಭಾಗವಾಗಿ ಸರಕಾರಿ ಟೆಂಡರ್‌ಗಳಲ್ಲಿ ಮುಸಲ್ಮಾನರಿಗೆ ಶೇ.4ರ ಮೀಸಲಾತಿ ದಕ್ಕಿತು. ಸಂವಿಧಾನದ ಪ್ರಕಾರ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕೆ ನಿಷೇಧವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೇರವಾಗಿ ಮೀಸ ಲಾತಿ ನೀಡುವ ಅವಕಾಶವನ್ನು ಸಂವಿಧಾನದ ಪರಿಚ್ಛೇದ 15 ಮತ್ತು 42ರಲ್ಲಿ ಕಲ್ಪಿಸಲಾಗಿದೆ.


ವೀಕೆಂಡ್ ವಿತ್ ಮೋಹನ್
camohanbn@gmail.com
ಓಲೈಕೆ ರಾಜಕಾರಣ ಹಳೆಯ ಟ್ರೆಂಡ್. ಈಗೇನಿದ್ದರೂ ಋಣಸಂದಾಯದ ರಾಜಕಾರಣ. ತನಗೆ ದೊಡ್ಡ ಮಟ್ಟದಲ್ಲಿ ಮತ ನೀಡಿದ ಮುಸ್ಲಿಂ ಸಮುದಾಯದವರ ಋಣ ತೀರಿಸಲು ಯಾವ ಮಟ್ಟದ ಸಹಾಯ ಬೇಕಾದರೂ ಮಾಡಲು ಸಿದ್ಧವಿರುವುದಾಗಿ ರಾಜ್ಯ ಸರಕಾರ ಆಗಾಗ ತೋರಿಸಿಕೊಳ್ಳುತ್ತಿರುತ್ತದೆ. 2023ರ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರು ತಂಡೋಪತಂಡವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದರು. ನಂತರ ಅನೇಕ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು, ಹಕ್ಕು ಪ್ರತಿಪಾದಿಸುವ ಮಾದರಿಯಲ್ಲಿ ತಮ್ಮ ಕೆಲಸ ಮಾಡಿಸಿ ಕೊಂಡರು. ಜಮೀರ್ ಅಹ್ಮದ್ ತಮ್ಮ ಅನುಯಾಯಿಗಳಿಗೆ ಮಾತು ಕೊಟ್ಟಂತೆ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ, ಅವರು ರೌಡಿ ಶೀಟರ್‌ಗಳಾಗಿ ದಾಖಲಾಗುವಂತೆ ನೋಡಿ ಕೊಂಡರು.
ಅನೇಕ ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡಲಾಯಿತು. ನಂತರ ಬಜೆಟ್‌ನಲ್ಲಿ, ಮುಸಲ್ಮಾನರಿಗೆ ನೀಡುತ್ತಿದ್ದ ಅನುದಾನವನ್ನು ಹೆಚ್ಚಿಸಲಾಯಿತು; ಮುಸ್ಲಿಮರಿಗೆ 10000 ಕೋಟಿ ರು. ನೀಡುವುದಾಗಿ ಮುಖ್ಯಮಂತ್ರಿಗಳು ಬಹಿರಂಗ ಸಭೆಯಲ್ಲಿ ಹೇಳಿದ್ದುಂಟು. ತಾಲೂಕು ಮಟ್ಟದಲ್ಲಿ ವಕ್ಫ್ ಅದಾಲತ್ ನಡೆಸಿ ಹಿಂದೂಗಳ ಭೂಮಿಯನ್ನು ಕಸಿದು ಕೊಳ್ಳುವ ಕೆಲಸ ಪ್ರಾರಂಭವಾಯಿತು.
ಮುಸಲ್ಮಾನರ ಋಣ ಸಂದಾಯದ ಮುಂದುವರಿದ ಭಾಗವಾಗಿ ಸರಕಾರಿ ಟೆಂಡರ್‌ಗಳಲ್ಲಿ ಮುಸಲ್ಮಾನರಿಗೆ ಶೇ.4ರ ಮೀಸಲಾತಿ ದಕ್ಕಿತು. ಸಂವಿಧಾನದ ಪ್ರಕಾರ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕೆ ನಿಷೇಧವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೇರ ವಾಗಿ ಮೀಸಲಾತಿ ನೀಡುವ ಅವಕಾಶವನ್ನು ಸಂವಿಧಾನದ ಪರಿಚ್ಛೇದ 15 ಮತ್ತು 42ರಲ್ಲಿ ಕಲ್ಪಿಸಲಾಗಿದೆ.
ಬ್ರಿಟಿಷರ ಕಾಲದಲ್ಲಿ, ಮುಸಲ್ಮಾನರಿಗೆ ಮೀಸಲಾತಿ ನೀಡುವ ವಿಧೇಯಕವೊಂದಿತ್ತು. 1947 ರ ಸ್ವಾತಂತ್ರ್ಯಾನಂತರ ಸಂವಿಧಾನ ಜಾರಿಗೆ ಬಂತು. ಬ್ರಿಟಿಷರ ಧರ್ಮಾಧಾರಿತ ವಿಧೇಯಕ ರದ್ದಾಯಿತು. 1947ರಲ್ಲಿ ಅಖಂಡ ಭಾರತದ ವಿಭಜನೆಯಾಗಿ, ಮುಸಲ್ಮಾನರಿಗೆ ಪಾಕಿಸ್ತಾನ ವೆಂಬ ಹೊಸದೇಶ ಅಸ್ತಿತ್ವಕ್ಕೆ ಬಂದ ನಂತರ ಭಾರತದ ಸಂವಿಧಾನದಲ್ಲಿ ‘ಜಾತ್ಯತೀತ’ ವೆಂಬ ಪದವೇ ಇರಲಿಲ್ಲ.
ದೇಶ ವಿಭಜನೆಯ ನಂತರ ಭಾರತದಲ್ಲಿ ಉಳಿದುಕೊಂಡ ಮುಸ್ಲಿಮರ ಓಲೈಕೆಯಲ್ಲಿ ತೊಡ ಗಿದ ಕಾಂಗ್ರೆಸ್, ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಈ ಕಸರತ್ತಿನ ಭಾಗವಾಗಿ ‘ಜಾತ್ಯತೀತ’ ಎಂಬ ಪದವನ್ನು ಮೂಲಸಂವಿಧಾನದ ಪೀಠಿಕೆಯಲ್ಲಿ ಸೇರಿಸಿಬಿಟ್ಟರು. ಮುಸಲ್ಮಾನರನ್ನು ಓಲೈಸಿ ಚುನಾವಣೆಯನ್ನು ಗೆಲ್ಲುವ ಉದ್ದೇಶ ಇದರ ಹಿಂದಿತ್ತು. ಈ ಒಂದು ಪದವು ನಂತರದ ದಿನಗಳಲ್ಲಿ ಅತಿಯಾದ ರಾಜಕೀಯ ಓಲೈಕೆಗೆ ಕಾರಣವಾಯಿತು.
ಮುಸಲ್ಮಾನರನ್ನು ಓಲೈಸಲೆಂದು ಕಾಂಗ್ರೆಸ್ ಪಕ್ಷವು ಸಂವಿಧಾನ-ವಿರೋಧಿ ಧೋರಣೆ ಗಳನ್ನು ತಳೆಯುತ್ತಲೇ ಬಂದಿದೆ. ಹಲವು ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಅಸ್ತಿತ್ವ ವನ್ನು ಉಳಿಸಿಕೊಳ್ಳಲೆಂದು ಮುಸ್ಲಿಂ ಮೀಸಲಾತಿಯನ್ನು ಮುನ್ನೆಲೆಗೆ ತರುತ್ತಲೇ ಇವೆ. ತಮಿಳುನಾಡು ಸರಕಾರವು ಮುಸ್ಲಿಮರಿಗೆ ಶೇ.3.5ರ ಮೀಸಲಾತಿ ನೀಡಿದೆ. ಆಂಧ್ರಪ್ರದೇಶ ದಲ್ಲಿ ವೈ.ಎಸ್.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಯತ್ನಿಸಲಾಗಿತ್ತು; 2004ರಲ್ಲಿ, ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ಮೂಲಕ ಕಾನೂನು ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು.
2012ರಲ್ಲಿ ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯವು, ರಾಜಶೇಖರ ರೆಡ್ಡಿ ಸರಕಾರವು ಜಾರಿಗೆ ತಂದಿದ್ದ ಧರ್ಮಾಧಾರಿತ ಮೀಸಲಾತಿಯನ್ನು ರದ್ದುಮಾಡಿತ್ತು. 2011ರಲ್ಲಿ ಕೇಂದ್ರ ದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರವು ಹಿಂದುಳಿದ ವರ್ಗದ ಶೇ.27ರ ಮೀಸಲಾತಿ ತೆಗೆದು ಮುಸ್ಲಿಮರಿಗೆ ಶೇ.4.5ರಷ್ಟು ಮೀಸಲಾತಿ ನೀಡಲಾಗುವುದೆಂದು ಘೋಷಿ ಸಿತ್ತು.
ಆ ಸಮಯದಲ್ಲಿ 5 ರಾಜ್ಯಗಳ ಚುನಾವಣೆ ಇದ್ದುದರಿಂದ, ನೀತಿಸಂಹಿತೆಗೆ ವಿರುದ್ಧವೆಂದು ಹೇಳಿ ಚುನಾವಣಾ ಆಯೋಗವು ಈ ಘೋಷಣೆಯನ್ನು ರದ್ದುಮಾಡಿತ್ತು. ಅದೇ ಸಮಯ ದಲ್ಲಿ, ಮುಸ್ಲಿಮರ ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಅಧ್ಯಯನಕ್ಕೆಂದು ಸ್ಥಾಪಿಸಲಾಗಿದ್ದ ಸಾಚಾರ್ ಆಯೋಗದ ಮುಖ್ಯಸ್ಥರಾಗಿದ್ದ ಜಸ್ಟಿಸ್ ಸಾಚಾರ್ ಅವರು ಕಾಂಗ್ರೆಸ್ ಸರಕಾರ ವನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡು, “ಚುನಾವಣೆ ಗೆಲ್ಲಲು ಕಾಂಗ್ರೆಸ್ ಪಕ್ಷವು ಮುಸ್ಲಿಂ ಮೀಸಲಾತಿಯೆಂಬ ಗಿಮಿಕ್ ಮಾಡಿದೆ" ಎಂದು ಹೇಳಿದ್ದರು.
ಸಾಚಾರ್ ಆಯೋಗದ ವರದಿ 2006ರಲ್ಲಿ ಹೊರಬಿತ್ತು. ಅಂದಿನ ಕಾಲಘಟ್ಟದಲ್ಲಿ ಮುಸ್ಲಿಂ ಸಮುದಾಯದಲ್ಲಿದ್ದಂಥ ಸಮಸ್ಯೆಗಳನ್ನು ಈ ವರದಿ ಬಹಿರಂಗಪಡಿಸಿತ್ತು. ಆದರೆ ಪ್ರಸ್ತುತ 2025ರಲ್ಲಿ ಮುಸಲ್ಮಾನರ ಪರಿಸ್ಥಿತಿ ಬದಲಾಗಿದೆ, ಅವರು ಸಮಾಜದ ಪ್ರತಿಯೊಂದು ವ್ಯವ ಹಾರದಲ್ಲೂ ಪಾಲು ಹೊಂದಿದ್ದಾರೆ. ಸರಕಾರಗಳು ಮುಸ್ಲಿಮರಿಗೆ ಶೈಕ್ಷಣಿಕವಾಗಿ ಹಲವು ಅವಕಾಶಗಳನ್ನು ಒದಗಿಸಿವೆ. ಮುಸ್ಲಿಮರು ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆ ಗಳ ದೊಡ್ಡ ಫಲಾನುಭವಿಗಳು ಎಂಬುದು ಬಹಿರಂಗವಾಗಿ ತಿಳಿದಿರುವ ವಿಷಯ.
ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಆಮೂ ಲಾಗ್ರ ಬದಲಾವಣೆಗಳಾಗಿವೆ. ಸಮಾಜದ ಹಲವು ವ್ಯಾಪಾರಿ ವಲಯದಲ್ಲಿ ಮುಸಲ್ಮಾನ ರನ್ನು ಯಥೇಚ್ಛವಾಗಿ ಕಾಣಬಹುದು. ಸಮಾಜದಲ್ಲಿ ಹಿಂದುಳಿದವರ ಏಳಿಗೆಗಾಗಿ ಪ್ರಾರಂಭ ವಾದ ಮೀಸಲಾತಿ ಹೋರಾಟವು ಆಗಾಗ ಚರ್ಚೆಗೆ ಬರುತ್ತಿರುತ್ತದೆ.
ತೀರಾ ಹಿಂದುಳಿದ ವರ್ಗದಲ್ಲಿ ಜನಿಸಿದ್ದ ಬಾಬಾ ಸಾಹೇಬರು ತಮ್ಮ ಜೀವನದ ಕಟ್ಟ ಕಡೆಯ ಕ್ಷಣದವರೆಗೂ ಮೀಸಲಾತಿಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಅವರು ಭಾರತದ ಸಂವಿಧಾನದ ರಚನೆಯ ಸಂದರ್ಭದಲ್ಲಿ ವೈಜ್ಞಾನಿಕವಾದಂಥ ಮೀಸಲಾತಿ ನೀತಿಯನ್ನೇ ಪ್ರಸ್ತಾಪಿಸಿದ್ದರು. ತಮ್ಮ ಹಲವು ಸಲಹೆ ಗಳನ್ನು ನೆಹರು ನೇತೃತ್ವದ ಕಾಂಗ್ರೆಸ್ ಸರಕಾರ ಪರಿಗಣಿಸಲಿಲ್ಲವೆಂಬ ಕೊರಗು ಅವರನ್ನು ಕಾಡುತ್ತಿದ್ದರೂ, ಬಾಬಾ ಸಾಹೇಬರು ತಮ್ಮ ಹೋರಾಟವನ್ನು ನಿಲ್ಲಿಸಿರಲಿಲ್ಲ.
ಹಿಂದೂ ಧರ್ಮದಲ್ಲಿ ಹುಟ್ಟಿದ್ದಕ್ಕೆ ಬಾಬಾ ಸಾಹೇಬರು ಪಶ್ಚಾತ್ತಾಪ ಪಟ್ಟಿದ್ದು ಎಷ್ಟು ಸತ್ಯವೋ, ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಬಗ್ಗೆ ಅವರಿಗಿದ್ದಂಥ ಅನೇಕ ಧೋರಣೆಗಳೂ ಅಷ್ಟೇ ಸತ್ಯ. ತಮ್ಮ ಮತಕ್ಕೆ ಮತಾಂತರವಾಗುವಂತೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ದಿಗ್ಗಜರು ಬಾಬಾ ಸಾಹೇಬರನ್ನು ಆಹ್ವಾನಿಸಿದರೂ ಆ ಮಾತಿಗೆ ಅವರು ಕಿಮ್ಮತ್ತು ನೀಡಿರ ಲಿಲ್ಲ. ಮುಸ್ಲಿಮರಲ್ಲಿನ ಬುರ್ಖಾ ಪದ್ಧತಿಯನ್ನು ಬಾಬಾ ಸಾಹೇಬರು ತೀವ್ರವಾಗಿ ಖಂಡಿಸಿ ದ್ದರು.
ಈಸ್ಟ್ ಇಂಡಿಯಾ ಕಂಪನಿಯ ಆಕ್ರಮಣದಿಂದಾಗಿ ಸುಮಾರು ೨ ಶತಮಾನಗಳ ಕಾಲ ನಲುಗಿದ್ದ ಭಾರತವು, ಸ್ವಾತಂತ್ರ್ಯ ಸಿಕ್ಕ ನಂತರ ಮತ್ತೊಂದು ಈಸ್ಟ್ ಇಂಡಿಯಾ ಕಂಪನಿ ಮಾದರಿಯ ಆಡಳಿತಕ್ಕೆ ಸಿಲುಕಬಾರದು ಎಂಬ ಸ್ಪಷ್ಟತೆ ಅವರಿಗಿತ್ತು. ಹಿಂದೂ ಧರ್ಮದ ಬಗ್ಗೆ ಅವರಿಗೆ ಎಷ್ಟೇ ಅಸಮಾಧಾನವಿದ್ದರೂ, ತಮ್ಮ ಜೀವನದ ಕೊನೆಗಳಿಗೆಯಲ್ಲಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಮೀಸಲಾತಿಯ ವಿಷಯದಲ್ಲಿ ಬಾಬಾ ಸಾಹೇಬರಿಗಿದ್ದಂಥ ಸ್ಪಷ್ಟತೆ ಬೇರೆ ಯಾರಿಗೂ ಇರ ಲಿಲ್ಲ. ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದ, ಸಂವಿಧಾನ ರಚನೆಯ ಆರಂಭಿಕ ಚರ್ಚೆ ಗಳಲ್ಲಿ ಧರ್ಮಾಧಾರಿತ ಮೀಸಲಾತಿ ನೀಡುವುದನ್ನು ವಿರೋಧಿಸಲಾಗಿತ್ತು. ಧರ್ಮದಲ್ಲಿನ ಪ್ರತಿಯೊಂದು ವರ್ಗವೂ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವು ದಿಲ್ಲವೆಂಬ ಸ್ಪಷ್ಟತೆ ಅವರಿಗಿತ್ತು.
ಧರ್ಮದೊಳಗಿರುವ ವಿವಿಧ ಜಾತಿಗಳಲ್ಲಿ ಮೇಲು ಮತ್ತು ಕೀಳು ಎಂಬ ವರ್ಗವಿತ್ತೇ ವಿನಾ, ಇಡೀ ಧರ್ಮವೇ ಹಿಂದುಳಿದಿರಲಿಲ್ಲವೆಂಬುದು ಸತ್ಯ. ಮೀಸಲಾತಿಯೆಂಬುದು ‘ಜಾತಿ ಆಧಾರಿತ’ವಾಗಿರಬೇಕೇ ಹೊರತು ಧರ್ಮಾಧಾರಿತವಾಗಿರಬಾರದು. ಇಸ್ಲಾಂ ಧರ್ಮದಲ್ಲಿ ಹಿಂದುಳಿದಿರುವ, ಕೆಳಸ್ತರದ ಮುಸ್ಲಿಂ ಜಾತಿಗಳಿವೆ. ಅಲ್ಲಿಯೂ ಮೇಲುಜಾತಿ ಮತ್ತು ಕೀಳು ಜಾತಿ ಎಂಬ ಭೇದಭಾವವಿದೆ. ಕ್ರೈಸ್ತಧರ್ಮದಲ್ಲಿ ಕೆಳಸ್ತರದ ಕ್ರೈಸ್ತರಿದ್ದಾರೆ,
‘ಕ್ಯಾಥೊಲಿಕ್’ ಮತ್ತು ‘ಪ್ರೊಟೆಸ್ಟೆಂಟ್’ ಎಂಬ ಎರಡು ಬಹುದೊಡ್ಡ ವಿಭಾಗಗಳಿವೆ. ಚರ್ಚು ಗಳಲ್ಲಿ ‘ಕ್ಯಾಥೊಲಿಕ್ ’ಗಳಿಗೆ ಮೊದಲ ಆದ್ಯತೆ, ನಂತರದ ಸರದಿ ಪ್ರೊಟೆಸ್ಟೆಂಟರದ್ದು. ಹಿಂದೂ ಧರ್ಮದಿಂದ ಮತಾಂತರವಾದವರನ್ನು ಕ್ಯಾಥೊಲಿಕ್‌ಗಳು ತಮ್ಮ ಸರಿಸಮನಾಗಿ ನೋಡುವುದಿಲ್ಲ. ಕ್ಯಾಥೊಲಿಕ್ ಚರ್ಚುಗಳಲ್ಲಿ ಪ್ರೊಟೆಸ್ಟೆಂಟ್‌ಗಳಿಗೆ ಹೆಚ್ಚಿನ ಮಹತ್ವವಿಲ್ಲ.
ವೀರಪ್ಪ ಮೊಯ್ಲಿಯವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗಿನ ಕಾಂಗ್ರೆಸ್ ಸರಕಾ ರದ ಅವಧಿಯಲ್ಲಿ ಮುಸಲ್ಮಾನರಿಗೆ ಧರ್ಮಾಧಾರಿತವಾಗಿ ಪ್ರವರ್ಗ 2(ಬಿ) ಅಡಿಯಲ್ಲಿ ಶೇ.4ರಷ್ಟು ಮೀಸಲಾತಿ ಸಿಕ್ಕಿತ್ತು. ಧರ್ಮಾಧಾರಿತ ಮೀಸಲಾತಿಯು ಸಂವಿಧಾನದ ಆಶಯ ಗಳಿಗೆ ವಿರುದ್ಧವಾಗಿದ್ದರೂ, ಕಾಂಗ್ರೆಸ್ ಸರಕಾರ ತನ್ನ ಮತಬ್ಯಾಂಕನ್ನು ಓಲೈಸುವ ಸಲು ವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು 2023ರಲ್ಲಿ, ಧರ್ಮಾಧಾರಿತವಾಗಿದ್ದ ಮುಸ್ಲಿಂ ಮೀಸಲಾತಿಯನ್ನು ರದ್ದು ಗೊಳಿಸಿ, ಸಂವಿಧಾನದ ಆಶಯಗಳ ಪರವಾಗಿ ನಿಂತಿತ್ತು.
ನಂತರ, ಲಿಂಗಾಯತ ಸಮುದಾಯದ ಮೀಸಲಾತಿಯನ್ನು ಶೇ.2ರಷ್ಟು, ಒಕ್ಕಲಿಗರ ಮೀಸ ಲಾತಿಯನ್ನೂ ಶೇ.2ರಷ್ಟು ಏರಿಕೆ ಮಾಡಲಾಗಿತ್ತು. ಬಸವರಾಜ ಬೊಮ್ಮಾಯಿ ಸರಕಾರದ ಈ ನಿರ್ಧಾರದಿಂದ ತಮ್ಮ ಮತಬ್ಯಾಂಕಿಗೆ ಪೆಟ್ಟು ಬೀಳುತ್ತದೆಯೆಂಬ ಭಯದಿಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ, ಮುಸ್ಲಿಮರಿಗೆ ಮತ್ತೊಮ್ಮೆ ಮೀಸಲಾತಿ ನೀಡುವ ಕೆಲಸ ನಡೆಸುತ್ತಿದೆ, ಈಗ ಸರಕಾರಿ ಟೆಂಡರ್‌ಗಳಲ್ಲಿ ಶೇ.4ರ ಮೀಸಲಾತಿಯನ್ನು ನೀಡುತ್ತಿದೆ.
ಕರ್ನಾಟಕದಲ್ಲಿ ಲಿಂಗಾಯತರಿಗೆ ಸತತವಾಗಿ ಅವಮಾನ ಮಾಡುತ್ತಿರುವ ಕಾಂಗ್ರೆಸ್ ಪಕ್ಷವು, ಲಿಂಗಾಯತ ನಾಯಕ ನಿಜಲಿಂಗಪ್ಪನವರನ್ನು ಮುಗಿಸಿತ್ತು, ರಾಜೀವ್ ಗಾಂಧಿಯವರು ಪ್ರಧಾನಿ ಯಾಗಿದ್ದಾಗ ವೀರೇಂದ್ರ ಪಾಟೀಲರನ್ನು ವಿಮಾನ ನಿಲ್ದಾಣದಿಂದಲೇ ಅಧಿಕಾರ ದಿಂದ ಕೆಳಗಿಳಿಸಿ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿತ್ತು. ಸಂವಿಧಾನದ ಆಶಯಗಳ ವಿರುದ್ಧ ನಡೆದ ಹಲವು ಘಟನೆಗಳ ಪರವಾಗಿ ನಿಲ್ಲುವವರು, ಸಂವಿಧಾನವನ್ನೇ ತಮ್ಮ ಗುರಾಣಿಯನ್ನಾಗಿಸಿಕೊಂಡು ಮಾತನಾಡುತ್ತಾರೆ.
ಬುರ್ಖಾ ಹಾಕುವುದನ್ನು ಬಾಬಾ ಸಾಹೇಬರು ವಿರೋಧಿಸಿದ್ದ ವಿಷಯ ತಿಳಿದಿದ್ದರೂ, ಹಿಜಾಬ್ ಹೋರಾಟದ ಸಂದರ್ಭದಲ್ಲಿ ಎಡಚರರು ಸಂವಿಧಾನವನ್ನೇ ತಮ್ಮ ಗುರಾಣಿ ಯನ್ನಾಗಿಸಿಕೊಂಡು ಹಿಜಾಬ್ ಪರವಾಗಿ ನಿಂತಿದ್ದರು. ಮುಸ್ಲಿಂ ಮೀಸಲಾತಿ ವಿಷಯ ದಲ್ಲೂ ಅದೇ ಮಾದರಿಯ ಚರ್ಚೆಗಳು ನಡೆಯುತ್ತಿವೆ. ಧರ್ಮಾಧಾರಿತ ಮೀಸಲಾತಿಯು ಸಂವಿಧಾನಕ್ಕೆ ವಿರುದ್ಧವಾದದ್ದೆಂದು ತಿಳಿದಿದ್ದರೂ, ಮತ್ತದೇ ಸಂವಿಧಾನವನ್ನು ಮುನ್ನೆ ಲೆಗೆ ತಂದು ಚರ್ಚಿಸುವ ಯತ್ನಗಳು ನಡೆಯುತ್ತಿವೆ.
“ಧರ್ಮ ಅಥವಾ ಸಂವಿಧಾನದ ಪೈಕಿ ನಿಮ್ಮ ಪ್ರಥಮ ಆಯ್ಕೆಯೇನು?" ಎಂದು ಮುಸ ಲ್ಮಾನರನ್ನು ಕೇಳಿದರೆ ಬಹುತೇಕರು ಧರ್ಮವನ್ನೇ ಮೊದಲು ಆಯ್ಕೆ ಮಾಡಿಕೊಳ್ಳು ತ್ತಾರೆಯೇ ಹೊರತು ಸಂವಿಧಾನವನ್ನಲ್ಲ. ಇಂಥವರು ಸಂವಿಧಾನದಲ್ಲಿನ ಮೀಸಲಾತಿಯ ಬಗ್ಗೆ ಮಾತನಾಡುವುದು, ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನವನ್ನು ಬಳಸುವ ಇಬ್ಬಗೆಯ ನೀತಿಯನ್ನು ತೋರುತ್ತದೆ.
ನ್ಯಾಯಾಲಯ ನೀಡುವ ತೀರ್ಪುಗಳನ್ನು ಗೌರವಿಸದೆ, ತಮ್ಮ ಧರ್ಮವೇ ಅಂತಿಮವೆಂದು ಹೇಳುವ ಹಲವು ಮುಸ್ಲಿಂ ನಾಯಕರಿದ್ದಾರೆ. ಭಾರತದ ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗ ವ್ಯವಸ್ಥೆಗಳ ಮೇಲೆ ನಂಬಿಕೆಯಿಡದ ನಾಯಕರು, ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನವನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ.
‘ಪೌರತ್ವ ತಿದ್ದುಪಡಿ ಕಾಯ್ದೆ’ ಸಂದರ್ಭದಲ್ಲಿ ನಡೆದ ಹೋರಾಟದಲ್ಲಿ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳಿಗೆ ಪೌರತ್ವ ನೀಡುವುದನ್ನು ವಿರೋಧಿಸಿದವರು ಮುಸ್ಲಿಂ ಮೀಸಲಾತಿಯ ಪರವಾಗಿ ನಿಲ್ಲುತ್ತಿರುವುದು ವಿರೋಧಿಗಳ ಮತ್ತೊಂದು ಇಬ್ಬಗೆಯ ನೀತಿ ಯ ಅನಾವರಣವಷ್ಟೇ...