ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Baba Vanga Prediction: ರಷ್ಯಾದಲ್ಲಿ ಭೂಕಂಪ, ಜಪಾನಿನಲ್ಲಿ ಸುನಾಮಿ... ಮತ್ತೆ ನಿಜವಾಗಿದೆ ವಂಗಾ ಭವಿಷ್ಯವಾಣಿ!

ರಷ್ಯಾದ ಭೂಕಂಪ, ಜಪಾನ್ ನಲ್ಲಿ ಸುನಾಮಿ ಎಚ್ಚರಿಕೆ ಸುದ್ದಿಗಳು ಈಗ ಬಾಬಾ ವಂಗಾ ಅವರ ಭವಿಷ್ಯವಾಣಿಯನ್ನು ಮತ್ತೆ ಚರ್ಚಿಸುವಂತೆ ಮಾಡಿದೆ. ಯಾಕೆಂದರೆ ಬಾಬಾ ವಂಗಾ ಅವರು ಈ ಹಿಂದಿನ ವಿಪತ್ತುಗಳನ್ನು ನಿಖರವಾಗಿ ಊಹಿಸಿದ್ದರು. ಇದರಲ್ಲಿ ರಾಜಕುಮಾರಿ ಡಯಾನಾ ಮತ್ತು ಫ್ರೆಡ್ಡಿ ಮರ್ಕ್ಯುರಿಯ ಸಾವು, ಕೋವಿಡ್ -19 ಸಾಂಕ್ರಾಮಿಕ, 2011 ರ ಭೂಕಂಪ ಮತ್ತು ಸುನಾಮಿಯಂತಹ ಘಟನೆಗಳು ಸೇರಿವೆ.

ಒಂದೆಡೆ ಭೂಕಂಪ.. ಮತ್ತೊಂದೆಡೆ ಸುನಾಮಿ! ಮತ್ತೆ ನಿಜವಾಗಿದೆ ವಂಗಾ ಭವಿಷ್ಯವಾಣಿ

ನವದೆಹಲಿ: ರಷ್ಯಾದಲ್ಲಿ (Russia) ಭೂಕಂಪ (Earthquake), ಜಪಾನಿನಲ್ಲಿ (Japan) ಸುನಾಮಿ (Tsunami). 2025ರಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳ (Natural disaster) ಬಗ್ಗೆ ಹಲವು ದಶಕಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಜಪಾನ್‌ನ ಬಾಬಾ ವಂಗಾ (Baba Vanga Prediction) ಎಂದೂ ಕರೆಯಲ್ಪಡುವ ರಿಯೋ ತತ್ಸುಕಿ. ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಬಾಬಾ ವಂಗಾ ಅವರ ಭವಿಷ್ಯವಾಣಿ ನಿಜವಾಗಿದೆ. ಬಾಬಾ ವಂಗಾ ಅವರ ಈ ವರ್ಷದ ವಿಪತ್ತಿನ ಬಗ್ಗೆ ಕೆಲವು ವಾರಗಳ ಹಿಂದೆಯಷ್ಟೇ ಕೆಲವರು ಎಚ್ಚರಿಕೆ ನೀಡಿದ್ದರು. ಇದೀಗ ಜಪಾನ್‌ನ ಕೆಲವು ಭಾಗಗಳಲ್ಲಿ ಭೂಕಂಪ, ಸುನಾಮಿ ಕಾಣಿಸಿಕೊಂಡಿದ್ದು, ಮತ್ತೆ ಎಲ್ಲರೂ ಬಾಬಾ ವಂಗಾ ಅವರ ಭವಿಷ್ಯವಾಣಿಯನ್ನು ಪರಿಶೀಲಿಸುವಂತೆ ಮಾಡಿದೆ.

ರಷ್ಯಾದ ಭೂಕಂಪದ ಸುದ್ದಿ ಹರಡುತ್ತಿದ್ದಂತೆ ಎಲ್ಲರೂ 1999ರ ಮೊದಲು ಪ್ರಕಟವಾದ ಬಾಬಾ ವಂಗಾ ಅವರ ಭವಿಷ್ಯವಾಣಿ ಕಡೆ ನೋಡುವಂತೆ ಮಾಡಿದೆ. ಯಾಕೆಂದರೆ ಬಾಬಾ ವಂಗಾ ಅವರು ಈ ಹಿಂದಿನ ವಿಪತ್ತುಗಳನ್ನು ನಿಖರವಾಗಿ ಊಹಿಸಿದ್ದರು ಎನ್ನಲಾಗಿದೆ. ಇದರಲ್ಲಿ ರಾಜಕುಮಾರಿ ಡಯಾನಾ ಮತ್ತು ಫ್ರೆಡ್ಡಿ ಮರ್ಕ್ಯುರಿಯ ಸಾವು, ಕೋವಿಡ್ -19 ಸಾಂಕ್ರಾಮಿಕ, 2011 ರ ಭೂಕಂಪ ಮತ್ತು ಸುನಾಮಿಯಂತಹ ಘಟನೆಗಳು ಸೇರಿವೆ.

ರಿಯೋ ತತ್ಸುಕಿ ಅವರು 2025ರ ಜುಲೈ ನಲ್ಲಿ ಸಂಭವಿಸಬಹುದಾದ ವಿಪತ್ತುಗಳ ಬಗ್ಗೆಯೂ ಊಹಿಸಿದ್ದರು. ಇದರಂತೆ ಜುಲೈ 5 ರಂದು ಏನಾದರೂ ದೊಡ್ಡ ಘಟನೆ ನಡೆಯಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಆ ದಿನ ಏನೂ ನಡೆಯಲಿಲ್ಲ. ಹೀಗಾಗಿ ಇದೊಂದು ವದಂತಿ ಎಂದುಕೊಂಡವರಿಗೆ ಜುಲೈ ತಿಂಗಳಾಂತ್ಯ ಬಹುದೊಡ್ಡ ಆಘಾತವನ್ನು ನೀಡಿದೆ. ಭೂಕಂಪ ಮತ್ತು ಅದರ ಪರಿಣಾಮವಾಗಿ ಸುನಾಮಿ ಕಾಣಿಸಿಕೊಂಡಿದ್ದು, ಮತ್ತೆ ವಂಗಾ ಅವರ ಕುರಿತು ಚರ್ಚೆ ಪ್ರಾರಂಭಿಸಿದೆ.



ಜಪಾನ್‌ನಲ್ಲಿ ಎಚ್ಚರಿಕೆ

ರಷ್ಯಾದ ಕರಾವಳಿಯಲ್ಲಿ 8.8 ರ ಪ್ರಬಲ ಭೂಕಂಪದ ಅನಂತರ ಜಪಾನ್‌ನ ಸಂಪೂರ್ಣ ಕರಾವಳಿಗೆ 3 ಅಡಿಗಳಷ್ಟು ಬೃಹತ್ ಸುನಾಮಿ ಎಚ್ಚರಿಕೆ ನೀಡಲಾಗಿದೆ. 2011ರ ಭೂಕಂಪವನ್ನು ಊಹಿಸಿದ ಜಪಾನಿನ ವಂಗಾ ಅವರ ಭವಿಷ್ಯವಾಣಿ ಮತ್ತೆ ನಿಜವಾಗಿದೆ. ಎಲ್ಲರೂ ಸುರಕ್ಷಿತವಾಗಿರಿ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಎಕ್ಸ್ ನಲ್ಲಿ ತಿಳಿಸಿದ್ದಾರೆ. ಜಪಾನ್‌ನ ಪೆಸಿಫಿಕ್ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಇಲ್ಲಿ 3 ಮೀಟರ್ ವರೆಗೆ ಅಲೆಗಳು ಅಪ್ಪಳಿಸಬಹುದು ಎಂದು ಜಪಾನ್‌ನ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಲಾಗಿದೆ.



ಈ ಸುದ್ದಿಯನ್ನೂ ಓದಿ: ಎಐ ಪರಿಪಕ್ವತೆ ಸಾಧಿಸುವ ಕಡೆಗೆ ಮಹತ್ವದ ಹೆಜ್ಜೆ ಇಡುತ್ತಿರುವ ಭಾರತ

ರಷ್ಯಾದಲ್ಲಿ ಭಾರಿ ಭೂಕಂಪ

1952ರ ಬಳಿಕ ಇಲ್ಲಿ ಅತ್ಯಂತ ಪ್ರಬಲವಾದ ಭೂಕಂಪ ಇದೀಗ ಸಂಭವಿಸಿದೆ. ರಷ್ಯಾದ ದೂರದ ಪೂರ್ವದ ಕರಾವಳಿ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ ಆಗ್ನೇಯಕ್ಕೆ ಸುಮಾರು 125 ಕಿ.ಮೀ ದೂರದಲ್ಲಿ ಇದು ಉಂಟಾಗಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಈ ಭೂಕಂಪನ 19.3 ಕಿ.ಮೀ ಆಳದಲ್ಲಿ ಉಂಟಾಗಿದೆ. ಇದರಿಂದ ರಷ್ಯಾದ ಕಮ್ಚಟ್ಕಾ ಕರಾವಳಿಯ ಕೆಲವು ಭಾಗಗಳಲ್ಲಿ 3 ರಿಂದ 4 ಮೀಟರ್ ವರೆಗಿನ ಸುನಾಮಿ ಅಲೆಗಳು ಕಾಣಿಸಿಕೊಂಡಿತ್ತು.