#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Virat Kohli: 12 ವರ್ಷದ ಬಳಿಕ ರಣಜಿಯಲ್ಲಿ ವಿರಾಟ್‌ ಕೊಹ್ಲಿ ಆಟ

ಕೊಹ್ಲಿ ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಳ್ಳುವ ಸಲುವಾಗಿ ಕಳೆದೊಂದು ವಾರದಿಂದ ಸಂಜಯ್‌ ಬಾಂಗರ್‌ ಮಾರ್ಗದರ್ಶದಲ್ಲಿ ಮುಂಬೈನಲ್ಲಿ ಕಠಿಣ ಅಭ್ಯಾಸ ನಡೆಸಿದ್ದರು.

Virat Kohli: 12 ವರ್ಷದ ಬಳಿಕ ರಣಜಿಯಲ್ಲಿ ವಿರಾಟ್‌ ಕೊಹ್ಲಿ ಆಟ

Kohli

Profile Abhilash BC Jan 28, 2025 8:41 AM

ಮುಂಬೈ: ಭಾರತ ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ(Virat Kohli) ಅವರು 12 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ(Ranji Trophy) ಆಡಲಿದ್ದಾರೆ. ಗುರುವಾರದಿಂದ ಆರಂಭಗೊಳ್ಳಲಿರುವ ರೈಲ್ವೇಸ್‌(Delhi vs Railways) ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್‌ ಬೀಸಲಿದ್ದಾರೆ.

ಕೊಹ್ಲಿ ಆಡುವುದನ್ನು ವೀಕ್ಷಿಸಲು ಸೂಮಾರು 10000ಕ್ಕೂ ಹೆಚ್ಚು ಪ್ರೇಕ್ಷಕರು ಕೋಟ್ಲಾ ಕ್ರೀಡಾಂಗಣಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಹೀಗಾಗಿ ದೆಹಲಿ ಕ್ರಿಕೆಟ್‌ ಸಂಸ್ಥೆ ಸೂಕ್ತ ವ್ಯವಸ್ಥೆ ಮತ್ತು ಭಾರೀ ಭದ್ರತೆ ಕಲ್ಪಿಸಿದೆ. ಪ್ರೇಕ್ಷಕರಿಗೆ ಸ್ಟೇಡಿಯಂನ ಮೂರು ಗ್ಯಾಲರಿಯನ್ನು ಮಾತ್ರ ತೆರೆಯಲಿದೆ.

ಕೊಹ್ಲಿ ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಳ್ಳುವ ಸಲುವಾಗಿ ಕಳೆದೊಂದು ವಾರದಿಂದ ಸಂಜಯ್‌ ಬಾಂಗರ್‌ ಮಾರ್ಗದರ್ಶದಲ್ಲಿ ಮುಂಬೈನಲ್ಲಿ ಕಠಿಣ ಅಭ್ಯಾಸ ನಡೆಸಿದ್ದರು. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಕೊಹ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿರಲಿಲ್ಲ. 8 ಇನ್ನಿಂಗ್ಸ್‌ಗಳಲ್ಲಿ ಆಫ್‌ ಸ್ಟಂಪ್‌ನಿಂದ ಹೊರ ಹೋಗುವ ಚೆಂಡನ್ನು ಕೆಣಕಿ ವಿಕೆಟ್‌ ಕಳೆದುಕೊಂಡಿದ್ದರು. ಈ ನಿಟ್ಟಿನಲ್ಲಿ ಸುಧಾರಣೆ ಕಾಣಲು ತಮ್ಮ ಬ್ಯಾಕ್‌ಫೂಟ್‌ ಹೊಡೆತಗಳ ಮೇಲೆ ಹೆಚ್ಚು ಗಮನ ಹರಿಸುತ್ತಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ Rohit Sharma: ಗವಾಸ್ಕರ್‌ ವಿರುದ್ಧ ಬಿಸಿಸಿಐಗೆ ರೋಹಿತ್‌ ದೂರು

5 ವರ್ಷದ ಬಳಿಕ ರಾಹುಲ್‌ ಕಣಕ್ಕೆ

ಕೆ.ಎಲ್‌.ರಾಹುಲ್‌ ಕೂಡ 5 ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ಗೆ ಮರಳಿದ್ದಾರೆ. ಗುರುವಾರ ಆರಂಭವಾಗುವ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ರಾಹುಲ್‌ ಕೊನೆಯ ಬಾರಿಗೆ ರಣಜಿ ಆಡಿದ್ದು 2020ರಲ್ಲಿ.

ಕರ್ನಾಟಕ ತಂಡ

ಮಯಾಂಕ್‌ ಅಗರ್ವಾಲ್‌ (ನಾಯಕ), ಕೆಎಲ್‌ ರಾಹುಲ್‌, ಶ್ರೇಯಸ್‌ ಗೋಪಾಲ್‌ (ಉಪ ನಾಯಕ), ದೇವದತ್‌ ಪಡಿಕ್ಕಲ್‌, ಅನೀಷ್‌ ಕೆವಿ, ಸ್ಮರಣ್‌ ಆರ್‌, ಶ್ರೀಜಿತ್‌ ಕೆಎಲ್‌ (ವಿ.ಕೀ), ಅಭಿನವ್‌ ಮನೋಹರ್‌, ಹಾರ್ದಿಕ್‌ ರಾಜ್‌, ಪ್ರಸಿಧ್‌ ಕೃಷ್ಣ, ವಿದ್ವತ್‌ ಕಾವೇರಪ್ಪ, ವಿ ಕೌಶಿಕ್‌, ಅಭಿಲಾಷ್‌ ಶೆಟ್ಟಿ, ಯಶೋವರ್ಧನ್‌ ಪರಾಂತಪ್‌, ನಿಕಿನ್‌ ಜೋಸ್‌, ಸುಜಯ್‌ ಸತೇರಿ (ವಿ.ಕೀ), ಮೊಹ್ಸಿನ್‌ ಖಾನ್‌.